ರಂಗ ರಂಗು ನಾಟಕದ ಗುಂಗು
Team Udayavani, Jul 7, 2017, 4:15 PM IST
ಆಧುನಿಕತೆಯ ಭರಾಟೆಯಲ್ಲಿ ಸಾಂಸ್ಕೃತಿಕ ಮನೋರಂಜನಾ ಲೋಕವು ಬಟ್ಟೆ ಬದಲಿಸಿದಂತೆ ಜನರ ಅಭಿರುಚಿಗೆ ತಕ್ಕಂತೆ ಪರಿವರ್ತನೆಗೊಳ್ಳುತ್ತದೆ. ನೋಟಕನ ಮೈ-ಮನ-ನೇತ್ರಗಳನ್ನು ರಂಜಿಸಲು ಕಲಾಕ್ಷೇತ್ರದ ಸಂಯೋಜಕರು, ದಿಗರ್ಶಕರು ಹೊಸತನ ಮೈಗೂಡಿಸಿಕೊಂಡು ವಿನೂತನತ್ವಕ್ಕೆ ಹಂಬಲಿಸುತ್ತಾರೆ. ಕಲಾವಿದ, ನಿರ್ದೇಶಕರ ಕಲ್ಪನೆಗಳ ಮೂಸೆಯಲ್ಲಿ ಹೊಸದಾದ ಅಭಿವ್ಯಕ್ತಿಯು ರೂಪುಗೊಂಡು, ಪ್ರದರ್ಶನ ಕಂಡಾಗ ಪ್ರೇಕ್ಷಕನು ಒಪ್ಪಿಕೊಂಡು ಖುಷಿ ಪಡುತ್ತಾನೆ.
ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣಮಂಟಪದಲ್ಲಿ ರಂಗ-ರಂಗು ಶಿರೋನಾಮೆಯಲ್ಲಿ ಯಶಸ್ವಿ ಕಲಾವೃಂದದ ನೇತೃತ್ವದ ಮಕ್ಕಳ ನಾಟಕ ಶಿಬಿರವು ನಡೆಯಿತು. ಎಳೆಯ ಮನಸ್ಸುಗಳನ್ನು ಒಂದುಗೂಡಿಸಿ, ರೋಹಿತ್ ಬೈಕಾಡಿಯವರ ನಿರ್ದೇಶನದಲ್ಲಿ ಹೊಸ ನಾಟಕ ಪ್ರಯೋಗ ಕಂಡಿತು. ತೆಕ್ಕಟ್ಟೆಯ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ (ರಿ.), ರಂಗ ಸಂಪದ ಕೋಟ, ಮಲ್ಯಾಡಿಯ ಯಕ್ಷದೀಪ ಕಲಾ ಟ್ರಸ್ಟ್ (ರಿ.), ಪಂಚವರ್ಣ ಗೆಳೆಯರ ಬಳಗ ಕೋಟ ಇವರೆಲ್ಲರ ಸಹಕಾರದಲ್ಲಿ ಈ ರಂಗಶಿಬಿರ, ನಾಟಕ ಪ್ರದರ್ಶನ ಮೈದಳೆಯಿತು.
