ಸಾವಿನ ಹುಡುಕಾಟದ ಸಾರ್ಥಕ ಪ್ರಯೋಗ: ಕಂಸಾಲಾಪ


Team Udayavani, Mar 3, 2017, 3:50 AM IST

01-KALA-2.jpg

ವೃತ್ತಿಯಲ್ಲಿ ಶಿರ್ವಾದ ಮೂಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಕೆ. ಜಿ. ಮಂಜುನಾಥ್‌ ಬಡಗುತಿಟ್ಟು ಯಕ್ಷಗಾನದ ಪ್ರಮುಖ ಹವ್ಯಾಸಿ ಕಲಾವಿದರಾಗಿದ್ದಾರೆ. ಪುರಾಣದ ಅನೇಕ ಪಾತ್ರಗಳ ಬಗ್ಗೆ ಅಂತರ್ಮುಖೀಯಾಗಿ ಚಿಂತಿಸಿ, ಸಮಾನಮನಸ್ಕರೊಡನೆ ಚರ್ಚಿಸಿ, ಹೊಸ ಹೊಳಹುಗಳನ್ನು ಗಟ್ಟಿಗೊಳಿಸಿಕೊಂಡು ಅದನ್ನು ಪ್ರದರ್ಶನ ರೂಪಕ್ಕೆ ತರಲು ಸಾಧ್ಯವೆ ಎಂದು ಪ್ರಯೋಗಕ್ಕಿಳಿಯುವ ಮನೋಧರ್ಮದವರು. ರಂಗಪಠ್ಯವನ್ನು ರಚಿಸಿ, ಉಡುಪಿಯ ಯಕ್ಷಗಾನ ಕೇಂದ್ರದ ಗುರುವೃಂದದವರ ನಿರ್ದೇಶನ ಹಾಗೂ ಹಿಮ್ಮೇಳ ಸಹಕಾರದೊಂದಿಗೆ ಕಂಸನ ಪಾತ್ರವನ್ನು ಸ್ವತಃ ನಿರ್ವಹಿಸಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಸಾವಿನ ಭಯ ಮತ್ತು ಅದರಿಂದ ಹುಟ್ಟಿಕೊಳ್ಳುವ ಸಿಟ್ಟು, ಹತಾಶೆ, ನೋವು, ಹಿಂಸೆಗಳನ್ನು ಧ್ವನಿಸುವ ಪ್ರಯೋಗವಿದು. ಕಂಸನ ಪಾತ್ರವೊಂದನ್ನೇ ಇಟ್ಟುಕೊಂಡು, ಯಕ್ಷಗಾನದ ಸರ್ವಾಭರಣಗಳನ್ನು ತೊಟ್ಟುಕೊಂಡು ಮಂಜುನಾಥ್‌ ಅವರೊಬ್ಬರೇ ಸುಮಾರು ಒಂದೂವರೆ ಗಂಟೆಗಳ ಕಾಲ ನಿರಂತರವಾಗಿ ರಂಗವನ್ನು ಆವರಿಸಿಕೊಂಡು ನೀಡುವ ಪ್ರದರ್ಶನ. 

ರಂಗಪಠ್ಯದಲ್ಲಿ ಕವಿ ಪಾರ್ತಿಸುಬ್ಬನ ಕೃಷ್ಣ ಚರಿತೆಯ 15 ಪದ್ಯಗಳನ್ನು ಬಳಸಿ ಕೊಂಡಿದ್ದಾರೆ. ಮಾತುಗಳನ್ನು ತಮ್ಮ ಅಧ್ಯಯನ-ಚಿಂತನೆಗಳ ಹಿನ್ನೆಲೆಯಲ್ಲಿ ಮಂಜುನಾಥರೇ ಹೆಣೆದಿದ್ದಾರೆ. ನಾಟಕ ಹಾಗೂ ಯಕ್ಷಗಾನ ರಂಗದಲ್ಲಿ ಸಾಕಷ್ಟು ಶ್ರಮವಿರುವ ಇವರು ರಚಿಸಿರುವ ರಂಗಪಠ್ಯದಲ್ಲಿ ಭಾವ-ಅರ್ಥಗಳನ್ನು ಸ್ಫೋಟಿಸಬಲ್ಲ ಶಕ್ತಿಯುತವಾದ ಮಾತುಗಳಿವೆ. ಪುಟ್ಟ ಪುಟ್ಟ ಮಾತುಗಳಿಂದಲೇ ಕಂಸನ ಜೀವನದ ಪ್ರಮುಖ ಘಟನೆಗಳು ಬಿಂಬಿತವಾಗುತ್ತವೆ. ಮಾತುಗಳು ನಾಟಕ ರಂಗಕ್ಕೆ ಸಮೀಪವಾಗಿವೆ. ರಂಗಪಠ್ಯದ ಮೇಲೆ ಶೇಕ್ಸ್‌ಪಿಯರ್‌ ಕವಿಯ ಮ್ಯಾಕ್‌ಬೆತ್‌ ನಾಟಕದ ಗಾಢ ಪ್ರಭಾವವಿದೆ ಎಂಬುದನ್ನು ಮಂಜುನಾಥ್‌ ಅವರೇ ಒಪ್ಪುತ್ತಾರೆ. 

