ಸಪ್ತವರ್ಣ, ಸಪ್ತಸ್ವರದಿಂದ ರಂಜಿಸಿದ ಯಕ್ಷಸಪ್ತಾಹ


Team Udayavani, May 18, 2018, 6:00 AM IST

k-1.jpg

ಹೊರಗೆಲ್ಲ ಕತ್ತಲು, ರಂಗದಲ್ಲಿ ಮಾತ್ರ ಬೆಳಕು. ಆ ಮೂಲಕ ಅಂತರಂಗದಲ್ಲೂ ಬೆಳಕು ಮೂಡಿಸುವ ಅದ್ಭುತ ಶಕ್ತಿ ಇರುವುದು ಪ್ರದರ್ಶನ ಕಲೆಗಳಿಗೆ ಮಾತ್ರ. ಅದರಲ್ಲೂ ಕರಾವಳಿಯ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನವಂತೂ ತನ್ನ ಪಾರಂಪರಿಕ ಸೊಗಡು, ಭಾಷಾ ಶುದ್ಧಿ, ಹಾಡು – ಕುಣಿತ ಹಾಗೂ ಮಾತಿನ ಮೂಲಕ ರಮ್ಯಾದ್ಭುತ ಫ್ಯಾಂಟಸಿಯನ್ನೇ ಸೃಷ್ಟಿಸುತ್ತದೆ. ರಂಗದಲ್ಲಿ ವಿಜೃಂಭಿಸುವ ಪಾತ್ರಗಳು ನಮ್ಮನ್ನು ಕ್ಷಣಮಾತ್ರದಲ್ಲಿ ಸೆಳೆದು ಕಥೆಯೊಳಗೆ ಒಯ್ದು ಬಿಡುತ್ತವೆ.

ಕಾಲಮಿತಿ ಯಕ್ಷಗಾನದಲ್ಲಿ ರಾತ್ರಿ 7ರಿಂದ 12ರ ವರೆಗೆ ಮಾತ್ರ ಪ್ರದರ್ಶನ. ಪೂರ್ವರಂಗವಂತೂ ಮಾಯವೇ ಆಯಿತು. ನೇರವಾಗಿ ಪ್ರಸಂಗ ಪ್ರವೇಶ, ಕೆಲವು ಪಾತ್ರ, ಪದ್ಯಗಳನ್ನು ಕೈಬಿಟ್ಟು, ಕಥೆಯ ಪ್ರಧಾನ ಭಾಗ ಮಾತ್ರ ಉಳಿಸಿಕೊಂಡು ಪ್ರಸಂಗಗಳನ್ನೂ ಕಿರಿದುಗೊಳಿಸಲಾಯಿತು. ಕಲಾವಿದರಿಗೂ ಅನುಕೂಲವೆನಿಸಿ ಇವು ಜನಪ್ರಿಯವಾದ ಮೇಲೆ ಧರ್ಮಸ್ಥಳ, ಹನುಮಗಿರಿ ಸಹಿತ ಹಲವು ಮೇಳಗಳು ಇದನ್ನೇ ಅಳವಡಿಸಿಕೊಂಡವು.

ರಾಜಾಂಗಣದಲ್ಲಿ ಕಲಾತಿಥ್ಯ
ಕಲಾ ಪ್ರದರ್ಶನಗಳಿಗೆ ಹೆಸರಾದ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಸ್ವಾಮೀಜಿ ಅವರ ಆಶ್ರಯದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ – ಮೇ 3ರಿಂದ 9ರ ವರೆಗೆ ಯಕ್ಷಗಾನ ಸಪ್ತಾಹ ಹಮ್ಮಿಕೊಂಡಿತ್ತು. ಏಳು ದಿನಗಳಲ್ಲಿ ಹನ್ನೊಂದು ಪ್ರಸಂಗಗಳನ್ನು ಪ್ರದರ್ಶಿಸಿ ಸೈ ಎನ್ನಿಸಿಕೊಂಡಿತು. ಮೇ 3ರಂದು ದಕ್ಷಾಧ್ವರ, ಗಿರಿಜಾ ಕಲ್ಯಾಣ, ಮೇ 4ರಂದು ಕಾಯಕಲ್ಪ, 5ರಂದು ಸೌದಾಸ ಚರಿತ್ರೆ, 6ರಂದು ದಮಯಂತಿ ಪುನಃ ಸ್ವಯಂವರ, ಅತಿಕಾಯ ಕಾಳಗ, 7ರಂದು ವಿದ್ಯುನ್ಮತಿ ಕಲ್ಯಾಣ, 8ರಂದು ಪಾರಿಜಾತ, ನರಕಾಸುರ ಹಾಗೂ ಮೈಂದ-ದ್ವಿವಿದ ಹಾಗೂ ಕೊನೆಯ ದಿನ ಪಾದಪ್ರತೀಕ್ಷಾ – ಎಲ್ಲ ಪ್ರದರ್ಶನಗಳಿಗೂ ರಾಜಾಂಗಣ ಕಿಕ್ಕಿರಿದಿತ್ತು. ಎರಡು, ಮೂರು ದಿನ ಮಳೆಯೂ ಸಂಗಾತಿಯಾಯಿತು.

