ಅರುವತ್ತರ ಅರ್ಪಣೆಯಲ್ಲಿ ಆರು ಕಲಾವಿದರಿಗೆ ಸಮ್ಮಾನ 

Team Udayavani, Apr 13, 2018, 6:00 AM IST

16.jpg

(ಕಳೆದ ವಾರದಿಂದ)
ಸುಜಯೀಂದ್ರ ಹಂದೆ 
ಕೋಟದ ಹಂದಟ್ಟು ಪಟೇಲರ ಮನೆ ಸಾಲಿಗ್ರಾಮ ಮಕ್ಕಳ ಮೇಳದ ಗುರುಕುಲ. ಎಚ್‌. ಶ್ರೀಧರ ಹಂದೆ – ವಸುಮತಿ ಹಂದೆಯವರ ಪುತ್ರರಾಗಿ ಜನಿಸಿದ ಸುಜಯೀಂದ್ರರು ಯಕ್ಷಗಾನದ ಹಾಡೇ ಜೋಗುಳವಾಗಿ ಶೈಶವ ಕಳೆದವರು. ಮಕ್ಕಳ ಮೇಳದಲ್ಲಿ ಬಾಲ ಕಲಾವಿದರಾಗಿ ಬೆಳೆಯುತ್ತಾ ಪ್ರಧಾನ ವೇಷಧಾರಿಯಾಗಿ ಮೂಡಿ ಬಂದವರು. ಜೊತೆಗೆ ಯಕ್ಷಗಾನ ಭಾಗವತಿಕೆಯನ್ನೂ ಅಭ್ಯಾಸಮಾಡಿ ಪರಿಣತಿ ಪಡೆದರು. ಪ್ರಸಕ್ತ ಮಕ್ಕಳ ಮೇಳದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಕ್ಷಗಾನದ ಕಲಾವಿದನಾಗಿ ಅನೇಕ ಹವ್ಯಾಸಿ ಸಂಘಗಳಲ್ಲಿ ಮತ್ತು ವೃತ್ತಿ ಮೇಳದ ಪ್ರಸಿದ್ಧ ಕಲಾವಿದರೊಂದಿಗೆ ಅತಿಥಿಕಲಾವಿದರಾಗಿ ಎಲ್ಲ ರೀತಿಯ ಪಾತ್ರಗಳನ್ನೂ ಸಂಪ್ರದಾಯಬದ್ಧವಾಗಿ ನಿರ್ವಹಿಸಿ ಕಲಾರಸಿಕರ ಮನ್ನಣೆಗೆ ಪಾತ್ರರಾಗಿದ್ದಾರೆ. ಕೂಟಗಳಲ್ಲಿ ಅರ್ಥಧಾರಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಮುಖವಾಡ ರಚನೆ, ಮೇಕಪ್‌ ಕಲೆಯಲ್ಲೂ ಪರಿಣತರು. ಪ್ರಸಕ್ತ ಗಂಗೊಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ  ಅವರು  ಕವಿ, ಬರಹಗಾರ ಕೂಡಾ ಹೌದು. ಬಂಜೆ ಹೆತ್ತ ನೋವು ಕವನ ಸಂಕಲನ ಹೊರತಂದಿದ್ದಾರೆ. ಹಲವು ಯಕ್ಷಗಾನ ನಾಟಕ, ಸಾಹಿತ್ಯ ಸಂಬಂಧೀ ಕಮ್ಮಟ, ವಿಚಾರಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧ ಮಂಡಿಸಿದ್ದಾರೆ. ಹಲವಾರು ಸಾಂಸ್ಕೃತಿಕ ಸಂಘಟನೆಗಳ ಸದಸ್ಯರಾಗಿ ಸಕ್ರಿಯರಾಗಿದ್ದಾರೆ. ಗಮಕ ವಾಚನ ಪ್ರವಚನಗಳನ್ನೂ ನಡೆಸಿಕೊಟ್ಟಿದ್ದಾರೆ. ಕರ್ನಾಟಕ ಯಕ್ಷಗಾನ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 