ಒಡ್ಡೋಲಗದ ಕುಣಿತದಲ್ಲಿ ರಂಗವನ್ನು ಪ್ರವೇಶಿಸಿದ ಕಂಸನು ಆಡುವ ಮೊದಲ ಮಾತೇ ಸಾವನ್ನು ಕುರಿತದ್ದು. ಸಾವಿನ ಭಯದಿಂದ ಚಿತ್ತಕ್ಷೋಭೆಗೆ ಒಳಗಾಗಿದ್ದ ಕಂಸನು “ಸಾವನ್ನೇ ಸಾಯಿಸಲು ಹೊರಟವನು ನಾನು’ ಎಂದು ಆರ್ಭಟಿಸುತ್ತಾನೆ. ಆರಂಭದಲ್ಲೇ “”ಕಂಸಾಲಾಪ”ದ ಧ್ವನಿಯು ಸ್ಥಾಪಿತವಾಗುತ್ತದೆ. ಮುಂದಿನ ಹಂತದಲ್ಲಿ ಕಂಸನು ತನ್ನ ಜೀವನದ ಮೊದಲ ಘಟ್ಟವನ್ನು ನೆನಪಿಸಿಕೊಳ್ಳುತ್ತಾನೆ. ತಾಯಿಯು ಅಸಹ್ಯ ಬಸಿರನ್ನು ಹೊತ್ತದ್ದು – ಹೆತ್ತದ್ದು, ಹೆತ್ತವರು ಅಸಹ್ಯ ಭಾವನೆಯಿಂದಲೇ ಬೆಳೆಸಿದ್ದು, ಅವರನ್ನು ಸೆರೆಮನೆಗೆ ಅಟ್ಟಿದ್ದು, ದಿಗ್ವಿಜಯ, ತಂಗಿಯ ಮದುವೆ, ಅವಳ ಎಂಟನೆಯ ಗರ್ಭದಿಂದ ಜನಿಸುವ ಮಗುವಿನಿಂದಲೇ ಮರಣವೆಂಬ ಅಶರೀರವಾಣಿ ಕೇಳಿದ್ದು- ಕೆರಳಿದ್ದು… ಈ ಘಟನಾವಳಿಗಳಲ್ಲಿ ಅರ್ಥ ಸೂಕ್ಷ್ಮವೊಂದು ಅಡಗಿರುವಂತಿದೆ. ಅಸಹ್ಯ-ತಿರಸ್ಕಾರಗಳು ಸಾವಿನ ಛಾಯಾರೂಪದಂತೆಯೇ ತೋರುತ್ತವೆ. ಕಂಸ ಛಾಯಾಸಾವನ್ನು ಎದುರಿಸುತ್ತಲೇ ಬಂದವನು. ನಿಶ್ಚಿತ ಸಾವು ಸಮೀಪಿಸುವುದನ್ನು ತಿಳಿದಾಗ ಕಂಸನಲ್ಲಿ ಹುಟ್ಟಿಕೊಳ್ಳುವುದು ಹತಾಶೆ, ಸಿಟ್ಟು, ಹಿಂಸಾ ಮನೋಭಾವನೆಗಳೇ. ನಿದ್ದೆಯನ್ನು ಸ್ವಾಗತಿಸುವಂತೆ ನಗುನಗುತ್ತಾ ಸಾವನ್ನು ಸ್ವಾಗತಿಸಲು ಸಾಧ್ಯವಿಲ್ಲ ಎಂಬ ಮಾತು ಜೀವಿಗಳೆಲ್ಲರ ಮಾತಾಗುತ್ತದೆ.

