ರಸದೌತಣವಾದ ತ್ರಿದಿನ ಯಕ್ಷ ವೈಭವ

ಶ್ರೀ ದುರ್ಗಾಪರಮೆಶ್ವರೀ ಯಕ್ಷಗಾನ ಕಲಾ ಮಂಡಳಿ ಕೊಲ್ಲಂಗಾನ ಪ್ರಸ್ತುತಿ

Team Udayavani, Jun 28, 2019, 5:00 AM IST

10

ರಂಭೆ ಪಾತ್ರ, ಭಾಷಾ ಸಂಸ್ಕೃತಿ ಯಾವ ರೀತಿಯ ಪಾತ್ರಕ್ಕೂ ಬೆಲೆ ತರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು. ಶ್ವೇತಕುಮಾರನು ಆಕೆಯೊಂದಿಗೆ ದಿನವೊಂದರ ಸುಖಕ್ಕೆ ಬರುವ ಸನ್ನಿವೇಶವಾದರೂ ಅಲೆವೂರಾಯರ ಗಂಭೀರ, ಸ್ಪಷ್ಟ ಮಾತು ಕಿಂಚಿತ್ತೂ ಋಣಾತ್ಮಕ ಆಲೋಚನೆಗೆ ಆಸ್ಪದ ಕೊಡದೇ ಶಿವ ಪಂಚಾಕ್ಷರಿಯ ಪಠಣದ ಅವಶ್ಯಕತೆಯನ್ನು ಹೇಳಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆಯಲ್ಲಿ ತ್ರಿದಿನ ಯಕ್ಷ ವೈಭವದ ವೈತರಣಿಯು ಅಡೆತಡೆಯಿಲ್ಲದೇ ಹರಿದು ಯಕ್ಷರಸಿಕರ ಮನಸ್ಸಿಗೆ ತಂಪೆರೆಯಿತು. ರಾಜ ಅತಿಕಾಯ-ಇಂದ್ರಜಿತು ಮತ್ತು ಗಜೇಂದ್ರ ಮೋಕ್ಷ ಹಾಗೂ ಕೊನೆಯ ದಿನ ಶ್ವೇತಕುಮಾರ ಚರಿತ್ರೆ ಪ್ರಸಂಗಗಳು ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನಕ್ಕೂ, ಪ್ರತಿಭೆಯನ್ನು ಹರಿತಗೊಳಿಸುವುದಕ್ಕೂ ಅವಕಾಶ ನೀಡಿತು.

ಶ್ರೀ ದುರ್ಗಾಪರಮೆಶ್ವರೀ ಯಕ್ಷಗಾನ ಕಲಾ ಮಂಡಳಿ ಕೊಲ್ಲಂಗಾನ ಕಾಸರಗೋಡು ಅವರು ಪ್ರದರ್ಶಿಸಿದ ಶ್ವೇತಕುಮಾರ ಚರಿತ್ರೆ, ಕುಮಾರಿ ಹೇಮಸ್ವಾತಿ ಕುರಿಯಜೆಯವರ ಭಾಗವತಿಕೆಯೊಂದಿಗೆ ಪ್ರಾರಂಭಗೊಂಡಿತು. ಈ ಅರಳು ಪ್ರತಿಭೆಯ ಭಾವಗತಿ ಯಕ್ಷಲೋಕದಲ್ಲಿ ಮುಂದೆ ತನ್ನ ಛಾಪನ್ನು ಭದ್ರವಾಗಿ ಮೂಡಿಸುವತ್ತ ಹೆಜ್ಜೆ ಇಟ್ಟಂತಿತ್ತು. ತಾಳಜ್ಞಾನ ಹಾಗೂ ಎಲ್ಲೂ ಬತ್ತದ ಸ್ವರದಿಂದ ಭಾಗವತಿಕೆ ಮನಸೆಳೆಯಿತು.

