ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ


Team Udayavani, Mar 20, 2020, 10:30 AM IST

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಮುಂಬಯಿ ರಾಮಸೇವಕ ಸಂಘ, ದ್ವಾರಕಾನಾಥ ಭವನದ ಕಲಾವೃಂದದಿಂದ ನಿರ್ಮಿಸಲ್ಪಟ್ಟ ಕೊಂಕಣಿ ಬೋಧನಾತ್ಮಕ ನಾಟಕ ಸರ್ವೇಜನಾಃ ಕಾಂಚನಮಾಶ್ರಯಂತೇ ಗೌಡ ಪಾದಾಚಾರ್ಯ ಕೈವಲ ಮಠಾಧೀಶರ ಉಪಸ್ಥಿತಿಯಲ್ಲಿ ಕವಳೆಮಠ, ಪೊಂಡಾದಲ್ಲಿ ಪ್ರದರ್ಶಿಸಲ್ಪಟ್ಟಿತು. ಎ.ಜಿ. ಕಾಮತ್‌ರು ರಚಿಸಿ , ನಿರ್ದೇಶಿಸಿ, ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿದ ಸರ್ವೇಜನಾಃ ಕಾಂಚನಮಾಶ್ರಯಂತೇ ನಾಟಕದಲ್ಲಿ ಹಾಸ್ಯ ಕಲಾವಿದರಾದ ಕಮಲಾಕ್ಷ ಸರಾಫ‌ (ಹರಿಯಾಗಿ), ವಿನಯಾ ಪ್ರಭು (ನಂದನ್‌ ಭೂಮಿಕೆಯಲ್ಲಿ), ಮೇಲ್‌ ಗಂಗೊಳ್ಳಿ ರವೀಂದ್ರ ಪೈ (ನಾಣ್ಣಾನ ಪಾತ್ರದಲ್ಲಿ), ಹರೀಶ ಚಂದಾವರ್‌ (ಶ್ರೀಧರನ ಪಾತ್ರದಲ್ಲಿ) ಆಶಾ ನಾಯಕ್‌ (ಲತಾಳ ಪಾತ್ರದಲ್ಲಿ), ಅಶೋಕ ಪ್ರಭು (ಬಾಳಿYಯ ಪಾತ್ರದಲ್ಲಿ), ತೋನ್ಸೆ ವೆಂಕಟೇಶ ಶೆಣೈ (ಡಾಕ್ಟರ್‌ ಪಾತ್ರದಲ್ಲಿ) ಮತ್ತು ಬಾಲಕೃಷ್ಣ ಕಾಮತ್‌ (ಶ್ರೀಪಾದ ಶೆಣೈ ಪಾತ್ರದಲ್ಲಿ) ಅಭಿನಯಿಸಿದರು.

