ಅಪೂರ್ವ ಪ್ರಯೋಗ  ಗುರು ನಮೋಸ್ತುತೇ

Team Udayavani, Mar 17, 2017, 3:50 AM IST

17-KALA-4.jpg

ಮಂಗಳೂರಿನ ಪುರಭವನದಲ್ಲಿ ವಿ| ಅಯನಾ ಪೆರ್ಲ ಅವರ ಗುರು ನಮೋಸ್ತುತೇ ಎಂಬ ಅಪೂರ್ವ ನೃತ್ಯಪ್ರದರ್ಶನವೊಂದು ಫೆ.26ರಂದು ಪ್ರದರ್ಶನಗೊಂಡು ಬಹುಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಬಹುತೇಕ ಯುವ ಕಲಾವಿದರು ರಂಗಪ್ರವೇಶಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ವಿ| ಅಯನಾ ಉನ್ನತ ಶ್ರೇಣಿಯ ವಿದ್ವತ್‌ ಬಳಿಕವೂ ರಾಷ್ಟ್ರೀಯ ಮಟ್ಟದ ಹಲವು ಕಮ್ಮಟಗಳಲ್ಲಿ – ಶಿಬಿರಗಳಲ್ಲಿ ಭಾಗವಹಿಸಿ ಹೆಚ್ಚಿನ ಕಲಿಕೆಗೆ ತನ್ನನ್ನು ತೆರೆದುಕೊಂಡು, ಪೂರ್ಣಪ್ರಮಾಣದ ಪ್ರದರ್ಶನ ನೀಡಲು ಮನಸ್ಸು ಮಾಡಿದ್ದು ಸಂತೋಷ ಪಡುವ ಸಂಗತಿ. ಪ್ರದರ್ಶನ ಕಲಾವಿದೆಯಾಗಿ ತಾನು ಬೆಳೆಯುವ ಎಲ್ಲ ಸಾಧ್ಯತೆಗಳನ್ನೂ ಈಕೆ ತೋರಿಸಿಕೊಟ್ಟಿದ್ದಾರೆ.

ಈಗಾಗಲೇ ರಾಜ್ಯಮಟ್ಟದ ಹಲವು ಪ್ರತಿಷ್ಠಿತ ವೇದಿಕೆ ಗಳಲ್ಲಿ ಅಭಿನಯಿಸಿರುವ ವಿ| ಅಯನಾ ಪೆರ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರತಿಭಾ ಪುರಸ್ಕಾರ ಪಡೆದುಕೊಂಡವರು. ದೂರದರ್ಶನದ ಗ್ರೇಡೆಡ್‌ ಕಲಾವಿದೆಯೂ ಹೌದು.  ವೃತ್ತಿ ಯಲ್ಲಿ ಸಾಫr…ವೇರ್‌ ಎಂಜಿನಿಯರ್‌ ಆಗಿರುವ ಇವರು ನೃತ್ಯದೊಂದಿಗೆ ಶಾಸ್ತ್ರೀಯ ಸಂಗೀತ ಮತ್ತು ಮೃದಂಗವನ್ನೂ ಕಲಿಯುತ್ತಿ ¨ªಾರೆ. ಭರತನಾಟ್ಯದಲ್ಲಿ ಇನ್ನಷ್ಟು ಪ್ರಯೋಗನಿರತರಾಗಿ ಮುಂದುವರಿಯುವ ಬಯಕೆ ಇಟ್ಟುಕೊಂಡಿದ್ದಾರೆ.

ನಾಟ್ಯಕ್ಕೆ ಪೂರಕವಾಗಿ ಯೋಗವನ್ನೂ ಕಲಿತಿರುವ ಅಯನಾ ಪೆರ್ಲ ಅವರ ಮುದ್ರೆಗಳಲ್ಲಿನ ಸ್ವತ್ಛತೆ, ಅಂಗಶುದ್ಧಿ, ಭಾವ ಪರಿ ಪೂರ್ಣತೆ, ಅಡವುಗಳಲ್ಲಿನ ಖಚಿತತೆ ಮತ್ತು ನಿಲುವು ಹಾಗೂ ಭಂಗಿಗಳಲ್ಲಿನ ಆಕರ್ಷಕತೆ – ಇವುಗಳೆಲ್ಲ ಈ ಪ್ರದರ್ಶನದ ಮೂಲಕ ಅನಾವರಣಗೊಂಡವು. ಅಯನಾ ಅವರಲ್ಲಿರುವ ಸ್ಪಷ್ಟವಾದ ತಾಳಜ್ಞಾನವು ಪ್ರದರ್ಶನದುದ್ದಕ್ಕೂ ಎದ್ದು ಕಾಣುತ್ತಿತ್ತು.

