ಕೃಷ್ಣ ಮಠದಲ್ಲಿ ಹರಿದ ಭಕ್ತಿ ಗಾನ ಸುಧೆ


Team Udayavani, May 10, 2019, 5:50 AM IST

19

ಹನುಮ ಜಯಂತಿ ಕಾರ್ಯಕ್ರಮದ ಹಿನ್ನೆಲೆಯವಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಎಲ್ಲೆಂದರಲ್ಲಿ ಭಕ್ತಿ ಗಾನಗಳು ಕೇಳಿ ಬರುತ್ತಿದ್ದವು. ಶ್ರೀಕೃಷ್ಣನ ಮುಂದಿನ ಮಂಟಪ, ಕನಕ ಮಂಟಪ ಹಾಗೂ ರಾಜಾಂಗಣದಲ್ಲೂ ಭಕ್ತಿ ಗಾನಗಳದ್ದೇ ಸದ್ದು. ಬೇರೆ ಬೇರೆ ತಂಡಗಳು ಈ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದವು. ಇದರಿಂದಾಗಿ ಇಡೀ ಪರಿಸರದ ಭಕ್ತಿ ಭಾವವು ಹೊಸ ಕಳೆಗಟ್ಟಿತ್ತು.

ಶ್ರೀಕೃಷ್ಣನ ಎದುರಿರುವ ಮಂಟಪ(ಚಂದ್ರ ಶಾಲೆ)ದಲ್ಲಿ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ ಮತ್ತು ತಂಡದಿಂದ ನಿರಂತರವಾಗಿ 4 ತಾಸುಗಳ ಕಾಲ ಭಕ್ತಿ ಗಾನ ಸುಧೆ ಹರಿದು ಬಂದಿತ್ತು. ಇವರದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಪ್ರಮುಖ ಭಕ್ತಿ ಗಾನ ತಂಡವಾಗಿದ್ದು, ಪ್ರತಿಯೊಂದು ಹಾಡು ಕೂಡ ಶ್ರೋತೃಗಳನ್ನು ತನ್ಮಯಗೊಳಿಸಿದ್ದುದು ವಿಶೇಷ. ಇಡೀ ದಿನದ ಪ್ರಮುಖ ಕಾರ್ಯಕ್ರಮವಾಗಿದ್ದ ಇದರಲ್ಲಿ ಸಂಗೀತ ಮತ್ತು ಭಕ್ತಿರಸ ಮೇಳೈಸಿತ್ತು.

