ಸಂವೇದನೆಯ ಪರಿಣಾಮಕಾರಿ ಅಭಿವ್ಯಕ್ತಿ ಅವಳ್‌ ಶಿ ತೇ


Team Udayavani, Dec 13, 2019, 4:31 AM IST

sa-31

ಸಂತ ಅಲೋಶಿಯಸ್‌ ಕಾಲೇಜಿನ “ಬಹುಭಾಷಾ’ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು “ಅವಳ್‌ ಶಿ ತೇ’ ಎಂಬ ನಾಟಕವನ್ನು ಅಭಿನಯಿಸಿ ರಂಗ ಯಶಸ್ಸನ್ನು ದಾಖಲಿಸಿದ್ದನ್ನು ಹಂಚಿಕೊಳ್ಳಲೇಬೇಕಿದೆ. ಸ್ತ್ರೀ ಸಂವೇದನೆಯನ್ನಾಧರಿಸಿದ ಕಥಾವಸ್ತುವನ್ನು ಮೂಲವಾಗಿರಿಸಿ, ಕತೆ ಕಟ್ಟುವುದರಿಂದ ಹಿಡಿದು,
ಸಂಭಾಷಣೆ, ದೃಶ್ಯ ಜೋಡಣೆಯವರೆಗೆ ಅಧ್ಯಯನದ ನೆಲೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಸಿದಟಛಿಪಡಿಸಿದಾಟಕವಿದು. ಭಿನ್ನ ತಿರುವುಗಳ ದೃಶ್ಯಗಳನ್ನು ಕಟ್ಟಿ, ಉತ್ತಮ ಅಭಿನಯದೊಂದಿಗೆ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲುಪುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾದದ್ದು ಹೆಗ್ಗಳಿಕೆ.

ಲೇಖಕಿಯೊಬ್ಬಳ ಬದುಕಿನ ಪಯಣದ ಪುಟಗಳನ್ನು ಕೃತಿ ಮೂಲಕ ಅನಾವರಣಗೊಳಿಸ ಹೊರಟು, ಗೌಪ್ಯತೆಯನ್ನು ಮೀರಿ ಹೆಣ್ಣು ಬದುಕು ಕಟ್ಟಿಕೊಳ್ಳಲಾಗದು ಎಂಬ ವಾಸ್ತವ ಸತ್ಯವನ್ನು ಬಿಂಬಿಸುವಂತಿದೆ. ಹೆಣ್ಣೊಬ್ಬಳು “ಹೊಂದಾಣಿಕೆ’ ಎಂಬ ಪದವನ್ನು ಮುಂದಿಟ್ಟು, ತನ್ನವರಿಂದ ಬೇಕಿದ್ದನ್ನು ಪಡೆದು ಸಾಗುವಲ್ಲಿ ಹಿಂದೆ ಸರಿಯುವುದಿಲ್ಲ ಎಂಬುದಂತೂ ನಿಜವೆಂದು ಸ್ಪಷ್ಟವಾಗುತ್ತದೆ. ಸಾಮರ್ಥ್ಯ, ಸಾಧನೆಯ ಹಿಂದೆ
ಏನೋ ಇದೆ ಎಂಬ ಸಮಾಜದ ಶಂಕಿತ ದೃಷ್ಟಿಗಳ ಬಿರುನುಡಿಗಳನ್ನು ಎದುರಿಸುವಲ್ಲಿ ಸೋತಂತೆ
ಕಂಡರೂ, ಅವಳು ಮತ್ತೆ ಗಟ್ಟಿಯಾಗುತ್ತಾಳೆ.

