ಭಾಗವತ ರತ್ನ ಉಪ್ಪೂರರ ಜನ್ಮ ಶತಮಾನೋತ್ಸವ


Team Udayavani, Mar 9, 2018, 8:15 AM IST

s-20.jpg

ಬದುಕಿನ ಬಹುಭಾಗವನ್ನು ಯಕ್ಷರಂಗದ ಮೇಲೆ ಕಳೆದ ಭಾಗವತ ಶ್ರೇಷ್ಠರಾದ ದಿ| ಮಾರ್ವಿ ನಾರ್ಣಪ್ಪ ಉಪ್ಪೂರರು ಯಕ್ಷ ಲೋಕದ ಅನರ್ಘ್ಯ ರತ್ನ. ಪ್ರತಿಭೆ, ಗಾಂಭೀರ್ಯ, ಶಿಸ್ತಿಗೆ ಇನ್ನೊಂದು ಹೆಸರೇ ಉಪ್ಪೂರರು. ರಂಗಸ್ಥಳದ ಸಾಂಪ್ರದಾಯಿಕ ರೀತಿನೀತಿಗಳ ತಲಸ್ಪರ್ಷಿ ಅಧ್ಯಯನ ಮಡುತ್ತಾ, ಶಿಷ್ಯವೃಂದಕ್ಕೆ ಶಿಸ್ತು ಬದ್ಧವಾಗಿ ಕಲಿಸುವುದರೊಂದಿಗೆ ಮೂಲ ಸಂಪ್ರದಾಯ ಮರೆಯಾಗದಂತೆ ನೋಡಿಕೊಂಡವರು. ಅವರ ಅದೆಷ್ಟೋ ಅವಿಷ್ಕಾರಗಳು (ಮಾರ್ವಿಶೈಲಿ) ಇಂದಿಗೂ ಯಕ್ಷರಂಗವನ್ನು ಮುನ್ನಡೆಸುತ್ತಿದೆ. ಐರೋಡಿ ಸದಾನಂದ ಹೆಬ್ಟಾರ್‌, ತಿಮ್ಮಪ್ಪ ನಾಯ್ಕ ಮತ್ತು ಉಪ್ಪೂರರು ಸೇರಿ ಹಿಮ್ಮೇಳದಲ್ಲಿ ಪವಾಡವನ್ನೇ ಮಾಡಿದವರು. ಇವರ ಜನ್ಮ ಶತಮಾನೋತ್ಸವ ಸಮಾರಂಭ ಗುಂಡ್ಮಿಯಲ್ಲಿರುವ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಜರುಗಿತು. ಈ ಕೇಂದ್ರದ ಸ್ಥಾಪಕ ಪ್ರಾಚಾರ್ಯರಾಗಿದ್ದ ಉಪ್ಪೂರರು ರಚಿಸಿದ “ಯಕ್ಷಗಾನ ಅಧ್ಯಯನ’ ಗ್ರಂಥದ ಆಯ್ದ ಭಾಗಗಳ ಹಾಡುಗಾರಿಕೆಯನ್ನು ಅವರ ಶಿಷ್ಯರಾಗಿದ್ದ ಹಾಗೂ ಪ್ರಸ್ತುತ ಕೇಂದ್ರದ ಪ್ರಾಚಾರ್ಯರಾದ ವಿದ್ವಾಂಸ ಮತ್ತು ವಾಗ್ಮಿ ಗುಂಡ್ಮಿ ಸದಾನಂದ ಐತಾಳ್‌ ಮತ್ತು ಇನ್ನೋರ್ವ ಶಿಷ್ಯ ಗಾನ ಗಂಧರ್ವ ಸುಬ್ರಹ್ಮಣ್ಯ ಧಾರೇಶ್ವರರು ನಡೆಸಿಕೊಟ್ಟರು. ವಿವಿಧ ಆಧ್ಯಾಯಗಳನ್ನು ಪರಿಚಯಿಸುತ್ತಾ, ಸಭಾಲಕ್ಷಣದ ಉದ್ದೇಶ, ಔಚಿತ್ಯ ಮತ್ತು ಅಗತ್ಯಗಳನ್ನು ಐತಾಳರು ಸೋದಾಹರಣವಾಗಿ ವಿವರಿಸಿದರು. ಆರಂಭದ “ಮುದದಿಂದ ನಿನ್ನ ಕೊಂಡಾಡುವೆನು…’ (ನಾಟಿರಾಗ-ಝಂಪೆ ತಾಳ) ಇದನ್ನು ಧಾರೇಶ್ವರರು ಸೊಗಸಾಗಿ ಹಾಡಿ ತೋರಿಸಿದರು. ಮುಂದಿನ ಮೂಕಾಂಬಿಕಾ ಸ್ತುತಿ “ನಂಬಿದೆ ನಿನ್ನ ಪಾದಾಂಬುಜಯುಗಳವ…’ ಹಾಡನ್ನು ಐತಾಳರು ಕುಂಭ ಕಾಂಭೋಜಿ ರಾಗ ಮಟ್ಟಿನಲ್ಲಿ ಹಾಡಿ ಮನಕ್ಕೆ ಮುದ ನೀಡಿದರೆ, ಮುಂದೆ ವಿಷ್ಣುಸ್ತುತಿ “ನಿಗಮ ಗೋಚರ…’ ದ ಬಳಿಕ ಸಭಾಲಕ್ಷಣದ ಕೆಲವು ಶ್ಲೋಕಗಳನ್ನು ಭೈರವಿ, ಕೇದಾರಗೌಳ, ಆರಭಿ, ತೋಡಿ, ಪೂರ್ವಿಕಲ್ಯಾಣಿ ರಾಗಗಳಲ್ಲಿ ಹಾಡಿ ಈರ್ವರೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಹಾಗೆಯೇ ಇದೀಗ ರಂಗದಿಂದ ಮರೆಯಾಗಿರುವ ಈ ಭಾಗದ ಉಪಯುಕ್ತತೆಯ ಬಗ್ಗೆ ತಿಳಿಸಿದರು. ನಂತರ ಬಾಲಗೋಪಾಲ ವೇಷಗಳ ಪ್ರವೇಶ, ಕುಣಿತದ ಭಾಗಗಳನ್ನು ಧಾರೇಶ್ವರರು ರಂಜನೀಯವಾಗಿ ಹಾಡಿದರು. ಇಲ್ಲಿ ಬಾಲಗೋಪಾಲರ ವೇಷವು ಕಟ್ಟುವೇಷ ಅಥವಾ ನಿತ್ಯವೇಷವೆಂದು ಕರೆಯುವುದರ ಬಗ್ಗೆ ಐತಾಳರು ವಿವರಣೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಅಪರೂಪವಾದ ಗಣಪತಿ ಕೌತುಕವನ್ನು ಉಪ್ಪೂರರ ಗ್ರಂಥದಿಂದ ಧಾರೇಶ್ವರರು ಬಾಯಿ ತಾಳದ ಮೂಲಕ ತೋರಿಸಿಕೊಟ್ಟರು. ಕೌತುಕದ ನಾಮಾಧಿದೇವತೆಗಳು ಮತ್ತು ಅದರ ಲಕ್ಷಣಗಳನ್ನು ಭರತಾರ್ಣವದ ಶ್ಲೋಕಗಳನ್ನು ಉದ್ಧರಿಸುವುದರ ಮೂಲಕ ಐತಾಳರು ಹೆಚ್ಚಿನ ಮಾಹಿತಿಯನ್ನು ಒದಗಿಸಿದರು. ಇಂದು ರಂಗದಿಂದ ಕಣ್ಮರೆಯಾಗಿರುವ ಸುಬ್ರಹ್ಮಣ್ಯನ ಪ್ರವೇಶ (ಹರಿಕಾಂಬೋಜಿ ಮಟ್ಟು-ಏಕ-ಕೋರೆತಾಳ) , ಸತ್ಯಭಾಮ-ಮಿತ್ರವಿಂದೆಯರ ವಿರಹ ಗೀತೆಯಾದ ಚಂದಬಾಮ, ಓ ಚಂದಭಾಮವನ್ನು (ರಾಗ-ಮಧ್ಯಮಾವತಿ-ಏಕ-ಕೋರೆತಾಳ)ಸಾಂಪ್ರದಾಯಿಕವಾಗಿ ಐತಾಳರು ಹಾಡಿ ಯಕ್ಷಪ್ರೇಮಿಗಳಿಗೆ ಖುಷಿ ನೀಡಿದರು. “ಗಂಗಾ ತರಂಗ ಕಮನೀಯ ಜಟಾ ಕಲಾಪಂ…’ ಮತ್ತು “ನಮ:ಶಿವಾಯ’… ಹಾಡನ್ನು ಆರಭಿ ರಾಗದಲ್ಲಿ ಧಾರೇಶ್ವರರು ಹಾಡಿ ವೇದಿಕೆಯಲ್ಲಿ ಉಪ್ಪೂರರನ್ನೇ ಸಾûಾತ್ಕರಿಸಿದರು. ಕೊನೆಯಲ್ಲಿ ಈಗಿನ ತಲೆಮಾರಿಗೆ ಪರಿಚಯವಿಲ್ಲದ ಸುಧೀರ್ಘ‌ವಾದ ಪ್ರಸಂಗ ಪೀಠಿಕೆಯನ್ನು ಐತಾಳರು ಹಾಡು ಮತ್ತು ವಿವರವಾದ ಬಾಯಿ ತಾಳಗಳ ಮೂಲಕ ಸಾದರಪಡಿಸಿದರು. ಇವರಿಗೆ ಮದ್ದಲೆಯಲ್ಲಿ ಸಾಥ್‌ ನೀಡಿದ ಕೇಂದ್ರದ ಹಳೇ ವಿದ್ಯಾರ್ಥಿ ಹಾಗೂ ದಿ| ಬೇಳಿಂಜೆ ತಿಮ್ಮಪ್ಪ ನಾಯ್ಕರ ಶಿಷ್ಯ ಶಂಕರ ಭಾಗವತರ ಶ್ರಮವೂ ಉಲ್ಲೇಖಾರ್ಹ. ಅವಜ್ಞೆಗೊಳಗಾದ ಪೂರ್ವರಂಗ ವಿಧಿಯ ಸೊಗಸನ್ನು ಈ ಇಬ್ಬರು ಭಾಗವತರು ಸೇರಿ ಯಕ್ಷಾಭಿಮಾನಿಗಳಿಗೆ ನೆನಪಿಸಿ ಕೊಡುವುದರೊಂದಿಗೆ, ರಂಜನೆಯ ಜತೆಗೆ ಚಿಂತನೆಗೂ ಹಚ್ಚಿದರು. ಯಕ್ಷಗಾನವು ತನ್ನ ಗತ ವೈಭವವನ್ನು ಕಳೆದುಕೊಳ್ಳುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವ ಈ ದಿನಗಳಲ್ಲಿ, ಕಲಾ ಕೇಂದ್ರದ ರೂವಾರಿ ರಾಜಶೇಖರ ಹೆಬ್ಟಾರ್‌ ಮತ್ತು ಬಳಗ ಹಾಗೂ ಉಪ್ಪೂರರ ಕುಟುಂಬ ವರ್ಗ ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮ ಔಚಿತ್ಯಪೂರ್ಣವೆನಿಸಿತು. 

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.