ವೈವಿಧ್ಯದಿಂದ ರಂಜಿಸಿದ ಸುಗ್ಗಿ ಸಂಭ್ರಮ
Team Udayavani, Apr 12, 2019, 6:00 AM IST
ಸಮೂಹ ಉಡುಪಿ ಸಾಂಸ್ಕೃತಿಕ ಸುಗ್ಗಿ ಸಂಭ್ರಮವನ್ನು ಹಿರಿಯ ಸಾಹಿತಿ ಮತ್ತು ರಂಗನಿರ್ದೇಶಕ ಪೊ›| ಉದ್ಯಾವರ ಮಾಧವ ಆಚಾರ್ಯರ ನಿರ್ದೇಶನದಲ್ಲಿ ಇತ್ತೀಚೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಆಚರಿಸಿತು. ಕಾರ್ಯಕ್ರಮವು ಕುಮಾರಿ ಸಮಾಶ್ರೀತಾರ ಶುಭಗೀತೆಗಳೊಂದಿಗೆ ಆರಂಭಗೊಂಡಿತು. ಕು| ಶುಕೀ ರಾವ್ ಬಾಲ ಗೋಪಾಲ ಕಿರುನರ್ತನವನ್ನು ಪ್ರದರ್ಶಿಸಿದರು.
ಅನಂತರ ಪ್ರದರ್ಶನಗೊಂಡದ್ದು ಮಾಧವ ಆಚಾರ್ಯರ ರಚನೆ ಮತ್ತು ನಿರ್ದೇಶನದಲ್ಲಿ ವಿ| ಭ್ರಮರಿ ಶಿವಪ್ರಕಾಶ್ ಪ್ರಸ್ತುತಪಡಿಸಿದ ಏಕವ್ಯಕ್ತಿ ನೃತ್ಯರೂಪಕ “ಕೋದಂಡದ ಕೊನೆ’. ರಾಮಾವತಾರದ ಮಂಗಲ ಮುಕ್ತಾಯದ ವಸ್ತುವನ್ನೊಳಗೊಂಡ ಈ ಪ್ರಸ್ತುತಿಯಲ್ಲಿ ಕೋದಂಡವು ಶ್ರೀರಾಮನ ಕಥೆಯ ಹೊಸ ಹೊಸ ಆಯಾಮಗಳನ್ನು ದಕ್ಕಿಸಿಕೊಳ್ಳುತ್ತಾ ದ್ವಾಪರದಲ್ಲಿ ಕೃಷ್ಣನ ಕೈಗೆ ಕೊಳಲಾಗಿ ಹಸ್ತಾಂತರಗೊಳ್ಳುವ ಪರಿಕಲ್ಪನೆ, ಪರಿವರ್ತನೆ, ದೃಷ್ಟಿಕೋನ ಅನನ್ಯವಾಗಿ ರೂಪುಗೊಂಡಿತು. ಅಯೋಧ್ಯೆಯಲ್ಲಿ ಜನಿಸಿದ ಶ್ರೀರಾಮ ಕೋದಂಡರಾಮನಾಗಿ ಪಡೆದುದೇನು ಕಳೆದುಕೊಂಡದ್ದೇನನ್ನು ಎಂಬುದರ ರಂಗಸ್ಪರ್ಶವೆ ಈ ಪ್ರಯತ್ನ. ಶ್ರೀರಾಮನ ದೈವತ್ವ ಮಾನವೀಯತೆ ಕೋದಂಡದ ಸ್ಪಂದನಗಳ ಕತೆಯನ್ನು ಭ್ರಮರಿಯವರು ಮನ ಕಲುಕುವಂತೆ ಅಭಿನಯಿಸಿ¨ªಾರೆ. ಅನಂತರ ಸನ್ನಿಧಿಯವರು “ಸೀಳುಬಿದಿರಿನ ಸಿಳ್ಳು’ ಎನ್ನುವ ಶ್ರೀಕೃಷ್ಣನ ಅವತಾರ ಸಮಾಪ್ತಿಯ ಸ್ವಗತದ ಸಣ್ಣಕಥೆಯೊಂದನ್ನು ಚುರುಕಾದ ನೃತ್ಯವಿಸ್ತಾರವಾಗಿ ಭಾವಪೂರ್ಣವಾಗಿ ಅಭಿನಯಿಸಿದರು. ಇದಕ್ಕೆ ಪೂರಕವಾಗಿ ಮಾಧವ ಆಚಾರ್ಯರ ಸು#ಟವಾದ ವಾಚಿಕವಿತ್ತು.
ಪ್ರಧಾನ ಕಾರ್ಯಕ್ರಮವನ್ನು ನೀಡಿದವರು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆ ಡಾ| ವಸುಂಧರಾ ದೊರೆಸ್ವಾಮಿ. ಕುಮಾರವ್ಯಾಸ ಭಾರತ ಆಧರಿಸಿದ “ಕ್ಷಾತ್ರ ದ್ರೌಪದಿ’ ಎಂಬ ಕಥಾಸರಣಿಯನ್ನು ಉತ್ಕೃಷ್ಟವಾಗಿ ನಿರೂಪಿಸಿದರು. ಶಕ್ತಿಶಾಲಿಯಾದ ನೃತ್ಯಪ್ರೌಢಿಮೆ, ಶೈಲಿ ಮತ್ತು ರಂಗಕುಶಲತೆಯಿಂದ ಮೇರು ಪ್ರದರ್ಶನವಿತ್ತದ್ದು ಪ್ರೇಕ್ಷಕನಿಗೆ ಅವಿಸ್ಮರಣೀಯ. ಅತ್ಯುತ್ತಮ ಸಂಗೀತದ ಹಿನ್ನೆಲೆಯು ಈ ರೂಪಕಗಳ ಸೊಗಸನ್ನು ಇಮ್ಮಡಿಗೊಳಿಸಿತ್ತು.
ಡಾ| ಅನ್ನಪೂರ್ಣ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.