ಆಸೆ, ಆಕಾಂಕ್ಷೆಗಳು ಮನೆಯಲ್ಲಿ ಕುಳಿತ ಗೃಹಿಣಿಯನ್ನೂ ಬಾಧಿಸದೆ ಇರದು. ಅಗತ್ಯ ಅವಕಾಶಗಳು ತೆರೆದುಕೊಂಡಾಗ ಯಾವುದೇ ಕ್ಷೇತ್ರದಲ್ಲಿ ಸಾಧನೆಗೆ ಮುಂದಾಗುವಂತೆ ನಾಟಕದ ಹೆಣ್ಣು ರಾಜಕೀಯ ವ್ಯೂಹದಲ್ಲಿ ಸಿಲುಕಿದರೂ, ಅಧಿಕಾರ ಗಿಟ್ಟಿಸುವಲ್ಲಿ ಸಫ‌ಲಳಾಗುವಳು. ಜನಸೇವೆಯೇ ತನಗೆ ಸಿಕ್ಕ ಭಾಗ್ಯ ಎಂದು ಅಚಲವಾಗಿ ನಂಬಿದ್ದು, ಪಕ್ಷದಲ್ಲಿರುವವರಿಗೆ ತಾನು ಏಕೆ ಬೇಕಾದವಳು ಎಂಬುದನ್ನು ನಿಧಾನವಗಿ ಅರ್ಥೈಸಿಕೊಂಡವಳು. ಸ್ವಾರ್ಥದ ಪರದೆಯ ಹಿಂದೆ ಹೆಣ್ಣು ಭೋಗದ ಕೈಗೊಂಬೆ ಎಂಬುವುದನ್ನು ಸಂಪೂರ್ಣವಾಗಿ ಅರಿಯುವಷ್ಟರಲ್ಲಿ ಮಾನಸಿಕವಾಗಿ ಜರ್ಜರಿತಗೊಳ್ಳುತ್ತಾಳೆ. ಒಂದೆಡೆ ಗಂಡನ ಆಕಸ್ಮಿಕ ಸಾವು, ಇನ್ನೊಂದೆಡೆ ರಾಜಕೀಯ ಒತ್ತಡಗಳ ಮಧ್ಯೆ ಸಹಾಯಕ್ಕೆ ಬಂದ ವ್ಯಕ್ತಿಯನ್ನು ಆಧರಿಸಲು ಮುಂದಾಗುತ್ತಾಳೆ. ಗಂಡನ ಸಾವಿಗೆ ಅವನೇ ಕಾರಣ ಅಂತ ತಿಳಿದಾಗ ಅವನ ಅಂತ್ಯಕ್ಕೆ ದಿನ ನಿಗದಿ ಪಡಿಸುತ್ತಾಳೆ. ಆದರೆ ಆತ ಆಕಸ್ಮಿಕವಾಗಿ ಸಾವಿಗೀಡಾಗುತ್ತಾನೆ. ಜಾಗರೂಕವಾಗಿ ನಡೆಸಬೇಕಿದ್ದ ರಹಸ್ಯ ಕಾರ್ಯಗಳ ಹೊರತಾಗಿಯೂ ಅವಳು ರಾಜಕೀಯವಾಗಿ ಎತ್ತರದ ಸ್ಥಾನಮಾನ ಗಿಟ್ಟಿಸುವಲ್ಲಿ ಸಫ‌ಲಳಾಗುತ್ತಾಳೆ. ಆದರೆ ಅದರ ಹಿಂದೆಯೂ ಯಾರದೋ ಸ್ವಾರ್ಥ ಅಡಗಿದೆ ಎಂದು ತಿಳಿಯಲು ಅಸಮರ್ಥಳಾಗುತ್ತಾಳೇ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಹೇಗೆ ರಾಜಕೀಯವಾಗಿ ಚಾಲ್ತಿ ಕಳೆದುಕೊಂಡು ಮೂಲೆ ಸೇರಲ್ಪಡುತ್ತಾಳೆ ಎಂಬುದು ಗೌಪ್ಯವಾಗಿಯೇ ಉಳಿಯುತ್ತೆ. ಇಡೀ ಕಥಾ ಹಂದರವು ನಮ್ಮೂರಿನ ತಾಲೂಕು ಘಟಕದ ರಾಜಕೀಯ ನಡೆಯುವ ಹಿಂದಿರುವ ಶಕ್ತಿಯ ಚಿತ್ರಣವನ್ನು ಮುಂದಿಡುತ್ತದೆ.

