ಗಾಣಿಗ ಸಮಾಜದ ಕಲಾವಿದರ ತಾಮ್ರಧ್ವಜ-ಚಿತ್ರಾಕ್ಷಿ 


Team Udayavani, Oct 12, 2018, 6:00 AM IST

z-5.jpg

ಕುಂದಾಪುರದ ವ್ಯಾಸರಾಜ ಮಠದಲ್ಲಿ ನಡೆದ ಗಾಣಿಗ ಸಮಾಜದ ಕುಲಗುರು ಶ್ರೀ ಲಕ್ಷ್ಮೀಂದ್ರ ತೀರ್ಥರ ಚಾತುರ್ಮಾಸ್ಯ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗಾಣಿಗ ಸಮಾಜದ ಕಲಾವಿದರ ಕೂಡುವಿಕೆಯಲ್ಲಿ ತಾಮ್ರಧ್ವಜ ಕಾಳಗ -ಚಿತ್ರಾಕ್ಷಿ ಕಲ್ಯಾಣ ಎನ್ನುವ ಯಕ್ಷಗಾನ ಪ್ರದರ್ಶನಗೊಂಡಿತು.ವೀರರಸವೇ ಪ್ರಧಾನವಾಗಿರುವ ತಾಮ್ರಧ್ವಜ ಕಾಳಗ ಪ್ರಸಂಗದಲ್ಲಿ ಪರಂಪರೆಯ ತಾಮ್ರಧ್ವಜನಾಗಿ ದೀರ್ಘ‌ ಮುಂಡಾಸಿಗೆ ಆಳಂಗದ ಗತ್ತು, ಅದಟ್ಟುವಿನ ಮೂಲಕ ಗಮನ ಸೆಳೆದವರು ಗೋಪಾಲ ಗಾಣಿಗ ಆಜ್ರಿ. ಕಲೆಯಲ್ಲಿ ಅವರ ಅನುಭವ, ಸಿದ್ಧಿಯಿಂದ ತಾಮ್ರದ್ವಜ ಕೇವಲ ಪಾತ್ರ ಎಂದೆನಿಸುವುದಿಲ್ಲ. ಮಯೂರಧ್ವಜನಾಗಿ ಶ್ರೀನಿವಾಸ ಗಾಣಿಗರು ಸಂಪ್ರದಾಯದ ಕಿರೀಟ ವೇಷದಲ್ಲಿ ರಾಜ ಗಾಂಭೀರ್ಯ ಮುಖಮುದ್ರೆಯಿಂದ ಭಕ್ತಿ, ಧರ್ಮ, ವಚನಬದ್ಧತೆಯನ್ನು ಪ್ರತಿಬಿಂಬಿಸಿದರು. ಅರ್ಜುನನಾಗಿ ಸರ್ವ ಗಾಣಿಗರು ತನ್ನ ಕುಣಿತ ಮಾತುಗಾರಿಕೆಯಿಂದ ಮನ ಗೆದ್ದರೆ, ಸಾಂಪ್ರಾದಾಯಿಕವಾದ ತಾಮ್ರಧ್ವಜದ ಅರ್ಜುನನನ್ನು ಕಾಣಲು ಸಾಧ್ಯವಾಯಿತು. ಕೃಷ್ಣನಾಗಿ ಕಾಣಿಸಿಕೊಂಡಿದ್ದು, ಸುರೇಂದ್ರ ಗಾಣಿಗರು. ಸುಂದರ ವದನ, ಲಾಲಿತ್ಯಪೂರಿತ ಮಾತುಗಾರಿಕೆ ಮೂಲಕವೇ ಗಮನ ಸೆಳೆದರು. 

