ಅತಿ ಸುಂದರ ದ್ವಾರಕಾ ನಿರ್ಮಾಣ-ರುಕ್ಮಿಣಿ ಸ್ವಯಂವರ
ಪಾಂಚಜನ್ಯ ಯಕ್ಷಗಾನ ಕಲಾ ತಂಡ ಪ್ರಸ್ತುತಿ
Team Udayavani, Oct 4, 2019, 4:58 AM IST
ಮಧೂರು ರಾಧಾಕೃಷ್ಣ ನಾವಡರು ಪಾತ್ರದ ಯಾವ ಮಗ್ಗುಲಲ್ಲಿ ನೋಡಿದರೂ ಔಚಿತ್ಯಪೂರ್ಣವಾಗಿ ನಿರ್ವಹಿಸುವ ಮೂಲಕ ಒಟ್ಟಂದವಾಗುವ ಹಾಗೆ ನೋಡಿಕೊಂಡರು. ಕೃಷ್ಣ ಮತ್ತು ಬಲರಾಮರಾಗಿ ಪ್ರಕಾಶ್ ನಾಯಕ್ ನೀರ್ಚಾಲು ಮತ್ತು ಅಕ್ಷಯ್ ಭಟ್ ಅವರು ಪಾತ್ರದ ಆಶಯಕ್ಕೆ ಕುಂದು ಬರದಂತೆ ನೋಡಿಕೊಂಡರು.
ಪಾಂಚಜನ್ಯ ಯಕ್ಷಗಾನ ಕಲಾ ತಂಡ ನೇರಳಕಟ್ಟೆ ಮತ್ತು ಸಿರಿಬಾಗಿಲು ಪ್ರತಿಷ್ಠಾನದವರಿಂದ ಇತ್ತೀಚೆಗೆ ಉಡುಪಿ ಪರ್ಕಳದಲ್ಲಿ ದ್ವಾರಕಾ ನಿರ್ಮಾಣ ಮತ್ತು ರುಕ್ಮಿಣಿ ಸ್ವಯಂವರ ಎಂಬ ಎರಡು ಪ್ರಸಂಗಗಳು ಮನೋಹರವಾಗಿ ಪ್ರದರ್ಶನಗೊಂಡವು.
ಕಂಸವಧೆ
ಪ್ರಾರಂಭದ ಕಂಸ ವಧೆಯಲ್ಲಿ ಮಧೂರು ರಾಧಾಕೃಷ್ಣ ನಾವಡರು ಪಾತ್ರದ ಯಾವ ಮಗ್ಗುಲಲ್ಲಿ ನೋಡಿದರೂ ಔಚಿತ್ಯಪೂರ್ಣವಾಗಿ ನಿರ್ವಹಿಸುವ ಮೂಲಕ ಒಟ್ಟಂದವಾಗುವ ಹಾಗೆ ನೋಡಿಕೊಂಡರು. ಅಳಿಯಂದಿರಾದ ಕೃಷ್ಣ ಮತ್ತು ಬಲರಾಮರಾಗಿ ಹನುಮಗಿರಿ ಮೇಳದ ಪ್ರಕಾಶ್ ನಾಯಕ್ ನೀರ್ಚಾಲು ಮತ್ತು ಅಕ್ಷಯ್ ಭಟ್ ಅವರ ಪಾತ್ರ ಮಾವ ಕಂಸನನ್ನು ಕುಚೇಷ್ಟೆಯ ಮೂಲಕ ರಂಜಿಸಲು ಯತ್ನಿಸಿ, ಮುಂದಿನ ಉದ್ದೇಶವನ್ನೂ ಬಿಂಬಿಸಬೇಕಾಗಿ ಇರುವು ದರಿಂದ ಉತ್ತಮ ಪ್ರಯತ್ನ ಮಾಡಿದರು. ರಾಜ ರಜಕನಾಗಿ ಮಹೇಶ ಮಣಿಯಾಣಿ ಅವರ ಹಾಸ್ಯ ಉತ್ತಮ ನಿರ್ವಹಣೆ ಯೊಂದಿಗೆ ಸರಿದೂಗಿಸುವಂತಾಯಿತು. ಕಂಸ ವಧೆಯ ನಂತರ ಮಹಾಕಲಿ ಮಗಧೇಂದ್ರದ ಮಾಗಧನಾಗಿ ಶಂಭಯ್ಯ ಭಟ್‌ರ ನಿರ್ವಹಣೆ ಚೆನ್ನಾಗಿತ್ತು. ಆಸ್ತಿ ಮತ್ತು ಪ್ರಾಸ್ತಿಯರಾಗಿ ರಕ್ಷಿತ್ ರೈ ದೇರ್ಲಂಪಾಡಿ ಮತ್ತು ರಾಜೇಶ್ ನಿಟ್ಟೆ ಅವರು ಮಾಗಧನಲ್ಲಿ ಮನನೊಂದು ಭಿನ್ನವಿಸುವ ಪರಿ ಸುಂದರವಾಗಿ ಮೂಡಿಬಂದಿತು. ಲಕ್ಷ್ಮಣ ಮರಕಡರು ಬೇರೆ ಬೇರೆ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ಕೃಷ್ಣನಾಗಿ ಮನಗೆದ್ದರು. ಶಶಿಕಿರಣ ಕಾವು ಅವರಂತಹ ಕಲಾವಿದರಿಗೆ ಹೇಳಿ ಮಾಡಿಸಿದಷ್ಟು ಸರಿಯಾಗಿ ಕಾಲಯವನ ಪಾತ್ರ ಒಪ್ಪುತ್ತಿತ್ತು.
