ಅರ್ಥಾಂತರಂಗ :ಹೀಗೊಂದು ವಿಶಿಷ್ಟ ಪ್ರಯೋಗ 


Team Udayavani, Jul 27, 2018, 6:00 AM IST

7.jpg

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು ಇದರ ಕನಸಿನ ಕೂಸು ಅರ್ಥಾಂತರಂಗ. ಇದರ ಹಿಂದೆ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಶ್ರಮ ಅಪಾರ.ಒಂದೊಂದು ಪ್ರಯೋಗದಲ್ಲಿ ಒಂದೊಂದು ಭಿನ್ನತೆ ವೈವಿಧ್ಯತೆಗಳು ಹೊಸ ಪ್ರಯತ್ನಗಳು ನಡೆಯುತ್ತವೆ.ಸುಬ್ರಹ್ಮಣ್ಯದಲ್ಲಿ ಜರಗಿದ ಅರ್ಥಾಂರಂಗ ಇದರ 9ನೇ ಪ್ರಯೋಗ. 

ಪೀಠಿಕೆ ವಿನ್ಯಾಸ ಹಾಗೂ ವಿಸ್ತಾರ, ಸ್ವಗತ ಹಾಗೂ ಪೀಠಿಕೆ -ವ್ಯತ್ಯಾಸ, ಸಂವಾದದಲ್ಲಿ ವೈವಿಧ್ಯ , ಅವಲೋಕನ ಸಂವಾದ ಅನಿಸಿಕೆ ಈ ನಾಲ್ಕು ಹಂತಗಳಲ್ಲಿ ಶಿಬಿರ ಜರಗಿತು. ಅರ್ಥಧಾರಿಗಳಾದ ರಾಧಾಕೃಷ್ಣ ಕಲ್ಚಾರ್‌ ಇವರು ನೀಡಿದ ಶ್ರೀ ರಾಮ ನಿರ್ಯಾಣ ಪ್ರಸಂಗದಲ್ಲಿ ಐದು ನಿಮಿಷದ ಶ್ರೀ ರಾಮನ ಪೀಠಿಕೆ , 10 ನಿಮಿಷದ ಭೀಷ್ಮ ವಿಜಯದ ಭೀಷ್ಮನ ಪೀಠಿಕೆ ಹಾಗೂ ಮನೋಜ್ಞವಾಗಿ ಕಾಲಮಿತಿಯಲ್ಲಿ ಪೀಠಿಕೆ ಮಾತುಗಳನ್ನು ಹೇಗೆ ಹೇಳುವುದು ಎಂಬ ಪ್ರಾತ್ಯಕ್ಷಿಕೆ ಅರ್ಥವತ್ತಾಗಿತ್ತು.

ಸ್ವಗತ ಮತ್ತು ಪೀಠಿಕೆಯಲ್ಲಿ ವ್ಯತ್ಯಾಸವನ್ನು ಬಹಳ ಸ್ಪಷ್ಟವಾಗಿ ತಿಳಿಸಿದರು.ವಿಷ್ಣುಭಟ್‌ ವಾಟೆಪಡು³ ಮತ್ತು ಹರೀಶ ಬಳಂತಿಮೊಗರು ಇವರ ವಾದ – ಸಂವಾದ ನೈಜ ಜೀವನದ ಚಿತ್ರಣ ಮೂಡಿಸಿತು. ಗಿರಿಜಾ ಕಲ್ಯಾಣದ ಭೈರಾಗಿಯಾಗಿ ರಾಧಾಕೃಷ್ಣ ಕಲ್ಚಾರ್‌ ಶಿವನ ವೈಶಿಷ್ಟéತೆಗಳನ್ನು ಅನಾವರಣಗೊಳಿಸುವಲ್ಲಿ ಸಫ‌ಲರಾದರೆ ಗಿರಿಜೆಯಾಗಿ ವಾಟೆಪಡು³ ವಿಷ್ಣುಭಟ್‌ ಪಾರ್ವತಿಗೆ ಶಿವನ ಮೇಲಿರುವ ಪ್ರೀತಿ ಭಕ್ತಿಯ ಕುರಿತು ಚಿತ್ರಣ ಬರುವಂತೆ ಮಾಡಿದರು. 