ಹಿರಿಯರ – ಕಿರಿಯರ ಸಂಗಮ
ವಿಶೇಷವೆಂದರೆ, ಇವೆಲ್ಲವೂ ಪೌರಾಣಿಕ ಪ್ರಸಂಗಗಳು. ಕೆಲವಂತೂ ಅಪೂರ್ವ ಪ್ರದರ್ಶನಗಳು. ಪದ್ಯಾಣ ಗಣಪತಿ ಭಟ್ಟರು ಹಾಗೂ ರವಿಚಂದ್ರ ಕನ್ನಡಿಕಟ್ಟೆ ಅವರ ಸುಮಧುರ ಭಾಗವತಿಕೆಯಲ್ಲಿ ನೋಡಿರಿ ದ್ವಿಜರು ಪೋಪುದನು, ಕಾಮಿನಿ ನೀ ಯಾರೆ ಕೋಮಲೆ ಇತ್ಯಾದಿ ಹಾಡುಗಳು ಹೊಸ ಹೊಳಹನ್ನೇ ಸೂಸಿದವು. ಪದ್ಮನಾಭ ಉಪಾಧ್ಯಾಯ, ಪದ್ಯಾಣ ಶಂಕರನಾರಾಯಣ, ಚೈತನ್ಯಕೃಷ್ಣ ಹಾಗೂ ವಿನಯ ಕಡಬ ಅವರನ್ನೊಳಗೊಂಡ ನುರಿತ ಹಿಮ್ಮೇಳ ಪ್ರಧಾನ ಆಕರ್ಷಣೆಯಾಗಿತ್ತು.

