ಸಮಕಾಲೀನ ರಾಜಕೀಯದ ಹುಳುಕುಗಳನ್ನು ತೆರೆದಿಟ್ಟ ಟ್ರಾನ್ಸ್‌ ನೇಶನ್‌


Team Udayavani, Oct 11, 2019, 3:39 AM IST

u-8

ಅಲೋಶಿಯಸ್‌ ಕಾಲೇಜಿನಲ್ಲಿ ಜರಗಿದ ಗಭಾಸ್ಕರ-2019ರಲ್ಲಿ ಪ್ರದರ್ಶಿಸಿದ ಸವಿತಾರಾಣಿ ಪಾಂಡಿಚೇರಿ ನಿರ್ದೇಶಿಸಿದ ಟ್ರಾನ್ಸ್‌ನೇಶನ್‌ ಸಮಕಾಲೀನ ರಾಜಕೀಯದ ಹುಳುಕುಗಳನ್ನು ತೆರೆದಿಡುತ್ತದೆ.

ಇಡೀ ರಾಷ್ಟ್ರ ಇಂದು ಒಂದು ರೀತಿಯ ಬದಲಾವಣೆಯ ಪರ್ವಕ್ಕೆ ವೇಗವಾಗಿ ತೆರೆದುಕೊಳ್ಳುವ ಧಾವಂತದಲ್ಲಿದೆ. ಆಡಳಿತ ನಡೆಸುವ ಪಕ್ಷ ಏಕಧ್ವಜ, ಏಕ ದೇಶ ಎಂಬ ಸಂಹಿತೆಯಂತೆ ಏಕ ವಸ್ತ್ರ ಸಂಹಿತೆಯನ್ನು ತರುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದರೊಂದಿಗೆ, ಯಾವುದೇ ಸಿದ್ಧ ಪಠ್ಯವಿಲ್ಲದ ನಾಟಕ ಟಾನ್ಸ್‌ನೇಶನ್‌ ಅನಾವರಣಗೊಳ್ಳುತ್ತದೆ. ಕಾಮಸೂತ್ರವನ್ನು ವಿಶ್ವಕ್ಕೆ ನೀಡಿದ ದೇಶ, ವಿವಿಧತೆಯಿಂದಲೇ ವಿದೇಶಿಗರೂ ಆಸ್ಥೆಯಿಂದ ಗುರುತಿಸುವ ದೇಶ ಇಂಥ ಏಕ ವಸ್ತ್ರ ಸಂಹಿತೆಯನ್ನು ಆಲೋಚನೆ ಮಾಡುವುದೇ ಅಸಂಬದ್ಧ, ಅಸಂಗತ ಎಂದು ವಿರೋಧ ಪಕ್ಷ ವಿರೋಧಿಸುವುದರೊಂದಿಗೆ ಸದನದ ಬಾವಿಗಿಳಿಯುತ್ತಾರೆ ಜನ ನಾಯಕರು. ಸೆನ್ಸಾರ್‌ ನಿಯಮವನ್ನು ಸಂವಿಧಾನದೊಳಗೆ ತರುವ ಮೂಲಕ ಅವರವರ ಮೂಗಿನ ನೇರಕ್ಕೆ ಕಾನೂನನ್ನು ತಿರುಗಿಸುವ ವಿಡಂಬನಾತ್ಮಕ ಸನ್ನಿವೇಶ ಹಾಸ್ಯವನ್ನು ಉಕ್ಕಿಸುತ್ತಾ, ರಾಜಕಾರಣದ ನೈತಿಕ ಅಧಃಪತನವನ್ನು ವಿವರಿಸುತ್ತಾ ಸಾಗುತ್ತದೆ.

ಮುಂದೆ? ನಮ್ಮ ವ್ಯವಸ್ಥೆಯನ್ನು ಶಾಕ್‌ ನೀಡಿದಂತೆ ತೆರೆದಿಡುತ್ತಾ ಸಾಗುತ್ತದೆ ನಾಟಕ. ಪ್ರತಿಯೊಂದಕ್ಕೂ ಹೆಲ್ಪ್ಲೈನ್‌ ಇದೆ, ಪ್ರತಿಯೊಂದಕ್ಕೂ ಕಾನೂನಿದೆ, ಪ್ರತಿ ಹೆಜ್ಜೆಯಲ್ಲೂ ರಕ್ಷಣೆಯ ಸ್ಲೋಗನ್‌ ಇದೆ. ಆದರೆ ಹೆಣ್ಣು ಮಾತ್ರ ಸದಾ ಅತ್ಯಾಚಾರಕ್ಕೊಳಗಾಗುತ್ತಾಳೆ. ಹೆಲ್ಪ… ಮಾಡಿ ಎಂಬ ಆ ಕೂಗು ಎಂತಹ ಎದೆಯಲ್ಲೂ ಕಳವಳ ಹುಟ್ಟಿಸುತ್ತದೆ. ಸೋಗಲಾಡಿ ಸನ್ಯಾಸಿಯ ಮೂಲಕ ಸಮಾಜದ ದುರವಸ್ಥೆಯನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತಾ, ಅತ್ಯಾಚಾರ ಸಂತ್ರಸ್ತೆಯ ಅಸಹಾಯಕ ಪರಿಸ್ಥಿತಿಯನ್ನು ಕೈ ಮೀರಿದ ಸಹಜ ನಡೆಯಂತೆ ಬಿಂಬಿಸಿ, ನಾಟಕದ ನಡುವೆ ಒಂದು ಆತಂಕದ ಅಂಕವೂ ಸೇರಿಕೊಂಡು, ಪ್ರತಿ ಪ್ರೇಕ್ಷಕನೂ ನಟನಾಗುವ ಅನುಭಾವ ವಿನೂತನ ಅನಿಸುತ್ತದೆ.

