ಪಾತ್ರದ ಅಂತರಂಗ ತೆರೆದಿಟ್ಟ ಅರ್ಥಾಂತರಂಗ 


Team Udayavani, Aug 17, 2018, 6:00 AM IST

c-12.jpg

ಯಕ್ಷಗಾನ ಗಾಯನ ವಾದನ ನರ್ತನಗಳುಳ್ಳ ತೌರ್ಯತ್ರಿಕ ಮಾಧ್ಯಮದ ಒಂದು ಕಲಾಪ್ರಕಾರವಾದರೂ ಅರ್ಥವಿನ್ಯಾಸ ಇಲ್ಲಿನ ವಿಶೇಷತೆ. ವೇಷಭೂಷಣ ನೃತ್ಯಾದಿಗಳಿಲ್ಲದೇ ಮಾತಿನಿಂದಲೇ ಪಾತ್ರವನ್ನು ಅನಾವರಣಗೊಳಿಸುವ ತಾಳಮದ್ದಲೆ ಯಕ್ಷಗಾನದ ಮತ್ತೂಂದು ಮುಖ.ಕಲೆಯ ಯಾವುದೇ ಪ್ರಕಾರವಾದರೂ ಪಾತ್ರ ಪೋಷಣೆಯೇ ಪಾತ್ರಧಾರಿಯ ಪ್ರಧಾನ ಲಕ್ಷ್ಯವಾಗಿದ್ದರೆ ಚೆನ್ನ. ಕೆಲವೊಮ್ಮೆ ಪಾತ್ರಧಾರಿಯ ಪ್ರಭುತ್ವಕ್ಕನುಗುಣವಾಗಿ ಕೆಲ ಬದಲಾವಣೆ ಆಗುತ್ತವೆ.ಉದಾಹರಣೆಗೆ ಕೆಲ ಪಾತ್ರಗಳಿಗೆ ಪೀಠಿಕೆಯ ಅಗತ್ಯವಿಲ್ಲ. ಕೆಲ ಪಾತ್ರಗಳಿಗೆ ಸ್ವಗತವಿಲ್ಲ. ಸಂಸ್ಕೃತ ಸಾಹಿತ್ಯದ ಅಗತ್ಯವಿಲ್ಲ. ಆದರೂ ಇದೆಲ್ಲ ನಡೆಯುತ್ತಲೇ ಇದ್ದರೆ? ಬಹುಮುಖ್ಯವಾದ ಇನ್ನೊಂದು ಅಂಶ ಎಂದರೆ ಕಾಲ. ಪಾತ್ರದ ಕಾಲ, ಆಗಿನ ಸಂಸ್ಕೃತಿ ಸಂಸ್ಕಾರಗಳನ್ನು ತೋರಿಸದೆ ಈ ಕಾಲದ ನೀತಿ ನಿಯಮಗಳನ್ನು ಆ ಪಾತ್ರಕ್ಕೆ ಹೇರುವುದು ಅಸಮಂಜಸ ಎನಿಸುತ್ತದೆ. ಕಥಾನಕದಲ್ಲಿ ಅತ್ಯಂತಿಕವಾಗಿ ಗೆಲ್ಲಬೇಕಾದ ವಿಷಯಕ್ಕೆ ಸೋಲಾದರೆ ತತ್ವ ಚಿಂತನೆ ಹೇಗಾಗಬೇಕು?