ರತ್ನಾಕರ ಆಚಾರ್ಯ 
 ಉಡುಪಿ ಸಮೀಪದ ಕಲ್ಯಾಣಪುರದವರಾದ ಕೆ.ಜೆ. ರತ್ನಾಕರ ಆಚಾರ್ಯರು ಶಿಲ್ಪಿ ಜನಾರ್ದನ ಆಚಾರ್ಯ-ರುಕ್ಮಿಣಿ ದಂಪತಿ ಪುತ್ರ. ಜನಿಸಿದ್ದು 1964ರಲ್ಲಿ. ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಗುರು ಟಿ.ಕಾಂತಪ್ಪ ಮಾಸ್ತರರ ಶಿಷ್ಯರಾಗಿ ಯಕ್ಷಗಾನ ಕಲಿಯುವ ಅವಕಾಶ ಒದಗಿತು. ಮುಂದೆ ಟಿ. ಜಯಂತ ಕುಮಾರರಿಂದ ಯಕ್ಷಗಾನ ಭಾಗವತಿಕೆ ಹಿಮ್ಮೇಳವಾದನದಲ್ಲಿ ತರಬೇತಿ ಪಡೆದರು. ಗೋರ್ಪಾಡಿ ವಿಠಲ ಪಾಟೀಲ, ಚಂಡೆವಾದಕ ಕೆಮ್ಮಣ್ಣು ಆನಂದರಿಂದಲೂ ಯಕ್ಷಗಾನ ಹಿಮ್ಮೇಳ ಅಭ್ಯಾಸ ಮಾಡಿ ಪರಿಣತಿ ಗಳಿಸಿದರು.

 ಸುಧನ್ವ, ಕೃಷ್ಣ, ಕಂಸ, ಶಶಿಪ್ರಭೆ ಹೀಗೇ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದಾರೆ. ನೀಲಾವರ, ಅಮೃತೇಶ್ವರಿ, ಹಾಲಾಡಿ, ಬಗಾ³ಡಿ ಮೊದಲಾದ ಮೇಳಗಳಲ್ಲಿ ಹಿಮ್ಮೇಳವಾದಕರಾಗಿ ಭಾಗವಹಿಸಿದ್ದಾರೆ. ಹಿಮ್ಮೇಳ ವಾದನದ ಗುರುಗಳಾಗಿ ಹಲವರಿಗೆ ತರಬೇತಿ ನೀಡಿದ್ದಾರೆ. ಶಶಿಕುಮಾರ ಆಚಾರ್ಯ, ಗಣೇಶ್‌ ಶೆಣೈ, ಲಕ್ಷ್ಮಣ ಶೆಟ್ಟಿಗಾರ್‌ ಮೊದಲಾದ ಹಿಮ್ಮೇಳ ವಾದಕರು ಇವರಿಂದ ತರಬೇತಿ ಪಡೆದವರಲ್ಲಿ ಪ್ರಮುಖರು. ಎರಡು ವರ್ಷ ಮುಂಬಯಿಯಲ್ಲಿ ಯಕ್ಷಗಾನ ತರಗತಿ ನಡೆಸಿದ್ದಾರೆ. ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್‌ನ ಗುರುಗಳಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. 