ಶಿಬಿರದಲ್ಲಿ ತಯಾರಾದ ನಾಟಕ “”ಸತ್ರು ಅಂದ್ರೆ ಸಾಯ್ತಾರ!”. ಇದರ ಮೂಲ ಭರತೇಂದ್ರ ಹರಿಶ್ಚಂದ್ರ ಅವರ “ಅಂಧೇರಿ ನಗರಿ ಚೌಪಟ್ ರಾಜ’. ಇದನ್ನು ಕನ್ನಡಕ್ಕೆ ರೂಪಾಂತರಿಸಿದವರು ವೈದೇಹಿ. ನಾಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಪಾತ್ರಗಳು ಬಂದರೂ ಎಲ್ಲೂ ಸಪ್ಪೆಯಾಗದಂತೆ ನಾಟಕವನ್ನು ಕೊಂಡೊಯ್ದ ನಿರ್ದೇಶಕರ ಜಾಣ್ಮೆ ಮೆಚ್ಚತಕ್ಕದ್ದು. ರಾಜಕೀಯ ವಿಡಂಬನೆಯ ಮುಖದಂತಿರುವ ಮೂರ್ಖ ರಾಜ ಒಂದೆಡೆಯಾದರೆ ಶಿಷ್ಯನಿಗೆ ಬದುಕಿನ ಪಾಠ ಕಲಿಸುವ ಗುರು ಇನ್ನೊಂದೆಡೆ- ಹೀಗೆ ಎರಡು ಮಗ್ಗುಲುಗಳಲ್ಲಿ ಕಥೆ ಸಾಗುತ್ತದೆ. ನಾಟಕದ ಕಥಾಭಾಗದಲ್ಲಿ ಕತ್ತಲೆ ನಗರಿ, ತಲೆಕೆಟ್ಟ ರಾಜನ ಪ್ರಾಂತ್ಯವು ವಿಚಿತ್ರವಾಗಿಯೇ ಇರುವುದು. ಅಲ್ಲಿ ಎಲ್ಲ ವಸ್ತುಗಳ ಧಾರಣೆಯೂ ಒಂದು ರೂಪಾಯಿ. ಹೀಗಿರುವಾಗ ಗುರು-ಶಿಷ್ಯರು ಭಿಕ್ಷೆಗಾಗಿ ಕತ್ತಲೆ ನಗರಿ ಪ್ರವೇಶಿಸುತ್ತಾರೆ. ಇಲ್ಲಿ ಗುರು, ನಾರಾಯಣ ಮತ್ತು ಗೋವರ್ಧನರ ತ್ರಿವಳಿ ಪಾತ್ರಗಳು. ಶಿಷ್ಯರಲ್ಲೊಬ್ಬನಾದ ಗೋವರ್ಧನ ಪಾತ್ರವು ಹಾಸ್ಯ, ವಿಡಂಬನೆ, ದುಃಖ ಹೀಗೆ ಹಲವು ಭಾವಗಳನ್ನು ಅಭಿವ್ಯಕ್ತಪಡಿಸಿ, ರಂಜಿಸಿತು. ಈ ಪಾತ್ರವನ್ನು ಪ್ರಣಮ್ಯಾ ತೆಕ್ಕಟ್ಟೆ ನಿರ್ದೇಶಕರ ನಿರೀಕ್ಷೆಗಳಿಗೆ ತಕ್ಕುದಾಗಿ, ಸ್ವಂತಿಕೆಯ ಆಂಗಿಕ ಅಭಿನಯಗಳೊಂದಿಗೆ ಅಭಿನಯಿಸಿದರು.
ನಾರಾಯಣನ ಪಾತ್ರದಲ್ಲಿ ಕು| ಪೂಜಾ ಆಚಾರ್ ತೆಕ್ಕಟ್ಟೆ ಪಾತ್ರವೇ ತಾನಾಗಿ ಅಭಿನಯಿಸಿದ್ದು ಕಲಾಭಿಮಾನಿಗಳಿಗೆ ಖುಷಿ ಕೊಟ್ಟಿತು. ನಾಟಕದ ಅಂತ್ಯಭಾಗದಲ್ಲಿ ಶಿಷ್ಯ ತನ್ನ ಸಹಪಾಠಿಗೆ ಒದಗಿದ ಸಮಸ್ಯೆಯನ್ನು ಬಿಡಿಸುವಂತೆ ಅರಿಕೆ ಮಾಡಿಕೊಳ್ಳುವ ದೃಶ್ಯ ಆಪ್ಯಾಯಮಾನವಾಗಿ ಮೂಡಿಬಂತು. ಗುರುವಿನ ಪಾತ್ರವು ಸೌಮ್ಯವಾಗಿ ಕಂಡರೂ ಲೋಕಜ್ಞಾನವನ್ನು ತನ್ನಲ್ಲಿ ಅಡಗಿಸಿಕೊಂಡು, ಶಿಷ್ಯರಿಗೆ ಬದುಕಿನ ಪಾಠ ಹೇಳುವುದು, ಸಮಾಜ ತಿದ್ದುವ ಜವಾಬ್ದಾರಿಯನ್ನು ಹೊರುವ ಆದರ್ಶ ಗುರುವಿನ ಪ್ರತಿರೂಪವಾಗಿತ್ತು. ಅನಘಾ ಉತ್ತಮವಾಗಿ ಪಾತ್ರ ನಿರ್ವಹಿಸಿದರು.
