ತುಳು ರಂಗಭೂಮಿಗೆ ಹೊಸ ಘನತೆ ತಂದುಕೊಟ್ಟ ಶಿವದೂತೆ ಗುಳಿಗೆ


Team Udayavani, Mar 13, 2020, 6:08 PM IST

gulige-

ಮಲ್ಪೆ ಕೊಳದ ಶಿವಪಂಚಾಕ್ಷರೀ ಭಜನ ಮಂದಿರದ ವಠಾರದಲ್ಲಿ ಫೆ. 25ರಂದು ಪ್ರದರ್ಶನಗೊಂಡ ಶಿವದೂತೆ ಗುಳಿಗೆ ನಾಟಕ ಮತ್ತು ಅದಕ್ಕೆ ಸೇರಿದ್ದ ಜನಸಂದೋಹವು ತುಳು ನಾಟಕರಂಗದ ಮೇಲೆ ಹೊಸ ಭರವಸೆ ಮೂಡಲು ಪೂರಕವಾಗಿತ್ತು. ಪೌರಾಣಿಕ ನಾಟಕಕ್ಕೂ ಈ ಸಂಖ್ಯೆಯ ಪ್ರೇಕ್ಷಕರನ್ನು ಈಗಿನ ಕಾಲದಲ್ಲಿ ಸೆಳೆಯಬಹುದು ಎಂಬುದು ಇಲ್ಲಿ ಸಾಬೀತಾಗಿದೆ.

ಕಲಾಸಂಗಮದ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ನೇತೃ ತ್ವದ ತಂಡ ಈಗಾಗಲೇ ಹಲವು ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಿ ಯಶಸ್ವಿಯಾಗಿದೆ. ಈ ಬಾರಿಯ ಶಿವದೂತೆ ಗುಳಿಗೆ ನಾಟಕದ ಮೂಲಕ ತುಳು ರಂಗಭೂಮಿಯಲ್ಲೇ ಹೊಸ ಸಂಚಲನ ಮೂಡಿಸಿದೆ. ಈ ನಾಟಕದಲ್ಲಿ ಎಲ್ಲರಿಗೂ ತಿಳಿದಿರುವ ಕಥೆಯನ್ನೇ ತಿಳಿಸಲಾಗಿದೆ. ಆದರೆ ಅಲ್ಲಿನ ಒಂದೊಂದು ದೃಶ್ಯವೂ ಅದ್ದೂರಿಯಾಗಿ ಮತ್ತು ಹೊಸತನದ ಪ್ರತೀಕವಾಗಿ ನಮ್ಮ ಮುಂದಿದೆ. ಒಂದು ನಾಟಕವನ್ನು ಈ ರೀತಿಯಲ್ಲೂ ಮಾಡಬಹುದೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವಂತಿದೆ.

ಪ್ರದರ್ಶನದಿಂದ ಪ್ರದರ್ಶನಕ್ಕೆ ಹೊಸ ಹೊಸ ಬದಲಾವಣೆ ಮಾಡುತ್ತಾ ನಾಟಕದ ಗುಣಮಟ್ಟವನ್ನು ಹೆಚ್ಚಿಸಲಾಗುತ್ತಿದ್ದು, ಪ್ರಸ್ತುತ ಅದರ ಸ್ಕ್ರೀನ್‌ನಲ್ಲಿ ಸ್ಲೆ„ಡ್‌ ವ್ಯವಸ್ಥೆ ಮಾಡಲಾಗಿದ್ದು, ಅದು ಪ್ರೇಕ್ಷಕರಿಗೆ ಮತ್ತಷ್ಟು ಖುಷಿ ಕೊಡುತ್ತಿದೆ.