ಬಾಲ್ಯದಲ್ಲಿ ತಳ್ಳಲ್ಪಟ್ಟವರು ಸೂಕ್ಷ್ಮ ಘಟನೆಗೆ ಕಾರಣವಾಗಿ ಎತ್ತರಕ್ಕೇರಿದರೂ ನಾಜೂಕಾದ ನಡೆಯಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಿದೆ ಅನ್ನುವಂತಿದೆ. ಕೊನೆಗೆ ತಾನು ಹಿಂದೆ ತೀವ್ರಗಾಮಿ ಲೇಖಕಿಯಾಗಿದ್ದು, ತನ್ನ ರಕ್ಷಣೆಗೆ ರಾಜಕೀಯವೇ ಕಾರಣವಾಗಿದ್ದು ಎಂಬುದನ್ನು ಒಪ್ಪಿಕೊಳ್ಳುವಂತಿದೆ.
ಇಡೀ ನಾಟಕ ಇಷ್ಟೊಂದು ವಿಷಯಗಳನ್ನು ಕೆದಕಿ, ಬೆದಕಿದ ಪತ್ರಕರ್ತೆಯೊಬ್ಬಳು ತಾನೂ
ಹೆಣ್ಣಾಗಿ ಅವಳ ಗೌಪ್ಯತೆಯ ವಿಚಾರಗಳನ್ನು ಗೌಪ್ಯವಾಗಿರಿಸುವಲ್ಲಿ ಸಫ‌ಲಳಾಗುತ್ತಾಳೆ.
ಗತಕಾಲದ ವಿಷಯ ವಿಚಾರಗಳೇ ದಾಖಲೆ ಅಲ್ಲ. ಹಾಗಂತ ದಾಖಲಾಗಿದ್ದೆಲ್ಲಾ ಸುಳ್ಳಲ್ಲ ಎಂಬ ವಾಸ್ತವ
ಚಿತ್ರಣವನ್ನು ನಾಟಕದಲ್ಲಿ ಪ್ರಸ್ತುತ ಪಡಿಸಲಾಗಿದೆ.

ಭೂತ, ವರ್ತಮಾನ, ಭವಿಷ್ಯತ್‌ನ ನಡೆಯನ್ನು ಭಿನ್ನ ದೃಶ್ಯಗಳಲ್ಲಿ ತಿರುವು ಮುರುವಾಗಿ ಕಟ್ಟಿಕೊಂಡು
ನೋಡುಗರನ್ನು ಚಿಂತನೆಗೆ ತಳ್ಳುತ್ತದೆ. ಈ ನಿಟ್ಟಿನಲ್ಲಿ ಒಂದೇ ಪಾತ್ರಕ್ಕೆ ನಾಲ್ಕು ಆಯಾಮಗಳನ್ನು ಸೃಷ್ಟಿಸಿ, ನಾಲ್ಕು ಭಿನ್ನ ಪಾತ್ರಧಾರಿಗಳನ್ನು ಬಳಸಿಕೊಂಡಿರುವ ನಿರ್ದೇಶಕ ಜಗನ್‌ ಪವಾರ್‌ ಜಾಣ್ಮೆ ಮೆಚ್ಚತಕ್ಕದ್ದು. ಅಲ್ಲದೆ ಆ ಪಾತ್ರದ ಜತೆ ಸರಿಸಮವಾಗಿ ನಿಲ್ಲಬಲ್ಲ ಸಹ ಪಾತ್ರಗಳು ಪೂರಕ ಯಶಸ್ಸಿನ ಭಾಗವೆನ್ನಬಹುದು. ಹದಿಹರೆಯದ ಆಕರ್ಷಣೆಗಳು ನೈಜ ಪ್ರೇಮವಲ್ಲ ಅದು ಬರೀ ಜಾರುವ ಹಾವಸೆ ಮೇಲಿನ ಹೆಜ್ಜೆ ಎಂಬುದನ್ನು ಸೂಕ್ಷ್ಮವಾಗಿ ಹೊಂದಿಸಿದ್ದು, ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ
ಕಿವಿಮಾತಿನಂತಿದೆ. ನಾಟಕ ನಿರ್ದಿಷ್ಟ ಭಾಷೆಯ ಹಂಗಿಗೊಳಗಾಗದೆ, ಬಹುಭಾಷಾ ನಾಟಕವೆನ್ನುವಂತೆ ಎಲ್ಲ ಅರ್ಥೈಸಿಕೊಳ್ಳುವಂತೆ ಆಗಿರುವುದು ಉತ್ತಮ ಅಂಶ.

