ದ್ವಿತೀಯ ವಾರ್ಷಿಕೋತ್ಸವ ಸಂಭ್ರಮ:ಬ್ರಾಮರೀ ಯಕ್ಷಮಿತ್ರರು ವಾಟ್ಸಪ್ ಬಳಗ
Team Udayavani, Aug 18, 2017, 9:20 AM IST
ಆಧುನಿಕ ಸಂವಹನ ತಂತ್ರಜ್ಞಾನದ ಉತ್ಪನ್ನವಾದ ವಾಟ್ಸಾಪ್ ಇಂದು ಪ್ರಬಲ ಮಾಹಿತಿ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಲಕ್ಷಾಂತರ ಮಂದಿಗೆ ಸಂದೇಶ ಅಥವಾ ಫೋಟೋ ಕಳಿಸಬಲ್ಲ ವಾಟ್ಸಾಪ್ ಇಂದು ಎಲ್ಲ ವರ್ಗದ ಜನರ ನಡುವೆ ಜನಪ್ರಿಯವಾಗಿದೆ. ಯಕ್ಷಗಾನವೂ ವಾಟ್ಸಾಪ್‌ನ ಪ್ರಭಾವಕ್ಕೆ ಒಡ್ಡಿಕೊಂಡಿದೆ. ವಾಟ್ಸಾಪ್‌ನಲ್ಲಿ ಯಕ್ಷಗಾನ ಸಂಬಂಧಿ ಗುಂಪುಗಳು ಗಮನಾರ್ಹ ಪ್ರಮಾಣದಲ್ಲಿವೆ. ಒಂದು ಗುಂಪಿನಲ್ಲಿ ತಲಾ 256 ಮಂದಿ ಸದಸ್ಯರನ್ನು ಹೊಂದಿರಬಲ್ಲ ಈ ಸಾಮಾಜಿಕ ವೇದಿಕೆಯಲ್ಲಿ ಯಕ್ಷಗಾನಕ್ಕೆ ಮೀಸಲಾದ ಸಾವಿರಕ್ಕೂ ಮಿಕ್ಕು ಗುಂಪುಗಳಿವೆ.
ಇಂಥ ಯಕ್ಷಗಾನ ವಾಟ್ಸಾಪ್ ಗುಂಪುಗಳಲ್ಲಿ ಬ್ರಾಮರೀ ಯಕ್ಷಮಿತ್ರರು (ರಿ.) ಮಂಗಳೂರು ಒಂದು. 2015ರ ಫೆಬ್ರವರಿ 16ರಂದು ವಿನಯಕೃಷ್ಣ ಕುರ್ನಾಡ್ ಅವರಿಂದ “ಯಕ್ಷಮಿತ್ರರು’ ಎಂಬ ಹೆಸರಿನಲ್ಲಿ ವಾಟ್ಸಾಪ್ ಗುಂಪು ಆಗಿನ ನಿಯಮದಂತೆ ನೂರು ಮಂದಿ ಸದಸ್ಯರನ್ನೊಳಗೊಂಡು ಸ್ಥಾಪಿಸಲ್ಪಟ್ಟಿತು. ಇದೀಗ ಹೊಸ ನಿಯಮದಂತೆ ಬಳಗ ಹಲವಾರು ಸದಸ್ಯರ ಸೇರ್ಪಡೆಯೊಂದಿಗೆ ವಿಸ್ತಾರವಾಗಿ ಬೆಳೆದಿದೆ. ಸಮಾನ ಆಸಕ್ತಿಯ ಗೆಳೆಯರೆಲ್ಲ ಒಂದೆಡೆ ಸೇರುವಂತೆ ಮಾಡಿದೆ ಈ ವೇದಿಕೆ. “ಯಕ್ಷಮಿತ್ರರು’ ಅನ್ನುವ ಹೆಸರಲ್ಲಿ ಹಲವಾರು ಬಳಗಗಳು ಇರುವ ಕಾರಣಕ್ಕೆ ಹೊಸ ನಾಮಧೇಯ ಬೇಕೆಂಬ ಹಂಬಲದೊಂದಿಗೆ “ಬ್ರಾಮರೀ ಯಕ್ಷಮಿತ್ರರು’ ಮಂಗಳೂರು ಎಂಬುದಾಗಿ ನಾಮಕರಣ ಮಾಡಿ ನೋಂದಾಯಿಸಲಾಗಿದೆ.