ತನ್ನ ತಂದೆಯ ಉತ್ತರಾಧಿಕಾರಿಯಾಗಿ ರಾಜ್ಯಭಾರ ಮಾಡುತ್ತಿದ್ದ ಶ್ವೇತಕುಮಾರ ಬೇಸರ ಕಳೆಯಲು ವನ ವಿಹಾರಕ್ಕೆ ಹೊರಟಾಗ, (ಬ್ರಹ್ಮನ) ಪುತ್ರಿಯಾದ ತ್ತೈಲೋಕ ಸುಂದರಿ ಭೂಮಿಗಿಳಿದು ಅದೇ ವನ ಸಂಚಾರಕ್ಕೆಂದು ಬಂದವಳ ಭೇಟಿಯಾಗುತ್ತದೆ. ಆಕೆಯ ಅದ್ವಿತೀಯ ರೂಪಕ್ಕೆ ಮರುಳಾಗುವಲ್ಲಿಂದ ಶ್ವೇತಕುಮಾರ ಚರಿತ್ರೆಯ ಕಥೆ ಪ್ರಾರಂಭವಾಗುತ್ತದೆ. ಶ್ವೇತಕುಮಾರನಾಗಿ ಉಬರಡ್ಕ ಉಮೇಶ ಶೆಟ್ಟಿ ಹಾಗೂ ತ್ತೈಲೋಕ ಸುಂದರಿಯಾಗಿ ಸಂಜಯ ಕುಮಾರ್‌ ಶೆಟ್ಟಿ ಗೋಣಿಬೀಡು ಪಾತ್ರ ನಿರ್ವಹಿಸಿದರು. ವರ್ತಮಾನಕ್ಕೆ ಥ‌ಳುಕು ಹಾಕಿದ ಅರ್ಥಗಾರಿಕೆಯಿಂದ ಸಮಾಜದಲ್ಲಾಗುವ ತಪ್ಪುಗಳಿಗೆ ಬುದ್ಧಿ ಹೇಳುವಂತೆ ಚುರುಕು ಮುಟ್ಟಿಸುವ ಮಾತುಗಳಲ್ಲಿ ಇಬ್ಬರೂ ಸ್ಪರ್ಧಾತ್ಮಕವಾಗಿದ್ದರು. ಶ್ವೇತಕುಮಾರನ ಪದ್ಯಗಳಿಗೆ ಮತ್ತು ಮಾತುಗಳಿಗೆ ಅರ್ಥ ಬರುವಂತೆ ತ್ತೈಲೋಕ ಸುಂದರಿಯು ರೂಪ, ಭಾವಗಳಲ್ಲಿ ಪ್ರೇಕ್ಷಕರ ಮನ ಮೆಚ್ಚಿಸುವ ಚಲನವಲನಗಳು ಸೊಗಸಾಗಿದ್ದವು. ಮೇಳದ ಕಲಾವಿದರೂ, ಯಜಮಾನರೂ ಆದ ತಂತ್ರಿ ಗಣಾಧಿರಾಜ ಉಪಾಧ್ಯಾಯರ ಅಬ್ಬರದ ಪ್ರವೇಶದೊಂದಿಗೆ ದುರ್ಜಯಾಸುರ ಮೈನವಿರೇಳಿಸಿದ ಪಾತ್ರ ನಿರ್ವಹಣೆ, ಸುಭಾಶ್ಚಂದ್ರ ರೈ ತೋಟ ಇವರು ಲೋಹಿತನೇತ್ರನಾಗಿ, ಪ್ರವೀಣ ನಾರ್ಣಕಜೆ ಶಿವೆಯಾಗಿ ಪಾತ್ರಗಳಿಗೆ ಜೀವಂತಿಕೆ ನೀಡಿದರು, ಶಿವೆಯ ಮಾತು ಮತ್ತು ಅಭಿನಯ ನಿಜ ಭಾವಾಭಿವ್ಯಕ್ತವೆನಿಸಿತು. ಓರ್ವ ಘಾಸಿಗೊಂಡ ಹೆಣ್ಣಿನ ನೋವು, ತಿರಸ್ಕಾರಗಳನ್ನು ಮನೋಜ್ಞವಾಗಿ ಅಭಿನಯಿಸಿದ್ದು ಶಿವೆಯ ಪ್ಲಸ್‌ ಪಾಯಿಂಟ್‌.