ಈ ಎಲ್ಲ ಅರ್ಥಗಾರಿಕೆಯ ತೊಡಕುಗಳನ್ನು ಪರಿಹರಿಸುವಲ್ಲಿ ಅರ್ಥಾಂತರಂಗ ಶ್ಲಾಘ ಪ್ರಯತ್ನ. ಇದು ಸಂಪೂರ್ಣ ಯಶಸ್ವಿಯಾಗ ಬೇಕಾದರೆ, ಕಲಾವಿದರು ಸಹೃದಯರೂ, ಸಮಾನ ಮನಸ್ಕರೂ ಆಗಿರಬೇಕು. ಪಾತ್ರದ ಸಂಸ್ಕಾರಕ್ಕೊಪ್ಪುವ ಭಾಷಿಕ, ಆಂಗಿಕ ಅಭಿನಯಗಳಿಂದ ಪಾತ್ರವನ್ನು ಗೆಲ್ಲಿಸಬೇಕೇ ಹೊರತು ತನ್ನ ಪಾಂಡಿತ್ಯದ ಪಾರಮ್ಯಕ್ಕೆ ಪಾತ್ರವನ್ನು ಬಲಿಕೊಡಬಾರದು. ಪ್ರೇಕ್ಷಕನೂ ಪ್ರಜ್ಞಾವಂತಿಕೆಯಿಂದ ಕಂಡು ಪಾತ್ರದ ಸೋಲು ಗೆಲುವನ್ನು ಬಹಿರಂಗದಲ್ಲಿಯೇ ಹೇಳಿದಾಗ ಒಂದಷ್ಟು ಶುದ್ಧೀಕರಣವಾದೀತು. ಭಕ್ತ ಸುಧನ್ವದಲ್ಲಿ ಕೃಷ್ಣನನ್ನು ಹಾಸ್ಯ ಮಾಡುವ ಸುಧನ್ವ , ಶಾಸ್ತ್ರವಾಕ್ಯಗಳನ್ನು ಪುಂಖಾನುಪುಂಖವಾಗಿ ಬಿತ್ತರಿಸುವ ಶೂರ್ಪನಖಾ, ರಾಜರ್ಷಿ ಜನಕನಿಗೆ ಉಪದೇಶ ಮಾಡುವ ಶ್ರೀರಾಮ, ಭೀಷ್ಮನಲ್ಲಿ ಧರ್ಮ ಜಿಜ್ಞಾಸೆ ಮಾಡುವ, ಕೊನೆಯಲ್ಲಿ ಸಂಪೂರ್ಣ ಕುರುವಂಶವನ್ನೇ ಶಪಿಸುವ ಅಂಬೆ ಹೀಗೆ ಅನೇಕಾನೇಕ ಸಂಗತಿಗಳು ಪರಾಮರ್ಶಿಸಲ್ಪಡಬೇಕು. ಹಿಮ್ಮೇಳನದಲ್ಲಿಯೂ ಅರ್ಥಸಿದ್ಧಿ (ಶುದ್ಧಿ)ಯುಳ್ಳ ಭಾಗವತರು ಹೆಚ್ಚಾಗಬೇಕಿದೆ. ಇಂತಹ ವಿಚಾರಗಳನ್ನೂ ಪಾತ್ರದ ಸೂಕ್ಷ್ಮವನ್ನೂ ಎಲ್ಲ ಕಲಾವಿದರೂ ಕಲಾಪ್ರಿಯರೂ ಅರಿಯುವಂತಾಗಬೇಕು. 

ಅರ್ಥಾಂತರಂಗ – 10ರಲ್ಲಿ ರಾಜಸೂಯಾಧ್ವರದ ಧರ್ಮರಾಯ ಕೃಷ್ಣರ ಸಂಭಾಷಣೆ ಅತ್ಯಂತ ಸುಂದರವಾಗಿ ಪಾತ್ರವೇ ತಾನೆಂಬ ಹಾಗೆ ಕಂಡಿತು. ಔಚಿತ್ಯಕೊಪ್ಪುವ ಧರ್ಮರಾಯನ ಮಾತು ಪಾತ್ರದ ಶ್ರೇಷ್ಠತೆಯ ಕನ್ನಡಿಯಂತಿತ್ತು. ಕೃಷ್ಣನ ಸೌಜನ್ಯ ಧರ್ಮರಕ್ಷಣೆಯ ತುಡಿತ, ಸೂಕ್ಷ್ಮ ರಾಜನೀತಿ ಎಲ್ಲವೂ ಮೇಳೈಸಿದ ಶೃತಿಬದ್ಧವೂ ಭಾವಪೂರ್ಣವೂ ಆದ ಮಾತುಗಳು ದ್ವಾಪರವನ್ನೇ ತೆರೆದಿಟ್ಟ ಹಾಗಿತ್ತು. ದೂರ್ವಾಸರ ತೀಕ್ಷ್ಣ ಮಾತುಗಳಿಗೆ ಲಕ್ಷ್ಮಣನ ಅಸಹಾಯಕತೆಯ ಭಾವ ಕರುಳಹಿಂಡುವಂತಿತ್ತು. ಶಂತನುವಿನ ಸಂಸ್ಕಾರವನ್ನು ಎತ್ತಿ ತೋರಿದ ಸುಶೀಲ ಶೃಂಗಾರ ಯೋಜನಗಂಧಿಯ ನಯ-ವಿನಯ, ಅಧೀನೆಯದ ತಾನು ಧರ್ಮ ಮೀರಬಾರದೆನ್ನುವ ಶುದ್ಧ ಮನಸ್ಥಿತಿಯ ಅನಾವರಣ ಪಾತ್ರಧಾರಿಗಿಂತ ಹೆಚ್ಚಾಗಿ ಪಾತ್ರವನ್ನೇ ಬೆಳಗಿದವು. ಹಿತವಾದ ಹಿಮ್ಮೇಳ ಮೆರಗನ್ನು ಹೆಚ್ಚಿಸಿತು.

ವಿ|ಯು. ವಿಘ್ನೇಶ ಶರ್ಮಾ 

ಟಾಪ್ ನ್ಯೂಸ್

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.