ಆರಂಭದ “ಪುಷ್ಪಾಂಜಲಿ’ ಭಿನ್ನ ರಂಗಾಕ್ರಮಣ ದೊಂದಿಗೆ ಆರಂಭಗೊಂಡುದಲ್ಲದೆ, ಅನಂತರ ಅಭಿನಯಿ ಸಲ್ಪಟ್ಟ ಕಾಳಿದಾಸ ಕವಿಯ “ಶ್ಯಾಮಲಾ ದಂಡಕ ಸ್ತೋತ್ರ’ದ ಬಗೆಗಿನ ಅಭಿನಯ ಭಾವಪ್ರಧಾನವಾಗಿ ಮೂಡಿಬಂತು. ಬಳಿಕ ಅಭಿನೀತವಾದ ತಾಳಮಾಲಿಕೆಯಲ್ಲಿದ್ದ “ಪಂಚಭೂತ ಶಂಭೋ’ ಎಲ್ಲ ರೀತಿಯಿಂದಲೂ ಇಡೀ ಪ್ರದರ್ಶನದಲ್ಲಿ ಸುಂದರವಾಗಿ ಮೂಡಿಬಂದ ಭಾಗ. ಬಳಿಕ ವಿಶಿಷ್ಟವಾಗಿ ಅಭಿನಯಿಸಲ್ಪಟ್ಟ “ಪದವರ್ಣ’ ಸ್ಮರಣಾರ್ಹವಾಗಿತ್ತು. ಇದರಲ್ಲಿನ ನೃತ್ತಭಾಗಗಳು ಸ್ಪಷ್ಟವಾಗಿ ಅಭಿನಯಿಸಲ್ಪಟ್ಟವು.

“ಕಾಳೀಕೌತ್ವಂ’ನಲ್ಲಿ ಲಯಕರ್ತ ಶಿವ ಮತ್ತು ನಾಶದ ಸಂಕೇತವಾದ ಕಾಳಿಯ ಅಭಿನ್ನ ಕಲ್ಪನೆಯಲ್ಲಿ ನಟಿಸಿದ ನಾಟ್ಯಭಾಗ ಅತ್ಯಂತ ವಿಶೇಷವಾಗಿತ್ತು. ಯಮನ್‌ ಕಲ್ಯಾಣಿ ರಾಗದಲ್ಲಿದ್ದ “ರುಸಲೀ ರಾಧೆ’ ಎಂಬ ಮರಾಠೀ ಅಭಂಗಕ್ಕೆ ನೀಡಿದ ಅಭಿನಯದಲ್ಲಿ ಭಕ್ತಿ ಭಾವವು ಸುಂದರವಾಗಿ ಮೂಡಿ ಬಂದಿತು. ಈ  ಪ್ರದರ್ಶನದಲ್ಲಿ ಅಭಿನಯಿಸಲ್ಪಟ್ಟ ತಿಲ್ಲಾನವು ನಮ್ಮ ಕರಾವಳಿ ಭಾಗದಲ್ಲಿ ಅಪೂರ್ವವಾದು ದಾಗಿದ್ದು, ಪ್ರಶಂಸೆಗೆ ಪಾತ್ರವಾಯಿತು.

ಅಯನಾ ಅವರ ನೃತ್ಯಗುರು ವಿ| ಶಾರದಾಮಣಿ ಶೇಖರ್‌ ನಟುವಾಂಗದಲ್ಲಿ, ಸ್ವರಾಗ್‌ ಮಾಹೆ ಹಾಡುಗಾರಿಕೆಯಲ್ಲಿ, 
ವಿ| ರಾಜನ್‌ ಪಯ್ಯನ್ನೂರು ಮೃದಂಗದಲ್ಲಿ ಮತ್ತು ದೀಪಕ್‌ ಹೆಬ್ಟಾರ್‌ ಕೊಳಲಿನಲ್ಲಿ ಒಳ್ಳೆಯ ಪಕ್ಕವಾದ್ಯ ಸಹಕಾರ ನೀಡಿದರು. ನೆಳಲು ಬೆಳಕಿನ ಸುಂದರ ಸಂಯೋಜನೆಯು ಪ್ರದರ್ಶನವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿತು.

ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಡಾ| ಎಂ. ಮೋಹನ ಆಳ್ವ ಮತ್ತು ಎಂಎಲ್‌ಸಿ ಕ್ಯಾ| ಗಣೇಶ ಕಾರ್ಣಿಕ್‌ ಅವರು ಕಲಾವಿದೆಯ ಅಭಿನಯ ಕೌಶಲವನ್ನು ಶ್ಲಾ ಸಿದರಲ್ಲದೆ, ಪ್ರತಿಭಾವಂತ ಪ್ರದರ್ಶನ ಕಲಾವಿದೆಯಾಗಿ ಮೂಡಿಬರುತ್ತಿರುವ ಈಕೆಯ ಸಾಧನೆ ಹಾಗೂ ಪರಿಶ್ರಮವನ್ನು ಕೊಂಡಾಡಿದರು. ತುಂಬಿದ ಸಭಾಂಗಣವು ಇದೊಂದು ಯಶಸ್ವೀ ಪ್ರಯೋಗ ಎಂಬುದನ್ನು ತೋರಿಸಿಕೊಟ್ಟಿತು.                            

ಕೆ. ಶೈಲಾಕುಮಾರಿ
ಚಿತ್ರಗಳು : ಯಜ್ಞ ಮಂಗಳೂರು

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.