ಶ್ರೀ ಶ್ರೀಕೃಷ್ಣ ಮುಖ್ಯ ಪ್ರಾಣ ಸೇವಾ ಸಮಿತಿ ಪ್ರಾಯೋಜ ಕತ್ವದಲ್ಲಿ ಜರಗಿದ್ದ ಈ ಕಾರ್ಯಕ್ರಮವು “ಗಜವದನ ಬೇಡುವೆ’ ಹಾಡಿನ ಮೂಲಕ ಆರಂಭವಾಗಿ “ಕೃಷ್ಣ ಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ’, “ಸುಂದರ ಮೂರ್ತಿ ಮುಖ್ಯ ಪ್ರಾಣ’, “ಲಕ್ಷ್ಮೀ ಕಾಂತ ಬಾರೋ’, “ಕುಣಿ ದಾಡೋ ಕೃಷ್ಣ’, “ಬಂದ ನೋಡಿ ಕೃಷ್ಣ’, “ಕೃಷ್ಣಾ ನೀ ಬೇಗನೆ ಬಾರೋ’, “ಎಷ್ಟು ಸಾಹಸವಂತ ’,  ”ಭಾಗ್ಯದ ಲಕ್ಷ್ಮೀ ಬಾರಮ್ಮಾ’, “ಧೀರ ಹನುಮ’, “ಜಯ ವಾಯು ಹನುಮಂತ’, “ಗೋವಿಂದಾ ನಿನ್ನ ನಾಮವೇ ಚಂದ’, “ಆದದ್ದೆಲ್ಲ ಒಳಿತೇ ಆಯಿತು’, “ಪ್ರಣ ಮಾ ಮ್ಯಹಂ ಶ್ರೀ ಗೌರಿ ಸುತಂ’, “ನಂಬಿದೆ ನಿನ್ನ ಪಾದವ’, “ಬಂದಾ ನೋಡಿ’, “ನೀರೆ ತೋರೆಲೆ’, “ಕೃಷ್ಣಾ ನೀ ಬೇಗನೆ ಬಾರೋ’, “ರಾಮ ಗೋವಿಂದ ಹರೆ’, “ಅಧರಂ ಮಧು ರಂ’ ಮುಂತಾದ ಹಾಡುಗಳು ಪ್ರೇಕ್ಷಕರನ್ನು ಸೆಳೆದು ನಿಲ್ಲಿಸಿದವು. ಇದು ಈ ತಂಡದ 403ನೇ ಕಾರ್ಯಕ್ರಮವಾಗಿತ್ತು. ಹನುಮ ಜಯಂತಿ ದಿನ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಸ್ತುತಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯ ಪ್ರಾಣನ ಭಕ್ತಿಗೀತೆಗಳದ್ದೇ ಸಿಂಹ ಪಾಲು ಪಡೆದುಕೊಂಡಿತ್ತು. ನಿಗದಿತ ಸಮಯದಲ್ಲೇ, ಅಂದರೆ ಪೂರ್ವಾಹ್ನ 11.30ಕ್ಕೆ ಆರಂಭವಾದ ಭಕ್ತಿ ಗಾನ ಸುಧೆಯು ಸುಮಾರು 4 ತಾಸುಗಳ ಕಾಲ ಅವಿರತವಾಗಿ ಸಾಗಿತ್ತು. ಕೃಷ್ಣನ ದರ್ಶನಕ್ಕೆ ಬಂದಿದ್ದ ಭಕ್ತರೆಲ್ಲರೂ ಈ ತಂಡದ ಸುಶ್ರಾವ್ಯ ಮತ್ತು ಭಕ್ತಿಲೋಕದಲ್ಲಿ ತೇಲಾಡುವಂತೆ ಮಾಡುವಂಥ ಹಾಡುಗಳನ್ನು ಆಲಿಸುತ್ತಾ ತನ್ಮಯರಾಗಿದ್ದರು. ತಂಡವು ಪ್ರಸ್ತುತಪಡಿಸಿದ ಎಲ್ಲ ಹಾಡುಗಳೂ ಶ್ರೋತೃಗಳಿಂದ ಮೆಚ್ಚುಗೆಗಳಿಸಿದ್ದವು. ಶ್ರೀಕೃಷ್ಣ ಮತ್ತು ಹನುಮಂತನ ಕಥಾನ ಕವೂ ಇಲ್ಲಿ ಹಾಡಿನ ರೂಪದಲ್ಲಿ ಪ್ರಸ್ತುತಗೊಂಡಿದ್ದರಿಂದ ಪುರಾಣ ಕಥಾಶ್ರವಣವೂ ಆದಂತಿತ್ತು. ಸುಮಾರು 80 ವರ್ಷ ದಾಟಿರುವ ವೃದ್ಧರೊಬ್ಬರು ಹಾಡು ಆಲಿಸುತ್ತಾ ಕುಣಿಯುತ್ತಿದ್ದರು. ಇದು ಆ ಕಾರ್ಯಕ್ರಮವು ಶ್ರೋತೃಗಳನ್ನು ಎಷ್ಟು ಸೆಳೆದು ನಿಲ್ಲಿಸಿದೆ ಎಂಬುದಕ್ಕೆ ಉತ್ತಮ ಸಾಕ್ಷಿ. ಕೃಷ್ಣನಿಗೆ ಪ್ರಿಯವಾಗಿರುವ ಮತ್ತು ಸಂಗೀತಕ್ಕೂ ಪೂರಕವಾಗಿರುವ ಕೊಳಲು ವಾದನವೂ ಇದ್ದುದರಿಂದ ಕರ್ಣಾನಂದ ಇಮ್ಮಡಿಗೊಂಡಿತ್ತು.

ಹಾಡುಗಾರಿಕೆಯನ್ನು ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ, ವಿ| ಸುಧೀರ್‌ ಕೊಡವೂರು ಮತ್ತು ಕೃಷ್ಣ ಆಚಾರ್ಯ ಅವರು ನಡೆಸಿಕೊಟ್ಟರು. ಇಂಪಾದ ಭಕ್ತಿಗಾನಕ್ಕೆ ಪೂರಕವಾಗಿ ವಯೊಲಿನ್‌ನಲ್ಲಿ ಶರ್ಮಿಳಾ ಕೆ. ರಾವ್‌, ಕೊಳಲಿನಲ್ಲಿ ನಿತೀಶ್‌ ಅಮ್ಮಣ್ಣಾಯ, ಮೃದಂಗದಲ್ಲಿ ಬಾಲಚಂದ್ರ ಭಾಗವತ್‌, ತಬ್ಲಾದಲ್ಲಿ ವಿ| ಮಾಧವ ಆಚಾರ್ಯ ಸಹಕರಿಸಿದರು.

ಪುತ್ತಿಗೆ ಪದ್ಮನಾಭ ರೈ

ಟಾಪ್ ನ್ಯೂಸ್

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.