ಭಾವಪರವಶಗೊಳಿಸಿದ ಬಾಲೆಯರ ಗಾಯನ
Team Udayavani, Jun 15, 2018, 6:00 AM IST
ಸುರತ್ಕಲ್‌ನ ಫ್ಲೈಓವರ್‌ನ ತಳಭಾಗವನ್ನು ಅತ್ಯಂತ ವರ್ಣರಂಜಿತವಾಗಿ ಸುಂದರಗೊಳಿಸುವಲ್ಲಿ ಮುಖ್ಯ ಕಾರಣರಾದ ನಾಗರಿಕಾ ಸಲಹಾ ಸಮಿತಿ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಗಳು ಪ್ರತಿ ತಿಂಗಳ ಮೊದಲ ಭಾನುವಾರ ಬೆಳಗ್ಗೆ 6.00ರಿಂದ 7ರ ತನಕ ನಡೆಸಿಕೊಂಡು ಬರುತ್ತಿರುವ ಉದಯರಾಗ ಸರಣಿ ಸಂಗೀತ ಕಛೇರಿಗಳ 3ನೇ ಕಾರ್ಯಕ್ರಮ ಕು| ಧನಶ್ರೀ ಶಬರಾಯ, ಕು| ಸುಮೇಧಾ ಕೆ. ಎನ್., ಕು| ವರ್ಷಾ ಹಾಗೂ ಕು| ವಸುಮತಿ ಇವರ ಹಾಡುಗಾರಿಕೆಯೊಂದಿಗೆ ನಡೆಯಿತು. ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಅವರು ಇತ್ತೀಚೆಗೆ ನಡೆಸಿದ ಸಂಗೀತ ಕಾರ್ಯಾಗಾರದಲ್ಲಿ ಕಲಿಸಿದ ಕೃತಿಗಳನ್ನಾಧರಿಸಿ ನಡೆದ ಈ ಕಾರ್ಯಕ್ರಮದಲ್ಲಿ ಪಾಪನಾಸಂ ಸಿವನ್, ಶ್ರೀರಂಜನಿ ರಾಗದ ಗಜವದನ, ಮುತ್ತಯ್ಯ ಭಾಗವತರ ಮೋಹನ ಕಲ್ಯಾಣಿಯ ಭುವನೇಶ್ವರಿಯ, ತ್ಯಾಗರಾಜರ ರಂಜನಿ ರಾಗದ ದುರ್ಮಾಗಚರಾ, ಪುರಂದರದಾಸರ ಜನಸಮ್ಮೊಹಿನಿ ರಾಗದ ಗೋವಿಂದ ನಿನ್ನ, ತ್ಯಾಗರಾಜರ ಮಧ್ಯಮಾವತಿಯ ರಾಮಕಥಾ, ಸದಾಶಿವ ಬ್ರಹೆದ್ರ ಅವರ ಸಾಮರಾಗದ ಮಾನಸ ಸಂಚರರೇ, ಪುರಂದದಾಸರ ಮೋಹನ ರಾಗದ ನಾನೇನು ಮಾಡಿದೆನೋ, ಅಭೇರಿ ರಾಗದಲ್ಲಿ ಅಂಬಿಗ ನಾನಿನ್ನ ಹಾಗೂ ಮಧ್ಯಮಾತಿಯ ಭಾಗ್ಯದ ಲಕ್ಷೀ ಸುಶ್ರಾವ್ಯವಾಗಿ ಪ್ರಸ್ತುತಗೊಂಡವು. ಅನಾಮಧೇಯ ಕವಿಯಿಂದ ರಚಿತವಾದ ಶಿವರಂಜನಿ ರಾಗದ ಚಿಂತ್ಯಾಕೆ ಮಾಡಿತ್ತಿದ್ದಿ ಚಿನ್ಮುಯನಿದ್ದಾನೆ… ಭಜನೆ ಹಾಡು ಶೋತೃಗಳನ್ನು ಭಾವಪರವಶರನ್ನಾಗಿಸಿತು. ಮಾ| ಸುಮೇಧಾ ಅಮೈ ವಯಲಿನ್‌ನಲ್ಲಿ ಹಾಗೂ ಸುಮುಖ ಕಾರಂತ ಮೃದಂಗದಲ್ಲಿ ಸಹಕರಿಸಿದರು. ಕು| ಶೋಭಿತಾ, ಕು| ಸ್ವಾತಿ ಮತ್ತು ಕು| ಆಶ್ವಿಜಾ ಸಹಗಾಯನದಲ್ಲಿ ಸಹಕರಿಸಿದರು.
ಪಿ. ನಿತ್ಯಾನಂದ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.