ಮಹಿಳಾ ದಿನದಂದು ನಡೆಯಿತು ವೀರಮಣಿ ಕಾಳಗ
Team Udayavani, Mar 15, 2019, 12:30 AM IST
ಶತ್ರುಘ್ನನ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನವು, ಮದನಾಕ್ಷಿ – ತಾರಾವಳಿಯರ ಆಖ್ಯಾನವನ್ನು ಒಳಗೊಂಡಂತೆ ಸಮಗ್ರವಾಗಿ ಮೂಡಿಬಂತು. ಯಜ್ಞಾಶ್ವದ ಅಪಹರಣ, ನಾರದರಿಂದ ಯಜ್ಞಾಶ್ವದ ಇರುವಿಕೆಯ ಬಗೆಗಿನ ಮಾಹಿತಿ, ಮಾಯಾಪುರಿಯ ದೂತಿಯರ ವಿಚಾರಣೆ,
ಯುದ್ಧದ ಸನ್ನಿವೇಶ ಪೂರ್ವಾರ್ಧದ ಆಖ್ಯಾನದಲ್ಲಿತ್ತು.
ಇತ್ತೀಚೆಗೆ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವರ್ಣೋತ್ಸವದ (ರಾಜ್ಯಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ) ಪ್ರಯುಕ್ತ ವಿದ್ಯಾಲಯದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳಿಂದ ನಡೆದ ತೆಂಕು ಬಡಗಿನ ಕೂಡಾಟ “ವೀರಮಣಿ ಕಾಳಗ’ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ವಿಶ್ವ ಮಹಿಳಾದಿನಾಚರಣೆಯಂದು ನಡೆದ ಈ ಪ್ರದರ್ಶನದಲ್ಲಿ ಮುಮ್ಮೇಳದ ಕಲಾವಿದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದುದು ವಿಶೇಷವಾಗಿತ್ತು.
ತೆಂಕುತಿಟ್ಟಿನ ಶತ್ರುಘ್ನನ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನವು, ಮದನಾಕ್ಷಿ-ತಾರಾವಳಿಯರ ಆಖ್ಯಾನವನ್ನು ಒಳಗೊಂಡಂತೆ ಸಮಗ್ರವಾಗಿ ಮೂಡಿಬಂತು. ಯಮುನಾ ನದೀತೀರದಲ್ಲಿ ಯಜ್ಞಾಶ್ವದ ಅಪಹರಣ, ನಾರದರಿಂದ ಯಜ್ಞಾಶ್ವದ ಇರುವಿಕೆಯ ಬಗೆಗಿನ ಮಾಹಿತಿ, ಮಾಯಾಪುರಿಯ ದೂತಿಯರ ವಿಚಾರಣೆ, ಯುದ್ಧದ ಸನ್ನಿವೇಶ ಪೂರ್ವಾರ್ಧದ ಆಖ್ಯಾನದಲ್ಲಿದ್ದರೆ, ಜ್ಯೋತಿರ್ಮೆಧಪುರದಲ್ಲಿ ರುಕ್ಮಾಗ-ಶುಭಾಂಗರಿಂದ ಯಜ್ಞಾಶ್ವದ ಬಂಧನ, ತಂದೆ ವೀರಮಣಿಯಲ್ಲಿ ವಿಷಯ ಪ್ರಸ್ತಾಪ, ತಂದೆಯ ಮೆಚ್ಚುಗೆ, ಹನುಮಂತನ ಒಡ್ಡೋಲಗ, ವೀರಮಣಿಯೊಂದಿಗೆ ಸಂಧಾನ, ವಾಕ್ಸಮರ, ಸಂಧಾನ ಮುರಿದು ನಡೆದ ಸಂಗ್ರಾಮದಲ್ಲಿ ವೀರಮಣಿಯ ಸಾವು, ಈಶ್ವರನ ಪ್ರವೇಶ, ಶತ್ರುಘ್ನನ ಮರಣ, ಹನುಮಂತನ ಪರಾಕ್ರಮವನ್ನು ಮೆಚ್ಚಿದ ಈಶ್ವರನಿಂದ ವರಪ್ರದಾನ, ಸಂಜೀವಿನಿ ಮೂಲಿಕೆಯ ಮುಖಾಂತರ ಎರಡೂ ಪಕ್ಷಗಳಲ್ಲಿ ಮರಣ ಹೊಂದಿದವರನ್ನು ಬದುಕಿಸುವುದು, ಶ್ರೀರಾಮದರ್ಶನ ಮೊದಲಾದ ಪ್ರಮುಖ ಸನ್ನಿವೇಶಗಳ ಜೋಡಣೆ ಉತ್ತರಾರ್ಧದಲ್ಲಿತ್ತು.
