ಕಾಗದದಲ್ಲಿ ಮೂಡಿದವು ಮಾತಾಡುವ ಗೊಂಬೆಗಳು


Team Udayavani, Apr 7, 2017, 3:51 PM IST

007-KALA-6.jpg

ಜಾದೂ ಶಂಕರ್‌ ಅವರ ಮಾತನಾಡುವ ಗೊಂಬೆ ತುಂಬಾ ಪ್ರಸಿದ್ಧ. ಅನೇಕ ಪ್ರದರ್ಶನಗಳನ್ನು ಕಂಡಿದೆ ಅದು. ಆ ಜಾದೂ ವೀಕ್ಷಿಸಿದವರೆಲ್ಲರನ್ನೂ ಮೂಕವಿಸ್ಮಿತರಾನ್ನಾಗಿ ಮಾಡಿದೆ. ಅಂತಹುದೇ ಒಂದು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಉಡುಪಿ ಅಜ್ಜರಕಾಡುವಿನಲ್ಲಿರುವ ಶಿಕ್ಷಣ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ (ಬಿ.ಆರ್‌.ಸಿ.) ಇತ್ತೀಚೆಗೆ ನಡೆಯಿತು. ಆದರೆ ಅದು ಜಾದೂ ಶೋ ಆಗಿರಲಿಲ್ಲ. ಕಲಾವಿದನ ಕೈಗಳಲ್ಲಿ ಮೂಡಿದ ಕೈಚಳಕದ ಅದ್ಭುತ ಕಲಾಕೃತಿಯಾಗಿತ್ತು. ಜಿಲ್ಲೆಯಾದ್ಯಂತದಿಂದ ಆಗಮಿಸಿದ್ದ ಚಿತ್ರಕಲಾ ಶಿಕ್ಷಕರು ಹಾಗೂ ವೃತ್ತಿ ಶಿಕ್ಷಕರು ಜತೆಗೂಡಿ ಪರಸ್ಪರ ಅನುಭವವನ್ನು ಹಂಚಿಕೊಂಡು ಕಾಗದದಿಂದ ಒಂದಷ್ಟು ಮಾತನಾಡುವ ಗೊಂಬೆಗಳನ್ನು ರಚಿಸಿದರು. ಅವುಗಳನ್ನು ಕೈಗೆ ಧರಿಸಿಕೊಂಡು ಬೇರೆ ಬೇರೆ ಸ್ವರಗಳಲ್ಲಿ ಮಾತನಾಡಿ ಇತರರನ್ನು ಸಂತೋಷಗೊಳಿಸಿದರು, ತಾವೂ ಖುಷಿ ಪಟ್ಟರು. ಒಂದು ವಾರ ಕಾಲ ನಡೆದ ಈ ಕರಕುಶಲ ಶಿಬಿರದಲ್ಲಿ ಆಭರಣ ತಯಾರಿ, ಎಂಬ್ರಾಯಡರಿ, ಗ್ಲಾಸ್‌ ಪೈಂಟಿಂಗ್‌ ಇನ್ನಿತರ ಅನೇಕ ಕಲಾಚಟುವಟಿಕೆಗಳು ನಡೆದವು.  

