ಶ್ರುತಿ ವಿಶ್ವಕರ್ಮ ಹಿಂದುಸ್ತಾನಿ ಗಾಯನ
Team Udayavani, Sep 7, 2018, 6:00 AM IST
ಕುಂದಾಪುರ ಸಂಗೀತ ಭಾರತಿ ಟ್ರಸ್ಟ್ ಆಶ್ರಯದಲ್ಲಿ ಆ.19ರಂದು ಯುವ ಪ್ರತಿಭೆ ಪುಣೆಯ ಕು| ಶ್ರುತಿ ವಿಶ್ವಕರ್ಮ ಪ್ರಸ್ತುತಪಡಿಸಿದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಸಂಗೀತವೇ ಆಸ್ತಿಯಾಗಿರುವ ಕುಟುಂಬದಲ್ಲಿ 1992ರಲ್ಲಿ ಜನಿಸಿದ ಶ್ರುತಿ 6 ವರ್ಷದ ಬಾಲೆಯಾಗಿರುವಾಗಲೇ ಕಿರಾಣಾ ಘರಾಣೆಯ ತಾಯಿ ಜಯಂತಿ ವಿಶ್ವಕರ್ಮ ಹಾಗೂ ತಂದೆ ಗಣಪತ್‌ರಾವ್ ವಿಶ್ವಕರ್ಮರಿಂದ ಸಂಗೀತದ ಮೊದಲ ಪಾಠ ಕಲಿತರು. ಮುಂದೆ ಕೆಲವು ವರ್ಷ ಗ್ವಾಲಿಯರ್ ಘರಾಣೆಯ ಡಾ| ವೀಣಾ ಸಹಸ್ರಬುದ್ಧೆಯವರಿಂದ ತರಬೇತಿ ಪಡೆದು ಪ್ರಸ್ತುತ ಆಗ್ರಾ ಘರಾಣೆ ಹಾಗೂ ಬೆಂಡಿಬಜಾರ್ ಘರಾಣೆಯ ಪಂ. ಕೇದಾರ್ ಬೊಡಾಸ್ ಅವರಿಂದ ಹುಬ್ಬಳ್ಳಿಯ ಡಾ| ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಹೆಚ್ಚಿನ ಶಿಕ್ಷಣ ಪಡೆಯುತ್ತಿರುವರು.
ಮಿಯಾಮಲಾರ್ ರಾಗದೊಂದಿಗೆ ಆರಂಭಗೊಂಡ ಕಾರ್ಯಕ್ರಮ ಪೀಲು, ಕೀರ್ವಾನಿ ಬಳಿಕ ಭೈರವಿ ಹಾಡುವುದರ ಮೂಲಕ ಸಂಪನ್ನಗೊಂಡಿತು. ಸಂವಾದಿನಿಯಲ್ಲಿ ಗೌರೀಶ ಯಾಜಿ, ತಬಲಾದಲ್ಲಿ ವಿಘ್ನೇಶ ಎಸ್. ಕಾಮತ್, ತಾನ್‌ಪುರದಲ್ಲಿ ಕು| ವೀಣಾ ನಾಯಕ್ ಹಾಗೂ ವಿವೇಕ ಪೈ ಸಹಕರಿಸಿದರು.
ಪಿ.ಜಯವಂತ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.