ನಾಟಕದುದ್ದಕ್ಕೂ ಕೇಂದ್ರೀಕೃತವಾಗಿರುವ ಅಜ್ಜಿ ಪಾತ್ರವನ್ನು ಜೀವ ತುಂಬಿ ಅಭಿನಯಿಸಿದ ಆ್ಯಶೆಲ್‌ ಮರಿಯ ಡಿ’ಸಿಲ್ವಾ, ಪತ್ರಕರ್ತೆಯಾಗಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ನಾಟಕದ ನಡೆಯನ್ನು ಕಾಯ್ದುಕೊಂಡ ಸಾಕೇತ ಶೆಟ್ಟಿ, ಕಾಲೇಜು ದಿನಗಳಲ್ಲಿ ಪ್ರೇಮದ ಸುಳಿಗೆ ಬಿದ್ದರೂ ಬಿಂದಾಸ್‌ ಬಣ್ಣದ ಹುಡುಗಿಯಾಗಿ ಕಾಣಿಸಿಕೊಂಡ ನೀಶಲ್‌, ರಾಜಕೀಯ ವ್ಯಕ್ತಿಯಾಗಿ ಇನ್ನೊಬ್ಬರ ಬದುಕನ್ನು ಒಡೆಯ ಹೊರಟ ರಮೇಶ್‌ ಪಾತ್ರಧಾರಿ ಅಕ್ಷಯ್‌, ಕುಟುಂಬದಲ್ಲಿ ಅನ್ಯೋನ್ಯತೆಯನ್ನು ಕಾಯ್ದುಕೊಂಡು ಸಹಕಾರ ನೀಡುತ್ತಿದ್ದ ಗಂಡನ
ಪಾತ್ರ ಮಾಡಿದ ವಿಮರ್ಶ್‌ ಶೆಟ್ಟಿ, ಹೆಂಡತಿಯಾಗಿ ಬಹಳ ಲವಲವಿಕೆಯಿಂದ ಅಭಿನಯಿಸಿದ ಸೃಷ್ಟಿ
, ದೆಹಲಿಯ ರಾಜಕೀಯ ಕಚೇರಿ ತಲುಪುವ ಪಾತ್ರ ನಿರ್ವಹಿಸಿದ ರೋಹಿಣಿ, ರಾಜಕೀಯ
ಪಕ್ಷದ ಅಧ್ಯಕ್ಷ ಮತ್ತು ಕೇಂದ್ರ ಸಮಿತಿ ಮುಖ್ಯಸ್ಥ ಪಾತ್ರ ವಹಿಸಿದ ಅಕ್ಷಿತ್‌ರವರೆಲ್ಲರ ಅಭಿನಯ
ಚೆನ್ನಾಗಿತ್ತು. ಉಳಿದೆಲ್ಲಾ ಪಾತ್ರಗಳು ಪೂರಕವಾಗಿ ಒಟ್ಟು ನಾಟಕದ ಓಘಕ್ಕೆ ಪೂರಕವಾಗಿತ್ತು. ಸಂಗೀತ
ಸಂದಭೋìಚಿತವಾಗಿತ್ತು. ಹಿತಮಿತವಾಗಿ ದೃಶ್ಯದ ನಡೆಗೆ ಹೊಂದಿ ಕಥಾಮಟ್ಟವನ್ನು ಎತ್ತರಕ್ಕೇರಿಸಿತ್ತು.

ಜೆರಾಲ್ಡ್‌ ಫ‌ುರ್ಟಾಡೋ ಎಸ್‌.ಜೆ.

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.