ಗಿಳಿವಿಂಡಿನಲ್ಲಿ ವಾಚನ – ಪ್ರವಚನ
Team Udayavani, Jul 14, 2017, 9:31 AM IST
ಹಲವು ವರ್ಷಗಳಿಂದ ಕತ್ತಲೆಯ ಆವರಣವಾಗಿದ್ದ, ಪಾಳು ಬಿದ್ದಿದ್ದ ಮಂಜೇಶ್ವರ ಗೋವಿಂದ ಪೈಯವರ ಮನೆ ಇದೀಗ ಚಟುವಟಿಕೆಯ ಕೇಂದ್ರ ವಾಗಿ ಚೈತನ್ಯ ಪಡೆದುಕೊಳ್ಳುತ್ತಿದೆ. ಪ್ರತೀ ತಿಂಗಳು ಒಂದು ಸಾಂಸ್ಕೃತಿಕ – ಸಾಹಿತ್ಯಕ ಕಾರ್ಯಕ್ರಮ, ಮೂರು ತಿಂಗಳಿಗೊಮ್ಮೆ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿರುವ ಸ್ಮಾರಕ ಟ್ರಸ್ಟ್ ಈ ಕೇಂದ್ರವನ್ನು ಆಕರ್ಷಕವನ್ನಾಗಿ ಮಾಡುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಮೂಲಭೂತ ಆವಶ್ಯಕತೆಗಳನ್ನು ಒದಗಿಸಲು, ಅನುದಾನ ನೀಡಿ ರಾಷ್ಟ್ರ ಮಟ್ಟದ ಸಾಹಿತ್ಯ ಕೃಷಿ ನಡೆಸಲು ಕೇರಳ – ಕರ್ನಾಟಕ ಸರಕಾರಗಳು ಪ್ರಯತ್ನಿಸುತ್ತಿವೆ. ಡಾ| ವೀರಪ್ಪ ಮೊಲಿಯವರು ಬಿಡುವು ಮಾಡಿಕೊಂಡು ತಿಂಗಳಿಗೆ ಒಂದು ಬಾರಿ ಇಲ್ಲಿಗೆ ಭೇಟಿ ಕೊಟ್ಟು ಕೇಂದ್ರದ ಪ್ರಗತಿಯನ್ನು ಪರಿಶೀಲಿಸುತ್ತಿದ್ದಾರೆ.
ಕಳೆದ ಜೂನ್ 28ರಂದು ಇಲ್ಲಿ ಜಯಲಕ್ಷ್ಮೀ ಕಾರಂತ ಹಾಗೂ ದಿವ್ಯಾ ಕಾರಂತ ಅತ್ತೆ – ಸೊಸೆಯಂದಿರ ವಾಚನ ಪ್ರವಚನದ ಅಮೋಘ ಕಾರ್ಯಕ್ರಮ ಏರ್ಪಟ್ಟಿತ್ತು. ಈ ವರ್ಷದ ನಾಲ್ಕನೇ ಕಾರ್ಯಕ್ರಮವಾಗಿದ್ದ ಇದರಲ್ಲಿ ಡಾ| ವೀರಪ್ಪ ಮೊಲಿಯವರ ದ್ರೌಪದಿಯ ಸುತ್ತ ಹೆಣೆದಿರುವ ಕೃತಿ “ಸಿರಿಮುಡಿ ಪರಿಕ್ರಮಣ’ ಕಥಾವಸ್ತು ವಾಚಿಸಲ್ಪಟ್ಟಿತ್ತು. ದಿವ್ಯಾ ಕಾರಂತರ ಕಂಚಿನ ಕಂಠದ ವಾಚನ, ಪರಿಪಕ್ವ ಸಾಹಿತಿ, ಯಕ್ಷಕೂಟದಲ್ಲಿ ದ್ರೌಪದಿಯ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುವ ಜಯಲಕ್ಷ್ಮಿಯವರ ಪ್ರವಚನ – ಪಾತ್ರ ವ್ಯಾಖ್ಯಾನ ಅತ್ಯದ್ಭುತವಾಗಿತ್ತು; ಪಾತ್ರಕ್ಕೆ ಮೆರುಗು ನೀಡಿತ್ತು. ದ್ರೌಪದಿಯ ಅಸಹಾಯಕತೆಯ ಮಧ್ಯೆ ಅವಳು ತೋರಿದ ಕೆಚ್ಚು , ದುಶಾÏಸನನ ವಿಡಂಬನೆ ಮತ್ತು ಕ್ರೌರ್ಯ, ದುರ್ಯೋಧನನ ಅಪಹಾಸ್ಯ, ಮೂಲ ಕೃತಿಯಲ್ಲಿ ಕಾಣದ, ಕೆಲವೊಂದು ಕವಿ ಕಲ್ಪನೆಗಳನ್ನು ಜಯಲಕ್ಷ್ಮಿಯವರು ಮನಮುಟ್ಟುವಂತೆ ಪ್ರೇಕ್ಷಕರ ಮುಂದಿಟ್ಟರು. ಸಮಗ್ರ ರಾಮಾಯಣದ ತರುವಾಯ ಡಾ| ಮೊಲಿಯವರು ಬರೆದ ಈ ಕೃತಿಯು ಮಹಿಳೆಯರ ಕೆಚ್ಚು ಮತ್ತು ಅಸಹಾಯಕತೆಯನ್ನು ವಿವರಿಸುತ್ತಾ ಭವಿಷ್ಯದ ಪರಿಣಾಮಗಳು ಆಧುನಿಕ ಸಮಾಜದಲ್ಲಿ ಹೇಗೆ ಗಟ್ಟಿಗೊಳ್ಳುತ್ತವೆ ಎಂಬುದನ್ನು ಸೂಚಿಸುವ ಪರಿ ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತದೆ. ಸಾಹಿತ್ಯ ವಾಚಿಸಿದ ದಿವ್ಯಾ ಕಾರಂತರ ಸ್ವರದ ಏರಿಳಿತಗಳು, ಸ್ವರಭಾರ ಪ್ರೇಕ್ಷಕರಿಗೆ ಖುಷಿ ನೀಡಿತ್ತು. ಪ್ರಯಾಣದ ತುರ್ತಿನಲ್ಲಿದ್ದ ಡಾ| ಮೊಲಿಯವರು ಕೆಲಕಾಲ ಸಭೆಯಲ್ಲಿ ಕುಳಿತು ಆಲಿಸಿದರು. ಬಹುಭಾಷಾ ಕವಿಗಳ ಪುಟ್ಟ ಕವಿತೆಗಳೊಂದಿಗೆ ಮೊದಲ್ಗೊಂಡ ಈ ಕಾರ್ಯಕ್ರಮ ಅಂತ್ಯಕ್ಕೆ ಮೆರುಗು ನೀಡಿದ ವಾಚನ – ಪ್ರವಚನ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.
ಸುಭಾಶ್ಚಂದ್ರ ಕಣ್ವತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
UGC Draft: ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರ: ಸಿಎಂ ಎಚ್ಚರಿಕೆ
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Nuclear Power Plant: ಇನ್ನೊಂದು ಅಣುಸ್ಥಾವರ ಮೂರು ಜಿಲ್ಲೆಗಳಲ್ಲಿ ಪರಿಶೀಲನೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.