ವೇಷಗಳು ನೂರಾರು ತಾಸುಗಳು ಇಪ್ಪತ್ತಾರು
Team Udayavani, Nov 9, 2018, 6:00 AM IST
ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕಲಾಪೋಷಕ ಸಾಧಾರಣ ನೂರೈವತ್ತಕ್ಕೆ ಹತ್ತಿರ ದತ್ತಿನಿಧಿಗಳನ್ನು ಸ್ಥಾಪಿಸಿ ತಮ್ಮ ಒತ್ತಾಸೆಯಿಂದ ನಡೆಯುತ್ತಿದ್ದ ಕಾರ್ಯಕ್ರಮಗಳು ಜೀವಂತವಾಗಿರುವಂತೆ ಮಾಡಿದ ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯನವರು ತಮ್ಮ ಜೀವಿತಾವಧಿಯಲ್ಲಿ ಬಹುಜನಪ್ರಿಯರು. ಬಹುಜನ ಮಾನ್ಯರು. ಭೌತಿಕವಾಗಿ ಅವರು ಮರೆಯಾಗಿ ಹದಿನೈದು ಸಂವತ್ಸರಗಳು ಸಂದರೂ ಅವರ ನೆನಪಿನ ಉತ್ಸವ ಪ್ರತಿವರುಷವೂ ಅನೂಹ್ಯ ಇಂದ್ರವೈಭವದಂತೆ ಅದ್ದೂರಿಯಿಂದ ನಡೆಯುತ್ತಿದೆ. ಇದನ್ನು ನಮ್ಮ ಮುಂದೆ ಸಾಕಾಗೊಳಿಸುತ್ತಿರುವುದು ಸಂಪಾಜೆ ಯಕ್ಷೋತ್ಸವ. ದಕ್ಷಿಣಾದಿ, ಉತ್ತರಾದಿ ಯಕ್ಷಗಾನದ ಹಿಮ್ಮೇಳ ಮುಮ್ಮೇಳದ ನೂರಾರು ಮಂದಿ ಸುಪ್ರಸಿದ್ಧ ಮತ್ತು ಅಪ್ರಸಿದ್ಧ, ಹಿರಿ ಕಿರಿ ಮರಿ ಕಲಾವಿದರು ಅತ್ಯುತ್ಸಾಹದಿಂದ ಪಾಲ್ಗೊಂಡು ಕಲಾವೈಭವಕ್ಕೆ ಮೆರಗು ನೀಡುವ ಈ ಕಾರ್ಯಕ್ರಮ ಪ್ರತೀ ವರ್ಷ ಸಂಪಾಜೆಯಲ್ಲಿ ನಡೆಯುತ್ತಿತ್ತು. ಅನ್ಯಾನ್ಯ ಕಾರಣಗಳಿಂದ ಈ ವರುಷ ಮಲೆನಾಡಿನ ತಪ್ಪಲಿನ ಸಂಪಾಜೆಯಿಂದ ಕಡಲತೀರದ ಅಡ್ಯಾರಿನಲ್ಲಿ ವಿಜೃಂಭಣೆಯಿಂದ ನಡೆಯಿತು. ನೇತ್ರಾವತೀ ನದೀ ತೀರದಲ್ಲಿರುವ ಕಮನೀಯ ಕಲಾತ್ಮಕ ಸೌಂದರ್ಯದಿಂದ ಕಂಗೊಳಿಸುವ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಈ ಕಾರ್ಯಕ್ರಮ ಜನಮನ ರಂಜಿಸಿದ ಅವಧಿ ಇಪ್ಪತ್ತಾರು ತಾಸುಗಳು. ನೆರೆದ ಅಸಂಖ್ಯಾತ ಜನಸ್ತೋಮಕ್ಕೆ ಊಟೋಪಚಾರಗಳೊಂದಿಗೆ ಹೃದಯಾನಂದವನ್ನು ನೀಡಿ, ಡಾ.ಕೀಲಾರು ಅವರ ಸಂಸ್ಮರಣೆಯನ್ನು ಚಿರಂತನವಾಗಿಸಿತು. ಕೀರ್ತಿಶೇಷರಾದ ಬಳಿಕವೂ ಅವರದ್ದು ಸಾರ್ವಭೌಮ ಸಂಸ್ಮರಣೆ.
ದ್ರೌಪದಿ ಪ್ರತಾಪ, ಏಕಾದಶಿ ಮಹಾತ್ಮೆ, ರಾಜಾ ಸೌದಾಸ, ಮಾಯಾ ವಿಹಾರಿ ಪ್ರದರ್ಶನಗೊಂಡ ನಾಲ್ಕು ಪ್ರಸಂಗಗಳು. ಏಕಾದಶಿ ಮಹಾತ್ಮೆ ಬಡಗಿನ ಕಲಾವಿದರದ್ದು. ಆಟ ಆರಂಭವಾದದ್ದು ಅ.27ರಂದು ಬೆಳಗ್ಗೆ 10 ಗಂಟೆಗೆ. ಮುಕ್ತಾಯವಾದದ್ದು ಅ.28ರಂದು ಮಧ್ಯಾಹ್ನ 12 ಗಂಟೆಗೆ. ಈ ಮಹಾಆಟದ ನಡುವೆ ನಡೆದ ಸಭಾ ಕಾರ್ಯಕ್ರಮದ ಅವಧಿ ಕೇವಲ 60 ನಿಮಿಷ. ತೆಂಕುತಿಟ್ಟು ಯಕ್ಷಗಾನದಲ್ಲಿರುವ ಬಣ್ಣದ ವೇಷ, ರಾಜವೇಷ, ಪುಂಡುವೇಷ, ಸ್ತ್ರೀವೇಷ, ಹಾಸ್ಯವೇಷ, ಸಿರಿಮುಡಿಯ ವೇಷ, ಇತರ ವೇಷಗಳೆಂಬ ಏಳು ಜಾತಿಯ ವೇಷಗಳಿವೆ. ಈ ಪಾರಂಪರಿಕವಾದ ವೇಷಗಳಲ್ಲದೆ ನಾಟಕೀಯ ವೇಷಗಳೂ ಇವೆ. ಈ ಎಲ್ಲಾ ಜಾತಿಯ ವೇಷಗಳನ್ನು ಒಂದೇ ವೇದಿಕೆಯಲ್ಲಿ ನೋಡಬಹುದಾದ ಅವಕಾಶ ಈ ಆಟ ಒದಗಿಸಿದೆ. ಭಾಗವತಿಕೆ ಮತ್ತು ಹಿಮ್ಮೇಳ ವಾದನಗಳಲ್ಲೂ ವಿಭಿನ್ನ ಶೈಲಿಗಳನ್ನು ಒಂದೇ ವೇದಿಕೆಯಲ್ಲಿ ಆಸ್ವಾದಿಸಬಹುದಾದ ಅವಕಾಶವು ಇಲ್ಲಿ ದಕ್ಕಿದೆ. ಬಲಿಪ ನಾರಾಯಣ ಭಾಗವತರ ಮತ್ತು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ದೇಸಿ ಸೊಬಗಿನ ಭಾಗವತಿಕೆ, ಪಟ್ಲ ಸತೀಶ್ ಶೆಟ್ಟಿ ಮತ್ತು ರವಿಚಂದ್ರ ಕನ್ನಡಿಕಟ್ಟೆಯವರ ಆಧುನಿಕ ವಿನ್ಯಾಸದ ದ್ವಂದ್ವ ಹಾಡುಗಾರಿಕೆ, ಪ್ರಸಾದ್ ಬಲಿಪ ಮತ್ತು ಹೊಸಮೂಲೆ ಗಣೇಶ ಭಟ್ ಅವರ ಏರುಶ್ರುತಿಯ ಸ್ಪರ್ಧಾತ್ಮಕ ದ್ವಂದ್ವ, ಚೆಂಡೆಗಳ ಪ್ರಚಂಡ ಜುಗಲ್ಬಂದಿ, ಪುಂಡು ವೇಷಧಾರಿಗಳ ಮೇಲಾಟದ ಕುಣಿತಗಳು ಹಾಗೂ ರಕ್ಷಿತ್ ಶೆಟ್ಟಿ ಪಡ್ರೆ ಅವರ ಭರತನಾಟ್ಯ ಶೈಲಿಯ ಪೂಜಾನೃತ್ಯ, ಭೀಮಕಾಯದ ಶಬರೀಶ ಮಾನ್ಯ ಭೀಮನಾಗಿ ಸಭೆಯ ಮಧ್ಯೆ ಬಂಡಿ ಅನ್ನವನ್ನು ಬಕಾಸುರನಿಗೆ ಒಯ್ಯುವ ದೃಶ್ಯ ರಂಗೇರುವಂತೆ ಮಾಡಿತು.
