ಯಕ್ಷಗಾನೋತ್ಸವದಲ್ಲಿ ಮಿಂಚಿದ ಮೈಂದ-ದ್ವಿವಿದ
Team Udayavani, Jan 12, 2018, 3:54 PM IST
ವರ್ಕಾಡಿ ರವಿ ಅಲೆವೂರಾಯ- ಕುಸುಮಾ ದಂಪತಿ ವೈವಾಹಿಕ ಜೀವನದ ರಜತ ಮಹೋತ್ಸವವನ್ನು ಯಕ್ಷಗಾನೋತ್ಸವ ಏರ್ಪಡಿಸುವ ಮೂಲಕ ಆಚರಿಸಿಕೊಂಡರು.ಸರಯೂ ಮಕ್ಕಳ ಮೇಳದ ಸದಸ್ಯರು ನರಕಾಸುರ ಮೋಕ್ಷ- ಮೈಂದ ದ್ವಿವಿದ ಪ್ರಸಂಗವನ್ನು ಪ್ರಸ್ತುತಪಡಿಸಿದರು.
ವಿಶೇಷ ಆಕರ್ಷಣೆಯಾಗಿ ಶ್ರೀಕೃಷ್ಣನ ಒಡ್ಡೋಲಗದಲ್ಲಿ ವಿಜಯಲಕ್ಷೀ,ಗಗನ್, ದಿಲೀಪ್ ಶಾಸ್ತ್ರಿ, ನಿಖೀಲ…,ಅದ್ಮಿತಾ,ಹಿತೇನ್‌ರವರು ಭಿನ್ನ ನಾಟ್ಯಗಳಿಂದ ರಂಜಿಸಿದರು. ಪ್ರಥಮ ದೃಶ್ಯವು ಉತ್ತಮವಾಗಿ ಮೂಡಿಬಂದು ಪ್ರೇಕ್ಷಕರ ಮನ ಗೆದ್ದಿತು.ಆನಂತರ ವೆಂಕಟೇಶ್ ಕೇಶಾವರಿಯಲ್ಲಿ ನರಕಾಸುರನಿಗೆ ಜೀವ ತುಂಬಿದರು. ನಾರದ ಪಾತ್ರ ಮಾಡಿದ ಸಾರ್ಥಕ್ ಶೆಣೈ ಅವರು ಗಮನ ಸೆಳೆದರು. ಅವರು ಭರವಸೆಯ ಕಲಾವಿದನಾಗುವ ಲಕ್ಷಣ ಹೊಂದಿ¨ªಾರೆ. ನರಕಾಸುರನ ಮಂತ್ರಿ, ಸೇನಾಧಿಪತಿಗಳಾಗಿ ಆದಿತ್ಯ,ಹರ್ಷಿತ್, ಚಿಂತನ್, ಚಿನ್ಮಯ್ ಕಾಣಿಸಿಕೊಂಡರು. ಅನಿರುದ್ª ಭಟ್ ಅವರು ದೇವೇಂದ್ರನಾದರೆ, ದೇವದೂತರಾಗಿ ಶಶಾಂಕ್ ,ದೇವತೆಗಳಾಗಿ ಸ್ವಸ್ತಿ ಶ್ರೀ , ದಿಲೀಪ್,ಅದ್ಮಿತಾ,ಅದ್ವಿತ್, ಸಾನ್ವಿ ಅವರು ಪಾತ್ರ ನಿರ್ವಹಿಸಿದರು. ಸಾನ್ವಿ ಮತ್ತು ಅದ್ವಿತ್ ಅವರು ಗಮನ ಸೆಳೆದ ಬಾಲ ನಟರು.ಮುರಾಸುರನಾಗಿ ಅಕ್ಷಯ್ ಕುಮಾರ್ ಅವರು ಅಬ್ಬರದ ಪ್ರವೇಶ ನೀಡಿ ಪಾತ್ರಕ್ಕೆ ಗೌರವ ತುಂಬಿದರು. ನರಕಾಸುರನಿಗೆ ಮೋಕ್ಷ ಕರುಣಿಸಿ ಶ್ರೀ ಕೃಷ್ಣ ನರಕ ಚತುರ್ದಶಿ ಮಹತ್ವವನ್ನು ವಿವರಿಸಿದಾಗ ಯುವ ಬಳಗ ಹರ್ಷದಿಂದ ಸ್ವಾಗತಿಸಿತು.
ಮೈಂದ-ದ್ವಿವಿದರಾಗಿ ಹರಿಚರಣ್ ಮತ್ತು ಹಿತೇನ್ ಮಿಂಚಿದರು. ವನಪಾಲಕರಾಗಿ ಹೇಮಂತ್ ಕೆದಿಲಾಯ, ಸಾನ್ವಿ ಬಿ.ಕೆ.,ಸುಶಾನ್, ನಿಖೀಲ್ ಕೋಟ್ಯಾನ್,ಬಲರಾಮನಾಗಿ ಪದ್ಮಾವತಿ ಉತ್ತಮ ಪಾತ್ರ ನಿರ್ವಹಣೆ ಮಾಡಿದರು. ಗರುಡನಾಗಿ ಸ್ವಸ್ತಿ ಶ್ರೀ ಗಮನ ಸೆಳೆದರು. ಶ್ರೀ ಕೃಷ್ಣನ ದರ್ಶನವಾದ ಮೇಲೆ ಮೈಂದ ದ್ವಿವಿದರು ಶರಣಾಗುವಲ್ಲಿಗೆ ಕಥೆ ಮುಗಿಯುತ್ತದೆ. ಅಪರೂಪವಾಗಿ ಆಡುವ ಪ್ರಸಂಗವಾದರೂ ಮಕ್ಕಳು ಕಥೆಯ ತಿರುಳನ್ನು ಅರಿತು ನಟಿಸಿ ಸೈ ಎನಿಸಿಕೊಂಡರು. ಹರಿಪ್ರಸಾದ್ ಕಾರಂತ , ಮುರಾರಿ ಕಡಂಬಳಿತ್ತಾಯ , ಸುಬ್ರಹ್ಮಣ್ಯ ಚಿತ್ರಾಪುರ, ಶಾಲಿನಿ ಹೆಬ್ಟಾರ್ ಮತ್ತು ಸಂಜೀವ ಕಜೆಪದವು ಅವರ ಹಿಮ್ಮೇಳ ಮುಮ್ಮೇಳವನ್ನು ಗೆಲ್ಲಿಸಿತು.
ಜೀವನ್ ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.