ಕಂಸನ ಆಲಾಪದಲ್ಲಿಯೂ ಏರಿಳಿತಗಳ ಸೊಗಸೊಂದಿದೆ: ಅಶರೀರ ವಾಣಿಯನ್ನು ಕೇಳಿ ತಂಗಿಯನ್ನೇ ಕೊಲ್ಲಲು ಸಿದ್ಧನಾಗಿ ಆರ್ಭಟಿಸುವ ಕಂಸನ ಆಲಾಪವು ತಾರಸ್ಥಾಯಿಯಲ್ಲಿ ಅತಿರಭಸದಿಂದ ಹೊಮ್ಮುವ ಆಲಾಪದಂತಿದೆ. ವಸುದೇವನು ಹೆತ್ತ ಮಕ್ಕಳನ್ನು ತಂದೊಪ್ಪಿಸುತ್ತೇನೆಂದು ಮಾತು ಕೊಟ್ಟಾಗ “”ಮೃತ್ಯು ನನ್ನ ಕಾಲಬುಡದಲ್ಲಿಯೇ ಬಿದ್ದಿದ್ದರೆ! ನಾನೇ ಹೊಸಕಿ ಹಾಕಬಹುದು” ಎನ್ನುವ ಆಲಾಪ…, ಮೊದಲ ಮಗುವನ್ನು ತಂದಿತ್ತಾಗ, “”ನೆತ್ತಿಯ ಮೇಲೆ ಕತ್ತಿಯ ಅಲಗು ತೂಗಾಡುತ್ತಿದ್ದರೂ ಲೆಕ್ಕಿಸದೇ ನಗುತ್ತಿರುವ ಶಿಶು! ಗಂಡು, ಕರುಳ ಬಳ್ಳಿಯನ್ನು ಇರಿದು ಕೊಲ್ಲುತ್ತೇನೆಂದು ತಿಳಿದೂ ಕಳುಹಿಕೊಟ್ಟ ತಂಗಿ ದೇವಕಿ! ಗಂಡು, ಹೆತ್ತಮಗುವನ್ನು ಹಿಸುಕಿ ಕೊಲ್ಲುತ್ತೇನೆಂದು ತಿಳಿದೂ ತಂದೊಪ್ಪಿಸಿದ ವಸುದೇವ ಗಂಡು. ಇವರಿಗೆ ಸಾವಿನ ಭಯವೇ ಇಲ್ಲವೇ? ನನಗೂ ಭಯವಿಲ್ಲ: ನಾನೂ ಗಂಡು” ಎಂಬ ಮಾತು ದೃಢವಾಗಿ ಹೊಮ್ಮುವ ಷಡ್ಜದ ಆಲಾಪದಂತೆ…, ತಂಗಿಯ ಮಕ್ಕಳನ್ನು ಮುದ್ದಿಸಬೇಕೆಂಬ ಬಯಕೆ ಸಹಜ; ಹಸುಳೆಯನ್ನು ಹಿಸುಕಿ ಕೊಲ್ಲಬೇಕೆಂಬ ಬಯಕೆ ಅಸಹಜ ಎಂದು ತನ್ನ ಬದುಕಿನ ಅಸಹಜತೆಗಳನ್ನು ಬಿಡಿಸುವ ಆಲಾಪ… ರೋಷದ, ರಭಸದ, ಆರ್ಭಟಗಳಿಲ್ಲದ ಮಂದ್ರಸ್ಥಾಯಿಯ ಆಲಾಪದಂತೆ ಭಾಸವಾಗುತ್ತದೆ. ಮಕ್ಕಳ ಎಣಿಕೆಯಲ್ಲಿ ಮೋಸವಾಗಬಹುದೆಂಬ ನಾರದರ ಮಾತಿನಿಂದ ಹತಾಶೆಗೊಂಡು ಭೀಕರ ಸಾವು ನೋವನ್ನು ಸೃಷ್ಟಿಸುವುದು- ಕೈಗೆ ಮೆತ್ತಿಕೊಂಡಿರುವ ನೆತ್ತರನ್ನು ಸಮುದ್ರದ ನೀರೂ ತೊಳೆಯಲಾರದೆಂದು ಪರಿತಪಿಸುತ್ತಲೇ ಕ್ರೌರ್ಯವನ್ನು ಅನಾವರಣಗೊಳಿಸುವ ಕಂಸನ ಆಲಾಪವು ಥಟ್ಟನೇ ತಾರಸ್ಥಾಯಿಗೇರಿ ರಭಸಗೊಳ್ಳುತ್ತದೆ.

