ರಂಗಭೂಮಿಯ ಅಚ್ಚಳಿಯದ ಹೆಸರು ವಾಸುದೇವ ರಾವ್‌

Team Udayavani, Sep 20, 2019, 5:00 AM IST

t-1

ಇತ್ತೀಚೆಗೆ 77ನೆಯ ವಯಸ್ಸಿನಲ್ಲಿ ಅಗಲಿದ ರಂಗನಟ, ನಿರ್ದೇಶಕ, ನಾಟಕ ರಚನೆಕಾರ ಪಡುಕುದ್ರು ವಾಸುದೇವ ರಾವ್‌ ಅವರ ಹೆಸರು ರಂಗಭೂಮಿ ಕ್ಷೇತ್ರದಲ್ಲಿ ಅಚ್ಚಳಿಯದೆ ಉಳಿಯಲಿದೆ.

ವೃತ್ತಿಯಲ್ಲಿ ಪ್ರಾಂಶುಪಾಲರಾಗಿದ್ದರೂ ಅಂತರಂಗದಲ್ಲಿ ಅವರೊಬ್ಬ ರಂಗಭೂಮಿ ಕಲಾವಿದ. ಕೆಮ್ಮಣ್ಣು ಪಡುಕುದ್ರುವಿನವರಾದ ವಾಸುದೇವ ರಾವ್‌ ಶಾಲಾ ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳುವಾಗ, ವಾರ್ಷಿಕೋತ್ಸವಗಳಲ್ಲಿ ಹಿರಣ್ಣಯ್ಯನವರ “ದೇವದಾಸಿ’, “ಎಚ್ಚಮ ನಾಯಕ’, “ಪಂಗನಾಮ’ ಮೊದಲಾದ ನಾಟಕಗಳನ್ನು ಆಡಿಸುತ್ತಿದ್ದರು. ರಾಯರ ಮೆಚ್ಚಿನ ಚಿತ್ರಗೀತೆ “ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೆ?’. ರಾವ್‌ ಅವರು ಕೇವಲ ನಿರ್ದೇಶಕರಷ್ಟೆ ಅಲ್ಲ, ನಾಟಕ ರಚನೆ, ಅಭಿನಯದಲ್ಲಿಯೂ ಕೈಯಾಡಿಸಿದವರು.

ರಂಗಭೂಮಿಯ ಸಂಪನ್ಮೂಲ ಶಕ್ತಿಯಿಂದಲೋ ಏನೋ ಇದೇ ಹೊತ್ತಿಗೆ ಅವರು ಸಾಹಿತ್ಯದತ್ತಲೂ ಆಸಕ್ತಿ ವಹಿಸಿದರು. ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ತಂಡದ ಸದಸ್ಯರಾಗಿ ಉತ್ತರ ಕರ್ನಾಟಕವನ್ನು ಸುತ್ತಿ ಅಲ್ಲಿನ “ಜಗಜ್ಯೋತಿ ಬಸವೇಶ್ವರ’ ಮೊದಲಾದ ನಾಟಕಗಳನ್ನು ನೋಡಿ “ಕಲ್ಯಾಣದಣ್ಣ ಬಾರೋ ಬಸವಣ್ಣಾ’, “ನೀರಿಗೆ ನೈದಿಲೆ ಶೃಂಗಾರಾ…’ ಮೊದಲಾದ ರಂಗಗೀತೆಗಳಿಂದ ಪ್ರಭಾವಿತರಾದರು. ಸಿನೆಮಾ ನಟ ಇಂದುಶೇಖರ್‌ ನೇತೃತ್ವದ ಕಂಪೆನಿ ನಾಟಕ ಮಂಡಳಿಯಲ್ಲಿ ತೋನ್ಸೆಯಲ್ಲಿ ಪ್ರದರ್ಶಿಸಿದ “ಟಿಪ್ಪು ಸುಲ್ತಾನ್‌’, “ಮಕ್‌ಮಲ್‌ ಟೋಪಿ’, ಎಚ್‌.ಎನ್‌.ಹೂಗಾರ್‌ ರಚಿತ “ಪುತ್ಥಳಿ’ ಮೊದಲಾದ ಜನಪ್ರಿಯ ನಾಟಕಗಳನ್ನು ಕಂಡು ಆಕರ್ಷಿತರಾದರು. “ರಂಗಭೂಮಿ’ ಸಂಸ್ಥೆಗೂ ರಾವ್‌ ಸಂಬಂಧ 1965ರಷ್ಟು ಹಳೆಯದು. ಆಗ ಕೆಮ್ಮಣ್ಣಿನಲ್ಲಿ ಉಡುಪಿಯ ರಂಗಭೂಮಿ ಸಂಸ್ಥೆ “ಮಂಗಳ’ ನಾಟಕವನ್ನು ಪ್ರದರ್ಶಿಸಿದಾಗ ಅದರಿಂದ ಪ್ರಭಾವಿತರಾದ ರಾವ್‌, ಜೀವಿತದ ಕೊನೆಯ ವರೆಗೂ ರಂಗಭೂಮಿ ಕ್ಷೇತ್ರ ಮತ್ತು ಸಂಸ್ಥೆಯನ್ನು ಬಿಟ್ಟಿರಲಿಲ್ಲ.

ಉಡುಪಿಯಲ್ಲಿ ಮಂಡ್ಯ ರಮೇಶ್‌ ನಿರ್ದೇಶನದಲ್ಲಿ ರಂಗಾಭಿನಯ ತರಬೇತಿ, ನೀನಾಸಂನಂತಹ ವಿವಿಧ ನಾಟಕ ಸಂಸ್ಥೆಗಳ ಪ್ರದರ್ಶನ ಸಂಘಟನೆಯನ್ನು ಏರ್ಪಡಿಸಿದರು. ಶಾಲಾವಧಿಯಲ್ಲಿ “ಪಂಗನಾಮ’ದ ಹೀರೋಯಿನ್‌ ಆಗಿ ರಾವ್‌ ಆಯ್ಕೆ ಮಾಡಿದ್ದ ತೋನ್ಸೆ ವಿಜಯಕುಮಾರ ಶೆಟ್ಟಿ ಮುಂಬೈನಲ್ಲಿ ನಾಟಕ ರಂಗ ಕ್ಷೇತ್ರದಲ್ಲಿ ಮಿಂಚುತ್ತಿರುವುದು ರಾವ್‌ ಅವರಿಗೆ ಸಂತೃಪ್ತಿಯ ವಿಷಯವಾಗಿತ್ತು.

ಟಾಪ್ ನ್ಯೂಸ್

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

1-raj

Vijay Hazare Trophy; ರಾಜಸ್ಥಾನ, ಹರಿಯಾಣ ಕ್ವಾರ್ಟರ್‌ ಫೈನಲ್‌ಗೆ

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-saaai

Malaysia Super 1000; ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ಫೈನಲಿಗೆ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.