ಜೂ.10-17 ಮಹಿಳಾ ತಾಳಮದ್ದಲೆ ಸಪ್ತಾಹ
Team Udayavani, Jun 8, 2018, 6:00 AM IST
ಸುರತ್ಕಲ್ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಚತುರ್ಥ ಮಹಿಳಾ ತಾಳಮದ್ದಲೆ ಸಪ್ತಾಹ ಜೂನ್ 10ರಿಂದ 17ರ ತನಕ ಜಗಲಿದೆ. ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಇದುವರೆಗೆ 160 ಪ್ರದರ್ಶನಗಳನ್ನು ಕೊಟ್ಟಿದೆ. ಮಂಡಳಿಯ ಅಧ್ಯಕ್ಷೆ ಸುಲೋಚನಾ ವಿ. ರಾವ್ ಇವರ ಭಾಗವಹಿಸುವಿಕೆಯೊಂದಿಗೆ ಅರ್ಥಧಾರಿ ಎಸ್. ವಾಸುದೇವ ರಾವ್ ಇವರ ಗುರುತನದ ಮಾರ್ಗದರ್ಶನದಲ್ಲಿ ಚತುರ್ಥ ಸಪ್ತಾಹ ಇದೀಗ ಸಂಪನ್ನಗೊಳ್ಳುತ್ತಿದೆ. ವಾಲಿಮೋಕ್ಷ, ರುಕ್ಮಿಣಿ ಕಲ್ಯಾಣ, ಅಗ್ರಪೂಜೆ, ಗಾಂಡೀವ ನಿಂದನೆ, ಕರ್ಣಾವಸಾನ, ನಾಸಾಚ್ಛೇದ, ಜನಮೇಜಯ, ದಕ್ಷಾಧ್ವರ, ಪುರಾಣ ಪ್ರಸಂಗಗಳ ಕೂಟಗಳು ನಡೆದು, 16ನೇ ತಾರೀಕಿನಂದು ಭುಜಬಲಿ ಬಿ. ಧರ್ಮಸ್ಥಳ ಇವರ ಅಧ್ಯಕ್ಷತೆಯಲ್ಲಿ ಸಮಾರೋಪಗೊಳ್ಳಲಿರುವುದು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದೆ ಶುಭಾ ಜೆ.ಸಿ. ಅರ್ಡಿ ಇವರನ್ನು ಸಮ್ಮಾನಿಸಲಾಗುವುದು. ಯಕ್ಷಗಾನ ಕೂಟಗಳಲ್ಲಿ ಬಲಿಪ ಪ್ರಸಾದ ಭಟ್, ಸಿರಿಬಾಗಿಲು ರಾಮಕೃಷ್ಣ ಮಯ್ಯ , ಸತೀಶ್ ಭಟ್ ರಂಗನಪಲ್ಕೆ, ಎರ್ಮಾಳು ವಾಸುದೇವ ರಾವ್, ಕು| ಕಾವ್ಯಾಶ್ರೀ ಅಜೇರು, ಭವ್ಯಶ್ರೀ ಹರೀಶ್, ಶಾಲಿನಿ ಹೆಬ್ಟಾರ್ ಭಾಗವತರುಗಳಾಗಿ, ಶಿವಪ್ರಸಾದ ಪುನರೂರು, ಕೆ. ರಾಮ ಹೊಳ್ಳ, ಪೆರ್ಲ ಗಣಪತಿ ಭಟ್ ಕೆ., ವೇದವ್ಯಾಸ ರಾವ್, ಶ್ರೀಪತಿ ನಾಯಕ ಆಜೇರು, ಎಸ್. ಎನ್. ಭಟ್, ಕು| ಅಪೂರ್ವ ಸುರತ್ಕಲ್, ಮಾ| ವರುಣ ಹೆಬ್ಟಾರ್ ಹಿಮ್ಮೇಳದಲ್ಲಿ ಭಾಗವಹಿಸುವರು. ಆಹ್ವಾನಿತ ಕಲಾವಿದೆಯರಾದ ಪದ್ಮಾ ಆಚಾರ್ ಪುತ್ತೂರು, ಶುಭಾ ಜೆ.ಸಿ. ಅಡಿಗ, ಕಿಶೋರಿ ದುಗ್ಗಪ್ಪ, ಗೀತಾ ರಾವ್ ಕೆದಿಲ, ಶುಭಾ ಗಣೇಶ್ ಪುತ್ತೂರು, ಮಲ್ಲಿಕಾ ಅಜಿತ್ ಸಿದ್ಧಕಟ್ಟೆ , ಸಾಯಿಸುಮಾ ನಾವಡ, ರಾಧಾ ಆರ್ ಹೊಳ್ಳ, ವೀಣಾ ನಾಗೇಶ ತಂತ್ರಿ, ಪೂರ್ಣಿಮಾ ಶಾಸಿŒ , ರೇವತಿ ನವೀನ್, ಕೃತಿ ಆರ್. ಹೊಳ್ಳ, ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ , ಕು| ವೃಂದಾ ಕೊನ್ನಾರ್ ಇವರ ಜತೆ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸುಲೋಚನಾ ವಿ. ರಾವ್, ಜಯಂತಿ ಎಸ್. ಹೊಳ್ಳ, ಕೆ. ಲಲಿತಾ ಭಟ್, ದೀಪ್ತಿ ಬಾಲಕೃಷ್ಣ ಭಟ್, ಕೆ. ಕಲಾವತಿ, ವಿನೋದಾ ಹಾಗೂ ಸೌಜನ್ಯ ಮಹಿಳಾ ಮಂಡಲ (ರಿ.) ಇದರ ಸದಸ್ಯೆಯರು ಭಾಗವಹಿಸಲಿರುವರು.
ಯಕ್ಷಪ್ರಿಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.