ಯಕ್ಷ ದೇಗುಲಕ್ಕೆ ಹದಿನಾರರ ಸಂಭ್ರಮ
Team Udayavani, Jul 13, 2018, 6:00 AM IST
ಯಕ್ಷಗಾನ ಕಲೆಯನ್ನು ಉಳಿಸಬೇಕು, ಬೆಳೆಸಬೇಕು ಎಂಬ ಸದಾಶಯದಿಂದ ಕಾಂತಾವರದಲ್ಲಿ 2003ರಲ್ಲಿ ಸ್ಥಾಪನೆಯಾದ ಶ್ರೀಯಕ್ಷ ದೇಗುಲ ಕಾಂತಾವರ ಸಾರ್ಥಕ ಹೆಜ್ಜೆಗುರುತುಗಳನ್ನು ಮೂಡಿಸುತ್ತ ಮುನ್ನಡೆಯುತ್ತಿದೆ. ಇದರ ಸೂತ್ರಧಾರಿ, ನಿರ್ದೇಶಕ ಕಲಾವಿದ, ನಾಟ್ಯಗುರು ಮಹಾವೀರ ಪಾಂಡಿ. ಮೊದಲ ಹತ್ತು ವರ್ಷಗಳಲ್ಲಿ ಹೊಸ ಹೊಸ ಕಲಾವಿದರ ಸೇರ್ಪಡೆಯೊಂದಿಗೆ ವರ್ಷಂಪ್ರತಿ ತಾಳಮದ್ದಲೆ ಕೂಟಗಳನ್ನು ನಡೆಸುತ್ತ ಬಂದ ಸಂಸ್ಥೆ 2012ರಲ್ಲಿ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ| ಜೀವಂಧರ ಬಲ್ಲಾಳ್ ಬಾರಾಡಿಬೀಡು ಅವರ ಗೌರವಾಧ್ಯಕ್ಷತೆಯೊಂದಿಗೆ ನೋಂದಾಯಿಸಲ್ಪಟ್ಟಿತು. ದಶಮಾನೋತ್ಸವ ಸಂದರ್ಭ ತೆಂಕುತಿಟ್ಟಿನ ಖ್ಯಾತ ಪುಂಡು ವೇಷಧಾರಿ ಪುತ್ತೂರು ಬಿ. ಶ್ರೀಧರ ಭಂಡಾರಿಯವನ್ನು ನಿಧಿ ಸಮರ್ಪಣೆಯೊಂದಿಗೆ ಸಮ್ಮಾನಿಸಲಾಗಿತ್ತು.
ಮುಂದಿನ ವರ್ಷಗಳಲ್ಲಿ ಯಕ್ಷಗಾನ ಕಲಿಯುವ ಆಸಕ್ತಿ ಹೊಂದಿದ ಸುಮಾರು 40 ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಶನಿವಾರ, ರವಿವಾರಗಳಲ್ಲಿ ಉಚಿತ ಯಕ್ಷ ಶಿಕ್ಷಣ ಶಿಬಿರಗಳನ್ನು ನಡೆಸುತ್ತ ಬರಲಾಗಿದೆ. ಪ್ರಸಂಗ ಪಠಣ ಶಿಬಿರ, ಬಣ್ಣಗಾರಿಕೆ, ಅರ್ಥಗಾರಿಕೆ, ನಾಟ್ಯಗಾರಿಕೆ ಹೀಗೆ ಸರ್ವಾಂಗೀಣ ಕಲಾವಿದರನ್ನಾಗಿ ರೂಪಿಸುವಲ್ಲಿ ಪಾಂಡಿಯವರ ಶ್ರಮ ಉಲ್ಲೇಖನೀಯ. ಸಂಸ್ಥೆಯ ಅಧ್ಯಕ್ಷ ಕೆ. ಶ್ರೀಪತಿ ರಾವ್ ಮತ್ತು ಸಂಗಡಿಗರು ಪಾಂಡಿಯವರೊಂದಿಗೆ ಸಹಕರಿಸುತ್ತ ಬಂದಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಸಂಸ್ಥೆಯ ವಾರ್ಷಿಕೋತ್ಸವವನ್ನು ತಾಳಮದ್ದಳೆ ಕೂಟ, ಬಾಲಕಲಾವಿದರಿಂದ ಬಯಲಾಟ, ಅಗಲಿದ ಕಲಾವಿದರ ಸಂಸ್ಮರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದೇ ಮೊದಲಾದ ಕಾರ್ಯಕಲಾಪಗಳನ್ನು ನಡೆಸುತ್ತ ಬರಲಾಗಿದೆ.
ಇದೀಗ, ಜು. 15ರಂದು ಹದಿನಾರನೇ ವಾರ್ಷಿಕೋತ್ಸವ. ಬೆಳಗ್ಗೆ 10ರಿಂದ ನಿರಂತರ 12 ತಾಸುಗಳ “ಯಕ್ಷೋಲ್ಲಾಸ 2018′ ಕಾರ್ಯಕ್ರಮ. ಏಕವ್ಯಕ್ತಿ ಯಕ್ಷ ಪ್ರಯೋಗ: ಪೂರ್ವರಂಗ, ಪ್ರಸಂಗ ರೂಪಕ (ದೀವಿತ್ ಕೆ. ಎಸ್.ಪೆರಾಡಿ), ರಾಧಾ ವಿಲಾಸ ನೃತ್ಯ (ಡಾ| ವರ್ಷಾ ಶೆಟ್ಟಿ, ದಿಶಾ ಶೆಟ್ಟಿ ಸುರತ್ಕಲ್), “ಇಂದ್ರ ಕೀಲಕ ಊರ್ವಶೀ ಶಾಪ’ ತಾಳಮದ್ದಳೆ ಕೂಟ, ಉಜಿರೆ ಅಶೋಕ ಭಟ್ಟ ಮತ್ತು ಜಬ್ಟಾರ್ ಸಮೋ ಇವರಿಗೆ ಸಮ್ಮಾನ, ಏಳು ಮಂದಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ, ಸಂಜೆ “ಗರುಡ ಗರ್ವಭಂಗ’ ಬಯಲಾಟ ಸಂಯೋಜಿಸಲಾಗಿದೆ. ಪುಣಿಚಿತ್ತಾಯ, ಕನ್ನಡಿಕಟ್ಟೆ, ಉಳಿತ್ತಾಯ, ಪಡ್ರೆ, ಬೊಳಿಂಜಡ್ಕ, ಜಬ್ಟಾರ್, ಕನ್ಯಾಡಿ, ರಮಣಾಚಾರ್, ಉಜಿರೆ, ಸಂಕದಗುಂಡಿ, ರಂಗಾ ಭಟ್, ಕೊಂಕಣಾಜೆ, ಪೊಳಲಿ, ರವಿರಾಜ್ ಮೊದಲಾದವರು ಭಾಗವಹಿಸಲಿದ್ದಾರೆ.
ಧನುರ್ಧರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.