ಗ್ರಾಮೀಣ ಭಾಗದಲ್ಲಿ ಮೇಳೈಸಿದ ಮಹಿಳೆಯರ ಯಕ್ಷ ವೈಭವ 

Team Udayavani, Mar 22, 2019, 12:30 AM IST

shirur-yakshagana-2.jpg

ಶಿರೂರಿನ ಪದವಿ ಪೂರ್ವ ಕಾಲೇಜು ವೇದಿಕೆಯಲ್ಲಿ ನಡೆದ ಜೆಸಿಐ ಮಹಿಳೆಯರ ಯಕ್ಷಗಾನ ಕಲಾಸಕ್ತರ ಮನಸೂರೆಗೊಂಡಿದ್ದು ಮಾತ್ರವಲ್ಲದೆ ಯಕ್ಷಗಾನದ ಗಂಧಗಾಳಿಯು ತಿಳಿಯದ ಮೊದಲ ಬಾರಿಗೆ ಹೆಜ್ಜೆಕಟ್ಟಿ ಕುಣಿದ ನಾರಿಯರ ಉತ್ಸಾಹಕ್ಕೆ ಸಭಿಕರು ಬೇಷ್‌ ಎಂದರು. 

ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಇಲ್ಲಿನ ಜೆಸಿಐ ಸಂಸ್ಥೆ ಈ ಬಾರಿ ಜೆಸಿರೇಟ್‌ಗಳು ಯಕ್ಷಗಾನ ಪ್ರದರ್ಶಿಸುವ ದೈರ್ಯ ಮಾಡಿತ್ತು.ಬಹುತೇಕವಾಗಿ ಕಲೆಯಲ್ಲಿ ಅಷ್ಟೇನೂ ತೊಡಗಿಸಿಕೊಳ್ಳದೆ ಬೇರೆ ಬೇರೆ ಉದ್ಯೋಗದಲ್ಲಿರುವ ಇಲ್ಲಿನ ಸ್ತ್ರೀಯರು ಇತ್ತೀಚಿನ ಯಕ್ಷಗಾನದ ಹೊಸತನಗಳ ಆಸಕ್ತಿಯಿಂದ ಈ ಪ್ರದರ್ಶನದ ಮನಸ್ಸು ಮಾಡಿದ್ದರು.ಗುರುಗಳಾದ ಶ್ರೀಧರ ದೇವಾಡಿಗ ಬಿಜೂರು ತರಬೇತಿ ನೀಡಿದ್ದರು.ಮಾಯಾಪುರಿ ಪ್ರಸಂಗ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಬಾಲ ಕಲಾವಿದರಾದ ನಿರ್ಮಿತ್‌, ಸಮೃದ್ದ, ಲೋಹಿತ್‌, ನಿಶ್ಚಿತ್‌ರ ಸಮಯ ಪ್ರಜ್ಞೆಯ ಅಭಿನಯ ಆಸಕ್ತಿ ಭವಿಷ್ಯದಲ್ಲಿ ಉತ್ತಮವಾಗಿ ಮೂಡಿಬರುವಂತಿತ್ತು.ರಂಗದ ಚೌಕಟ್ಟಿಗೆ ಕಿಂಚಿತ್ತು ಲೋಪ ಬರದಂತೆ ಪ್ರದರ್ಶನ ನೀಡಿದ್ದರು. 

ಮದನಾಕ್ಷಿಯಾಗಿ ಜಾನ್ವಿ ಪ್ರಭು, ತಾರಾವಳಿಯಾಗಿ ರೂಪಾ ರೇವಣರ್‌ ಅಚ್ಚುಕಟ್ಟಾದ ಸೊಗಸಾದ ಅಭಿನಯ ನೀಡಿದ್ದರು.ಇವರ ಪ್ರದರ್ಶನಕ್ಕೆ ಬಡಗುತಿಟ್ಟಿನ ರಸರಾಗ ಚಕ್ರವರ್ತಿ ಸುಬ್ರಹ್ಮಣ್ಯ ಧಾರೇಶ್ವರರು ಕೂಡ ಸಾಕ್ಷಿಯಾಗಿದ್ದರು.ಇವೆರಡು ಪಾತ್ರಧಾರಿಗಳಲ್ಲಿ ಕಲೆ ರಕ್ತಗತವಾಗಿ ಬಂದಂತೆ ಭಾಸವಾಗಿತ್ತು. ವೀರಮ್ಮ ಪುಷ್ಕಳಗೆ ಆರಂಭದಲ್ಲಿ ಅಳುಕು ಕಂಡು ಬಂದರೂ ಅನಂತರ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರು.ಮದನಾಕ್ಷಿ, ತಾರಾವಳಿಯರ ಮಾತೆಯಾಗಿ ವಿಶಿಷ್ಟ ಪಾತ್ರ ಪೋಷಣೆ ಮಾಡಿದವರು ಗೃಹಿಣಿ ನಾಗರತ್ನ .ಒಂದು ಸಣ್ಣ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಸೈ ಎನಿಸಿಕೊಂಡರು.ಸಂಧ್ಯಾ ವಿಶ್ವನಾಥ ಹಾಸ್ಯ ಪಾತ್ರ ಸೊಗಸಾದರೂ ಸಹ ಇನ್ನಷ್ಟು ತರಬೇತಿ ಬೇಕು ಎನ್ನುವಂತಿತ್ತು.ಶುಭಾಂಗ,ರುಕಾ¾ಂಗ ಪಾತ್ರದಲ್ಲಿ ನಿರೀಕ್ಷಾ, ನಿಶ್ಚಿತ ಪಾತ್ರಕೊಪ್ಪುವ ಅಭಿನಯದಿಂದ ನೃತ್ಯ,ಮಾತುಗಾರಿಕೆಯಿಂದ ನೋಡುಗರ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದರು.ಇನ್ನು ಒಂದಿಷ್ಟು ಕುಣಿಯ ಬಾರದೇ ಎಂದೆನಿಸುತ್ತಿತ್ತು. ನಾರದ ಪಾತ್ರದಲ್ಲಿ ಸಮೃದ್ಧಾ ಮಾತುಗಾರಿಕೆಯಿಂದ ಗುರುತಿಸಿಕೊಂಡು ಯಶಸ್ವಿ ಅಭಿನಯ ನೀಡಿದ್ದರು. ಧಮನ ಪಾತ್ರಧಾರಿ ಲಕ್ಷ್ಮೀ ನಾಗೇಶ್‌ ಕೆ. ಹಿತವರಿತ ಮಾತು,ಕುಣಿತ ರಂಗಸ್ಥಳದಲ್ಲಿ ಕೆಂಪು ಮುಂಡಾಸು ವೇಷದ ಗತ್ತುಗಾರಿಕೆ ತೋರಿಸುವಲ್ಲಿ ಸಫಲರಾಗಿದ್ದಾರೆ.ಸುಮಾರು 6 ತಿಂಗಳ ತರಬೇತಿಯಲ್ಲಿ ಎರಡೂವರೆ ತಾಸು ನೀಡಿದ ಪ್ರದರ್ಶನ ಶಿರೂರಿನ ಯಕ್ಷಗಾನದ ಕ್ಷೇತ್ರದಲ್ಲಿ ಹೊಸತನ ಮೂಡಿಸಿತ್ತು. 

– ಅರುಣ ಕುಮಾರ್‌ ಶಿರೂರು

ಟಾಪ್ ನ್ಯೂಸ್

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.