ಸಾವಿನ ಭಯದಿಂದ ತಲ್ಲಣಿಸಿ, ಸಾವನ್ನು ನಿವಾರಿಸಿಕೊಳ್ಳಲು ಸಾವನ್ನೇ ಸೃಷ್ಟಿಸಿದ ಕಂಸನಿಗೆ ಸಾವೇ ಎದುರು ನಿಂತಾಗ ಬದುಕಿನ ಭ್ರಮೆಯ ಅರಿವಾಗುತ್ತದೆ. ಈ ಆಲಾಪ ದಲ್ಲಿಯೇ “ನನಗೆ ಬದುಕು ಬೇಕು; ನಾನು ಬದುಕ ಬೇಕು’ ಎಂದು ಕನವರಿಸುತ್ತಲೇ ಮರಣಕ್ಕೆ ಶರಣಾಗುತ್ತಾನೆ. ಕೊನೆಯ ಈ ಭಾಗವು ಅತಿ ಮಂದ್ರಸ್ಥಾಯಿಯಲ್ಲಿ ವಿಲಂಬ ಗತಿಯಲ್ಲಿ ವಿನ್ಯಾಸಗೊಳ್ಳುವ ಪ್ರಶಾಂತ ಆಲಾಪದಂತಿದೆ. ಇದು ನೋಡುಗರ ಮನದಲ್ಲಿ ಸ್ನಿಗ್ಧ ಭಾವವೊಂದನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತದೆ. ಸಾವು ಸತ್ಯ: ಬದುಕು ಭ್ರಮೆ ಎಂಬುದರ ಅರಿವಾದರೂ ಕಂಸನು ಬದುಕು ಬೇಕೆಂಬ ಉತ್ಕಟ ಹಂಬಲದೊಂದಿಗೇ ಸಾಯುತ್ತಾನೆ. ಹುಟ್ಟಿದ ಎಲ್ಲ ಜೀವಿಗಳನ್ನೂ ಸಾವು ಇಲ್ಲವಾಗಿಸುತ್ತದೆ. ಆದರೆ ಬದುಕು ಬೇಕು ಎಂಬ ಹಂಬಲವನ್ನು ಇಲ್ಲವಾಗಿಸಲು ಸಾವಿಗೆ ಸಾಧ್ಯವಿಲ್ಲ. ಸಾವು ಹೇಗೆ ನಿರಂತರವೋ ಬದುಕು ಬೇಕು ಎಂಬ ಹಂಬಲ ಕೂಡ ಅಷ್ಟೇ ನಿರಂತರ. ಈ ನಿಸರ್ಗ ಸತ್ಯವನ್ನು ಕಂಸಾಲಾಪವು ಶಕ್ತಿಯುತವಾಗಿ ಧ್ವನಿಸುತ್ತದೆ. ಆದ್ದರಿಂದ ಕಂಸಾಲಾಪವು ಕೇವಲ ಕಂಸನ ಆಲಾಪವಾಗದೇ ಸಂಸಾರಾಲಾಪವೂ ಆಗುತ್ತದೆ.

