ಮುಮ್ಮೇಳಕ್ಕೆ ಭಾವತುಂಬಿದ ಪರಂಪರೆಯ ಐವರು ಭಾಗವತರ ಹಿಮ್ಮೇಳ


Team Udayavani, Oct 11, 2019, 5:00 AM IST

u-5

ಯಕ್ಷಗಾನದ ಯಶಸ್ಸಿನಲ್ಲಿ ಹಿಮ್ಮೇಳ ಮುಮ್ಮೇಳ ಸಮಪಾಲು ಇರುತ್ತದೆ. ಯಾವ ಅಂಗ ಊನವಾದರೂ ಒಟ್ಟಂದದ ಪ್ರದರ್ಶನ ಕಳಪೆಯಾಗುತ್ತದೆ. ಹಿಮ್ಮೇಳ ಸಪ್ಪೆಯಾಗಿ ಮುಮ್ಮೇಳ ಗಟ್ಟಿಯಾದರೂ, ಮುಮ್ಮೇಳ ನೀರಸವಾಗಿ ಹಿಮ್ಮೇಳ ಮಾತ್ರ ಕಾಣಿಸಿದರೂ ಒಟ್ಟು ಕಾರ್ಯಕ್ರಮದ ಮೇಲೆ ಪ್ರಭಾವ ಬೀರುತ್ತದೆ.

ಭ್ರಾಮರಿ ಯಕ್ಷ ಮಿತ್ರರು ಆಯೋಜಿಸಿದ್ದ ಯಕ್ಷಗಾನದಲ್ಲಿ ಮುಮ್ಮೇಳ ಕಲಾವಿದರು ಸಮರ್ಥವಾಗಿ, ಒಪ್ಪವಾಗಿ ನಿರ್ವಹಿಸಿ ಸೈ ಎನಿಸಿದ್ದಾರೆ. ಇದಕ್ಕೆ ಸಮರ್ಥವಾಗಿ ಸಾಥ್‌ ನೀಡಿದ್ದು ಪರಂಪರೆಯ ಹಿಮ್ಮೇಳ.

ಪರಂಪರೆಯ ಹಿಮ್ಮೇಳ
ಮನೋಜ್ಞವಾಗಿ ಪ್ರಸಂಗವನ್ನು ದಾಟಿಸಿ ಚಿತ್ತಭಿತ್ತಿಯಲ್ಲಿ ಅಚ್ಚಳಿಯದೆ ದಾಖಲಾದ್ದು ಹಿಮ್ಮೇಳ ಕಲಾವಿದರು. ಕಲಾಸಕ್ತರ ಸ್ಮತಿಪಟಲದಲ್ಲಿ ಋತುಗಾನ ಮೂಡಿಸಿದ ಭಾಗವತರೆಲ್ಲರೂ ಈ ಕಾರ್ಯಕ್ರಮದ ಮೇರು ಪಂಕ್ತಿಯ ಗೌರವಾದರಕ್ಕೆ ಅರ್ಹರು. ಕಲಬೆರಕೆ ಇಲ್ಲದ, ಸಿನಿಮಾ, ಆಧುನಿಕ ಗಾಯನದ ಸೋಂಕಿಲ್ಲದ ಹಾಡುಗಾರಿಕೆಯಾಗಿತ್ತು ದಿನೇಶ ಅಮ್ಮಣ್ಣಾಯ, ಪ್ರಸಾದ ಬಲಿಪ, ಪಟ್ಲಸತೀಶ್‌ ಶೆಟ್ಟಿ, ಹೊಸಮೂಲೆ ಗಣೇಶ ಭಟ್‌ ಹಾಗೂ ರವಿಚಂದ್ರ ಕನ್ನಡಿಕಟ್ಟೆಯವರ ಭಾಗವತಿಕೆ.