ನಾಟಕದಲ್ಲಿರುವ ವಿಶೇಷತೆಗಳೆಂದರೆ ಕೈಲಾಸ, ವೈಕುಂಠದ ಅದ್ದೂರಿ ಸೆಟ್ಟಿಂಗ್‌, ಪಿಲಿಚಾಮುಂಡಿಯ ವೈಭವ, ಕೋಡ್ದಬ್ಬುವಿನ ಸೌಂದರ್ಯ, ಗುಳಿಗನ ಪ್ರವೇಶದ ಚಕಿತ, ಪೌರಾಣಿಕ ಮತ್ತು ಆಧುನಿಕ ಮನೆಗಳ ಬೆರಗು ಇತ್ಯಾದಿ. ಅದರಲ್ಲೂ ಗುಳಿಗ ಪಾತ್ರಧಾರಿ ಸ್ವರಾಜ್‌ ಶೆಟ್ಟಿಯವರ ಅಭಿನಯ ನೈಜವಾಗಿ ಮನತಟ್ಟುವಂತಿತ್ತು. ಬೃಹತ್‌ ಗುಳಿಗೆಯಿಂದ ವೇದಿಕೆಯ ಮಧ್ಯದಲ್ಲೇ ಗುಳಿಗೋದ್ಭವವಾಗೋದು, ಎರಡನೇ ಬಾರಿಗೆ ನೆಲವುಲ್ಲ ಸಂಕೆಯ ಎದೆಸೀಳಿ ಬಂದು ಆಕೆಯ ಹೊಟ್ಟೆ ಸಿಗಿದು ಕರುಳಿನ ಭಕ್ಷಣೆ, ಗುಳಿಗನ ಬಾರಣೆ, ಆಗಾಗ ವಾಯ್‌ ಎನ್ನುವ ಕೂಗು, ಗುಳಿಗ ದೃಷ್ಟಿ, ಅಬ್ಬರದ ರಂಗನಡೆ, ಸಭಾಮಧ್ಯದಿಂದ ಬಂದು ಕತ್ತಲಕಾನದ ಕೋಡªಬ್ಬುನ ಸನ್ನಿಧಾನಕ್ಕೆ ಪ್ರವೇಶಿಸೋದು, ಬ್ರಹ್ಮರಾಕ್ಷಸನ ಜತೆಗಿನ ಹೋರಾಟ … ಹೀಗೆ ಪ್ರತಿಯೊಂದೂ ಮೈನವಿರೇಳಿಸುತ್ತದೆ. ತುಳುನಾಡಿಗೆ ಬಂದು ಭೀಮರಾಯನ ತೋಟದಲ್ಲಿ ಬಾರಣೆ ಪಡೆದುಕೊಳ್ಳುವ ದೃಶ್ಯವಂತೂ ಮತ್ತೆ ಮತ್ತೆ ನೋಡುವಂತಿದೆ.

ರೂಪೊಡು ಕರ್ಗಂಡ ಕರಿಯೆ
ಧರ್ಮೊನು ದಂಟ್‌ಂದ ಕೆರುವೆ ಶಿವದೂತೆ ಗುಳಿಗೆ
ಮುಕ್ಕಣ್ಣನ ಮೈ ಜತ್ತಿ ಬೆಗರ್‌
ಉಂಡಾಂಡ್‌ ಸತ್ಯೋದ ತುಡರ್‌
ಬೆಮ್ಮೆರೆ ಸೃಷ್ಟಿ, ಗುಳಿಗನ ದೃಷ್ಟಿ,
ನರಲೋಕ ಜತ್ತಿ ಆ ಮಲ್ಲ ಶಕ್ತಿ ಶಿವದೂತೆ ಗುಳಿಗೆ
ಬಾಜೆಲ್‌ಗ… ಸಾಗರೊನೆ ಪರುವೆ
ಬಡವಾಂಡ ಏರೆನಲಾ ಬುಡಯೆ
ಬತ್ತ್ಂಡ ಬಡವುಡೇ ಬರುವೆ
ತಣಿತ್‌ಂಡ ಅಭಯೊನೆ ಕೊರುವೆ ಶಿವದೂತೆ ಗುಳಿಗೆ
ಎಂಬ ಹಾಡು ಪಟ್ಲ ಸತೀಶ್‌ ಶೆಟ್ಟಿಯವರ ಕಂಠದಿಂದ ಹೊರಹೊಮ್ಮಿದ್ದು, ಇವರು ಮತ್ತು ದೇವದಾಸ್‌ ಕಾಪಿಕಾಡ್‌ ಅವರು ಹಾಡಿರುವ ಹಾಡುಗಳು ಇಡೀ ನಾಟಕಕ್ಕೆ ಮುಕುಟಪ್ರಾಯದಂತಿದೆ. ಒಂದು ಸಂದರ್ಭದಲ್ಲಿ ಕತ್ತಲೆಯಲ್ಲಿ ಇದೇ ಹಾಡಿಗೆ ಗುಳಿಗನ ನೃತ್ಯ ಅತ್ಯದ್ಭುತವಾಗಿ ಮೂಡಿ ಬಂದಿದೆ.

