ಯಕ್ಷ ಸಂಗಮ ಒಡ್ಡೋಲಗ
ಸಭಾ ಕಾರ್ಯಕ್ರಮಕ್ಕೊಂದು ಹೊಸ ಆಯಾಮ
Team Udayavani, Mar 29, 2019, 6:00 AM IST
ಪುರಭವನದಲ್ಲಿ ಇತ್ತೀಚೆಗೆ ಪ್ರಥಮ ಬಾರಿಗೆ ನಡೆದ ಲಯನ್ಸ್ ಯಕ್ಷ ಸಂಗಮ ಒಡ್ಡೋಲಗ ಜನಮನ ರಂಜಿಸಿತು. ಲಯನ್ಸ್ ನಾಯಕರು, ಗಣ್ಯರು, ಅತಿಥಿಗಳು, ಸಮ್ಮಾನಿತರು ಮತ್ತು ಸಂಚಾಲಕರ ಸಹಿತ ಇಡೀ ಕಾರ್ಯಕ್ರಮ ಯಕ್ಷಗಾನ ವೇಷ ಭೂಷಣದಲ್ಲಿ ಏಕಕಾಲದ ಒಡ್ಡೋಲಗದ ಮೂಲಕ ಸಭಿಕರನ್ನು ಆನಂದಿಸಿತು.
ಜಿಲ್ಲಾ ಗವರ್ನರ್ ದೇವದಾಸ ಭಂಡಾರಿ ಮತ್ತು ಕ್ಯಾಬಿನೇಟ್ ಕೋಶಾಧಿಕಾರಿ ಶ್ರೀನಾಥ್ ಕೊಂಡೆ ಗಂಭೀರದ ಪೀಟಿಕೆಯ ರಾಜವೇಷದಲ್ಲಿ ಆಗಮಿಸಿದರೆ ಉಪ ಗವರ್ನರ್ ಗೀತಾ ