ರಂಗದಲ್ಲಿ ಸಾಕಾರಗೊಂಡ ಪುಟಾಣಿಗಳ ಪ್ರತಿಭೆ
Team Udayavani, Feb 2, 2018, 2:51 PM IST
ಬಡಗಿನ ಬೆಡಗಿನ ಸೊಗಡನ್ನು ಉಣಿಸುವಲ್ಲಿ ಕ್ರಿಯಾಶೀಲವಾದ ಯಶಸ್ವಿ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆಯ ಮಕ್ಕಳ ಮೇಳದ ಯಕ್ಷಗಾನ “ಸುಧನ್ವಾರ್ಜುನ’ ಎನ್ನುವ ಕಥಾನಕ ರಂಗದಲ್ಲಿ ಸಾಕಾರಗೊಳಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. 12 ವರ್ಷದೊಳಗಿನ ವಯೋಮಿತಿಯ ಮಕ್ಕಳಿಗೆ ನೃತ್ಯಾಭ್ಯಾಸ ಮಾಡಿಸಿದ ಗುರುಗಳಾದ ಸೀತಾರಾಮ ಶೆಟ್ಟಿ ಕೊçಕೂರು, ದೇವದಾಸ್ ಕೂಡ್ಲಿಯವರು ಪಾಂಡವರ ಒಡ್ಡೋಲಗದ ಪ್ರಾತ್ಯಕ್ಷಿಕೆಯನ್ನು ನೆರವೇರಿಸಿದರು. ಇದೇ ಮಕ್ಕಳಿಂದ ರಾಜ್ಯಾದ್ಯಂತ ಹಲವಾರು ತಾಳಮದ್ದಲೆಗಳೂ ಏರ್ಪಟ್ಟವು.
ಯಾವುದೇ ಪ್ರಬುದ್ಧ ಕಲಾವಿದರಿಗೂ ಕಡಿಮೆ ಇಲ್ಲದಂತೆ ತಮ್ಮ ವಾಕ್ಚಾತುರ್ಯದಿಂದ ಜನರ ಮನ ಸೆಳೆವ ಪುಟಾಣಿಗಳು ಯಕ್ಷಗಾನ ಪ್ರದರ್ಶನದಲ್ಲೂ ಅಷ್ಟೇ ಮೇಲುಗೈಯ್ಯನ್ನು ಸಾಧಿಸಿದ್ದಾರೆ. ಜ.7ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಾಲಗೋಪಾಲನಾಗಿ ಕಾಣಿಸಿಕೊಂಡ 4 ವರ್ಷದ ತನಿ ಕಾಳಾವರRರ್ ನಿಬ್ಬೆರಗಾಗುವಂತೆ ಅಭಿನಯಿಸಿದರು. ಹಂಸಧ್ವಜನ ಪಾತ್ರವನ್ನು ನಿರ್ವಹಿಸಿದ ನಿಶಾ ದಿಟ್ಟ ನಿಲುವಿನೊಂದಿಗೆ ಮಂತ್ರಿಯೊಂದಿಗೆ (ಮಿಥುನ್) ಒಡ್ಡೋಲಗವನ್ನು ಕೊಟ್ಟರು. ಪುರ ಪ್ರವೇಶಿಸಿದ ತುರಗವನ್ನು ಬಂಧಿಸಿ ಹಣೆಯಲ್ಲಿ ಕಟ್ಟಲ್ಪಟ್ಟ ಲೇಖನವನ್ನು ತರಿಸಿ ವಾಚಿಸಿದಾಗ ಹರಿಯ ದರ್ಶನ ಭಾಗ್ಯ ಸಮೀಪಿಸಿದ ಯೋಗವನ್ನು ಸ್ಮರಿಸಿ ಆನಂದ ಪಡುತ್ತಾನೆ. ಶ್ರೀ ಕೃಷ್ಣನ ದರ್ಶನ ಭಾಗ್ಯದ ನಿಮಿತ್ತ ಪಾಂಡವರೊಂದಿಗೆ ಯುದ್ಧಕ್ಕೆ ಡಂಗೂರ ಸಾರಿ ಮಗ ಸುಧನ್ವನನ್ನು ಸಭೆಗೆ ಕರೆಸುತ್ತಾನೆ.
