ಕದಂಬೋತ್ಸವದಲ್ಲಿ ವನಿತೆಯರ ರತ್ನಾವತಿ ಕಲ್ಯಾಣ

Team Udayavani, Mar 30, 2018, 6:00 AM IST

5.jpg

ಕನ್ನಡದ ಪ್ರಥಮ ರಾಜಧಾನಿ ಶಿರಸಿಯ ಬನವಾಸಿಯಲ್ಲಿ ನಡೆದ “ಕದಂಬೋತ್ಸವ’ದಲ್ಲಿ ಬ್ರಹ್ಮಾವರದ “ಯಕ್ಷಸಿರಿ ವನಿತಾ ಬಳಗ’ ಇವರು “ರತ್ನಾವತಿ ಕಲ್ಯಾಣ’ ಎನ್ನುವ ಯಕ್ಷಗಾನ ಪ್ರದರ್ಶಿಸಿದರು. ಅಂಗ ದೇಶದ ಅರಸನಾದ ದೃಢವರ್ಮನು ತನ್ನ ಮಗಳು ರತ್ನಾವತಿಯ ವಿವಾಹವನ್ನು ಕೌಶ‌ಂಬಿಯ ರಾಜ ವತ್ಸಾಖ್ಯನೊಂದಿಗೆ ನೆರವೇರಿಸಲು ನಿಶ್ಚಯಿಸಿರುತ್ತಾನೆ. ಅದರೆ ಕಳಿಂಗ ದೇಶದ ಭದ್ರಸೇನನು ರತ್ನಾವತಿಯ ಚೆಲುವಿಗೆ ಮನಸೋತು ತನ್ನಿಚ್ಚೆಯನ್ನು ದೃಢವರ್ಮನಲ್ಲಿ ತಿಳಿಸಿದಾಗ ಆತ ತಿರಸ್ಕರಿಸುತ್ತಾನೆ. ಕುಪಿತನಾದ ಭದ್ರಸೇನನು ದೃಢವರ್ಮನನ್ನು ಬಂಧಿಸಿ ಮಗಳನ್ನು ಅಪಹರಿಸಿ ಕೊಂಡೊಯ್ಯುವಾಗ ಎದುರಾದ ವಿದ್ಯುಲ್ಲೋಚನನೆಂಬ ರಾಕ್ಷಸನಿಂದ ಹತನಾಗುತ್ತಾನೆ. ಈಕೆಯನ್ನು ತಾನು ಮದುವೆಯಾಗಬೇಕೆಂದು ಕಾಡಿನ ಅರಮನೆಯಲ್ಲಿ ಬಂಧಿಸಿಡುತ್ತಾನೆ. ಬೇಟೆಗಾಗಿ ಬಂದ ವತ್ಸಾಖ್ಯನು ಆಕಸ್ಮಿಕವಾಗಿ ರತ್ನಾವತಿಯನ್ನು ಅಲ್ಲಿ ಕಂಡು ಅವಳಿಂದ ವಿಚಾರವನ್ನು ತಿಳಿದು ತಾನೇ ವತ್ಸಾಖ್ಯನೆಂಬ ವಿಷಯ ತಿಳಿಸಿ ರಾಕ್ಷಸನನ್ನು ಸಂಹರಿಸುತ್ತಾನೆ. ಮುಂದೆ ದೃಢವರ್ಮನನ್ನು ಬಂಧ ಮುಕ್ತಗೊಳಿಸಿ ರತ್ನಾವತಿಯನ್ನು ವಿವಾಹವಾಗುತ್ತಾನೆ ಎಂಬಲ್ಲಿಗೆ ಪ್ರಸಂಗವು ಮುಕ್ತಾಯವಾಗುತ್ತದೆ. ದೃಢವರ್ಮನಾಗಿ ಗಾಯತ್ರೀ ಶಾಸ್ತ್ರಿಯವರು ರಾಜ ಗಾಂಭೀರ್ಯದೊಂದಿಗೆ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದರೆ, ಭಾಗೀರಥಿ ಎಂ. ರಾವ್‌ ಭದ್ರಸೇನನಾಗಿ ರತ್ನಾವತಿಯ ಚೆಲುವಿಗೆ ಮನಸೋಲುವ ಪರಿಯನ್ನು ಹಾಗೂ ದೃಢವರ್ಮನು ತನ್ನ ಮನದಿಚ್ಚೆಯನ್ನು ತಿರಸ್ಕರಿಸಿದಾಗ ಕುಪಿತನಾಗುವ ಸನ್ನಿವೇಶವನ್ನು ನೃತ್ಯಾಭಿನಯ ಮತ್ತು ಮಾತಿನ ಗಾಂಭೀರ್ಯದ ಮೂಲಕ ವ್ಯಕ್ತಪಡಿಸಿ ಪ್ರೇಕ್ಷಕರ ಮನ ಸೂರೆಗೊಂಡರು. ವಿದ್ಯುಲ್ಲೋಚನನಾಗಿ ನಾಗರತ್ನ ಹೇಳೆìಯವರು ರಾಕ್ಷಸ ಗಾಂಭೀರ್ಯವನ್ನು ಅನಾವರಣಗೊಳಿಸಿದ ಪರಿ, ರತ್ನಾವತಿಯಾಗಿ ಕು| ಸಹನಾರ ಭಾವಾಭಿವ್ಯಕ್ತಿ, ವತ್ಸಾಖ್ಯನಾಗಿ ಕು| ಅಶ್ವಿ‌ನಿಯವರ ಲವಲವಿಕೆಯ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು. ಭಾಗವತರಾಗಿ ಉದಯ ಕುಮಾರ್‌ ಹೊಸಾಳ, ಮದ್ದಳೆಯಲ್ಲಿ ದೇವದಾಸ ಕೂಡ್ಲಿ, ಚೆಂಡೆಯಲ್ಲಿ ಜನಾರ್ದನ ಆಚಾರ್‌ ಹಿಮ್ಮೇಳದಲ್ಲಿ ಸಹಕರಿಸಿದರು. ವೇಷ ಭೂಷಣ ಬಾಲಕೃಷ್ಣ ನಾಯಕ್‌ ಬ್ರಹ್ಮಾವರ ಇವರದ್ದಾಗಿತ್ತು. 

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.