ಪಾಡ್ದನದ ಹಿನ್ನೆಲೆ, ಗುಳಿಗನ ಸ್ತುತಿ ಕಿವಿಗೆ ಮುದ ನೀಡಿದರೆ, ಕತೆಗೆ ಸಹಜವಾಗಿಯೇ ಇರುವ ಕ್ರೌರ್ಯ, ಅಟ್ಟಹಾಸಗಳು ಅತಿ ಎನಿಸಿದರೂ ಅನಿವಾರ್ಯವಾಗಿದೆ. ದೈವದ ನೇಮದ ಮಹತ್ವ ಅರಿಯದ ಹೊಸ ತಲೆಮಾರಿಗೆ ಕತೆ ಹೇಳುವಲ್ಲಿಂದ ಆರಂಭವಾಗುವ ನಾಟಕ ಬಳಿಕ ಕತೆಗೆ ಪೂರಕವಾಗಿ ಪೌರಾಣಿಕ ದೃಶ್ಯಗಳು, ಜತೆಗೆ ಭೂಲೋಕಕ್ಕಿಳಿದ ಆಧುನಿಕ ದೃಶ್ಯಗಳೊಂದಿಗೆ ಸೇರಿ ಪೌರಾಣಿಕ ಮತ್ತು ನವ್ಯ ನಾಟಕದ ಮಿಶ್ರಣವಾಗಿ ಸಾಗಿ ಕೊನೆಯ ದೃಶ್ಯದಲ್ಲಿ ಕತೆಗೊಂದು ದೈವಜಾಗೃತಿಯ ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ. ಧ್ವನಿಯನ್ನು ಮುದ್ರಿಸಿಕೊಂಡಿದ್ದ ಕಾರಣ ಅದರಲ್ಲಿ ಸ್ಪಷ್ಟತೆಯಿರುವುದು ನಾಟಕದ ಹೆಚ್ಚುಗಾರಿಕೆ. ಧ್ವನಿ ಮುದ್ರಣಕ್ಕೆ ಕಾರಣ ಹಲವಿವೆ ಎಂದು ಕೊಡಿಯಾಲ್‌ಬೈಲ್‌ ಹೇಳುತ್ತಿದ್ದು, ಕಲಾವಿದರ ಬಾಯ್ತಪ್ಪಿ ತುಳುವೇತರ ಶಬ್ದ ಬರದಂತೆ ನೋಡಿಕೊಳ್ಳೋದು, ಏರು ದನಿಯೇ ಹೆಚ್ಚಿರುವುದರಿಂದ ಕಲಾವಿದರ ಆರೋಗ್ಯ ಕಾಪಾಡೋದು, ಪಾತ್ರಕ್ಕೆ ತಕ್ಕ ಸ್ವರ ಗಾಂಭೀರ್ಯ ನೀಡೋದು ಮುಂತಾದವು ಅವುಗಳಲ್ಲಿ ಕೆಲವು ಅಂಶಗಳು. ಜತೆಗೆ ಬೆಳಕಿನ ಕೌಶಲ ಕ್ಷಣಕ್ಷಣಕ್ಕೂ ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ. ಪರಮಾನಂದ ಸಾಲ್ಯಾನ್‌ ಸಸಿಹಿತ್ಲು ಅವರ ಸಂಭಾಷಣೆಯು ತುಳುವಿನ ಭಾಷಾ ಶ್ರೀಮಂತಿಕೆ ಹಾಗೂ ಜಾನಪದ ಸೊಬಗಿಗೆ ಸಾಕ್ಷಿಯಾಗಿದೆ.

ಪುತ್ತಿಗೆ ಪದ್ಮನಾಭ ರೈ

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.