ಕಲಾವಿದರಿಗೆ ಆಸರೆಯ ವೇದಿಕೆ ರಂಗಸ್ಥಳ
Team Udayavani, Sep 6, 2019, 5:03 AM IST
ಯಕ್ಷಗಾನಕ್ಕಾಗಿಯೇ ತೊಡಗಿಸಿಕೊಂಡಿರುವ ಹತ್ತಾರು ವಾಟ್ಸಾಪ್ ವೇದಿಕೆಗಳಿವೆ.ಈ ಪೈಕಿ ರಂಗಸ್ಥಳ ವಾಟ್ಸಾಪ್ ಗ್ರೂಪ್ ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ . ಯಕ್ಷಗಾನ ಕಲಾವಿದರ ಹಿತಾಸಕ್ತಿ , ಸಂಕಷ್ಟಗಳಿಗೆ ಪೂರಕವಾಗಿ ರಂಗಸ್ಥಳ ವಾಟ್ಸಾಪ್ ವೇದಿಕೆಯು ಕಾರ್ಯಾಚರಿಸುತ್ತಿದೆ .
2016ರಲ್ಲಿ ಗಣೇಶ್ ಕಾಮತ್ ಉಳ್ಳೂರುರವರು ಮಿತ್ರರೊಂದಿಗೆ ಯಕ್ಷಗಾನಕ್ಕಾಗಿಯೇ ಮೀಸಲಾದ ಯಕ್ಷಪ್ರೇಮಿಗಳು ಎಂಬ ವಾಟ್ಸಾಪ್ ಗ್ರೂಪ್ ರಚಿಸಿದರು . ಮುಂದೆ ರಂಗಸ್ಥಳ ಎಂಬ ಹೆಸರಿನಲ್ಲಿ ಈ ಗ್ರೂಪ್ ಬೆಳೆಯಿತು . 2017ರಲ್ಲಿ ಹಾಸ್ಯ ಕಲಾವಿದರಾದ ಅರುಣ ಜಾರ್ಕಳರು ಗುಡಿಸಲಲ್ಲಿ ವಾಸಿಸುತ್ತಿರುವ ಫೋಟೊವೊಂದು ವಾಟ್ಸಾಪ್ ಗ್ರೂಪ್‌ನಲ್ಲಿ ಕಾಣಿಸಿಕೊಂಡಿತು. ಜಾರ್ಕಳರಿಗೆಮನೆ ನಿರ್ಮಿಸಲು ನೆರವಾಗುವಂ‡ತೆ ಗ್ರೂಪಲ್ಲಿ ಮನವಿ ಮಾಡಿದಾಗ ಅನೇಕರು ಸಹಾಯಧನ ಘೋಷಿಸಿದರು. ಉತ್ತಮ ಮೊತ್ತ ಕೂಡಿ ಬಂತು . ಇದೇ ಉತ್ಸಾಹದಲ್ಲಿ ಬಡ ಯಕ್ಷಗಾನ ಕಲಾವಿದರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ವಾಟ್ಸಾಪ್ ಗ್ರೂಪಲ್ಲೇ ಸಮಾಲೋಚನೆ ನಡೆಯಿತು . ಅಂತಿಮವಾಗಿ ಇದಕ್ಕೊಂದು ಟ್ರಸ್ಟ್ ರಚಿಸಲು ತೀರ್ಮಾನ ಕೈಗೊಂಡರು . ತತ್ಪರಿಣಾಮವಾಗಿ ರಂಗಸ್ಥಳ ಫೌಂಡೇಶನ್ ಟ್ರಸ್ಟ್ ( ರಿ. ) ಎಂಬ ಸಂಸ್ಥೆ ನೋಂದಣೆಗೊಂಡಿತು.
ಯಕ್ಷಗಾನ ಕಲಾವಿದರ ಹಿತರಕ್ಷಣೆಗಾಗಿ ರೂಪುಗೊಂಡ ರಂಗಸ್ಥಳ ಫೌಂಡೇಶನ್ ಟ್ರಸ್ಟ್ ಎರಡು ವರ್ಷಗಳಿಂದ ಹಲವಾರು ಯಕ್ಷಗಾನ ಕಲಾವಿದರಿಗೆ ನೆರವಾಗಿದೆ. ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಶಕ್ತ ಕಲಾವಿದರಿಗೆ ನೆರವು ನೀಡುವ ಸಂಪ್ರದಾಯವನ್ನು ರಂಗಸ್ಥಳ ಫೌಂಡೇಶನ್ ಪಾಲಿಸಿಕೊಂಡು ಬಂದಿದೆ . ಈ ಸಲದ ವಾರ್ಷಿಕೋತ್ಸವ ಸೆ.8ರಂದು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಜರುಗಲಿದೆ .
ಈ ಸಂದರ್ಭದಲ್ಲಿ ಕಲಾವಿದರಾದ ಉದಯ ಕೊಠಾರಿ ಮತ್ತು ನಾರಾಯಣ ದೇವಾಡಿಗರಿಗೆ ಚಿಕಿತ್ಸೆಗಾಗಿ ತಲಾ ರೂ .25,000 ನೀಡಲಾಗುವುದು. ಯಕ್ಷಗಾನ ಮುಖವರ್ಣಿಕೆ ಹಾಗೂ ವೇಷಭೂಷಣಗಳ ಪ್ರಾತ್ಯಕ್ಷಿಕೆ , ಅಗಲಿದ ಹಿರಿಯ ಕಲಾವಿದರಾದ ದಿ .ಮೊಳಹಳ್ಳಿ ಹೆರಿಯ ನಾಯಕ್ , ದಿ.ನೀಲಾವರ ಮಹಾಬಲ ಶೆಟ್ಟಿ ಹಾಗೂ ದಿ. ಬೆಲೂ¤ರು ರಾಮ ಬಳೆಗಾರರ ಸಂಸ್ಮರಣೆ ಹಾಗೂ ತಾಳಮದ್ದಳೆ ಕೂಟ ಈ ಸಂದರ್ಭದಲ್ಲಿ ಜರುಗಲಿದೆ .
ಎಂ.ಶಾಂತರಾಮ ಕುಡ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.