ಶ್ವೇತ ಕುಮಾರನ ಮಂತ್ರಿಯ ಮಗ ಸಿತಕೇತನಾಗಿ ಲಕ್ಷ್ಮಣ ಆಚಾರ್ಯ ಎಡಮಂಗಲ ಅವರದ್ದು ಚುರುಕಿನ ಕುಣಿತ ಮತ್ತು ನಿರರ್ಗಳ ವಾಗ್ಝರಿ. ಶ್ವೇತಕುಮಾರನು ಪ್ರೇತನಾದವನು ತನ್ನ ಸತಿಯ ನೆನೆಯುತ್ತಿದ್ದನು ಎಂಬ ಭಾಗವತ ಜಯರಾಮ ಅಡೂರು ಅವರ ಸುಮಧುರ ಕಂಠದ ಭಾಗವತಿಕೆಯಲ್ಲಿ ಶ್ವೇತಕುಮಾರನ ದುರಂತ ಅಂತ್ಯಕ್ಕೆ ಮರುಕವೂ, ಪ್ರೇತದ ಪಾತ್ರಕ್ಕೆ ಜೀವ ತುಂಬಿದ ರಘುನಾಥ ರೈ ಅಂಕತಡ್ಕ ಅವರ ಹಾಸ್ಯಕ್ಕೆ ನಗುವುದು ಹೀಗೆ ಭಾವ ಸಮ್ಮಿಶ್ರದಿಂದ ಕೂಡಿದ ಪ್ರೇಕ್ಷಕವರ್ಗ ಮುಂದಿನ ಕತೆಯನ್ನು ಆಸ್ವಾದಿಸಿತು.

ರವಿ ಅಲೆವೂರಾಯ ಅವರ ರಂಭೆ ಪಾತ್ರ, ಒಂದು ಭಾಷಾ ಸಂಸ್ಕೃತಿ ಯಾವ ರೀತಿಯ ಪಾತ್ರಕ್ಕೂ ಬೆಲೆ ತರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು. ಈ ಪಾತ್ರವು ಜನರಲ್ಲಿ ಮೂಡಿಸುವ ಕಲ್ಪನೆಯೇ ಬೇರೆ. ಶ್ವೇತಕುಮಾರನು ಆಕೆಯೊಂದಿಗೆ ದಿನವೊಂದರ ಸುಖಕ್ಕೆ ಬರುವ ಸನ್ನಿವೇಶವಾದರೂ ರವಿ ಅಲೆವೂರಾಯರ ಗಂಭೀರ, ಸ್ಪಷ್ಟ ಮಾತು ಕಿಂಚಿತ್ತೂ ಋಣಾತ್ಮಕ ಆಲೋಚನೆಗೆ ಆಸ್ಪದ ಕೊಡದೇ ಮಾತುಕತೆಯ ಹಿಂದಿನ ಧಾರ್ಮಿಕ ಸತ್ಯವನ್ನು ತೆರೆದಿಟ್ಟು ಶಿವ ಪಂಚಾಕ್ಷರಿಯ ಪಠಣದ ಅವಶ್ಯಕತೆಯನ್ನು ಹೇಳುತ್ತಾ ಪ್ರೇಕ್ಷಕರ ಭಾವನೆಗಳನ್ನು ತಮ್ಮ ಮಾತಿನಲ್ಲಿ ನಿಯಂತ್ರಿಸಿ ಪಾತ್ರದ ಪ್ರಾಮುಖ್ಯವನ್ನು ತೋರಿಸಿಕೊಟ್ಟರು.ಪ್ರೇತವು ಮತ್ತೆ ಶ್ವೇತಕುಮಾರನಾಗಿ ದುರ್ಜಯನ ವಧೆಯೊಂದಿಗೆ ವಿಧಿ ಲಿಖೀತದಂತೆ ದುಷ್ಟ ಸಂಹಾರಕ್ಕಾಗಿ ಎನ್ನುವಲ್ಲಿಗೆ ಕತೆ ಮುಕ್ತಾಯಗೊಂಡಿತು. ಚಂಡೆವಾದಕರಾಗಿ ಕುಮಾರ ಸುಬ್ರಹ್ಮಣ್ಯ, ಎರಡನೇ ದುರ್ಜಯನಾಗಿ ಈಶ್ವರ, ಚಿತ್ರಗುಪ್ತನಾಗಿ ಸುಂದರ ಇಂದ್ರಾಜೆ ಪಾತ್ರ ನಿರ್ವಹಿಸಿದರು. ಪುಟಾಣಿಗಳಾದ ಶ್ರೀಮಾ ಸುಳ್ಯ, ಮಾನ್ಸಿ ಸುರೇಶ್‌ ರೈ, ಅನ್ವಿತ್‌ ಗೋಪ ಚುರುಕಿನ ನಾಟ್ಯ ಪ್ರದರ್ಶಿಸಿ ಪುಳಕಗೊಳಿಸಿದರು.

ವಾರಿಜಾಕ್ಷಿ ಯಶ್‌. ಡಮ್ಮಡ್ಕ

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.