ಯಕ್ಷಮಂಡಲದ ವಿಜಯನಾಥ
Team Udayavani, Mar 24, 2017, 3:50 AM IST
ಮಣಿಪಾಲದ ಪಾರಂಪರಿಕ ಗ್ರಾಮ ನಿರ್ಮಾಣ, ಅದಕ್ಕೂ ಮೊದಲು ಹಸ್ತಶಿಲ್ಪ ವಸ್ತುಸಂಗ್ರಹ ಸಂಪದ – ಇವುಗಳ ಮೂಲಕ ಸಂಸ್ಕೃತಿ ಸೇವೆಯಲ್ಲಿ ಮಾದರಿ ಕೆಲಸವನ್ನು ಮಾಡಿ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮನ್ನಣೆ ಹೊಂದಿದ್ದವರು ವಿಜಯನಾಥ ಶೆಣೈ. ಅವರ ಅಷ್ಟೊಂದು ಪರಿಚಯವಿಲ್ಲದ ಇನ್ನೊಂದು ಮುಖ ಅವರ ತೀವ್ರವಾದ ಯಕ್ಷಗಾನ ಅಭಿಮಾನ. ಮನಸ್ಸಿಗೆ ಒಪ್ಪಿದ ಯಾವುದನ್ನೇ ಆದರೂ ತೀರ ಹಚ್ಚಿಕೊಂಡು ಕೆಲಸ ಮಾಡುವುದು ಅವರ ಸ್ವಭಾವ. ಸಂಗೀತ, ಸಾಹಿತ್ಯ, ವಾಸ್ತುಶಿಲ್ಪ, ಸಾಧಕರ ಬಗೆಗಿನ ಕೆಲಸ – ಎಲ್ಲದರಲ್ಲೂ ಶೆಣೈ ಚಿಂತಕ – ಭಾವುಕ ರಸಿಕ, ಅವಧೂತ.
1970-1990 ದಶಕಗಳಲ್ಲಿ ಸಕ್ರಿಯವಾಗಿದ್ದ ಅವರ ನೇತೃತ್ವದ ಯಕ್ಷಮಂಡಲ ಮಣಿಪಾಲ- ಒಂದು ಧ್ಯೇಯಬದ್ಧ ಸಂಘಟನ ಸಂಸ್ಥೆ. ಅದು ಸಂಘಟಿಸಿದ ಹತ್ತಾರು ಕಾರ್ಯಕ್ರಮಗಳು ವಿಶಿಷ್ಟ. ಆ ಸಮಯದಲ್ಲಿ ಅವರೊಂದಿಗೆ ಸಹಕರಿಸಿದ ಅನುಭವಗಳು ಆಪ್ಯಾಯಮಾನ.
ಮಂಗಳೂರು ಪುರಭವನದಲ್ಲಿ ಅವರು ನಿರೂಪಿಸಿದ್ದ ಹಿರಿಯ ಕಲಾವಿದರ ತಾಳಮದ್ದಲೆ ಕೂಟ ಅಂತಹ ಒಂದು ವಿಶಿಷ್ಟ ಪ್ರಯತ್ನ. ಅಗರಿ ಶ್ರೀನಿವಾಸ ಭಾಗವತರು (ದಿವಾಣ, ಪಾಂಗಣ್ಣಾಯರ ಹಿಮ್ಮೇಳ), ಕೀರಿಕ್ಕಾಡು ಮಾಸ್ತರರು, ಪೊಲ್ಯ ದೇಜಪ್ಪ ಶೆಟ್ಟಿ, ಮಟ್ಟಿ ಸುಬ್ಬರಾವ್, ದೇರಾಜೆ ಸೀತಾರಾಮಯ್ಯ, ಪುಂಡೂರು ಗೋಪಾಲಕೃಷ್ಣ ಪುಣಿಂಚತ್ತಾಯರು, ಕೊರಕ್ಕೋಡು ಭವಾನಿಶಂಕರ ರಾವ್, ಕೋಟಿಕುಂಜ ನಾರಾಯಣ ಶೆಟ್ಟರು ಮತ್ತು ಶೇಣಿಯವರು (ಅವರೇ ಆ ತಂಡದ ಕಿರಿಯ ಅರ್ಥಧಾರಿ ಕಲಾವಿದ!-70 ವರ್ಷಕ್ಕೆ ಸಮೀಪ) ಇವರನ್ನು ಸೇರಿಸಿದ ನಮ್ಮ ಅಂದಿನ ಸಾಹಸ, ಸಾರ್ಥಕ್ಯ – ನೆನಪಿನ ಸಿಹಿಬುತ್ತಿ.
ಉದಯವಾಣಿ ಪತ್ರಿಕೆ ತನ್ನ ವಿಂಶತಿ ಆಚರಣೆಯ ಅಂಗವಾಗಿ ಏರ್ಪಡಿಸಿದ್ದ ಬಯಲಾಟಗಳ ಸಂಯೋಜನೆಯಲ್ಲೂ ಶೆಣೈ ಮುಖ್ಯರಾಗಿದ್ದರು. ಕಲಾ ಸನ್ನಿವೇಶಗಳ ಕುರಿತು, ಕಲಾವಿದರ ಕುರಿತು ಮಾತಾಡು ವಾಗ ವಿಜಯನಾಥರ ಭಾವ, ಭಂಗಿ ರೀತಿ – ಅದೇ ಒಂದು ಕಲಾನುಭವ. ಕಣ್ಣುಮುಚ್ಚಿ ಮೇಲೆ ನೋಡಿ, ವರ್ಣಿಸುತ್ತ “”ವೈರೇ, …… ಕಸ್‌ನೆÅà, ತೇಂ – ಮಳಾರಿ- ಅದ್ಭುತರೇ.., ಕಳ್ವೆàಂ” (ನೋಡು… ಆಹಾ ಎಂಥದದು… ಅಂದ್ರೆ… ಅದ್ಭುತ ಗೊತ್ತಾಯ್ತಾ!) ಎನ್ನುತ್ತ, ವೀಳ್ಯದ ರಸದೊಟ್ಟಿಗೆ ಕಲಾರಸಾಸ್ವಾದನೆ ಮಾಡುತ್ತಿದ್ದ ಶೆಣೈ ಓರ್ವ ಲೀನ ರಸಿಕ.
ಶೆಣೈ ಅವರ ಮಾತಿನ ರೀತಿ ವಿಚಿತ್ರ, ತುಂಡು ತುಂಡು… ಬಿಟ್ಟ ಪದ ನಾವು ತುಂಬಿಸಬೇಕು. ಆದರೆ ಅವರ ಪತ್ರಗಳು ಅತ್ಯಂತ ವ್ಯವಸ್ಥಿತ ವಿವರ ವಿವರ. ಚಿತ್ತಿಲ್ಲದ ಬರಹ, ಆಲಸ್ಯವಿಲ್ಲದ ಬರವಣಿಗೆ. ನಾನು ಅವರ ಪತ್ರಗಳನ್ನು ಕಾಯ್ದುಕೊಂಡಿಲ್ಲ ಎಂಬುದು ಬೇಸರದ ವಿಚಾರ. ದೇವಾಲಯದ ಶಿಲ್ಪ ಶೈಲಿ ಇತ್ಯಾದಿಗಳ ಕುರಿತು ಅವರು, ಸಂಶೋಧಕ ಮಂಜೇಶ್ವರ ಮುಕುಂದ ಪ್ರಭುಗಳೊಂದಿಗೆ ನಡೆಸಿದ ಪತ್ರ ವ್ಯವಹಾರ ಪ್ರಕಟವಾಗಿದ್ದು, ವಿಚಾರದ ನಿಧಿಯಂತಿದೆ.
ಹಸ್ತಶಿಲ್ಪ ಸಂಗ್ರಹದಲ್ಲಿ, ಪಾರಂಪರಿಕ ಗ್ರಾಮದಲ್ಲಿ, ಪತ್ರ, ಮಿತ್ರ ಹೃದಯಗಳಲ್ಲಿ ಶೆಣೈ ವಿಜಯಿ, ಜೀವಂತ, ಪ್ರೇರಕ.
ಡಾ| ಎಂ. ಪ್ರಭಾಕರ ಜೋಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.