ಶತಮಾನ ಹಿಂದಿನ ಪರಂಪರೆ ನೆನಪಿಸಿದ ರಂಗ ಪ್ರವೇಶ


Team Udayavani, Feb 14, 2020, 4:03 AM IST

shatamana-1

ಇತ್ತೀಚೆಗೆ ರಂಗಪ್ರವೇಶ ಕಾರ್ಯಕ್ರಮವೊಂದು ತುಂಬ ವಿಶಿಷ್ಟವಾಗಿ ಜರಗಿತು. ಸನಾತನ ನಾಟ್ಯಾಲಯದ ನೃತ್ಯಗುರು ವಿ| ಶಾರದಾಮಣಿ ಶೇಖರ್‌, ವಿ| ಶ್ರೀಲತಾ ನಾಗರಾಜರವರ ಶಿಷ್ಯೆ ವಿ|ಕು| ವಾಣಿಶ್ರೀ ಅವರ ರಂಗಪ್ರವೇಶವು ಎರಡು ಹಂತಗಳಲ್ಲಿ ಬಹು ಸೊಗಸಾಗಿ ಜರಗಿತು.

ಮೊದಲ ಹಂತದಲ್ಲಿ – ಪಾರಂಪರಿಕ ದೇವಾಲಯ ರಂಗ ಪ್ರವೇಶ. ಇದು ಭರತನಾಟ್ಯ ಇತಿಹಾಸದಲ್ಲಿ ಬಹುಶಃ ನೂರು ವರ್ಷಗಳ ಹಿಂದೆ ಇದ್ದ ರಂಗಪ್ರವೇಶ ವಿಧಾನ. ಈಗ ಇದು ಪುನರುಜ್ಜೀವನ ಪಡೆದು ಇತಿಹಾಸ ನಿರ್ಮಿಸಿತು.

ಕಂಕನಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈದಿಕ ವಿಧಾನಪೂರ್ವಕ ನಡೆದ ರಂಗಪ್ರವೇಶದಲ್ಲಿ ನೂಪುರ ಪೂಜೆ, ದಿಕಾ³ಲ ವಂದನೆ, ಗಣೇಶಸ್ತುತಿ, ನಟರಾಜ ಸ್ತುತಿ, ದೇವಾತಾರ್ಚನೆಗಳು ಎರಡು ಹಂತಗಳಲ್ಲಿ ದೇವಾಲಯದ ಒಳಸುತ್ತಿನಲ್ಲಿ, ಹೊರಾಂಗಣದಲ್ಲಿ ಜರಗಿದವು.

ಎರಡನೆಯ ಹಂತದಲ್ಲಿ ಫೆ.2ರಂದು ಮಂಗಳೂರು ಪುರಭವನದಲ್ಲಿ ಜರಗಿದ ನೃತ್ಯೋಪಾಸನದಲ್ಲಿ ವಾಣಿಶ್ರೀ ಅವರು ಓರ್ವ ಉತ್ತಮ ಭವಿಷ್ಯವಿರುವ ಸಮರ್ಥ ಕಲಾವಿದೆ ಎಂದು ರಂಗಪ್ರವೇಶವನ್ನು ಸಾರಿದರು. ಸನಾತನ ನಾಟ್ಯಾಲಯದಲ್ಲಿ ಹದಿನೈದು ವರ್ಷಗಳಿಂದ ನೃತ್ಯಾಭ್ಯಾಸ ಮಾಡಿದ ಈ ಕಲಾವಿದೆಯ ಮತ್ತು ಗುರುಗಳ ಶ್ರಮಕ್ಕೆ ಸಾರ್ಥಕ್ಯವನ್ನು ತಂದಿತ್ತರು.

ಗಣೇಶವಂದನೆ, ನಟರಾಜನಮನ ಶ್ಲೋಕಗಳ ಪುಷ್ಪಾಂಜಲಿ ಪ್ರಸ್ತುತಿ ಪರಿಷ್ಕೃತವಾಗಿತ್ತು. ಜತಿಸ್ವರದಲ್ಲಿ ಸಮ ವಿಷಮ ನರ್ತನ, ಅಡವುಗಳ ವೈವಿಧ್ಯ, ಹದವಾಗಿ ನಿರೂಪಿತವಾಯಿತು.ಮುಂದಿನ ಮುರುಗನ್‌ ಶಬ್ಬಂನಲ್ಲಿ ಷಣ್ಮುಖ ಪರವಾಗಿ ನಾಯಕಿಯು ಗೈದ ವರ್ಣನೆ, ಪ್ರೀತಿ, ಆರ್ತತೆಗಳು ಮತ್ತು ಕೊನೆಗೆ ಬರುವ ವಳ್ಳಿ ಕಲ್ಯಾಣದ ವಿನೋದ ಮಿಶ್ರಿತ ಶೃಂಗಾರ ಇವುಗಳು ಸುಂದರ ಸಂಚಾರಿಗಳಾಗಿ ಪ್ರಸ್ತುತವಾದವು. ಶಬ್ಬಂ ವಿಭಾಗವು ನಿರೀಕ್ಷೆಗೆ ತಕ್ಕಂತೆ ಸಶಕ್ತ ಶಬ್ದವಾಯಿತು.

