ಯಕ್ಷ ನವಾಹ ಮನರಂಜನೆಯ ಪ್ರವಾಹ
Team Udayavani, Jun 1, 2018, 6:00 AM IST
ರಾಜಾಯಯಾತಿ, ಕಾಯಕಲ್ಪ, ದಕ್ಷಾಧ್ವರ, ಕನಕಾಂಗಿ ಕಲ್ಯಾಣ, ರಕ್ತರಾತ್ರಿ ,ಗಜೇಂದ್ರ ಮೋಕ್ಷ, ಊರ್ವಶಿ ಶಾಪ, ರತಿಕಲ್ಯಾಣ,ಯೋಗಿನಿ ಸಂಧಾನ, ವೀರಮಣಿ ಕಾಳಗ, ಕುಶಲವ, ದ್ರುಪದ ಗರ್ವಭಂಗ, ಹಿಡಿಂಬಾ ವಿವಾಹ, ಭಾನುಮತಿ ಸ್ವಯಂವರ, ಪಾರಿಜಾತ, ನರಕಾಸುರ ವಧೆ, ಮೈಂದ ದ್ವಿವಿದ, ಗಾಂಗೇಯ, ಶಶಿಪ್ರಭಾ ಪರಿಣಯ, ಇಂದ್ರಜಿತು ಕಾಳಗ, ಅಗ್ರ ಪೂಜೆ
ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮೇ 10 ರಿಂದ 18 ರವರೆಗೆ ತೆಂಕುತಿಟ್ಟಿನ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿಯವರಿಂದ ಯಕ್ಷಗಾನ ನವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜಾಯಯಾತಿ, ಕಾಯಕಲ್ಪ, ದಕ್ಷಾಧ್ವರ, ಕನಕಾಂಗಿ ಕಲ್ಯಾಣ, ರಕ್ತರಾತ್ರಿ ,ಗಜೇಂದ್ರ ಮೋಕ್ಷ, ಊರ್ವಶಿ ಶಾಪ, ರತಿಕಲ್ಯಾಣ,ಯೋಗಿನಿ ಸಂಧಾನ, ವೀರಮಣಿ ಕಾಳಗ, ಕುಶಲವ, ದ್ರುಪದ ಗರ್ವಭಂಗ, ಹಿಡಿಂಬಾ ವಿವಾಹ, ಭಾನುಮತಿ ಸ್ವಯಂವರ, ಪಾರಿಜಾತ, ನರಕಾಸುರ ವಧೆ, ಮೈಂದ ದ್ವಿವಿದ, ಗಾಂಗೇಯ, ಶಶಿಪ್ರಭಾ ಪರಿಣಯ, ಇಂದ್ರಜಿತು ಕಾಳಗ,ಅಗ್ರ ಪೂಜೆ ಎಂಬ 21 ವೈವಿಧ್ಯಮಯ ಪೌರಾಣಿಕಪ್ರಸಂಗಗಳನ್ನು ಪ್ರಚಲಿತ ವಿದ್ಯಮಾನಗಳೊಂದಿಗೆ ಸಮೀಕರಿಸಿ ಅದ್ಭುತವಾಗಿ ಪ್ರದರ್ಶಿಸಲಾಯಿತು.
ಯಕ್ಷಗಾನ ಪ್ರದರ್ಶನದ ಪ್ರಥಮಾರ್ಧದಲ್ಲಿ ಯುವ ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ ,ವಿನಯ ಕಡಬ, ಚೈತನ್ಯಕೃಷ್ಣರ ಲವಲವಿಕೆಯ ಸಾರಥ್ಯವಿದ್ದರೆ , ದ್ವಿತೀಯಾರ್ಧದಲ್ಲಿ ಹಿರಿಯರಾದ ಪದ್ಯಾಣ ಗಣಪತಿ ಭಟ್ ,ಶಂಕರನಾರಾಯಣ ಭಟ್ ಜಯರಾಮ ಭಟ್ ಹಾಗೂ ಚಕ್ರತಾಳದ ಕಲಾವಿದರು ಉತ್ಸಾಹಿ ಪ್ರದರ್ಶನವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಪೂರ್ವಹಿಮ್ಮೇಳ ಹಾಗೂ ಮುಮ್ಮೇಳದ ಕಲಾವಿದರನ್ನೇ ಹೊಂದಿರುವ ಹನುಮಗಿರಿ ಮೇಳದ ಒಂದೊಂದು ಪ್ರಸಂಗದ ಪ್ರಸ್ತುತಿಯೂ ವಿಶಿಷ್ಟವಾಗಿದ್ದು, ಯಕ್ಷಾಭಿಮಾನಿಗಳಿಗೆ ರಸದೌತಣವನ್ನು ನೀಡಿತು. ಹಿರಿಯರಾದ ಶಿವರಾಮ ಜೋಗಿಯವರು ಬಲರಾಮ, ಭೀಮ ಪಾತ್ರಗಳಲ್ಲಿ ಮಿಂಚಿದರೆ, ಸುಬ್ರಾಯ ಹೊಳ್ಳರ ಕೌರವ, ಶಂತನು, ಶತ್ರುಘ್ನ ಪಾತ್ರಗಳು ಮನ ರಂಜಿಸಿದವು. ಹೊಳ್ಳರ ಇಂದ್ರಜಿತು ಪಾತ್ರ ನಿರ್ವಹಣೆಯ ಬಹು ಕಾಲ ಜನ ಮಾನಸದಲ್ಲಿ ಉಳಿಯುವಂತಿತ್ತು.
ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ವೀರಮಣಿ, ದ್ರುಪದ, ಶಿಶುಪಾಲನಾಗಿ ಬೀಗುತ್ತ, ಬಾಗುತ್ತ ವಿಜೃಂಭಿಸಿದರು. ಗಾಂಗೇಯನಾಗಿ ತಮ್ಮ ವಾಗ್ವೆ„ಖರಿಯಿಂದ ಮೂಕವಿಸ್ಮಿತರನ್ನಾಗಿಸಿದರು.ಪ್ರಸಿದ್ಧ ಅರ್ಥಧಾರಿ ವಾಸುದೇವ ರಂಗಾ ಭಟ್ಟರು ರಾಮನಾಗಿ, ಪರಶುರಾಮನಾಗಿ, ದ್ರೋಣನಾಗಿ ಪ್ರಸಂಗದ ವಿಸ್ತೃತ ಚಿತ್ರಣವನ್ನು ಮುಂದಿರಿಸಿದರು. ಅಸುರ ಪಾತ್ರಗಳಿಗೆ ತೆಳು ಹಾಸ್ಯ ಲೇಪನವನ್ನಿತ್ತು ಪ್ರಸಂಗಗಳನ್ನು ಮನೋರಂಜನೀಯವಾಗುವಂತೆ ಮಾಡಿದವರು ಸದಾಶಿವ ಶೆಟ್ಟಿಗಾರ್. ಕಂಚಿನ ಕಂಠದ ಜಗದಾಭಿರಾಮರ ಹಿಡಿಂಬಾ, ಶಲ್ಯ, ಕಿರಾತ ಪಾತ್ರಗಳು ಅದ್ಭುತವಾಗಿದ್ದವು. ದಿವಾಕರ ರೈಯವರು ಕೃಷ್ಣನಾಗಿ, ಲಕ್ಷ್ಮಣನಾಗಿ, ಗಂಧರ್ವನಾಗಿ ಪಾತ್ರಕ್ಕೆ ಜೀವಂತಿಕೆಯನ್ನು ತುಂಬಿದರೆ, ಸಹೃದಯಿ ಶೀನಪ್ಪ ರೈಯವರು ದೇವೇಂದ್ರನಾಗಿ ,ಕಲಿ ಭೀಮನಾಗಿ ರಂಗದಲ್ಲಿ ಮೆರೆದರು.ತಮ್ಮ ನಾಟ್ಯ, ಉತ್ತಮ ಮುಖವರ್ಣಿಕೆ ಹಾಗೂ ಸಮಯೋಚಿತ ಮಾತುಗಳಿಂದ ಪೆರ್ಲ ಜಗನ್ನಾಥ ಶೆಟ್ಟಿಯವರು ಗಮನ ಸೆಳೆದರು. ನರಕಾಸುರ ವಧೆಯ ಕೃಷ್ಣನ ಪಾತ್ರ ಅತ್ಯುತ್ತಮವಾಗಿತ್ತು. ಪೋಷಕ ಪಾತ್ರಗಳಲ್ಲಿ ಸದಾಶಿವ ಕುಲಾಲ್ ಅಚ್ಚುಕಟ್ಟಾದ ಪ್ರದರ್ಶನವನ್ನು ನೀಡಿದರು.
ಸ್ತ್ರೀ ಪಾತ್ರಗಳಲ್ಲಿ ಸಂತೋಷ್ ಹಿಲಿಯಾಣ, ರಕ್ಷಿತ್ ಶೆಟ್ಟಿಯವರು ತಮ್ಮ ದಣಿವರಿಯದ ನಾಟ್ಯ ಶೈಲಿ ಹಾಗೂ ಚುರುಕಾದ ಮಾತಿನಿಂದ ಕರತಾಡನಕ್ಕೆ ಭಾಜನರಾದರೆ, ಹಿರಿಯರಾದ ರಮೇಶ ಆಚಾರಿಯವರು ತಮ್ಮ ಅನುಭವದ ವ್ಯಾಖ್ಯಾನಗಳಿಂದ ಜನರ ಅಭಿಮಾನಕ್ಕೆ ಪಾತ್ರರಾದರು.ಹಾಸ್ಯ ಪಾತ್ರಗಳಲ್ಲಿ ಹಿರಿಯರಾದ ಜಯರಾಮ ಆಚಾರಿ ಹಾಗೂ ಸೀತಾರಾಮ ಕುಮಾರ್‌ರವರು ಪಾತ್ರಗಳಿಗೆ ಸೂಕ್ತ ನ್ಯಾಯ ಒದಗಿಸಿದರು.
ದೇವೇಂದ್ರನಾಗಿ ಜಯಾನಂದ ಶೆಟ್ಟಿಯವರು ತಮ್ಮ ಅಭಿನಯ ಹಾಗೂ ಮಾತಿನಿಂದ ರಂಜಿಸಿದರು. ಪ್ರಜ್ವಲ್, ಪ್ರಕಾಶ್, ಶಿವರಾಜ್, ಅಕ್ಷಯ್, ಅಜಿತ್ ಮೊದಲಾದ ಉದಯೋನ್ಮುಖ ಕಲಾವಿದರು ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದರು. ಈ ಇಪ್ಪತ್ತೂಂದು ಪ್ರಸಂಗಗಳಲ್ಲಿ ಗಾಂಗೇಯ ಅತ್ಯಂತ ಯಶಸ್ವೀ ಪ್ರದರ್ಶನವಾಗಿದ್ದು , ಮನ ಗೆಲ್ಲುವಲ್ಲಿ ಸಫಲವಾಯಿತು. ಎಲ್ಲ ಪ್ರಸಂಗಗಳು ಆಬಾಲವೃದ್ಧರನ್ನು ಆಕರ್ಷಿಸಿದವು.
ರೂಪಾ ಡಿ.ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.