ಉಮೇಶ ಆಚಾರ್ಯರಿಗೆ ಶೇಣಿ ಪ್ರಶಸ್ತಿಯ ಗೌರವ 


Team Udayavani, Mar 2, 2018, 7:30 AM IST

1.jpg

ಹವ್ಯಾಸಿ ಯಕ್ಷಗಾನ ಕಲಾವಿದ ಉಮೇಶ ಆಚಾರ್ಯ ಅವರ ಕಲಾಸೇವೆಗಾಗಿ ಸುರತ್ಕಲ್‌ನ ಶೇಣಿ ಚಾರಿಟೇಬಲ್‌ ಟ್ರಸ್ಟ್‌ ಮಾರ್ಚ್‌ 4ರಂದು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಆಯೋಜಿಸಿರುವ ಶೇಣಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ “ಶೇಣಿ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ. 

ಗೇರುಕಟ್ಟೆಯ ಸ್ವರ್ಣಶಿಲ್ಪಿ ಮೋನಪ್ಪ ಆಚಾರ್ಯ-ವಾರಿಜಾ ದಂಪತಿಯ ಪುತ್ರರಾಗಿ 1952ರಲ್ಲಿ ಜನಿಸಿದ ಉಮೇಶ ಆಚಾರ್ಯರು ಬಿ.ಎ ಪದವಿಯ ಬಳಿಕ ಸರಕಾರಿ ನೌಕರಿಗೆ ಸೇರಿದ್ದರು. ತಂದೆ ಯಕ್ಷಗಾನ ಕಲಾವಿದರಾಗಿದ್ದು ಇವರಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿಯನ್ನು ಮೂಡಿಸಿತ್ತು.

 ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ತಾಳಮದ್ದಳೆ ಹಾಗೂ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶ ಸಾಕಷ್ಟಿತ್ತು. ಜತೆಗೆ ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಖ್ಯಾತ ಅರ್ಥಧಾರಿಯಾದ ದೇರಾಜೆ ಸೀತಾರಾಮಯ್ಯ, ಮಾರೂರು ಮಂಜುನಾಥ ಭಂಡಾರಿ, ಶಿಮ್ಲಡ್ಕ ಶಂಭಟ್‌, ಕೃಷ್ಣಯ್ಯ ಮಾಸ್ಟರ್‌ ನಾಳ ಇವರ ಮಾರ್ಗದರ್ಶನವು ತುಂಬ ಪ್ರಭಾವವನ್ನು ಬೀರಿತ್ತು. ಪ್ರಾಥಮಿಕ ಶಾಲೆ ವಿದ್ಯಾರ್ಥಿಯಾಗಿದ್ದಾಗ (1963) ಪಂಚವಟಿ ಯಕ್ಷಗಾನ ನಾಟಕದಲ್ಲಿ ಇವರು ಮಾಯ ಶೂರ್ಪನಖೀ ಪಾತ್ರವನ್ನು ನಿರ್ವಹಿಸಿದ್ದು, ಈ ಪ್ರದರ್ಶನವನ್ನು ವೀಕ್ಷಿಸಿದ ದೇರಾಜೆಯವರು ಪ್ರಶಂಸಿಸಿದ್ದರು.

 ತೋಟಗಾರಿಕಾ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು 1981ರಲ್ಲಿ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡರು. ನೌಕರಿಯ ಈ ಮಧ್ಯೆ ಮೈಸೂರು ವಿ.ವಿ.ಯಿಂದ ರಾಜ್ಯ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. 

ವೃತ್ತಿ ಬದುಕಿನ ಒತ್ತಡದ ನಡುವೆಯೂ ಹವ್ಯಾಸಿ ಕಲಾವಿದರಾಗಿ, ಸಂಘಟಕರಾಗಿ ಮಂಗಳೂರಿನ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘ, ಶ್ರೀ ಶರವು ಯಕ್ಷಗಾನ ಸಂಘ ಹಾಗೂ ಜಿಲ್ಲೆಯಾದ್ಯಂತ ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಯಕ್ಷಭಾರತಿ ಪುತ್ತೂರು ಇದರ ಸದಸ್ಯರಾಗಿ ರೇಡಿಯೋ ತಾಳಮದ್ದಳೆಯ ಬಿ ಹೈಗ್ರೇಡ್‌ ಕಲಾವಿದರಾಗಿದ್ದಾರೆ. ಧಾರ್ಮಿಕ ಶಿಕ್ಷಣ, ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿದ ಸಾವಿರಾರು ಪುಸ್ತಕಗಳ ಅಮೂಲ್ಯ ಸಂಗ್ರಹ ಇವರಲ್ಲಿದೆ.

