ಮರಾಠಿ ನಾಡಿನಲ್ಲಿ ಶ್ರೀನಿವಾಸ ಕಲ್ಯಾಣ
Team Udayavani, Aug 3, 2018, 6:00 AM IST
ಪುಣೆ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ಆಯೋಜನೆಯಲ್ಲಿ ಜುಲೈ 14 ರಂದು ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪುಣೆ ವತಿಯಿಂದ ಸ್ಥಳೀಯ ಕಲಾವಿದರು ಹಾಗೂ ಕರಾವಳಿಯ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು. ಸುಮಾರು ನಾಲ್ಕು ಗಂಟೆಗಳ ಕಾಲ ಪ್ರೇಕ್ಷಕರನ್ನು ತನ್ಮಯಗೊಳಿಸುವಲ್ಲಿ ಈ ಪ್ರದರ್ಶನ ಸಫಲವಾಗಿದೆ. ಹಿಮ್ಮೇಳ ,ಮುಮ್ಮೇಳಗಳ ಪರಿಪೂರ್ಣತೆಯೊಂದಿಗೆ ನಡೆದ ಪ್ರದರ್ಶನ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಸಮತೋಲನದ ಹಿಮ್ಮೇಳ , ಸುಶ್ರಾವ್ಯವಾದ ಭಾಗವತಿಕೆ, ಸಾಹಿತ್ಯಭರಿತ ಅರ್ಥಗಾರಿಕೆ ,ಅಭಿನಯ ,ನವರಸಗಳ ಸಮ್ಮಿಳಿತದಿಂದ ಸಮದೂಗಿಸಿಕೊಂಡ ಈ ಪ್ರದರ್ಶನಕ್ಕೆ ಮಾರುಹೋದ ಪ್ರೇಕ್ಷಕ ವರ್ಗದಿಂದ ಸತತವಾದ ಚಪ್ಪಾಳೆ ,ಪ್ರಶಂಸೆಯ ನುಡಿಗಳು ಕೇಳಿ ಬಂದವು.
ಗಾನಕೊಗಿಲೆಯೆಂದೇ ಪ್ರಖ್ಯಾತಿ ಪಡೆದ ಗಿರೀಶ್ ರೈ ಕಕ್ಕೆಪದವು ಇವರ ಸ್ವರ ಮಾಧುರ್ಯ ಕಲಾರಸಿಕರಿಗೆ ಹೊಸ ಅನುಭವ ನೀಡಿತು . ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಕೈಚಳಕ ,ಮದ್ದಳೆಯಲ್ಲಿ ಶ್ರೀಧರ ಯೆಡಮಲೆ,ಚಕ್ರತಾಳದಲ್ಲಿ ನಿಶಿತ್ ಮುಂಬಯಿ ಸಹಕರಿಸಿದರು . ದೇವೇಂದ್ರನಾಗಿ ಪುಣೆಯ ನಾಟ್ಯಗುರು ಮಂಡಳಿಯ ಹಿರಿಯ ಕಲಾವಿದ ಮದಂಗಲ್ಲು ಆನಂದ ಭಟ್ ರವರ ಪರಿಪಕ್ವ ಅಭಿನಯ ,ಅಗ್ನಿಯಾಗಿ ಉತ್ಸಾಹಿ ಕಲಾವಿದ ಸುಖೇಶ್ ಶೆಟ್ಟಿ ಎಣ್ಣೆಹೊಳೆ ,ವೃಷಭಾಸುರನಾಗಿ ಮಂಡಳಿಯ ಹಿರಿಯ ಕಲಾವಿದ ವಾಸು ಕುಲಾಲ್ ವಿಟ್ಲ ,ವರಾಹ ಹಾಗೂ ಬಕುಳೆಯಾಗಿ ಮಂಡಳಿಯ ಪ್ರಬುದ್ಧ ಅನುಭವಿ ಕಲಾವಿದ ವಿಕೇಶ್ ರೈ ಶೇಣಿ ,ಶಂಖಾಸುರನಾಗಿ ಜಗದೀಪ್ ಶೆಟ್ಟಿ ,ದುರ್ಗಾಸುರನಾಗಿ ಸುದರ್ಶನ ಪೂಜಾರಿ ,ವರುಣನಾಗಿ ಗೋವಿಂದ ಸಫಲಿಗ ಮುಂಬಯಿ ಉತ್ತಮ ಪ್ರದರ್ಶನ ನೀಡಿದರು.
ಅತಿಥಿ ಕಲಾವಿದರಾಗಿ ಕರಾವಳಿಯ ಪ್ರವೀಣ ಜಯಾನಂದ ಗೌಡ ಸಂಪಾಜೆಯವರ ಸತ್ವಭರಿತ ಮಾತಿನ ವೈಖರಿ ,ಅಭಿನಯ ವಿಶೇಷವಾಗಿತ್ತು . ,ಕಿರಾತ ಶ್ರೀನಿವಾಸನಾಗಿ ಹೆಸರಾಂತ ಕಲಾವಿದ ದಿವಾಕರ ರೈ ಸಂಪಾಜೆಯವರ ಅದ್ಭುತ ಅಭಿನಯ ಹಾಗೂ ಯಕ್ಷಗಾನದ ಚಾರ್ಲಿ ಚಾಪ್ಲಿನ್ ಖ್ಯಾತಿಯ ಸೀತಾರಾಮ ಕುಮಾರ್ ಕಟೀಲ್‌ರವರ ಪಾದರಸದ ಹಾಸ್ಯಾಭಿನಯದ ಜುಗಲ್ಬಂದಿ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಯಿತು. ಪದ್ಮಾವತಿಯ ಪಾತ್ರದಲ್ಲಿ ಸಂತೋಷಕುಮಾರ್ ಹಿಲಿಯಾಣ ಹಾಗೂ ಸಖೀಯಾಗಿ ಶರತ್ ಶೆಟ್ಟಿ ತೀರ್ಥಹಳ್ಳಿ ಇವರ ಜೋಡಿ ವೇದಿಕೆಯಲ್ಲಿ ಮಾಯಾಲೋಕವನ್ನೇ ಸೃಷ್ಟಿಸಿತು .
ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.