ಚಕ್ರವ್ಯೂಹ ಪ್ರಸಂಗದಲ್ಲಿ ಧರ್ಮರಾಯನಾಗಿ ಹರೀಶ ಬಳಂತಿಮೊಗರು ಚಿಂತೆ ಸಂದಿಗ್ಧತೆಯನ್ನು ಸಶಕ್ತವಾಗಿ ವ್ಯಕ್ತಪಡಿಸಿದರೆ, ಅಭಿಮನ್ಯವಾಗಿ ವಾಟೆಪಡು³ ವಿಷ್ಣುಭಟ್‌ ಅಭಿಮನ್ಯವಿನ ಉತ್ಸಾಹ ವೀರಾವೇಶವನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾದರು.ಒಟ್ಟಾರೆಯಾಗಿ ತಾಳಮದ್ದಳೆಯ ಸ್ವರೂಪದಲ್ಲಿ ಬದಾಲವಣೆಯಿಲ್ಲದೆ ಕಾಲಮಿತಿಯಲ್ಲಿ ಹೇಗೆ ಪ್ರಸ್ತುತ ಪಡಿಸಬಹುದೆಂಬುದಕ್ಕೆ ಈ ಕಾರ್ಯಗಾರ ಸಾಕ್ಷಿಯಾಯಿತು. 

ನಂತರದ ಸಂವಾದದಲ್ಲಿ ಡಾ|ಪೂವಪ್ಪ ಕಣಿಯೂರು ,ಮಂಜು ಸುಳ್ಯ ,ಕೆ. ರಾಮಶರ್ಮ,ಕೃಷ್ಣಶರ್ಮ ,ಸತ್ಯಶಂಕರ ಮಲೆಯಾಳ ,ಶಂಭಯ್ಯ ಕಂಜರ್ಪಣೆ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಿದರು.ಸರ್ವಾಧ್ಯಕ್ಷರಾದ ಕಲಾವಿದ ಡಾ| ಪ್ರಭಾಕರ ಶಿಶಿಲ ತಾಳಮದ್ದಳೆಯ ಬೆಳವಣಿಗೆಯಲ್ಲಿ ಇದೊಂದು ಹೊಸ ಆಯಾಮ.ವೇಗದ ಯುಗದಲ್ಲಿ ಕಾಲಮಿತಿಯ ಮತ್ತು ವೈವಿಧ್ಯತೆ ಅನಿವಾರ್ಯತೆ,ಪ್ರಸ್ತುತ ವಿದ್ಯಮಾನಗಳನ್ನು ಅರ್ಥವತ್ತಾಗಿ ಸೇರಿಸಿದಾಗ ವಿಷಯ ಪ್ರಕ್ಷಕರಿಗೆ ಖುಷಿಯಾಗುತ್ತದೆ ಮತ್ತು ವಿಷಯ ಮನವರಿಕೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಥಾಂತರಂಗ -9ಕ್ಕೆ ಮಂಗಳ ಹಾಡಿದರು. 

ಹಿಮ್ಮೇಳದಲ್ಲಿ ರಮೇಶ ಭಟ್‌ ಪುತ್ತೂರು ಮತ್ತು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಕಂಠಸಿರಿಯಿಂದ ರಂಜಿಸಿದರು.ಚೆಂಡೆ ಮದ್ದಳೆಯಲ್ಲಿ ದೇಲಂತ ಮಜಲು ಸುಬ್ರಹ್ಮಣ್ಯ ಭಟ್‌ ಮತ್ತು ಲವ ಕುಮಾರ್‌ ಐಲ ಪ್ರಬುದ್ಧತೆಯನ್ನು ಪ್ರದರ್ಶಿಸಿದರು. 

ಕೃಷ್ಣ ಶರ್ಮ 

ಟಾಪ್ ನ್ಯೂಸ್

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.