ಕಾಮತ್‌ ಸಾವ್ಕಾರ್‌ ಶ್ರೀಮಂತ ಉದ್ಯಮಿ ಮಧ್ಯ ವಯಸ್ಸು ದಾಟಿ ವೃದ್ಧಾಪ್ಯ ಸಮೀಪಿಸುತ್ತಿರುವಾಗಲೇ ಎಲ್ಲ ಆಸ್ತಿ – ಸೊತ್ತಗಳನ್ನು ಇಬ್ಬರು ಗಂಡು ಮಕ್ಕಳಿಗೆ ಸೊಸೆಯಂದಿರಿಗೆ , ಮಗಳಿಗೆ, ತಂಗಿಗೆ, ಕೆಲಸದ ನೌಕರರಿಗೆ ಹಂಚಿ ತೀರ್ಥಯಾತ್ರೆಗೆ ಹೊರಡುತ್ತಾನೆ. ವಹಿವಾಟನ್ನು ಇಬ್ಬರು ತಾಯಿಯಿಲ್ಲದ ಪುತ್ರರಿಗೆ ವಹಿಸಿಕೊಟ್ಟು ನಿರ್ಗಮಿಸುತ್ತಾನೆ. ಆ ಸನ್ನಿವೇಷದಲ್ಲಿ ಮಾತೃದೇವೋಭವ ಪಿತೃದೇವೋಭವ ಎಂದು ಗುಣಗಾನ ಮಾಡುವ ಇಬ್ಬರು ಮಕ್ಕಳ ಮನಸ್ಸು ಅವರ ಜೀವನ ಸಂಗಾತಿಗಳ ಪ್ರಭಾವದಿಂದ ಪಲ್ಲಟವಾಗುತ್ತದೆ. ಹಿರಿಯ ಮಗ (ಶ್ರೀಧರ್‌)ನ ಮಾವನ (ಬಾಳಿY) ಶರೋನಿ ಪ್ರವೃತ್ತಿಯೂ ಕೂಡ ಮನೆಯ ಅಶಾಂತಿಗೆ ಕಾರಣವಾಗುತ್ತದೆ. ಪ್ರಾಮಾಣಿಕವಾಗಿ ದುಡಿದ ಕೆಲಸದಾಳು ಹರಿ ಮನೆಯಿಂದ ಹೊರ ಬೀಳಬೇಕಾಗುತ್ತದೆ. ಇಬ್ಬರೂ ಸೊಸೆಯಂದಿರು (ಲತಾ – ನಂದನ್‌) ಮನೆತನದ ಗೌರವ ಹಾಗೂ ಭವಿಷ್ಯವನ್ನು ಅಲಕ್ಷಿಸಿ ಸೊತ್ತಿಗಾಗಿ ಹಾತೊರೆಯುತ್ತಾರೆ. ಪ್ರೀತಿ – ವಿಶ್ವಾಸವಿದ್ದ ಮನೆಯಲ್ಲಿ ಒಡಕು ಬಂದು ಅಣ್ಣ – ತಮ್ಮಂದಿರು ಒಂದೇ ಮನೆಯಲ್ಲಿ ಎರಡು ಬಿಡಾರಗಳನ್ನು ಹೂಡಿದ ವಿಷಯವು ತೀರ್ಥಾಟನೆಯಿಂದ ಮರಳಿದ ಸಾವ್ಕಾರನಿಗೆ ಯಾತನೆ ಒದಗಿಸಿತು. ಎಷ್ಟೇ ಪ್ರಯತ್ನಪಟ್ಟರೂ ಅಣ್ಣ ತಮ್ಮಂದಿರನ್ನು ಸೊಸೆಯಂದಿರನ್ನು ಒಟ್ಟುಪಡಿಸಲಸಾಧ್ಯವಾಗಿ ಮನೆಬಿಟ್ಟು ಹೋದರು.

ಸಾಹುಕಾರರ ಪರಿಸ್ಥಿತಿ ಏಕಾಂತದಲ್ಲಿ ಹದಗೆಟ್ಟಿತು. ಕೈಯಲ್ಲಿ ಹಣ ಇಲ್ಲದೆ ಕಂಗಾಲು ಆಗುವ ಪರಿಸ್ಥಿತಿ ಬಂದೊದಗಿತು. ಇಂಥಹ ಅಸಹಾಯಕ ಪರಿಸ್ಥಿತಿಯಲ್ಲಿ ಭಿಕ್ಷಾಂದೇಹಿ ಎಂದು ಗೀಳಿಡುವ ಸನ್ನಿವೇಷದಲ್ಲಿ ಅಕಸ್ಮಾತ್‌ ಈ ಹಿಂದೆ ಮನೆಯಿಂದ ಹೊರಗೆ ಹಾಕಲ್ಪಟ್ಟ ಹರಿ ಸಾವಾRರರನ್ನು ಸಂದರ್ಶಿಸುವ ಪ್ರಸಂಗ ಆತನ ಸಹಾಯ ಹಾಗೂ ಕಾಲ್ಪನಿಕ ಶ್ರೀಪಾದ್‌ ಶೆಣೈ ಆಗಮನದಿಂದ ಮಕ್ಕಳಿಗೆ ಪಾಠ ಕಲಿಸಿ ಅದರ ಮುಖಾಂತರ ಸಾಯುವ ಕಾಲದವರೆಗೆ ಸೊತ್ತನ್ನು ಕುಟುಂಬದ ಸದಸ್ಯರಿಗೆ ವಿತರಿಸಕೂಡದು, ಆಪದ್ಧನ ಎಂಬುದು ಅಂತ್ಯದವರೆಗೆ ರಕ್ಷಾ ಕವಚ ಎಂಬ ಸಂದೇಶವನ್ನು ನಾಟಕ ನೀಡುತ್ತದೆ.

ಟಾಪ್ ನ್ಯೂಸ್

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

7

BBK11: ತಾಯಿಯನ್ನು ನೆನೆದು ಬಿಗ್‌ ಬಾಸ್‌ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ ಸುದೀಪ್

21-ptr

Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!

20-kadaba

ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

23-balindra

Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.