ದ್ವಾರಕಾ ನಿರ್ಮಾಣವಾಗುವಲ್ಲಿ ಹಿಮ್ಮೇಳದಲ್ಲಿ ವಿಶಿಷ್ಟ ರಾಗಗಳ ಪ್ರಸ್ತುತಿಯ ಮೂಲಕ ಭಾಗವತ ರವಿಚಂದ್ರ ಕನ್ನಡಿಕಟ್ಟೆಯವರು ಮನರಂಜಿಸಿದರು. ಲವ ಕುಮಾರ ಐಲರು ಸುಂದರವಾಗಿ ಮದ್ದಳೆ ನುಡಿಸುವುದರ ಮೂಲಕ ಪದ್ಯಗಳ ರಸಾಸ್ವಾದನೆಗೆ ಅವಕಾಶ ಕೊಟ್ಟರು. ದೇಲಂತಮಜಲು ಸುಬ್ರಹ್ಮಣ್ಯ ಭಟ್ ಚೆಂಡೆಯ ನುಡಿತವು ಅದ್ಭುತವಾಗಿದ್ದುದರಿಂದ ಅದೊಂದು ಪರಿಪೂರ್ಣ ಯಕ್ಷಗಾನವೆನಿಸಿತು.
ರುಕ್ಮಿಣಿ ಕಲ್ಯಾಣ
ಭಾಗವತರಾಗಿ ಧರ್ಮಸ್ಥಳ ಮೇಳದ ಅನುಭವಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮುಂದುವರೆಸಿ, ಚಕ್ರತಾಳದಲ್ಲಿ ಸಹಕರಿಸಿದವರು ನೀಶ್ವತ್ ಜೋಗಿ.
ಪೆರುವಡಿ ಸುಬ್ರಹ್ಮಣ್ಯ ಭಟ್ ಅಗ್ನಿದ್ಯೋತ ಪಾತ್ರದಲ್ಲಿ ಬ್ರಾಹ್ಮಣನಾಗಿ ಪಾತ್ರಕ್ಕೆ ಜೀವ ತುಂಬಿದರೆ ಶಿಶುಪಾಲನಾಗಿ ಪ್ರಕಾಶ ನಾಯಕ್ ಮತ್ತು ರುಕ್ಮನಾಗಿ ಜಗದಭಿರಾಮ ಪಡುಬಿದ್ರೆ ಅವರು ಪ್ರಸಂಗಾವಧಾನತೆಯನ್ನು ಮೆರೆದರು. ರಾಜೇಶ್ ನಿಟ್ಟೆ ಅವರು ರುಕ್ಮಿಣಿ ಪಾತ್ರವನ್ನು ನಿರ್ವಹಿಸಿದರು. ಗುಂಡಿಮಜಲು ಗೋಪಾಲ ಭಟ್ಟರ ಬಲರಾಮ ಬಲ ತುಂಬುವಂತಹ ಶಾರೀರ ಹೊಂದಿರುವುದರಿಂದ ಮನಸಾ ಒಪ್ಪುವಲ್ಲಿ ಸಫಲವಾಯಿತು.
ಸಂತೋಷ್ ಕೇಳ್ಕರ್, ಸುಲ್ಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.