ಪೋಷಕ ನಟರಾಗಿ, ಹಲ್ವಾ ವ್ಯಾಪಾರಿ ಅಭಿನವ ತುಂಗ, ತರಕಾರಿ ಮಾರಾಟಗಾರ ಶಶಾಂಕ, ಕಡ್ಲೆಪುರಿ ವ್ಯಾಪಾರಿ ಪ್ರಸನ್ನ, ಮೀನು ಮಾರಾಟಗಾರಿ¤ ಶಮಿತಾ ಆಚಾರ್ ನಮ್ಮ ಸುತ್ತಲಿನಲ್ಲಿ ಕಂಡುಬರುವ ಸಂತೆಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಅಚ್ಚುಕಟ್ಟಾಗಿ ಪಡಿಮೂಡಿಸಿ ರಂಜಿಸಿದ್ದಾರೆ.
ಕತ್ತಲೆ ನಗರಿಯ ರಾಜನ ದರ್ಬಾರು, ತಲೆಕೆಟ್ಟ ರಾಜನ ಆಸ್ಥಾನ ಸನ್ನಿವೇಶಗಳನ್ನು ವಿಶಿಷ್ಟವಾಗಿ ಸಂಯೋಜಿಸಲಾಗಿತ್ತು. ರಾಜನ ಪಾತ್ರ ನಿರ್ವಹಿಸಿದ ಮಿಥುನ್ ಉತ್ತಮವಾಗಿ ನಿರ್ವಹಿಸಿ ಜನಮನ್ನಣೆಗೆ ಪಾತ್ರರಾದರು. ಮಂತ್ರಿಯಾಗಿ ಕು| ವರ್ಷಾ ಅಭಿನಯಿಸಿ, ಕಥೆಗೆ ತಿರುವನ್ನು ಒದಗಿಸುವ ಕೆಲಸವನ್ನು ಚೆನ್ನಾಗಿ ನಿಭಾಯಿಸಿದರು. ರಾಜನ ಆಸ್ಥಾನದಲ್ಲಿ ಸೈನಿಕರ ಪಾತ್ರವನ್ನು ಶೋಭಿತ್ ಆಚಾರ್ ಮತ್ತು ಸಂಗಡಿಗರು ಚೊಕ್ಕದಾಗಿ ನಿಭಾಯಿಸಿದರು. ರಾಜಾಸ್ಥಾನದಲ್ಲಿ ನಡೆಯುವ ವಿಚಾರಣೆಯ ಸಂದರ್ಭದಲ್ಲಿ ಮೇಕೆ ಮರಿ ಸತ್ತಾಗ ಫಿರ್ಯಾದುದಾರೆಯ ಪಾತ್ರವನ್ನು ಸುವರ್ಣಾ ಭರ್ಜರಿಯಾಗಿ ನಿರ್ವಹಿಸಿದ್ದಾರೆ. ಆಕೆ ಪದೇ ಪದೇ ತನಗಾದ ನಷ್ಟ ತುಂಬಿಕೊಡುವಂತೆ ಬಿನ್ನವಿಸುವುದು ಪ್ರೇಕ್ಷಕರಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಯಿತು. ಅಪರಾಧಿಯಾಗಿ ಗೋಡೆಯ ಮಾಲಕ ತಿಮ್ಮಣ್ಣನನ್ನು ಕರೆತಂದಾಗ ಬಡಪಾಯಿ ಹೇಗೆ ಶೋಷಣೆ ಅನುಭವಿಸುತ್ತಾನೆ ಅನ್ನುವುದನ್ನು ಆ ಪಾತ್ರಧಾರಿ ಶೋಧನ್ ಮತ್ತು ಮೇಸಿŒ ಪಾತ್ರಧಾರಿ ಮಾ| ಸಾತ್ಯಕಿ ತೋರಿಸಿಕೊಟ್ಟರು. ನೀರಾಳುಗಳ ಪ್ರವೇಶ ರಂಗದ ಮೇಲೆ ಆದಾಗ ಲವಲವಿಕೆ ಪ್ರತೀ ಪಾತ್ರದಲ್ಲಿಯೂ ಕಾಣುತ್ತಿತ್ತು. ಕು| ಪಂಚಮಿ ವೈದ್ಯ, ಕು| ಅನನ್ಯಾ, ಕು| ಅನನ್ಯಾ ಕುಂಭಾಶಿ ನೀರಾಳುಗಳಾಗಿ ಅಭಿನಯಿಸಿ ರಂಗದಲ್ಲಿ ರಂಗನ್ನು ಕಾಣಿಸಿದರು. ಗಾಂಧಿಯ ಪಾತ್ರಧಾರಿ ರಜತ್ ರಂಗದಲ್ಲಿ ಶಿಸ್ತಿನ ಸಂಚಾರವನ್ನು ಒದಗಿಸಿದರು.
ಎಲ್ಲ ಪಾತ್ರಗಳೂ ರಂಗದ ನಿಯಮ, ಸಮಯಪ್ರಜ್ಞೆ, ಶಿಸ್ತು ಕೆಡದಂತೆ ನಿರ್ವಹಿಸಿದ್ದು ನಾಟಕದ ಒಟ್ಟಂದದ ಯಶಸ್ಸಿಗೆ ಕಾರಣವಾಯಿತು. ಹಿಮ್ಮೇಳ ಸಂಗೀತವು ನಾಟಕಕ್ಕೆ ಮತ್ತಷ್ಟು ರುಚಿಯನ್ನು ನೀಡಿತ್ತು. ಧ್ವನಿ, ಬೆಳಕು ಸಂಯೋಜನೆ ನಾಟಕವನ್ನು ಕಳೆಗಟ್ಟಿಸಿತು. ಸಂಯೋಜಕರಾದ ವೆಂಕಟೇಶ ವೈದ್ಯ, ರಾಘವೇಂದ್ರ ತುಂಗ, ಕೋಟ ಸುದರ್ಶನ ಉರಾಳ, ಜಯಸುದರ್ಶನ ಇವರ ಕನಸು ಶಿಬಿರೋತ್ಪತ್ತಿಯಾದ ಈ ನಾಟಕದ ಮೂಲಕ ಸಾಕಾರವಾಗಿದೆ.
ಕೋಟ ಸುದರ್ಶನ ಉರಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Local Body Election: ಪರಾಭವಗೊಂಡ ಅಭ್ಯರ್ಥಿಗಳ ಜತೆ ಜ.10ಕ್ಕೆ ಬಿ.ವೈ.ವಿಜಯೇಂದ್ರ ಸಭೆ
Malaysia Super 1000 Badminton: ಯಶಸ್ವಿ ಆರಂಭಕ್ಕೆ ಮೊದಲ ಮೆಟ್ಟಿಲು
Kho Kho ಇಂಡಿಯಾಕ್ಕೆ ಒಡಿಶಾ ಪ್ರಾಯೋಜಕತ್ವ
Editorial: ಗಿಫ್ಟ್ ಡೀಡ್: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.