    ಯಕ್ಷಗಾನ ರಸಋಷಿ ದಿ| ಅರ್ಕುಳ ಸುಬ್ರಾಯ ಆಚಾರ್ಯ ಶತಮಾನೋತ್ಸವ ಸ್ಮಾರಕ ಸಮಿತಿಯ ಕಾರ್ಯದರ್ಶಿ, “ಸ್ವರ್ಣಕಮಲ’ ಸಂಸ್ಮರಣಾ ಗ್ರಂಥದ ಸಂಪಾದಕ ಸಮಿತಿಯ ಸದಸ್ಯರಾಗಿ ಕ್ಷೇತ್ರ ಕಾರ್ಯವನ್ನು ನಡೆಸಿ ಅಮೂಲ್ಯ ದಾಖಲೆಗಳನ್ನು ಸಂಗ್ರಹಿಸಿದಲ್ಲದೆ ಅರ್ಕುಳ ಸುಬ್ರಾಯ ಆಚಾರ್ಯರು ಬರೆದ ಯಕ್ಷಗಾನ ಸಾಹಿತ್ಯದ ಮೊದಲ ಅರ್ಥಸಹಿತ ಕೃತಿ “ಶ್ರೀಕೃಷ್ಣ ಸಂಧಾನ’ವನ್ನು 1988ರಲ್ಲಿ ಮರು ಮುದ್ರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 

ಶೇಣಿ ಸಹಸ್ರಚಂದ್ರ ದರ್ಶನ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ಇವರು ಯಕ್ಷಗಾನದ ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥಗಳಲ್ಲಿ ಲೇಖನಗಳನ್ನು ಬರೆದಿರುತ್ತಾರೆ. ಅರ್ಕುಳ ಸುಬ್ರಾಯ ಆಚಾರ್ಯರ ಜೀವನ ಚರಿತ್ರೆಯ ಬಗ್ಗೆ ಇವರು ಬರೆದ “ಯಕ್ಷಗಾನ ಆಚಾರ್ಯ’ ಕೃತಿಯು 2015ರಲ್ಲಿ ಕಾಂತಾವರದ ಕನ್ನಡ ಸಂಘದಿಂದ ಪ್ರಕಟವಾಗಿದೆ.     ಮುಖ್ಯವಾಗಿ ಸ್ತ್ರೀಪಾತ್ರ ನಿರ್ವಹಣೆಯಲ್ಲಿ ಇವರ ಪ್ರತಿಭೆ ಅನನ್ಯವಾದುದು. ಪ್ರಭಾವತಿ, ದೇವಯಾನಿ, ಸೀತೆ, ಅಹಲೆ, ದ್ರೌಪದಿ ಅಲ್ಲದೆ ಶ್ರೀರಾಮ, ಕೃಷ್ಣ, ವಿದುರ, ನಾರದ, ಧರ್ಮರಾಯ, ಹನುಮಂತ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. 

ಕೆ. ಗೋವಿಂದ ಭಟ್ಟರ ಮಾತುಗಾರಿಕೆಯಿಂದ ಪ್ರಭಾವಿತರಾಗಿರುವ ಇವರು ಶೇಣಿ, ಕುಂಬ್ಳೆ, ಜೋಶಿ, ಮಾರೂರು, ಸಿದ್ದಕಟ್ಟೆ, ಅಶೋಕ ಭಟ್‌, ಕುಕ್ಕುವಳ್ಳಿ, ಪೆರ್ಮುದೆ ಮೊದಲಾದವರೊಂದಿಗೆ ತಾಳಮದ್ದಳೆ ಮತ್ತು ಧ್ವನಿ ಸುರುಳಿಗಳಲ್ಲಿ ಭಾಗವಹಿಸಿದ್ದಾರೆ. ಸರಕಾರಿ ಸೇವೆಯಿಂದ 2012ರಲ್ಲಿ ನಿವೃತ್ತಿ ಹೊಂದಿದ ಇವರು ಪ್ರಸ್ತುತ ಕಾವೂರಿನಲ್ಲಿ ನೆಲೆಸಿದ್ದಾರೆ. 
 
ದಿವಾಕರ ಆಚಾರ್ಯ 

ಟಾಪ್ ನ್ಯೂಸ್

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.