ನವನವೀನ ದೃಶ್ಯಗಳ ಸಂಯೋಜನೆಯೊಂದಿಗೆ ನವರಸ ಭರಿತವಾದ ಗಾನ-ನೃತ್ಯಗಳು ಸಾಂಪ್ರದಾ ಯಿಕ ಮತ್ತು ಆಧುನಿಕತೆಗಳ ಮುಖಾಮುಖೀ ಪಾರಂಪರಿಕ ಮತ್ತು ಆಧುನಿಕ ಪ್ರೇಕ್ಷಕರನ್ನು ರಂಜಿಸಿತು. ಇಡೀ ದಿನವನ್ನು ಮೀರಿ ನಡೆದ ಕೀಲಾರು ಸಂಸ್ಮರಣಾ ಯಕ್ಷಗಾನ ಕಾರ್ಯಕ್ರಮ ಮನೋರಂಜನೆ ಯೊಂದಿಗೆ ಅಧ್ಯಯನಶೀಲರಿಗೆ ಅತ್ಯುತ್ತಮ ಮಾರ್ಗದರ್ಶಿಯಾದ ಅನನ್ಯ ಪ್ರದರ್ಶನ. ಆಟ ನೋಡುವುದಕ್ಕೆ ಪ್ರೇಕ್ಷಕರಿಗೆ ವ್ಯವಧಾನವಿಲ್ಲದುದರಿಂದ ಕಾಲಮಿತಿಯ ಯಕ್ಷಗಾನವೇ ಇಂದಿನ ಕಾಲಕ್ಕೆ ಸೂಕ್ತ ಎಂದು ವಾದಿಸುವವರ ಮುಂದೆ ಈ ಮಹಾಆಟ ಇಡೀ ದಿನವೂ ಆಟ ನೋಡುವ ಪ್ರೇಕ್ಷಕರಿದ್ದಾರೆ ಎಂದು ತೋರಿಸಿಕೊಟ್ಟಿತು.
ಹೀಗೇ ಹಲವು ವಿಶೇಷಗಳಿಂದ ನೆರೆದ ಪ್ರೇಕ್ಷಕರ ಮನ ತಣಿಯುವಂತೆ ಬೆರಗು ಮೂಡುವಂತೆ ಇಡೀ ಕಲಾಲೋಕವನ್ನೇ ಆಕರ್ಷಿಸುತ್ತಾ ಪುರಾಣಯುಗದ ಚಕ್ರವರ್ತಿಗಳ ಯಾಗ-ಯಜ್ಞಗಳನ್ನು ನೆನಪಿಸುವಂ ತಹ ಇಡೀದಿನದ ಈ ಜ್ಞಾನಯಜ್ಞ ಕಲಾ ಇತಿಹಾಸದಲ್ಲಿಯೇ ಹೊಸ ಹೆಜ್ಜೆ ಗುರುತುಗಳನ್ನು ಸ್ಥಾಪಿಸಿತು.
ತಾರಾನಾಥ ವರ್ಕಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.