ವಿಶಿಷ್ಟ ನೃತ್ಯರೂಪಕ ತ್ರಿಶಕ್ತಿ
Team Udayavani, Apr 27, 2018, 6:00 AM IST
ಉಳ್ಳಾಲದ ಚೀರುಂಭ ಭಗವತಿ ಕ್ಷೇತ್ರದ ಭರಣಿ ಮಹೋತ್ಸವದ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.ಈ ಪೈಕಿ ಮಂತ್ರ ನಾಟ್ಯಕಲಾ ಗುರುಕುಲದ ಕಾರ್ಯಕ್ರಮವು ವಿಶಿಷ್ಟವಾಗಿತ್ತು. ಹಲವು ನೃತ್ಯಗಳ ಬಳಿಕ ಕೊನೆಯಲ್ಲಿ ಪ್ರಸ್ತುತ ಪಡಿಸಿದ ತ್ರಿಶಕ್ತಿ ಎಂಬ ನೃತ್ಯ ರೂಪಕವು ಅಮೋಘವಾಗಿತ್ತು. ನೃತ್ಯ ಅಭಿನಯ ಹಾಗೂ ವಿಶಿಷ್ಟ ಆಹಾರ್ಯಗಳಿಂದ ಕೂಡಿದ ಪ್ರಸ್ತುತಿಯು ಇದಾಗಿತ್ತು.
ಕಂಹಾಸುರನ ಪ್ರವೇಶದಿಂದ ರೂಪಕವು ಪ್ರಾರಂಭಗೊಂಡಿತು. ಕಂಹಾಸುರನು ಬ್ರಹ್ಮನ ಕುರಿತು ತಪಸ್ಸನ್ನು ಆಚರಿಸುತ್ತಾನೆ.ಬ್ರಹ್ಮನು ಕಂಹಾಸುರನ ಇಚ್ಛೆಯಂತೆ ದೇವತೆಗಳು, ಗಂಧರ್ವರು, ಕಿನ್ನರರು, ಕಿಂಪುರುಷರಾದಿಯಾಗಿ ಯಾವುದೇ ಪುರುಷನಿಂದ ಮರಣ ಬಾರದಂತಹ ವರವನ್ನು ನೀಡುತ್ತಾನೆ. ವರ ಬಲದಿಂದ ಕಂಹಾಸುರ ನೇರವಾಗಿ ಸ್ವರ್ಗಕ್ಕೆ ಆಕ್ರಮಣ ಮಾಡುತ್ತಾನೆ. ದಿಕ್ಕಾಪಾಲಾದ ದೇವತೆಗಳಿಂದ ಆದಿಶಕ್ತಿಯ ಕುರಿತು ಪ್ರಾರ್ಥನೆ, ಪ್ರಸನ್ನಳಾದ ಆದಿಶಕ್ತಿಯಿಂದ ದೇವತೆಗಳಿಗೆ ಅಭಯ ಪ್ರದಾನ. ಆದಿಶಕ್ತಿಯಿಂದ ಪಾರ್ವತಿ, ಲಕ್ಷ್ಮೀ, ಸರಸ್ವತಿಯರ ಸೃಷ್ಟಿ, ಅಸುರನ ಸಂಹಾರಕ್ಕಾಗಿ ಐಕ್ಯಗೊಳ್ಳುವ ತ್ರಿಶಕ್ತಿಯರು, ಇತ್ತ ಕಂಹಾಸುರನಿಂದ ಮೃತ್ಯುವನ್ನು ಜಯಿಸಲು ಶಿವನ ಕುರಿತಾಗಿ ತಪಸ್ಸು, ಪ್ರತ್ಯಕ್ಷನಾದ ಶಿವನಲ್ಲಿ ವರ ಬೇಡುವ ಸಂದರ್ಭದಲ್ಲಿ ವಾಗೆªàವಿಯಿಂದ ಕಂಹಾಸುರನ ವಾಕ್‌ಶಕ್ತಿಯ ಸ್ತಂಭನ, ಶಕ್ತಿಯನ್ನು ಕಳೆದುಕೊಂಡು ಮೂಕಾಸುರನಾದ ಅವನನ್ನು ವಧಿಸಲು ಆದಿಶಕ್ತಿಯಿಂದ ದಶ ವಿದ್ಯಾ ರೂಪಗಳಾದ ಕಾಳಿ, ತಾರಾ, ಲಲಿತ ತ್ರಿಪುರ ಸುಂದರಿ, ಭುವನೇಶ್ವರೀ, ಭೈರವಿ, ಚಿನ್ನಮಸ್ತ, ಧೂಮಾವತಿ, ಬಗಲಮುಖೀ, ಮಾತಂಗಿ, ಕಮಲ ಈ ಎಲ್ಲಾ ರೂಪಗಳು ಉದ್ಭವಗೊಂಡು ಯುದ್ಧದಲ್ಲಿ ಮೂಕಾಸುರನನ್ನು ವಧಿಸುತ್ತಾರೆ. ಅನಂತರದಲ್ಲಿ ಬಾಲಕ ಶಂಕರಾಚಾರ್ಯರಿಗೆ ನರಶಿರ ಮಾಲೆ ಧರಿಪ ರುಧಿರ ಮೋಹಿನಿಯ ರೂಪದಲ್ಲಿ ಎದುರಾಗುವ ಸನ್ನಿವೇಶ, ಘೋರ ರೂಪವನ್ನು ಕಂಡು ಭಯಗೊಳ್ಳದ ಶಂಕರರ ಭಕ್ತಿಗೆ ಒಲಿದು ಶಾಂತರೂಪದಲ್ಲಿ ಕೊಲ್ಲೂರಿನಲ್ಲಿ ನೆಲೆಯಾಗುವ ಸನ್ನಿವೇಶ ಇವೆಲ್ಲವುಗಳು ಯಾವುದೇ ತಂತ್ರಜ್ಞಾನವನ್ನು ಬಳಸದಿದ್ದರೂ ಪೌರಾಣಿಕ ಕಥೆಯ ಚಿತ್ರಣದ ರಸದೌತಣವನ್ನು ನೀಡಿತು. ಪುರಾಣದ ಕಥೆಗೆ ಚ್ಯುತಿಬಾರದಂತೆ ನವರೂಪದಲ್ಲಿ ಕಥೆಯನ್ನು ನಿರೂಪಿಸಿದ ಸಂಸ್ಥೆಯ ನಿರ್ದೇಶಕ ವಿದ್ವಾನ್ ಶ್ರಾವಣ್ ಉಳ್ಳಾಲರ ನೃತ್ಯ ನಿರ್ದೇಶನ ಶ್ಲಾಘನೀಯ.
ಮೋಹಿನಿ ಸತೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.