ಬಯಲಾಟಗಳ ಸಮ್ಮೇಳನದಲ್ಲಿ ಮಿಂಚಿದ ಪ್ರಾತ್ಯಕ್ಷಿಕೆ

ಕರ್ನಾಟಕದ ಸಾಂಸ್ಕೃತಿಕ ಕಲಾಪ್ರತಿಷ್ಠಾನದ ಪ್ರಸ್ತುತಿ

Team Udayavani, Jun 28, 2019, 5:00 AM IST

5

ದೊಡ್ಡಾಟ, ಮೂಡಲಪಾಯ, ತೆಂಕುತಿಟ್ಟು, ಬಡಗುತಿಟ್ಟು, ಘಟ್ಟದಕೋರೆ, ಕೃಷ್ಣಪಾರಿಜಾತ, ಸಣ್ಣಾಟ, ತೊಗಲುಗೊಂಬೆಯಾಟ, ತಾಳಮದ್ದಳೆ ಪ್ರಕಾರಗಳ ಪ್ರದರ್ಶನಗಳನ್ನು ಸುಮಾರು ಹದಿಮೂರು ತಂಡಗಳು ನಡೆಸಿಕೊಟ್ಟವು.

ಅಖೀಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಬಯಲಾಟ ಪರಂಪರೆಯ ಹಲವು ಕಲಾಪ್ರಕಾರಗಳಿಗೆ ಒಂದೇ ವೇದಿಕೆಯಲ್ಲಿ ಪ್ರದರ್ಶನ, ಚಿಂತನ, ಮಂಥನಗಳಿಗೆ ಅವಕಾಶ ನೀಡಿದ ಸಮ್ಮೇಳನವಿದು.
ಬೆಂಗಳೂರಿನ ಕರ್ನಾಟಕದ ಸಾಂಸ್ಕೃತಿಕ ಕಲಾಪ್ರತಿಷ್ಠಾನದ ಅಧ್ಯಕ್ಷರಾದ ಎಸ್‌.ಎನ್‌.ಪಂಜಾಜೆಯವರ ಕನಸಿನ ಕೂಸಿದು. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಸಾಹಿತ್ಯ ವಿಚಾರಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆಗೆ ಮಾನ್ಯತೆ ದೊರೆಯದಿದ್ದಾಗ 2004ರಲ್ಲಿ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡರು. ಯಕ್ಷಗಾನ ಬಯಲಾಟಗಳಿಗೆ ಮಾನ್ಯತೆ ನೀಡಬೇಕೆಂಬ ಸದುದ್ದೇಶದ ಬೇಡಿಕೆಯ ಈಡೇರಿಕೆಗೆ ಅವರೇ ಕಂಡುಕೊಂಡ ದಾರಿ. 14ನೆಯ ಸಮ್ಮೇಳನವನ್ನು ಆಯೋಜಿಸಿದರು.
ಕರ್ನಾಟಕ ಕಲಾಭಿಮಾನಿ ಸಂಘದ ಸಹಭಾಗಿತ್ವದಲ್ಲಿ ಜಾನಪದ ತಜ್ಞ ಬಿ.ಆರ್‌.ಪೊಲೀಸ್‌ಪಾಟೀಲರ ಸರ್ವಾಧ್ಯಕ್ಷತೆಯಲ್ಲಿ ನೆರವೇರಿತು. ದೊಡ್ಡಾಟ, ಮೂಡಲಪಾಯ, ತೆಂಕುತಿಟ್ಟು, ಬಡಗುತಿಟ್ಟು, ಘಟ್ಟದಕೋರೆ, ಕೃಷ್ಣಪಾರಿಜಾತ, ಸಣ್ಣಾಟ, ತೊಗಲುಗೊಂಬೆಯಾಟ, ತಾಳಮದ್ದಳೆ ಪ್ರಕಾರಗಳ ಪ್ರದರ್ಶನಗಳನ್ನು ಸುಮಾರು ಹದಿಮೂರು ತಂಡಗಳು ನಡೆಸಿಕೊಟ್ಟವು. ಕರಾವಳಿ ಕರ್ನಾಟಕದಿಂದ ವಿಜಯಪುರದವರೆಗಿನ ಪ್ರಾದೇಶಿಕ ವೈಶಿಷ್ಟವುಳ್ಳ ಬಯಲಾಟಗಳು ಆಶಯ ವಿನಿಮಯಕ್ಕೆ ದಾರಿಮಾಡಿಕೊಟ್ಟವು. ತುಂಬಿದ ಪ್ರೇಕ್ಷಕವೃಂದ ಕಲಾಪ್ರಕಾರಗಳನ್ನು ಪರಸ್ಪರ ತೌಲನಿಕವಾಗಿ ಪರಿಶೀಲಿಸಿತು. ಉತ್ತರಕ ಕರ್ನಾಟಕದ ದೊಡ್ಡಾಟ ಪರಂಪರೆಗಳು ಇನ್ನೂ ಜಾನಪದೀಯವಾಗಿಯೇ ಉಳಿದಿದ್ದರೆ, ಕರಾವಳಿಯ ಬಯಲಾಟ ಪ್ರಕಾರಗಳು ಕಲೆಯ ಔನ್ನತ್ಯವನ್ನು ಮೆರೆದ ಬಗೆಗೆ ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದರು.
ವಿದ್ವಾಂಸರು ಬಯಲಾಟಗಳನ್ನು ವಿಭಿನ್ನವಾದ ದೃಷ್ಟಿಕೋನ ದಿಂದ ಪರಾಮರ್ಶಿಸಿ ಅವುಗಳ ಹಿಂದುಳಿಯುವಿಕೆಗೆ ಇರುವ ಕಾರಣಗಳನ್ನು ಚರ್ಚಿಸಿದರ‌ು. ಕರಾವಳಿಯ ಕಲಾಪ್ರಕಾರ‌ಗಳ ಬೆಳವಣಿಗೆಗಳಿಗೆ ಕಾರಣಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದರು. ಮೂಲತಃ ಭಕ್ತಿಪಂಥದ ಉತ್ಪನ್ನಗಳಾದ ಬಯಲಾಟ ರಂಗಪ್ರಕಾರಗಳು ಸಮಾಜದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಲಾಕೊಂಡಿಗಳಾಗಿವೆ. ಬಯಲಾಟಗಳನ್ನು ಸರಕಾರಗಳು ಪೋಷಿಸಬೇಕು, ಕಲಾವಿದರಿಗೆ ಅರ್ಥಿಕನೆರವು ನೀಡಬೇಕು ಎಂಬ ಅಭಿಪ್ರಾಯಗಳೂ ಪ್ರಕಟವಾದುವು. ಕಲಾಪ್ರಕಾರಗಳ ಉಳಿವಿಗೆ ಜನರ ಸಹಭಾಗಿತ್ವವೇ ಬಹಳ ಮುಖ್ಯ. ಕರಾವಳಿಯ ಯಕ್ಷಗಾನ ಪರಂಪರೆಗಳನ್ನು ಉಳಿಸಿ ಬೆಳೆಸಿದವರು ಹೃದಯ ಶ್ರೀಮಂತಿಕೆಯುಳ್ಳ ಕಲಾಪೋಷಕರು, ಕಲಾಪ್ರೀತಿಯುಳ್ಳ ಜನರು,ದೇವಾಲಯಗಳು ಎಂಬುದು ಪ್ರತಿಧ್ವನಿಸಿತು.
ಸೋದರಕಲೆಗಳಾದ ಬಯಲಾಟಗಳು ಅಂತರಂಗದಲ್ಲಿ ಒಂದೇ ಸತ್ವವನ್ನು ಉಳ್ಳವುಗಳಾದರೂ ಬಹಿರಂಗದಲ್ಲಿ ವಿಭಿನ್ನವಾಗಿ ಪ್ರಕಟಗೊಳ್ಳುತ್ತಿವೆ. ಅವುಗಳ ಅನನ್ಯತೆಯನ್ನು ಉಳಿಸಿಕೊಂಡಾಗ ತಲೆತಲಾಂತರದಿಂದ ಪ್ರತ್ಯೇಕ ಅಸ್ತಿತ್ವವನ್ನು ಕಾಪಾಡಿದ ಕಲಾವಿದರ ಶ್ರಮ ಸಾರ್ಥಕವಾದೀತು. ರಂಗಕಲೆಗಳಿಗೆ ನಿರಂತರ ಪ್ರದರ್ಶನಾವಕಾಶಗಳು ದೊರೆಯಬೇಕು. ಸಹೃದಯೀ ಪ್ರೇಕ್ಷಕರು ಮಾತ್ರ ಕಲಾಪ್ರಕಾರಗಳನ್ನು ಜೀವಂತವಾಗಿಡಬಲ್ಲರು. ಬಯಲಾಟಗಳನ್ನು ಅಕ್ಷರಸ್ಥರು ಗೌರವದಿಂದ ಕಾಣಬೇಕು. ಅಕ್ಷರಸ್ಥರು ಭಾಗವಹಿಸುವುದರ ಮೂಲಕವೇ ಕಲಾರೂಪಗಳು ಶೈಕ್ಷಣಿಕ ವ್ಯಾಪ್ತಿಯನ್ನು, ಶಿಸ್ತನ್ನು ಅಳವಡಿಸಿಕೊಳ್ಳುತ್ತವೆ.