ಚೂಡಾಮಣಿ ಪ್ರಸಂಗದ ಪ್ರದರ್ಶನದ ದೇಖರೇಖೀ ಹೀಗೇ ಇರಬೇಕೆಂದು ಇದಮಿತ್ಥಂ ಎಂದು ಲಕ್ಷ್ಮಣರೇಖೆ ಹಾಕಿಕೊಟ್ಟು ಹಾಡುಗಾರಿಕೆಯ ಛಾಪು ಏರಿಸಿದವರು ಅಮ್ಮಣ್ಣಾಯರು. ಭಾವಪೂರ್ಣ ಪ್ರಸ್ತುತಿಯಲ್ಲಿ ಗಾಯಕ ಹಾಗೂ ಮುಮ್ಮೇಳ ಕಲಾವಿದರ ಭಾವುಕ ಸಂವಹನ ಪ್ರೇಕ್ಷಕರನ್ನು ತಲುಪಲು ಕಷ್ಟವೇ ಆಗಲಿಲ್ಲ. ಸುರಳೀತವಾಗಿ ಪ್ರೇಕ್ಷಕರ ಮನದುಯ್ನಾಲೆಯಲ್ಲಿ ಗಾನದೇವಿಯನ್ನು ಕೂರಿಸಿ ಆರಾಧಿ ಸಿ ಜೀಕಿದ ಅವರು ಒಂದು ಭಾವಪೂರ್ಣ ಸನ್ನಿವೇಶದ ಚಿತ್ರಣವನ್ನು ಕಡೆದಿಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟರು. ಕಲಾಭಿಜ್ಞ ಪ್ರೇಕ್ಷಕರಿಗೆ ಸ್ವೂಪಜ್ಞ ಕಲಾವಿದ ಸ್ಪಂದಿಸಿದ ರೀತಿ ವ್ಯಕ್ತವಾಗುತ್ತಿತ್ತು.

ಮುಂಜಾನೆ‌ವರೆಗೆ ಯಕ್ಷಗಾನ ವೀಕ್ಷಿಸುವಂತೆ ಮಾಡಿದ್ದೇ ಪ್ರದರ್ಶನದ ಇಂತಹ ಆರಂಭ. ಅಮ್ಮಣ್ಣಾಯ ಶೈಲಿಯಲ್ಲಿ ವಿಭಿನ್ನ ರಾಗಗಳ ಬಳಕೆ ಮೂಲಕ ರಾವಣನ ಶೃಂಗಾರ, ಹನೂಮಂತನ ಅಚ್ಚರಿ, ಭಕ್ತಿ, ಸೀತೆಯ ದುಃಖ, ಕುತೂಹಲ, ಕರುಣ, ಸಂತೋಷ ರಸೋತ್ಪತ್ತಿಗೆ ಕಾರಣರಾದರು. ಇದಕ್ಕೆ ಪೂರಕವಾಗಿ ಗುರುಪ್ರಸಾದ್‌ ಬೊಳಿಂಜಡ್ಕ , ಚೈತನ್ಯಕೃಷ್ಣ ಪದ್ಯಾಣರ ಮದ್ದಳೆ ಚೆಂಡೆ. ಹಿತವಾದ ಹದವಾದ ನುಡಿತ. ಸಂಗೀತ ನಿಬದ್ಧವಾದ ಅಮ್ಮಣ್ಣಾಯರ ಹಾಡುಗಾರಿಕೆ ಎಷ್ಟು ಬೇಡುತ್ತದೋ ಅಷ್ಟೇ ಕೈ ಚಳಕ.

ದ್ವಂದ್ವ ಹಾಡುಗಾರಿಕೆ
ರಾಮಾಂಜನೇಯದಲ್ಲಿ ಪಟ್ಲ- ಕನ್ನಡಿಕಟ್ಟೆಯವರು. ಯುವ ಭಾಗವತರೆಂಬ ನೆಗಳೆ¤ ಹೊಂದಿ ಪೌರಾಣಿಕ (ಕವಿ ಕಲ್ಪನೆಯ ಪ್ರಸಂಗ) ಕಥಾನಕವನ್ನು ಹಳೆಕಾಲದ ಭಾಗವತಿಕೆಯಲ್ಲಿ ನೀಡಿದ್ದು ರಸದೌತಣ. ಕನ್ನಡಿಕಟ್ಟೆಯವರು ಮಾಂಬಾಡಿ ಶೈಲಿಯಲ್ಲಿ ಹಾಡುವ ಮೂಲಕ ಪದ್ಯಾಣರ ಹಾಡುಗಳ ನೆನಪನ್ನು ಮೆಲುಕು ಹಾಕುವಂತೆ ಮಾಡಿದರು. ಅಗರಿ ಶೆ„ಲಿಯಲ್ಲೂ ನಾಲ್ಕು ಹಾಡುಗಳಿದ್ದವು. ಒಂದಕ್ಕಿಂತ ಒಂದರ ಗಾನಪ್ರಸ್ತಾವನೆ ಅನನ್ಯ.