ಜೀವನವೆಂದರೆ ಅನುಭವ ಗಳಿಸುವುದು. ಗಳಿಸಿದ ಅನುಭವವನ್ನು ಸಾಕ್ಷಾತ್ಕರಿಸಿ ನೋಡು ವುದು. ಈ ಅನುಭವ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಒಬ್ಬನಲ್ಲಿ ಇಲ್ಲದ್ದು ಇನ್ನೊಬ್ಬನಲ್ಲಿ ಇರುತ್ತದೆ. ನಮ್ಮಲ್ಲಿ ಇಲ್ಲದ ವಿದ್ಯೆ-ಬುದ್ಧಿ-ಕೌಶಲಗಳನ್ನು ತರಬೇತಿಯ ಮೂಲಕ ಇನ್ನೊಬ್ಬನಿಂದ ಕಲಿತುಕೊಳ್ಳುವುದೇ ಜೀವನ. ಅದಕ್ಕೆ ಕಲಿಯುವ ಮನಸ್ಸು ಬೇಕು. ಕಲಿಸುವ ಸಂಪನ್ಮೂಲ ವ್ಯಕ್ತಿಗಳು ಬೇಕು. ಕಾರ್ಯಕ್ರಮ ಆಯೋಜಿಸುವವರೂ ಬೇಕು. ಇಂತಹ ಸಾಧ್ಯತೆಯನ್ನು ಉಡುಪಿ ಬಿ.ಆರ್‌.ಸಿ. ಸಾಕಾರಗೊಳಿಸಿದೆ. ವೃತ್ತಿ ಶಿಕ್ಷಕರನ್ನು ಇನ್ನಷ್ಟು ಪುನಶ್ಚೇತನಗೊಳಿಸಿದೆ. ಬಿ.ಆರ್‌.ಸಿ.ಯ ನಿರ್ದೇಶಕ ಶಿವರಾಮ ಶೆಟ್ಟಿ ತರಬೇತಿಯ ಸಾರ್ಥಕತೆಗೆ ಕಾರಣಕರ್ತರಾಗಿದ್ದಾರೆ. 

ಕಲಾಶಿಕ್ಷಕರೆಲ್ಲರೂ ಒಂದಲ್ಲ ಒಂದು ರೀತಿಯಿಂದ ಸಂಪನ್ಮೂಲ ವ್ಯಕ್ತಿಗಳೇ ಆಗಿರುತ್ತಾರೆ. ಆದರೂ ಈ ಶಿಬಿರದ ಪ್ರಧಾನ ಭೂಮಿಕೆಯಲ್ಲಿ ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಿತೇಶ್‌ ಭಂಡಾರಿ ಮತ್ತು ಕಾರ್ಯದರ್ಶಿ ರಮೇಶ್‌ ಬಂಟಕಲ್‌ ಇದ್ದು ಶಿಕ್ಷಕರನ್ನು ಹುರಿದುಂಬಿಸಿದರು.  ರಮೇಶ್‌ ಬಂಟಕಲ್‌ ಬಣ್ಣಕಾಗದದಿಂದ ಮಾತನಾಡುವ ಗೊಂಬೆ, ಆನೆ, ಇಲಿ, ಕುದುರೆ, ಹಕ್ಕಿ ಮುಂತಾದುವುಗಳ ಮುಖವಾಡ ರಚಿಸುವ ವಿಧಾನ ಹಾಗೂ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಹಿತೇಶ್‌ ಭಂಡಾರಿಯವರು ಮುದ್ರಣ ಕಲೆ, ಬಾಂದನಿ ಕಲೆ, ಗ್ಲಾಸ್‌ ಪೈಂಟಿಂಗ್‌ ರಚನೆಯನ್ನು ತಿಳಿಕೊಟ್ಟರು. ಜತೆಗೆ ನಿತ್ಯೋಪಯೋಗಕ್ಕೆ ಬೇಕಾದ ಸಾಬೂನು, ಫಿನಾಯಿಲ್‌ ತಯಾರಿಯನ್ನೂ ಕಲಿಸಿ ಕೊಟ್ಟರು. ನೆರೆದಿದ್ದ ಕಲಾವಿದರಲ್ಲಿ ಅನೇಕರು ತಮಗೆ ತಿಳಿದಿರುವ ಕಲಾಕೌಶಲಗಳನ್ನು ಇತರರಿಗೆ ಕಲಿಸಿ ಕೊಟ್ಟರು. ಶಿಬಿರ ಕಲಾತ್ಮಕತೆಯೊಂದಿಗೆ ಸಾಗಿ ಸಾಕಷ್ಟು ಕಲಾವಸ್ತುಗಳು ಸಿದ್ಧಗೊಂಡವು. ಬಿ.ಆರ್‌.ಸಿ. ಕಟ್ಟಡದ ಭಿತ್ತಿಯೆಲ್ಲೆಡೆ ರಾರಾಜಿಸಿದವು. 

ಉಪಾಧ್ಯಾಯ ಮೂಡುಬೆಳ್ಳೆ

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.