ಯಕ್ಷವೈಭವದ ಕುರಿತು
ಬಳಗದ ಸದಸ್ಯರಲ್ಲೊಬ್ಬರು ಕಳೆದ ವರ್ಷ ಯಕ್ಷಗಾನ ಸಂಬಂಧಿ ಮಾಹಿತಿ ಹಂಚೋಣಕ್ಕಷ್ಟೇ ಸೀಮಿತವಾಗುವ ಬದಲು ಯಕ್ಷಗಾನ ಪ್ರದರ್ಶನ ಸಂಘಟಿಸಬಾರದೇಕೆ ಎಂಬ ಆಲೋಚನೆಯನ್ನು ಗುಂಪಿನಲ್ಲಿ ಹರಿಯಬಿಟ್ಟುದು “ಯಕ್ಷ ವೈಭವ’ವನ್ನು ಸಂಘಟಿಸುವುದಕ್ಕೆ ನಾಂದಿಯಾಯಿತು. ಬಳಗದ ಸರ್ವ ಸದಸ್ಯರ ಪ್ರೋತ್ಸಾಹ, ಹಿತೈಷಿ ಕಲಾಪೋಷಕರ ಕೃಪೆ, ಕಲಾವಿದರ ಸಹಕಾರದೊಂದಿಗೆ 2016ರ ಆಗÓr… 20ರಂದು ಮಂಗಳೂರಿನ ಪುರಭವನದಲ್ಲಿ ಯಶಸ್ವೀ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಅವರಿಗೆ “ಭಾÅಮರೀ ಯಕ್ಷಮಣಿ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಬಾರಿಯೂ ಯಕ್ಷ ವೈಭವ ಆಗಸ್ಟ್ 19, 2017ರಂದು ರಾತ್ರಿ ಎಂಟರಿಂದ ಮಂಗಳೂರಿನ ಪುರಭವನದಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಾಲ್ಕು ಪೌರಾಣಿಕ ಪ್ರಸಂಗಗಳೊಂದಿಗೆ ಆಯೋಜನೆಗೊಂಡಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಪ್ರಸಂಗಕರ್ತ, ಛಾಂದಸ, ಹಿಮ್ಮೇಳದ ಸವ್ಯಸಾಚಿ ಕಲಾವಿದ ಗಣೇಶ್ ಕೊಲೆಕಾಡಿ ಅವರಿಗೆ ಭಾÅಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಗಣೇಶ್ ಕೊಲೆಕಾಡಿಯವರು ಛಂದಸ್ಸಿನಲ್ಲಿ ಅಪಾರ ಸಾಧನೆ ಮಾಡಿದವರು. ಅಭಿನವ ನಾಗವರ್ಮ ಬಿರುದಾಂಕಿತರಾದ ಡಾ| ಶಿಮಂತೂರು ನಾರಾಯಣ ಶೆಟ್ಟರ ಶಿಷ್ಯರಾಗಿ, ಯಕ್ಷಗಾನ ಛಂದಸ್ಸುಗಳ ಕುರಿತು ಆಳವಾದ ಸಂಶೋಧನೆ ಮಾಡಿದವರು. 40ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ ರಚನೆ, ಹಿಮ್ಮೇಳ ಹಾಗೂ ಮುಮ್ಮೇಳಗಳ ಸಮರ್ಥ ಕಲಾವಿದರಾಗಿಯೂ ಪ್ರಸಿದ್ಧಿ ಗಳಿಸಿದವರು. ನೂರಾರು ವಿದ್ಯಾರ್ಥಿಗಳಿಗೆ ಹಿಮ್ಮೇಳ ಹಾಗೂ ಛಂದಸ್ಸನ್ನು ಉಚಿತವಾಗಿ ಕಲಿಸುತ್ತಿದ್ದಾರೆ.
ಪ್ರಸಂಗ ರಚನೆ, ಯಕ್ಷಗಾನ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವಿಕೆ ಮುಂತಾದ ಯಕ್ಷಗಾನೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ, ಅಪಾರ ಶಿಷ್ಯವರ್ಗವನ್ನು ಹೊಂದಿರುವ ಅಪೂರ್ವ ಸಾಧಕರು ಕೊಲೆಕಾಡಿಯವರು.
ಯಕ್ಷ ವೈಭವದ ಇದೇ ಸಂದರ್ಭದಲ್ಲಿ ಯಕ್ಷಗಾನದ ಬಣ್ಣದಮನೆಯಲ್ಲಿ ಸೇವೆಗೈಯುತ್ತಿರುವ ನೇಪಥ್ಯ ಕಲಾವಿದರು ಹಾಗೂ ರಂಗ ಸಹಾಯಕ ಕಟೀಲು ಮೇಳದ ಶಿವಣ್ಣ ಸರಪಾಡಿ ಹಾಗೂ ಬಪ್ಪನಾಡು ಮೇಳದ ಕೊರಗಪ್ಪ ಇವರನ್ನೂ ಗೌರವಿಸಲಾಗುವುದು.
ಎಂ. ಶಾಂತರಾಮ ಕುಡ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.