ನೃತ್ಯ, ಆಭಿನಯದ ರಸದೌತಣ
ಹಿರಿಯರಾದ ಶಿವರಾಮ ಜೋಗಿ (ಭೃಗು ಮಹರ್ಷಿ, ಬಲರಾಮ ಇತ್ಯಾದಿ ಪಾತ್ರಗಳು) ಅವರಿಂದ ತೊಡಗಿ ಮುಮ್ಮೇಳ ಕಲಾವಿದರಂತೂ ಪೈಪೋಟಿಗೆ ಬಿದ್ದವರಂತೆ ಅಭಿನಯ ಚತುರತೆ ತೋರಿದರು. ಸುಬ್ರಾಯ ಹೊಳ್ಳ ಕಾಸರಗೋಡು- ಪೆರ್ಮುದೆ ಜಯಪ್ರಕಾಶ ಶೆಟ್ಟಿ ಅವರ ಜೋಡಿಯ ಅತಿ ವಿಶಿಷ್ಟ ಮೈಂದ – ದ್ವಿವಿದ, ರಕ್ಷಿತ್‌ ಶೆಟ್ಟಿ ಪಡ್ರೆ ಹಾಗೂ ಸಂಪಾಜೆ ದಿವಾಕರ ರೈ ಅವರ ರತಿ-ಮನ್ಮಥರ ಜೋಡಿಗೆ ಚಪ್ಪಾಳೆಗಳ ಸುರಿಮಳೆಯೇ ಆಯಿತು. ವೀರಭದ್ರ, ನರಕಾಸುರ, ದುಂದುಭಿ ಇತ್ಯಾದಿ ಬಣ್ಣದ ವೇಷಗಳಲ್ಲಿ ವಿಜೃಂಭಿಸಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್‌, ಈಶ್ವರ, ಕೃಷ್ಣ, ರಾಮನಾಗಿ ಮಾತಿನಲ್ಲೇ ಮೋಡಿ ಮಾಡಿದ ವಾಸುದೇವ ರಂಗಾಭಟ್‌, ಹಾಸ್ಯದ ಹೊನಲು ಹರಿಸಿದ ಬಂಟ್ವಾಳ ಜಯರಾಮ ಆಚಾರ್ಯ ಹಾಗೂ ಕಟೀಲು ಸೀತಾರಾಮ ಕುಮಾರ್‌, ಹೊಳ್ಳರ ದಕ್ಷ, ಮದಿರಾಕ್ಷನಾಗಿ ಕುಣಿದ ದಿವಾಕರ ರೈ, ಜಯಾನಂದ ಸಂಪಾಜೆ ಅವರ ದೇವೇಂದ್ರ, ಸಂತೋಷ ಹಿಲಿಯಾಣರ ಗಿರಿಜೆ, ಏಳಿ ಸಖೀಯರೆ ನೀರಕೇಳಿಗೈಯುವ ಎಂದು ಸಖೀಯರನ್ನು ಜಲಕ್ರೀಡೆಗೆ ಕರೆಯುವ ಸುಕನ್ಯೆ, ದಮಯಂತಿ, ದಾûಾಯಿಣಿ ಇತ್ಯಾದಿ ಪಾತ್ರಗಳಲ್ಲಿ ಪ್ರೇಕ್ಷಕರನ್ನೂ ಕುಣಿಸಿದ ರಕ್ಷಿತ್‌ ಶೆಟ್ಟಿ ಪಡ್ರೆ – ಒಂದೇ ಎರಡೇ! ಎಳೆಯ ಹುಡುಗ ಅಜಿತ್‌ ಪುತ್ತಿಗೆ ಆವರ ಕುಣಿತವಂತೂ ಅದ್ಭುತವಾಗಿತ್ತು. ಅರಳಿದ ಕುಸುಮದ ಮಧುವನು ಹೀರುತ – ಹಾಡಿಗೆ ಸೌದಾಸ (ಸುಬ್ರಾಯ ಹೊಳ್ಳ) ಹಾಗೂ ಮದಯಂತಿ (ಹಿಲಿಯಾಣ) ನೃತ್ಯದ ಭಾವ – ಭಂಗಿಗಳು ಶೃಂಗಾರ ಭಾವಕ್ಕೆ ಹೊಸ ಭಾಷ್ಯ ಬರೆದವು. ಅತಿಕಾಯನ ಪಾತ್ರಕ್ಕೂ ಹೊಳ್ಳರು ಹೊಸ ವಿಶ್ಲೇಷಣೆಗಳ ಮೂಲಕ ಜೀವ ತುಂಬಿದರು. ಲಕ್ಷ್ಮಣನಾಗಿ ದಿವಾಕರ ರೈ ಅಭಿನಯವೂ ಅಚ್ಚುಕಟ್ಟಾಗಿತ್ತು. ಕೊನೆಯ ಪ್ರಸಂಗ ಪಾದಪ್ರತೀಕ್ಷಾದಲ್ಲಿ ಧನುಗಂಧರ್ವ ಪಾತ್ರಕ್ಕೆ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಜೀವ ತುಂಬಿದ ಪರಿಯಂತೂ ವರ್ಣಿಸಲಸದಳ.

ನಳದಮಯಂತಿ ಪ್ರಸಂಗದ ಪ್ರದರ್ಶನ ಸಾಧಾರಣವೆನಿಸಿದರೂ ಜಗದಾಭಿರಾಮ ಪಡುಬಿದ್ರೆ ಆವರ ಋತುಪರ್ಣ, ಬಂಟ್ವಾಳರ ಬಾಹುಕ, ದಮಯಂತಿಯಾಗಿ ರಕ್ಷಿತ್‌ ಪಡ್ರೆ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಪಾರಿಜಾತ ಪ್ರಸಂಗದಲ್ಲಿ ಮಾಡಿತು. ಕೃಷ್ಣ – ಸತ್ಯಭಾಮೆ ಪಾತ್ರಗಳಲ್ಲಿ ದಿವಾಕರ ರೈ – ಹಿಲಿಯಾಣ, ಜಗನ್ನಾಥ ಪೆರ್ಲ – ರಕ್ಷಿತ್‌ ಪಡ್ರೆ ಆಭಿನಯ ನೋಡಿ “ಹರುಷವಾಯಿತು’.

ಚುಟುಕಾದ ಪ್ರಸಂಗಗಳು, ಚುರುಕಾದ ನಿರೂಪಣೆ, ಹದ ಮೀರದ ಅಭಿನಯ, ಚೌಕಟ್ಟು ಮೀರದ ಹಾಸ್ಯ – ಇವುಗಳ ಮೂಲಕ ಹನುಮಗಿರಿ ಮೇಳದ ಕಲಾವಿದರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. 

ಅನಂತ ಹುದೆಂಗಜೆ 

ಟಾಪ್ ನ್ಯೂಸ್

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.