ಸಕುಲಧ್ವಜನಾಗಿ ನಾಗೇಂದ್ರ ಗಾಣಿಗ, ವೃಷಕೇತುವಾಗಿ ಅಣ್ಣಪ್ಪ ಗಾಣಿಗ, ಅನಿರುದ್ಧನಾಗಿ ಸುಬ್ರಹ್ಮಣ್ಯ ಗಾಣಿಗ, ಕುಮುದಧ್ವಜನಾಗಿ ಕೃಷ್ಣ ಗಾಣಿಗ, ಗುರುವಾಗಿ ಶಂಕರ ಗಾಣಿಗ, ಶಿಷ್ಯನಾಗಿ ಗೋವಿಂದ ಗಾಣಿಗ ಕಲಾ ಪ್ರೌಢಿಮೆ ಮೆರೆದರು. ನಂತರ ನಡೆದ ಚಿತ್ರಾಕ್ಷಿ ಕಲ್ಯಾಣ ನವರಸ ಅಭಿವ್ಯಕ್ತಿಯಿಂದ ರಂಜಿಸಿತು. ರಕ್ತಜಂಘನಾಗಿ ಸಂಜು ಗಾಣಿಗ ಕ್ರೌರ್ಯ, ಶೌರ್ಯ, ಅಬ್ಬರದೊಂದಿಗೆ ರಕ್ಕಸ ಪಾತ್ರದ ಔಚಿತ್ಯವನ್ನು ಬಿಂಬಿಸಿದರು. ಮಾತುಗಾರಿಕೆ ಗಡಸು, ಕುಣಿತದಲ್ಲಿನ ಅಬ್ಬರ, ಅಭಿವ್ಯಕ್ತಿಯಲ್ಲಿ ಅವರು ಅನುಸರಿಸುತ್ತಿರುವ ಬಗೆ ಅನನ್ಯ. ರುದ್ರಕೋಪನಾಗಿ ಪ್ರವೀಣ ಗಾಣಿಗ ಪ್ರಥಮಾರ್ಧದಲ್ಲಿ ಮಿಂಚಿದರೆ ನಂತರ ಪ್ರಶಾಂತ ಗಾಣಿಗ ಅಭಿನಯದಲ್ಲಿ ಭರವಸೆ ಮೂಡಿಸಿದರು. ಚಂದ್ರಸೇನನಾಗಿ ನಾಗೇಂದ್ರ ಗಾಣಿಗ, ನಾರದನಾಗಿ ರಾಜೇಂದ್ರ ಗಾಣಿಗರ ಪಾತ್ರೋಚಿತ ಅಭಿನಯ, ವೇದವ್ಯಾಸನಾಗಿ ಕಾಣಿಸಿಕೊಂಡ ಕೋಡಿ ವಿಶ್ವನಾಥ ಗಾಣಿಗರು ಪಾತ್ರಕ್ಕೊಂದು ಹೊಸ ಆಯಾಮ ಒದಗಿಸಿದರು. 

ಸತ್ಯಶೀಲೆಯಾಗಿ ಕೃಷ್ಣ ಗಾಣಿಗ, ಗಂಗೆಯಾಗಿ ಶ್ರೀಧರ ಗಾಣಿಗ, ಚಿತ್ರಾಕ್ಷಿಯಾಗಿ ವಿಜಯ ಗಾಣಿಗ ಸ್ತ್ರೀ ಭೂಮಿಕೆಗಳಿಗೆ ಅರ್ಥಪೂರ್ಣ ನ್ಯಾಯ ನೀಡಿದರು. ರಕ್ತಕೇಷಿಯಾಗಿ ಹೆಣ್ಣು ಬಣ್ಣದ ವೇಷದ ಮೂಲಕ ನಾಗೇಶ ಗಾಣಿಗರು ಮಿಂಚಿದರೆ ಅಜ್ಜಿಯಾಗಿ ಶಂಕರ ಗಾಣಿಗ ನಗೆಯ ಕಚಗುಳಿ ಇಟ್ಟರು. 

ಹಿಮ್ಮೇಳದಲ್ಲಿ ಭಾಗವತ ಗೋಪಾಲ ಗಾಣಿಗ ಹೇರಂಜಾಲು ಮತ್ತು ಪಲ್ಲವ ಗಾಣಿಗ ಹೇರಂಜಾಲು ದ್ವಂದ್ವ ಕಂಠಸಿರಿಯಲ್ಲಿ ರಾಗಧಾರೆ ಹರಿಸಿದರು. ಮದ್ದಳೆಯಲ್ಲಿ ಬಾಲಕೃಷ್ಣ ಗಾಣಿಗ, ಚಂಡೆಯಲ್ಲಿ ಸುಬ್ರಹ್ಮಣ್ಯ ಗಾಣಿಗ ಉತ್ತಮ ಸಾಥ್‌ ನೀಡಿದರು. ಭಾಗವತ ಗಣೇಶ ಅವರು ಸ್ನೇಹ ಪೂರ್ವಕವಾಗಿ ಭಾಗವಹಿಸಿದ್ದು ಒಟ್ಟಂದಕ್ಕೆ ಕಾರಣವಾಯಿತು. 

 ನಾಗರಾಜ್‌ ವಂಡ್ಸೆ

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.