ಕೌಶಲ ಹೆಚ್ಚಿಸಿದ ಸಂಗೀತ ಕಾರ್ಯಾಗಾರ
Team Udayavani, Sep 6, 2019, 5:00 AM IST
ಪುತ್ತೂರಿನ ಸಪ್ತಸ್ವರ ಸಂಗೀತ ಕಲಾಶಾಲೆ ಮತ್ತು ಕಾಮಾಕ್ಷಿ ಸಂಗೀತ ಕಲಾ ಶಾಲೆ ಹಾಗೂ ಬಹುವಚನಂ ಇವುಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಶಾಸ್ತ್ರಿಯ ಸಂಗೀತ ಕಾರ್ಯಾಗಾರ ಸಂಗೀತ ವಿದ್ಯಾರ್ಥಿಗಳಿಗೆ ಕೌಶಲವನ್ನು ಹೆಚ್ಚಿಸಿಕೊಳ್ಳುವುದಕ್ಕೊಂದು ಸದಾವಕಾಶವನ್ನು ಒದಗಿಸಿತು.
ಚೆನ್ನೈಯ ಪಿಟೀಲು ವಾದಕ , ಡಾ|ಮುಲೈವಾಸಲ್ ಚಂದ್ರಮೌಳಿಯವರಿಂದ ಪಿಟೀಲು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸಾರ್ವಜನಿಕ ಕಲಾಸಕ್ತರಿಗೂ ಭಜನೆ ಕಲಿಯುವ ಅವಕಾಶ ಒದಗಿಬಂತು. ಮೊದಲ ದಿನ ಸಾರ್ವಜನಿಕರಿಗಾಗಿ ನೆರೆನಂಬಿ ಪಡೆಯೋ… ಎನ್ನುವ ಗುರುರಾಘವೇಂದ್ರರ ಸಂಕೀರ್ತನೆಯನ್ನು ಬೃಂದಾವನ ರಾಗದಲ್ಲಿ ಮತ್ತು ಜಯತಿ ಜಯತಿ ಭಾರತಿ ಎನ್ನುವ ದೇಶ ಭಕ್ತಿಗೀತೆಯನ್ನು ಹೇಳಿಕೊಟ್ಟರು.
ಮುಂದೆ ಜೂನಿಯರ್ ವಿಭಾಗದ ಸಂಗೀತ ವಿದ್ಯಾರ್ಥಿಗಳಿಗಾಗಿ ಶ್ರೀ ಗಣನಾಥ… ಕನಕಾಂಗಿ ರಾಗದ ತ್ಯಾಗರಾಜರ ಕೃತಿ, ಶ್ರೀ ಕಾಮಕೋಟಿ… ಎಂಬ ವಿಳಂಬ ಕೃತಿ ಸಾವೇರಿ ರಾಗದಲ್ಲಿ ಹಾಗೂ ಕನಕದಾಸರ ಮಂದರಧರ ಪಾವನ… ಎಂಬ ಕೀರ್ತನೆಯನ್ನು ಮಾಂಡ್ ರಾಗದಲ್ಲಿ ಆಯ್ದುಕೊಂಡು ಹೇಳಿಕೊಟ್ಟರು. ಸಾವೇರಿ ರಾಗದ ಆರೋಹಣ ಅವರೋಹಣ, ಗಮಕಗಳು, ರಾಗಛಾಯೆಯನ್ನೆಲ್ಲಾ ಸವಿಸ್ತಾರವಾಗಿ ತಿಳಿಸಿ ರಾಗದ ಪೂರ್ಣಪ್ರಜ್ಞೆಯನ್ನು ಒದಗಿಸಿಕೊಟ್ಟದ್ದು ಗಮನಾರ್ಹವಾಗಿತ್ತು. ಸೀನಿಯರ್ ಹಾಗೂ ವಿದ್ವತ್ ವಿದ್ಯಾರ್ಥಿಗಳಿಗಾಗಿ ಅಟಾಣರಾಗದ ಬ್ರಹಸ್ಪತೇ… ಅಮೃತವರ್ಷಿಣಿ ರಾಗದ ಶ್ರೀ ರಾಮ ಪಾದಮಾ… ಪಲ್ಲವಿ ಹಾಗೂ ಜಯದೇವ ಅಷ್ಟಪದಿಗಳನ್ನು ಹೇಳಿಕೊಟ್ಟರು. ವಿದ್ಯಾರ್ಥಿಗಳು ಈ ಎಲ್ಲ ಕೃತಿಗಳನ್ನು ತಮ್ಮ ಪಿಟೀಲಿನ ಮೂಲಕ ಹೊರಹೊಮ್ಮಿಸಲು ಪ್ರಯತ್ನಿಸಿದರು.
ಕೊನೆಯದಿನ ಕಲಿತ ಎಲ್ಲ ಕೃತಿಗಳ ಗೋಷ್ಠಿ ಗಾಯನ ಹಾಗೂ ವಾದನ ನಡೆದು ಕಾರ್ಯಕ್ರಮದ ಸಫಲತೆಯನ್ನು ಎತ್ತಿ ತೋರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.