ಲಾಲ್‌ಗ‌ುಡಿ ಜಯರಾಮನ್‌ ಅವರ ಶ್ರೀ ಕೃಷ್ಣ ನ ಕುರಿತಾದ ಪದವರ್ಣ ಕೃತಿಯಲ್ಲಿ ಕಲಾವಿದೆಯ ಸರ್ವಾಂಗ ನೃತ್ಯ-ನೃತ್ತ-ನಾಟ್ಯ ಪ್ರತಿಭೆ ಸುಂದರವಾಗಿ ಪ್ರಕಟವಾಯಿತು. ಕಲಾವಿದನಿಗೆ ಪಂಥಾಹಾ³ನದಂತಿರುವ ವಿಭಾಗ ಮತ್ತು ಈ ಕೃತಿಯಲ್ಲಿ ವಿದುಷಿ ವಾಣಿಶ್ರೀಯ ನೃತ್ಯ ಸಾಮರ್ಥ್ಯದ ಪ್ರೌಢವಾದ ಪರಿಣತಿ ಚೆನ್ನಾಗಿ ಪ್ರಕಾಶಕ್ಕೆ ಬಂದಿತು. 45 ನಿಮಿಷಗಳ ಈ ಸುಂದರ ನೃತ್ಯದಲ್ಲಿ ಅಡವುಗಳ ಖಚಿತ ನೈಪುಣ್ಯ, ವಿವಿಧ ಭಾವಗಳ ಚಲನೆ, ಸ್ಥಿರಭಂಗಿ, ನೋಟದ ಅಭಿವ್ಯಕ್ತಿ, ಸ್ಥಾಯಿ-ಸಂಚಾರಿ ಮತ್ತು ಪರಿವರ್ತನೆಗಳ ವಿನ್ಯಾಸಗಳು ಶ್ರೀಕೃಷ್ಣನ ಜೀವನದ ವಿವಿಧ ಮುಖಗಳ ನೃತ್ಯ ರೂಪೀಕರಣ ಉನ್ನತವಾದ ಮಟ್ಟದಲ್ಲಿತ್ತು. ಲಯ, ಅಂಗಶುದ್ಧಿ ಮತ್ತು ಗಾಂಭೀರ್ಯದ ನಿಲುವುಗಳು ಮಾದರಿಯಾಗಿದ್ದುವು. ಕೊನೆಯ ಭಾಗದಲ್ಲಿ ದೇವರ ನಾಮ ಪುರಂದರದಾಸರ “ನಾನೇನು ಮಾಡಲಿ ರಂಗಯ್ಯ ಕೃತಿಯಲ್ಲಿ ಆರ್ತತೆ, ಸಂಚಾರಿಭಾವವಾಗಿ ಅಹಲೆÂ, ಕುಚೇಲ ಮುಂತಾದ ಕತೆಗಳ ಸ್ಪರ್ಶ ಚಂದವಾಗಿತ್ತು. ಮಧುರೈ ಕೃಷ್ಣನ್‌ ಅವರ ತಿಲ್ಲಾನದೊಂದಿಗೆ ಕೊನೆಗೊಂಡ ನೃತ್ಯೋಪಾಸನಂ ಮೇಲ್ಮಟ್ಟದ ಕಲಾನುಭಾವ ನೀಡಿತು. ನಟ್ಟುವಾಂಗವನ್ನು ವಿ| ಶಾರದಾಮಣಿ ಶೇಖರ್‌ ನಡೆಸಿದರು. ಕು| ವಸುಧಾಶ್ರೀ ಕೋಳಿಕ್ಕಜೆ (ಹಾಡುಗಾರಿಕೆ) ವಿ| ರಾಜನ್‌ ಪಯ್ಯನೂರು (ಮೃದಂಗ), ಮಾ| ಅಭಿಷೇಕ್‌ (ಕೊಳಲು) ಇವರು ತುಂಬ ಹೊಂದಿಕೆಯಾಗಿ ರಾಗ, ಭಾವ ಮತ್ತು ನೃತ್ಯಾನುಕೂಲದ ನಾಜೂಕಾದ ಪ್ರಸ್ತುತಿಯಲ್ಲಿ ಉನ್ನತವಾದ ಒಂದು ಮಾದರಿ ಮಟ್ಟವನ್ನು ನೀಡಿ ನರ್ತನವು ಮೆರೆಯುವಂತೆ ಶಕ್ತಿ ನೀಡಿದ್ದು, ಸ್ಮರಣೀಯ ಅನುಭವವಾಗಿತ್ತು.

ವಿ| ರಾಜಶ್ರೀ ಶೆಣೈ, ಉಳ್ಳಾಲ

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.