ಖಚಿತ ಕಲ್ಪನೆಗಳೊಂದಿಗೆ ರಂಗಪಠ್ಯವನ್ನು ರಚಿಸಿದ ಮಂಜುನಾಥ್‌ ರಂಗ ಪ್ರದರ್ಶನ ದಲ್ಲಿಯೂ ತಮ್ಮ ಕಲ್ಪನೆಗಳನ್ನು ಸಾಕಾರಗೊಳಿಸಲು ಸಮರ್ಥವಾಗಿ ಶ್ರಮಿಸುತ್ತಾರೆ. ಅವರ ಪರಿಣಾಮಕಾರಿಯಾದ ಮಾತುಗಳಿಗೆ ಭಾಗವತರ ಆಲಾಪ, ರಂಗದ ಮೌನ, ರಂಗ ಚಲನೆಗಳು ವಿಶೇಷ ಪರಿಣಾಮವನ್ನು ನೀಡುತ್ತವೆ. ಪ್ರದರ್ಶನದಲ್ಲಿ ಯಕ್ಷಗಾನದ ಕುಣಿತ- ಅಭಿನಯಗಳ ವಿಜೃಂಭಣೆಯಿಲ್ಲದೇ ಅವುಗಳ ಕ್ಲಪ್ತ ಬಳಕೆಯ ಸಂಯಮದ ಹುಡುಕಾಟವಿದೆ. ತೆರೆಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ ವಿಶೇಷವಾಗಿ ಬಳಸಿಕೊಳ್ಳು ತ್ತಾರೆ. ಕೊಂದ ಮಕ್ಕಳನ್ನು ಎಣಿಸುವಾಗ ಯಕ್ಷಗಾನದ ಬೇರೆ ಬೇರೆ ತಾಳ ಬಳಸಿ ಕೊಳ್ಳುವ ರೀತಿ ಹೊಸ ಹುಡುಕಾಟದ ಪ್ರಯತ್ನವನ್ನು ಅನಾವರಣಗೊಳಿಸುತ್ತದೆ. ಇದು ಇನ್ನೂ ಸ್ಪಷ್ಟವಾದರೆ ಪ್ರದರ್ಶನಕ್ಕೆ ಹೆಚ್ಚು ಅರ್ಥ ಬರಬಹುದು. 

ಯಕ್ಷಗಾನ ರಂಗಭೂಮಿ ತನ್ನ ಗಾಂಭೀರ್ಯವನ್ನು ಕಳೆದುಕೊಳ್ಳು ತ್ತಿರುವ ಈ ಕಾಲದಲ್ಲಿ ಗುರು ಸಂಜೀವ ಸುವರ್ಣರ ತಂಡದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಭಾಗವತರಾಗಿ ದಿನೇಶ ಭಟ್‌ ಯಲ್ಲಾಪುರ, ಚೆಂಡೆವಾದಕರಾಗಿ ಕೃಷ್ಣಮೂರ್ತಿ ಭಟ್‌ ಮತ್ತು ಕೊಳಲಿನಲ್ಲಿ ಶಂತನು ಸುವರ್ಣರ ಕೊಡುಗೆ ಅಪಾರ. ಮಧ್ಯೆ ಮಧ್ಯೆ ಕೃಷ್ಣಳಾಗುವ ಕು| ಇಳಾ ಪ್ರದರ್ಶನಕ್ಕೆ ಮುದವನ್ನು ನೀಡುತ್ತಾ ತಂದೆಯ ದಣಿವನ್ನು ಕಡಿಮೆ ಮಾಡುತ್ತಾ ಪ್ರೇಕ್ಷಕರನ್ನು ಸಂತೋಷಗೊಳಿಸುತ್ತಾಳೆ. ಯಕ್ಷಗಾನ ಪಾತಳಿಯ ಮೇಲೆ ಹೊಸ ಪ್ರಯೋಗವೊಂದನ್ನು ಸೈ ಸೈ ಎನ್ನುವಂತೆ ಪ್ರದರ್ಶಿಸಿದ ಕಂಸಾಲಾಪ ತಂಡದವರಿಗೆ ಮತ್ತು ಸಂಘಟಿಸಿ ಮಾದರಿಯಾದ ಕಾಲೇಜಿನ ಹಳೆ ವಿದ್ಯಾರ್ಥಿ ವೃಂದಕ್ಕೆ ಅಭಿನಂದನೆಗಳು.

ಕೆ.ಎಸ್‌. ಶ್ರೀಧರಮೂರ್ತಿ, ಹುಂಚ

ಟಾಪ್ ನ್ಯೂಸ್

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.