ತದನಂತರ ಸುಧನ್ವನ ಪಾತ್ರದಾರಿಯಾಗಿ ಪಂಚಮಿ ವೈದ್ಯ. ಆಗ ಸುಧನ್ವನು ಬೇಗದಿ ರಣಕನು, ವಾಗುತ ಮುದದಿಂದ. ಚಂಪಕಾನಗರದ ದಳಾಧಿಪತಿಯಾಗಿ ರಣಕ್ಕೆ ತೆರಳುವ ಹುಮ್ಮಸದಲ್ಲಿ ಕೋಲಿ¾ಂಚಿನಂತೆ ಪ್ರವೇಶ ಮಾಡಿ ಅಮ್ಮನ ಆಣತಿಗಾಗಿ ಮಾತೆಯ ಅಂತಃಪುರಕ್ಕೆ ತೆರಳುತ್ತಾನೆ. ಅಲ್ಲಿ ಅನಿರೀಕ್ಷಿತವಾಗಿ ಮಗನ ಆಗಮನವನ್ನು ಕಂಡ ಸುಗರ್ಭಾ(ಧರಣಿ) ಆತಂಕಕ್ಕೊಳಗಾಗುತ್ತಾಳೆ. ಮಗನೊಂದಿಗೆ ಅಸಾಮಾನ್ಯ ಯುದ್ಧದ ಬಗೆಗೆ ತರ್ಕಿಸುತ್ತಾಳೆ. ಶ್ರೀ ಕೃಷ್ಣನ ದರ್ಶನದ ಭಾಗ್ಯದ ಕುರಿತು ಸಂತಸ ಪಡುತ್ತಾಳೆ. ಮತ್ತೆ ಹರಸುತ್ತಾಳೆ. ಬಳಿಕ ಮಡದಿಯ ಅಂತಃಪುರಕ್ಕೆ ತೆರಳುವ ಮಾರ್ಗದಲ್ಲಿ ತಂಗಿ ಕುವಲೆ ವಿಷಯ ತಿಳಿದು ತಡೆಯುತ್ತಾಳೆ, ಧೈರ್ಯ ತುಂಬಿ ಹರಸುತ್ತಾಳೆ. ತಂಗಿ ಕುವಲೆಯಾಗಿ ತೊದಲು ನುಡಿಯಾಡಿ ಕಾಣಸಿಕೊಂಡವಳು ಮೂರುವರೆ ವರ್ಷದ ಬಾಲಕಿ ಪರಿಣಿತ ವೈದ್ಯ.
ಇನ್ನು ಸತಿ ಶಿರೋಮಣಿ ಪ್ರಭಾವತಿ. ತನ್ನ ವನಪು, ವೈಯ್ನಾರದಿಂದ ರಂಗದಲ್ಲಿ ಕಾಣಿಸಿಕೊಂಡವಳು ಪ್ರಭಾವತಿ (ಪ್ರಣಮ್ಯ). ಪತಿಯನ್ನು ಸ್ವಾಗತಿಸಿ, ಸತ್ಕರಿಸಿ ಆತನಿಂದ ವಿಚಾರವನ್ನು ತಿಳಿದು ಸ್ವರ್ಗ ಪ್ರಾಪ್ತಿಗೆ ಸಂತಾನವನ್ನು ಅಪೇಕ್ಷಿಸುತ್ತಾಳೆ. ಕರ್ತವ್ಯ ನಿರತನಾದ ಸುಧನ್ವ ಒತ್ತಾಯಕ್ಕೆ ಮಣಿದು ಶಾಸ್ತ್ರವನ್ನು ನೆನಪಿಸಿಕೊಂಡು ಇರುಳು ಕಳೆಯುವುದಕ್ಕಾಗಿ ಮಡದಿಯ ಅಂತಃಪುರದಲ್ಲಿ ನಿಲ್ಲುತ್ತಾನೆ. ಅತ್ತ ಅರ್ಜುನ(ಸಾತ್ಯಕಿ), ಪ್ರಧ್ಯಮ್ನ (ಅನನ್ಯ), ವೃಷಕೇತು (ನಿಶಾ) ಮೊದಲಾದವರ ಪರಂಪರೆಯ ಒಡ್ಡೋಲಗ. ಯಜ್ಞಾಶ್ವವನ್ನು ಮರಳಿ ಪಡೆಯುವ ಯೋಚನೆ, ಇದಿರಾಗಿ ನಿಂತ ಎರಡನೇ ಸುಧನ್ವನ ಪಾತ್ರದಲ್ಲಿ ಕಾಣಿಸಿಕೊಂಡವರು ಪೂಜಾ ಆಚಾರ್. ಬಿಡುವಿಲ್ಲದ ರಂಗ, ಯುದ್ಧದ ಮೇಲೊಂದು ಯುದ್ಧ. ಕಾವೇರಿದ ರಂಗದಲ್ಲಿ ಕೋಲಾಹಲ.. ಅಂತೂ ಅರ್ಜುನನ ಸೋಲಾದಾಗ ಶ್ರೀ ಹರಿಯ ನಮನ. ತಕ್ಷಕ್ ಕಾಳಾವರರ್ ಶ್ರೀ ಕೃಷ್ಣನ ವೇಷದಾರಿಯಾಗಿ ಮಿಂಚಿದರು.
ಅರ್ಜುನನ ಶಪಥವೂ ಈಡೇರುವಂತೆ ಮಾಡಿ, ಸುಧನ್ವ ಭಕ್ತಿಯೂ ಮೇಲಾಗುವಂತೆ ಮಾಡಿದ ಶ್ರೀ ಹರಿ ಪ್ರಸಂಗಕ್ಕೆ ಮಂಗಳ ಹಾಡಿದರು. ಪ್ರಾಚಾರ್ಯ ಕೆ.ಪಿ. ಹೆಗಡೆ, ಗುರುಗಳಾದ ಲಂಬೋದರ ಹೆಗಡೆ ಭಾಗವತರಾಗಿದ್ದರು. ಮದ್ದಲೆಯಲ್ಲಿ ಗುರುಗಳಾದ ದೇವದಾಸ್ ಕೂಡ್ಲಿ, ಚಂಡೆಯಲ್ಲಿ ಶಿವಾನಂದ ಕೋಟ, ಶಿಬಿರಾರ್ಥಿ ಲೋಹಿತ್ ಕೊಮೆ ಸಹಕರಿಸಿದರು. ಸೀತಾರಾಮ ಶೆಟ್ಟಿ ಕೊçಕೂರು ನಿರ್ದೆಶಿಸಿದರು.
ಪ್ರಶಾಂತ್ ಮಲ್ಯಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.