ಅನನ್ಯಕಲಾಸಾಧಕನಿಗೆಅಕಾಡೆಮಿ ಪ್ರಶಸ್ತಿ


Team Udayavani, Oct 26, 2018, 11:53 AM IST

upadhyaya-moodubelle.jpg

ಸೃಜನಶೀಲ ಕಲಾವಿದ ಉಪಾಧ್ಯಾಯ ಮೂಡುಬೆಳ್ಳೆಯವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯು ಗೌರವ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಉಪಾಧ್ಯಾಯರು ಕಲಾವಿದ ರಷ್ಟೇ ಆಗಿರದೆ ಸಾಹಿತಿಯಾಗಿ ಶಿಕ್ಷಕನಾಗಿ ಸಮಾಜಸೇವಕನಾಗಿ ಎದ್ದು ಕಾಣುತ್ತಾರೆ. 

 ಉಡುಪಿ ವಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ ಉಪಾಧ್ಯಾಯರು ಮಕ್ಕಳ ಕಲಾಚೈತನ್ಯವನ್ನು ಹೊರಹೊಮ್ಮಿಸಲು ಶಾಲೆಯಲ್ಲಿ ಕಲಾಸಂಘ, ಡ್ರಾಯಿಂಗ್‌ ಗ್ರೇಡ್‌ ಪರೀಕ್ಷೆ, ಕಲಾಪ್ರದರ್ಶನ, ಭಿತ್ತಿಚಿತ್ರ, ಕಲಾಶಿಬಿರಗಳನ್ನು ನಡೆಸುತ್ತಿದ್ದಾರೆ. ಕಲೋತ್ಸವ ರಾಜ್ಯಮಟ್ಟಕ್ಕೆ ಮಕ್ಕಳ ತಂಡ, ಮಕ್ಕಳ ಕಂಪ್ಯೂಟರ್‌ ಪ್ರಾಜೆಕ್ಟ್ಗೆ ಇಂಟೆಲ್‌ ರಾಜ್ಯಪ್ರಶಸ್ತಿ ದೊರೆತಿದೆ. ಮಾತ್ರವಲ್ಲದೆ ಉಪಾಧ್ಯಾಯರ ಕಂಪ್ಯೂಟರ್‌ ಪ್ರಾಜೆಕ್ಟ್ಗೂ ಇಂಟೆಲ್‌ ರಾಜ್ಯಪ್ರಶಸ್ತಿ, ಉತ್ತಮ ಶಿಕ್ಷಕ ಜಿಲ್ಲಾ-ರಾಜ್ಯ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಕರ್ನಾಟಕದಲ್ಲಿ ಪ್ರಥಮ ಬಾರಿ ಲಭಿಸಿದೆ.

 ಕಲಾಸಾಹಿತಿಯಾಗಿ ಉಪಾಧ್ಯಾಯರು ಎಲೆಮರೆಯ ಅನೇಕ ಕಲಾವಿದರನ್ನು ತಮ್ಮ ಲೇಖನಗಳ ಮೂಲಕ ಬೆಳಕಿಗೆ ತಂದಿದ್ದಾರೆ. ಕಲಾಪ್ರದರ್ಶನಗಳ ವಿಮರ್ಶೆಗಳನ್ನು ನಿರಂತರ ಬರೆದಿದ್ದಾರೆ. ಕವನ, ಹಾಸ್ಯಲೇಖನ, ಒಂದೇಗೆರೆಯ ಚಿತ್ರಗಳನ್ನೂ ಬರೆದಿದ್ದಾರೆ. ಯಕ್ಷಗಾನ ಚಿತ್ರಕಲೆ, ನಾಗಾರಾಧನೆ ಚಿತ್ರಕಲೆ, ಕಲೆ ಎಂದರೇನು? ಪುಸ್ತಕಗಳನ್ನು ಬರೆದಿದ್ದಾರೆ.

ಉಪಾಧ್ಯಾಯರ ಏಕರೇಖಾಚಿತ್ರಗಳು ಡಾ| ನೆಲ್ಸನ್‌ಮಂಡೇಲಾ, ಎ.ಪಿ.ಜೆ. ಅಬ್ದುಲ್‌ಕಲಾಂ, ವಾಜಪೇಯಿ, ವೆಂಕಟ್ರಾಮನ್‌, ರಾಜೀವ್‌ಗಾಂಧಿ, ದೊರೆ ಬೀರೇಂದ್ರ ಮುಂತಾದವರಿಂದ ಹಸ್ತಾಕ್ಷರ ಪಡೆದಿವೆ. ಉಡುಪಿ ಪರಿಸರದ ಇಪ್ಪತ್ತಕ್ಕೂ ಹೆಚ್ಚು ದೇಗುಲಗಳಲ್ಲಿ ಇವರು ರಚಿಸಿರುವ ಭಿತ್ತಿಚಿತ್ರ, ಕಾವಿಚಿತ್ರಕಲೆಯಿದೆ. ನಾಡಿನಾದ್ಯಂತ ಪೂಜಾರಂಗೋಲಿಗಳನ್ನು ಬರೆದು ಜನಪ್ರಿಯರಾಗಿದ್ದಾರೆ.

ಉಪಾಧ್ಯಾಯರ ಕಲಾ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಪ್ರಶಸ್ತಿಗಳಲ್ಲಿ ಸಿಕ್ಕಿದ ಮೊತ್ತವನ್ನೆಲ್ಲಾ ಶಾಲೆಗಳಿಗೆ, ಗೋಶಾಲೆಗೆ, ಬಡಮಕ್ಕಳಿಗೆ, ರೋಗಿಗಳಿಗೆ ನೀಡುತ್ತಿರುವುದು ವಿಶೇಷ. ತನ್ನ ಹೆಸರಿನಲ್ಲಿ ಕಲಾ ಪ್ರತಿಷ್ಠಾನ ಸ್ಥಾಪಿಸಿ ದುಡಿಮೆಯ ಬಹುಪಾಲನ್ನು ಖರ್ಚು ಮಾಡುತ್ತಿದ್ದಾರೆ. ರಾಜ್ಯಮಟ್ಟದ ಸಮಾರಂಭಗಳನ್ನು ನಡೆಸಿ 600ಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಪ್ರತಿಭಾವಂತರಿಗೆ ಉಪಾಧ್ಯಾಯ ಸಮ್ಮಾನ್‌ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮಕ್ಕಳಿಗೆ ರಾಜ್ಯಮಟ್ಟದ ಕಲಾಸ್ಪರ್ಧೆ ನಡೆಸಿದ್ದಾರೆ.

ಟಾಪ್ ನ್ಯೂಸ್

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.