ಕೃಷ್ಣಮೂರ್ತಿ ತುಂಗ
 ಮೂಲತಃ ಕೋಟದವರಾದ ಈಗ ಬೆಂಗಳೂರು ನಿವಾಸಿಯಾಗಿರುವ ಕೆ. ಕೃಷ್ಣಮೂರ್ತಿ ತುಂಗರು ಜನಿಸಿದ್ದು 1965ರಲ್ಲಿ. ರಾಮಕೃಷ್ಣ ತುಂಗ- ಶ್ರೀದೇವಿ ತುಂಗ ಇವರ ತಂದೆ ತಾಯಂದಿರು.  ಐದನೇ ತರಗತಿಯಲ್ಲಿರುವಾಗಲೇ ಹೆರಂಜಾಲು ಗೋಪಾಲ  ಗಾಣಿಗ ಎಂ.ಎನ್‌. ಮಧ್ಯಸ್ಥರ ನಿರ್ದೇಶನದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದರು. ಪ್ರೌಢಶಿಕ್ಷಣ ಪೂರೈಸಿ ಉಡುಪಿ ಎಂ.ಜಿ.ಎಂ. ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯರಾಗಿ ಎರಡು ವರ್ಷ ತರಬೇತಿ ಪಡೆದು ನೃತ್ಯ ಹೆಜ್ಜೆಗಾರಿಕೆಯಲ್ಲಿ ಪರಿಣತರಾದರು. ಸ್ವಲ್ಪ ಸಮಯ ಅಲ್ಲೇ ಸಹಾಯಕ ಗುರುವಾಗಿ ಯಕ್ಷಗಾನ ಕಲಿಸುವ ಅವಕಾಶವೂ ಲಭಿಸಿತು. 1987ರಲ್ಲಿ ಬೆಂಗಳೂರಿನ ಯಕ್ಷದೇಗುಲ ಸೇರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವುದನ್ನೇ ವೃತ್ತಿಯಾಗಿ ಮೂರು ದಶಕಗಳಿಂದ ನಡೆಸಿಕೊಂಡು ಬಂದಿದ್ದಾರೆ. ತಾವೇ ಕಟ್ಟಿ ಬೆಳೆಸಿದ ಯಕ್ಷಕಲಾ ಅಕಾಡೆಮಿಯ ಮಕ್ಕಳ, ಮಹಿಳೆಯರ ಹಾಗೂ ಹಿರಿಯರ ಯಕ್ಷಗಾನ ತಂಡಗಳ ಪ್ರದರ್ಶನಗಳನ್ನು ನಿರ್ದೇಶಿಸಿದ್ದಾರೆ. ಅನೇಕ ಕಾರ್ಯಕ್ರಮಗಳಿಗೆ ಪ್ರಸಾದನ ವೇಷಭೂಷಣ ಒದಗಿಸುತ್ತಿದ್ದಾರೆ. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವಲ್ಲಿ ಯಕ್ಷಗಾನೀಯ ಮಾಧ್ಯಮವನ್ನು ಸಮರ್ಥವಾಗಿ ಬಳಸಿ ಯಶಸ್ವಿಯಾಗಿದ್ದಾರೆ. 

 ಯಕ್ಷಗಾನ ವೇಷಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲ ತುಂಗರು ಹಿಮ್ಮೇಳವಾದನದಲ್ಲೂ ಪರಿಣತರು. ನಾಟಕ ನಟರಾಗಿ, ನೃತ್ಯ ಕಲಾವಿದರಾಗಿ ನಟನಾ ಕೌಶಲ ಮೆರೆದಿದ್ದಾರೆ. ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅನಂತ ಪದ್ಮನಾಭ ಭಟ್‌ ಹಿರಿಯಡ್ಕ, ಕೆ. ಅರವಿಂದ ಶೆಟ್ಟಿಗಾರ್‌ ಬೆಂಗಳೂರು, ಕೆ. ಬಾಲಕೃಷ್ಣ ಭಟ್‌ ಬೆಂಗಳೂರು, ಕೆ. ಮಾಧವ ಬೈಲೂರು, ಎ.ಶೇಖರ ಶೆಟ್ಟಿಗಾರ್‌ ಅಂಬಲಪಾಡಿ, ಕುತ್ಪಾಡಿ ವಿಠಲ ಗಾಣಿಗ ಉಡುಪಿ ಅವರನ್ನು ಅಭಿನಂದಿಸಲಾಗುವುದು.                                                                     

ನಾರಾಯಣ ಎಂ. ಹೆಗಡೆ 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.