ವಿದ್ಯಾಲಯಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಯ ಭಾಗವಾಗಿ ಆಯಾ ಪ್ರದೇಶಗಳ ಬಯಲಾಟಗಳ ಕಲಿಕೆ ಹಾಗೂ ಪ್ರಯೋಗಗಳಿಗೆ ಅವಕಾಶ ಬೇಕಾಗಿದೆ.
ಸಮ್ಮೇಳನದ ವೇದಿಕೆಯಲ್ಲಿ ಪ್ರದರ್ಶನಗೊಂಡ ಬಯಲಾಟಗಳಲ್ಲಿ ತೀರಾ ಗ್ರಾಮೀಣ ಮಟ್ಟದಲ್ಲಿಯೇ ಉಳಿದ ದೊಡ್ಡಾಟಗಳು ಹಾಗೂ ವ್ಯವಸ್ಥಿತವಾಗಿ ವೃತ್ತಿಪರತೆಯನ್ನು ಮೆರೆದ ಕರಾವಳಿಯ ಬಯಲಾಟಗಳ ನಡುವೆ ಅಜಗಜಾಂತರವಿರುವುದು ಎದ್ದು ಕಾಣುತ್ತಿತ್ತು. ಒಂದು ಪ್ರಕಾರದ ಸಾಧನೆಯ ಉತ್ತುಂಗ ಸ್ಥಿತಿಯನ್ನು ಕಂಡು ಇನ್ನೊಂದು ಹಿಂದುಳಿಯುವುದಕ್ಕೆ ಕಾರಣಗಳನ್ನು ಕಲಾಸಕ್ತರು, ಕಲಾವಿದರು ಮನನ ಮಾಡಿಕೊಂಡರು.
ಉನ್ನತ ಅಧ್ಯಯನ ಮಾಡುವ ಸಂಶೋಧಕರು ಕಲೆ, ಕಲಾವಿದರನ್ನು ಆಕರಗಳಾಗಿ ಬಳಸಿಕೊಂಡು ತಾವು ಪದವಿ, ಪುರಸ್ಕಾರಗಳನ್ನು ಪಡೆದುಕೊಳ್ಳುವಷ್ಟಕ್ಕೆ ಸೀಮಿತರಾಗುತ್ತಿದ್ದಾರೆ. ರಂಗಕಲೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಹೊಣೆಗಾರಿಕೆಯ ಬಗೆಗೂ ಯೋಚಿಸಬೇಕಾಗಿದೆ. ಸ್ಥಳೀಯವಾಗಿ ಹಬ್ಬ ಹರಿದಿನಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಮನೆ ಮನೆಗಳಲ್ಲಿ, ಮದುವೆ ಮುಂಜಿಗಳಲ್ಲಿ, ಗೃಹಪ್ರವೇಶಾದಿ ಸಮಾರಂಭಗಳಲ್ಲಿ ಬಯಲಾಟಗಳು ಪ್ರದರ್ಶನಾವಕಾಶಗಳನ್ನು ಪಡೆಯಬೇಕಾಗಿವೆ. ವೇಷಭೂಷಣ, ಭಾಷೆ, ರಂಗಸಜ್ಜಿಕೆ, ವಿನ್ಯಾಸಗಳ ಮೂಲಕ ಜನಾದರಣೀಯವಾಗುವಂತೆ ಮಾಡಬೇಕಾಗಿದೆ. ಸಮಾಜದ ಎಲ್ಲಾ ವರ್ಗದವರು ಪ್ರೇಕ್ಷಕರಾಗಿಯೂ ಕಲಾವಿದರಾಗಿಯೂ ಪಾಲ್ಗೊಳ್ಳಬೇಕಾಗಿದೆ. ಆಗ ಮಾತ್ರ ಕ್ಷೀಣಿಸುತ್ತಿರುವ ಕಲಾರೂಪಗಳಿಗೆ ಕಾಯಕಲ್ಪವಾಗಬಹುದು.

ಮೋಹನ ಕುಂಟಾರ್‌

ಟಾಪ್ ನ್ಯೂಸ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.