ಲೈಲಾ, ಮಜನು ಎಂಬ ಪಾತ್ರಗಳ ಮೂಲಕ ಹೆಣ್ಣಿನ ಶೋಷಣೆಯ ಆಳ ಬಿಚ್ಚಿಡುತ್ತಾ, ಕೊನೆಗೂ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಮರೀಚಿಕೆಯೇ ಆಗುತ್ತದೆ. ನಮ್ಮ ನಾಯಕರು,ಪ್ರಭಾವಿಗಳು, ನ್ಯಾಯ ವ್ಯವಸ್ಥೆ ಎಲ್ಲೆಡೆಯಲ್ಲೂ ಮಹಿಳಾ ಸಬಲೀಕರಣದ ಮಾತಾಡುವ ವ್ಯವಸ್ಥೆ ಮಹಿಳೆಗೆ ನ್ಯಾಯ ಕೊಡುವಲ್ಲಿ ಸೋಲುತ್ತದೆ.ಸೋಲಿನೊಂದಿಗೆ ಆಕೆಗೆಂದೂ ಸಬಲೆಯ ಪಟ್ಟ ಕೊಡದಿರುವ ವ್ಯವಸ್ಥಿತ ಸಂಚು ಗೆಲ್ಲುತ್ತದೆ. ಇದೂ ಸಂವಿಧಾನದ ಚೌಕಟ್ಟಿನಲ್ಲೇ ನಡೆಯುತ್ತದೆ. ಶಾಸಕಾಂಗ ಮತ್ತು ನಮ್ಮ ಕಾನೂನುಗಳು ಇದಕ್ಕೆ ಸಹಕಾರಿಯಾಗುತ್ತವೆ.

ಟ್ರಾನ್ಸ್‌ನೇಶನ್‌ ಮುಗಿಸಿ ಹೊರ ಬರುವಾಗ ಅನೇಕ ಭಿನ್ನ ಅನುಭವ.ಹೃದಯ ಭಾರ ಭಾರ. ಎಲ್ಲೋ ನಾವೂ ಈ ಅವ್ಯವಸ್ಥೆಯ ಭಾಗವೇನೋ ಎಂಬ ಶಾಕ್‌. ನಿರ್ದಿಷ್ಟ ಮಾನದಂಡಗಳಿಲ್ಲದೆ, ನಿರ್ದಿಷ್ಟ ಪಠ್ಯವಿಲ್ಲದೆ, ಒಡೆದು ಕಟ್ಟುವಿಕೆಯ ಪ್ರಯೋಗದೊಂದಿಗೆ ಪ್ರದರ್ಶನವಾದ ನಾಟಕ ಇದು. ಪ್ರತಿ ಪಾತ್ರವೂ ನಮ್ಮೊಳಗೊಂದು ನಡುಕದಿಂದ ಕೂಡಿದ ಪ್ರಶ್ನೆ ಸೃಷ್ಟಿಗೆ ಕಾರಣವಾದದ್ದು ಸುಳ್ಳಲ್ಲ. ಈ ಶ್ರೇಯಸ್ಸು ಕಲಾವಿದರಿಗೆ ಮತ್ತು ಒಂದು ತಂಡವಾಗಿ ಪಟ್ಟ ಶ್ರಮಕ್ಕೆ ಕನ್ನಡಿ. ಈ ನಾಟಕದಲ್ಲಿ ಪ್ರದರ್ಶನವಿರುವಲ್ಲಿ ಸ್ಥಳೀಯ ಸಮಸ್ಯೆಗಳನ್ನೆ ಮುಖ್ಯವಾಗಿ ಬಿಂಬಿಸುವ ಮೂಲಕ, ಪ್ರೇಕ್ಷಕನನ್ನು ನಾಟಕದ ಪಾತ್ರಧಾರಿಯಾಗಿಸುವ ವಿಶಿಷ್ಟ ಪ್ರಯತ್ನವೂ ನಡೆಯುತ್ತದೆ.

ಅರೆಹೊಳೆ ಸದಾಶಿವ ರಾವ್‌

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.