ವಿದ್ಯಾಲಯದ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ| ವಾಸುದೇವರ ಪರಂಪರೆಯ ಹನೂಮಂತ (ಪಾರಂಪರಿಕ ಒಡ್ಡೋಲಗದೊಂದಿಗೆ), ಮದನಾಕ್ಷಿ – ತಾರಾವಳಿಯರ ಪಾತ್ರನಿರ್ವಹಿಸಿದ ಭೂಮಿಕಾ ಐತಾಳ್ ಮತ್ತು ಪವಿತ್ರ, ರುಕಾ¾ಂಗ ಶುಭಾಂಗರಾಗಿ ಮೊದಲ ಭಾಗದಲ್ಲಿ ನಿರ್ವಹಿಸಿದ ಸಹನಾ ಮತ್ತು ಮಹಿಮಾರಾವ್‌ರವರ ನಾಟ್ಯ ಮತ್ತು ಮಾತುಗಾರಿಕೆ ಮನಸೂರೆಗೊಂಡು ಅಮೋಘ ಕರತಾಡನಕ್ಕೆ ಒಳಗಾಯಿತು. ದೂತಿಯರಾಗಿ ಪಾತ್ರನಿರ್ವಹಿಸಿದ ಉಪನ್ಯಾಸಕರಾದ ಕಿಶೋರ್ ಕುಮಾರ್ ಆರೂರ್ ಹಾಗೂ ರಂಜನ್ ಭಟ್ ಜೋಡಿಯ ಹಾಸ್ಯ, ವರ್ತಮಾನದ ವಿದ್ಯಮಾನಗಳಿಗೆ ಥಳುಕು ಹಾಕಿಕೊಂಡು ಮನರಂಜಿಸಿತು. ಪೂರ್ವಾರ್ಧದ ಶತ್ರುಘ್ನನಾಗಿ ಕಾಣಿಸಿಕೊಂಡ ಉಪನ್ಯಾಸಕ ವೇಣುಗೋಪಾಲ ರಾವ್ ಪ್ರಸಂಗಕ್ಕೆ ಗಂಭೀರ ಆರಂಭ ಒದಗಿಸಿದರೆ ಉತ್ತರಾರ್ಧದಲ್ಲಿ ಪ್ರದೀಪ ಆಚಾರ್ಯ ಅದನ್ನು ಸಮರ್ಥವಾಗಿ ಮುಂದುವರಿಸಿದರು. ಈಶ್ವರನಾಗಿ ಅಮಿತ್, ವೀರಮಣಿಯಾಗಿ ನಿರಂಜನ್, ಯುದ್ಧ ಸಂದರ್ಭದ ಹನೂಮಂತನಾಗಿ ಸನತ್ ಶೆಟ್ಟಿ, ಮತ್ತು ಎರಡನೆ ಭಾಗದ ರುಕಾ¾ಂಗ-ಶುಭಾಂಗರಾಗಿ ನಿಶಾ ಮತ್ತು ಶಿಲ್ಪಾ ಭಟ್‌ರವರ ನಿರ್ವಹಣೆ ಅದ್ಭುತವಾಗಿತ್ತು. ಶತ್ರುಘ್ನನ ಬಲಗಳಾಗಿ ಪೃಥ್ವಿ (ದಮನ), ಶಮಿತಾ (ಪುಷ್ಕಳ), ತೃಷ್ಣಾ (ಲಕ್ಷ್ಮೀನಿಧಿ) ಮತ್ತು ವಿನುತಾ ಭಾರ್ಗವಿ (ಸುಬಾಹು) ಪೂರ್ವಾರ್ಧದಲ್ಲಿ ಮೆರೆದರೆ, ಉತ್ತರಾರ್ಧದಲ್ಲಿ ಸುಹಾನಿ, ಶಿಶಿರ್, ಸ್ವಾತಿ ಮತ್ತು ಪ್ರಜ್ಯೋತ್ ನಿರ್ವಹಿಸಿದರು. ಉಳಿದಂತೆ ನಾಗರಾಜ ಕಳತ್ತೂರು (ನಾರದ), ಶರಧಿ (ಪದ್ಮಾಕ್ಷಿ), ರಶ್ಮಿತಾ (ಪದ್ಮಗಂಧಿ), ನಿಹಾರಿಕಾ (ವೀರಮಣಿಯ ಸೇನಾಪತಿ), ಶ್ರೀಕರ (ವೀರಭದ್ರ), ನಿತಿನ್ (ಘಂಟಾಕರ್ಣ), ತೃಪ್ತಿ ಶೆಟ್ಟಿ (ನಂದಿ), ತೇಜಸ್ (ಭೃಂಗಿ), ಶಿವಾನಿ (ಭೃಕುಟಿ), ವಸುಂಧರಾ (ಶ್ರೀರಾಮ) ಹೀಗೆ ಪ್ರತಿಯೋರ್ವರೂ ತಮಗೊದಗಿದ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ, ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಪಾತ್ರ ಸಂಯೋಜನೆಯಲ್ಲಿ ತೋರಿದ ಜಾಣ್ಮೆಯಿಂದ ಯುದ್ಧದ ಸನ್ನಿವೇಶಗಳು, ತೆಂಕು ಬಡಗಿನ ಸ್ಪರ್ಧಾತ್ಮಕ ಪ್ರದರ್ಶನದ ಮೂಲಕ ರಂಗೇರಿದವು.
ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಭಾಗವತರಾಗಿ ಯುವಭಾಗವತ ಗುರುರಾಜ್ ಭಟ್ ಮುಲ್ಕಿ, ಚೆಂಡೆಯಲ್ಲಿ ಗಣೇಶ್ ಭಟ್ ಹಾಗೂ ಸಂಸ್ಥೆಯ ಹಳೆವಿದ್ಯಾರ್ಥಿ ವಿಕಾಸ್ ರಾವ್, ಮದ್ದಳೆಯಲ್ಲಿ ಅವಿನಾಶ್ ಚಣಿಲ, ಬಡಗುತಿಟ್ಟಿನ ಭಾಗವತರಾಗಿ ಕಿರಿವಯಸ್ಸಿನ ಅದ್ಭುತ ಪ್ರತಿಭೆ ಗಣೇಶ್ ಆಚಾರ್ ಮಂದರ್ತಿ, ಚೆಂಡೆ ಮದ್ದಲೆಯಲ್ಲಿ ಗಣೇಶ್ ಶೆಣೈ ಮತ್ತು ಆನಂದ್ ಭಟ್, ಚಕ್ರತಾಳದಲ್ಲಿ ಅನೀಶ್‌ರವರ ಸಹಕಾರ ಇಡೀ ಪ್ರದರ್ಶನದ ಯಶಕ್ಕೆ ಕಾರಣವಾಯಿತು.
ಶೈಲೇಶ್ ಭಟ್, ಮುಲ್ಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.