ಪರಂಪರೆ
ರುಚಿಶುದ್ಧಿಯುಳ್ಳ ಪ್ರೇಕ್ಷಕರಿಗೆ ಪರಂಪರೆಯ ಸೊಗಸನ್ನು ಉಣಬಡಿಸಿದರೆ ಅವರು ನಿರಾಕರಿಸುವುದಿಲ್ಲ,ಪುರಸ್ಕರಿಸುತ್ತಾರೆ ಎನ್ನುವುದಕ್ಕೆ ಆಗಾಗ ಕೇಳಿ ಬಂದ ಪ್ರಚಂಡ ಕರತಾಡನವೇ ಸಾಕ್ಷಿ. ಅಗರಿ ಶೆ„ಲಿಯ ಬಳಕೆ ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು, ಅಗರಿ ಶೈಲಿ ಆರಂಭಿಸಿದ ಕೂಡಲೇ ಪ್ರೇಕ್ಷಕರಿಗೆ ಇದು ಅಗರಿ ಶೈಲಿ ಎಂದು ನಿಕ್ಕಿಯಾಗಿ ಅರಿವಾಗುತ್ತಿರುವುದು ಹೊಸ ಮನ್ವಂತರದ ಉದಯದ ಲಕ್ಷಣ. ಪರಂಪರೆಯನ್ನು ಕಲಾರಸಿಕರು ಕೈ ಬಿಡುವುದಿಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳಬಹುದಾದ ಬದಲಾವಣೆ ಇದು. ಪ್ರಶಾಂತ್‌ ವಗೆನಾಡು ಚೆಂಡೆ, ಕೃಷ್ಣ ಪ್ರಕಾಶ ಉಳಿತ್ತಾಯರ ಮದ್ದಳೆ. ಪಟ್ಲ, ಕನ್ನಡಿಕಟ್ಟೆಯವರಿಗೆ ಅದ್ಭುತ ಜೊತೆಗಾರಿಕೆ ಹಾಡಿಗೆ ಉಳಿತ್ತಾಯರ ಅಪರೂಪದ ನುಡಿಸಾಣಿಕೆ, ವಿರಳ ನುಡಿತ ಬಿಡಿತ ಮುಕ್ತಾಯಗಳು ಮದ್ದಳೆ ಕಡೆಗೊಂದು ಮೆಚ್ಚುಗೆಯ ನೋಟ ಬೀರುವಂತೆ ಮಾಡಿತು. ರೂಪಕ, ತ್ರಿವುಡೆಯ ನುಡಿತಗಳು ಸ್ವಲ್ಪ ಕುತೂಹಲಭರಿತವಾಗಿದ್ದವು.

ಮರೆಯದ ಶೈಲಿ
ದ್ರೌಪದಿ ಪ್ರತಾಪ ಪ್ರಸಂಗದಲ್ಲಿ ಬಲಿಪರು- ಹೊಸಮೂಲೆಯವರು ಧೂಳೆಬ್ಬಿಸಿದರು. ಏರು ಶ್ರುತಿಯ ಹಾಡುಗಾರಿಕೆ. ಪರಂಪರೆಯ ಶೈಲಿ. ಅವಳಿ ಚೆಂಡೆಯಲ್ಲಿ ಲಕ್ಷ್ಮೀ ನಾರಾಯಣ ಅಡೂರು , ಮುರಾರಿ ಕಡಂಬಳಿತ್ತಾಯರು. ಗಣೇಶ ನೆಕ್ಕರೆಮೂಲೆಯವರ ಮದ್ದಳೆಯ ನುಡಿತ. ಈಗಿನ ಯುವಜನರಲ್ಲೂ, ಹೊಸತನದ ಹಾಡುಗಳ ನಡುವೆಯೂ, ಸಂಗೀತದ ಆಲಾಪದೆಡೆಯಲ್ಲೂ ಬಲಿಪ ಶೆ„ಲಿ ಕಳೆಗುಂದದೆ ಇರುವಲ್ಲಿ ಪ್ರಸಾದ್‌ ಬಲಿಪರ ಕೊಡುಗೆ ದೊಡ್ಡದು. ರಾಜೇಂದ್ರಕೃಷ್ಣರು ಎರಡೂ ಪ್ರಸಂಗದಲ್ಲಿ ಚಕ್ರತಾಳ ಕಲಾವಿದರಾಗಿದ್ದರು.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.