ಸುದಾಸ್ ಕಾವೂರ್ ಯಕ್ಷಯಾನದ ರಜತ ಸಂಭ್ರಮ
Team Udayavani, Mar 8, 2019, 12:30 AM IST
ಕಟೀಲು ಮೇಳದ ಹಿಮ್ಮೇಳ ಕಲಾವಿದರಾದ ಸುದಾಸ್ ಕಾವೂರು ಕಲಾ ಬದುಕಿನ 25ನೇ ವರ್ಷದ ಸವಿ ನೆನಪಿಗಾಗಿ ಮಾ. 9 ರಂದು ಸ್ತ್ರೀ ಪಾತ್ರಧಾರಿ ಮತ್ತು ಗುರುವಾಗಿ ಉತ್ತಮ ಕಲಾವಿದರನ್ನು ರಂಗಕ್ಕೆ ನೀಡಿರುವ ದಿ.ಕಾವೂರು ಕೇಶವ ಅವರ ಸಂಸ್ಮರಣೆ, ಇತ್ತೀಚೆಗೆ ಕೀರ್ತಿಶೇಷರಾದ ಧರ್ಮಸ್ಥಳ ಮೇಳದ ಮದ್ದಳೆಗಾರ ಅಡೂರು ಗಣೇಶ್‌ರಾವ್ ಅವರಿಗೆ ಮರಣೋತ್ತರ ಪ್ರಶಸ್ತಿ, ಹಿಮ್ಮೇಳ ಕಲಾವಿದ ದಯಾನಂದ್ ಕೋಡಿಕಲ್ ಅವರಿಗೆ ಸಮ್ಮಾನ ಹಾಗೂ ಬಯಲಾಟ ಕಾರ್ಯಕ್ರಮ ಆಯೋಜಿಸಿದ್ದಾರೆ.
ಸುದಾಸ್ ಕಾವೂರು ಎಳವೆಯಿಂದಲೇ ಕಲಾ ಸಾರವನ್ನುಂಡು ಬೆಳೆದವರು. ಪೌರಾಣಿಕ ಯಕ್ಷಗಾನದ ವರ್ತುಲದಲ್ಲಿ ಲಘುವಾಗದೆ ಬಿಗುವಾಗಿ ನಲಿದವರು, ಚೆಂಡೆ ಹೊಡೆದವರು, ಕಾವೂರು ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಹವ್ಯಾಸಿ ಕಲಾವಿದ ದಿ.ವೆಂಕ ಶೆಟ್ಟಿಗಾರ್ ಇವರಿಗೆ ನಾಟ್ಯ ಕಲಿಸಿ ರಂಗ ಪ್ರವೇಶ ಮಾಡಿಸಿದರು. ನಿರ್ವಹಿಸಿದ ಮುಖ್ಯ ಪಾತ್ರಗಳು ದಾಕ್ಷಾಯಿಣಿ, ರೇಣುಕೆ ಮುಂತಾದುವುಗಳು, ಆಮೇಲೆ ಮುಮ್ಮೇಳದಿಂದ ಹಿಮ್ಮೇಳದತ್ತ ಆಕರ್ಷಿತರಾಗಿ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಲ್ಲಿ ಮದ್ದಳೆ ಹಾಗೂ ಚೆಂಡೆಯ ನುಡಿತ-ಬಡಿತಗಳನ್ನು ಅರಿತು ನುರಿತವರಾದರು. ಅಂದಿನಿಂದ ವೃತ್ತಿ-ಪ್ರವೃತ್ತಿ ಕಲಾವಿದರಾಗಿ ಬೆಳೆಯತ್ತಾ ಮೇಲ್ಮೆ ಸಾಧಿಸಿದರು. 25 ವರ್ಷಗಳ ಸುದೀರ್ಘ ಪಯಣವಾಯಿತು.
ಮಂಗಳೂರಿನ ಕೆಪಿಟಿಯಲ್ಲಿ ಎಂ.ಆರ್.ಎ.ಸಿ ಇಂಜಿನಿಯರಿಂಗ್ ಪದವೀಧರನಾಗಿ ಕಂಪನಿ ಉದ್ಯೋಗಕ್ಕೆ ಸೇರಿದರು. ಆದರೆ ಕಲಾಪ್ರವೃತ್ತಿ ಉದ್ಯೋಗ ನಿವೃತ್ತಿಗೆ ನಾಂದಿ ಹಾಡಿತು. ಮೊದಮೊದಲು ಚಾಲಕವೃತ್ತಿ-ಕಲಾಪ್ರವೃತ್ತಿ ಇವರದ್ದಾಗಿದ್ದರೆ, ಪ್ರಸ್ತುತ ಪೂರ್ಣಕಾಲಿಕ ವೃತ್ತಿಪರರಾಗಿ ಕಲಾ ಸೇವೆ ಮಾಡುತ್ತಿದ್ದಾರೆ. ತಲಕಳ, ಸುರತ್ಕಲ್, ಸಸಿಹಿತ್ಲು, ಕಾಟಿಪಳ್ಳ, ಪುತ್ತೂರು, ಮಂಗಳಾದೇವಿ, ಹೊಸನಗರ, ಧರ್ಮಸ್ಥಳ, ಸುಂಕದಕಟ್ಟೆ, ಮೇಳಗಳಲ್ಲಿ ತಿರುಗಾಟ ಮಾಡಿ ನಾಲ್ಕು ವರ್ಷಗಳಿಂದ ಕಟೀಲು ಮೇಳದಲ್ಲಿ ಕೈಚಳಕ ಮೆರೆಸುತ್ತಿದ್ದಾರೆ.
ಡಾ| ದಿನಕರ ಎಸ್. ಪಚ್ಚನಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.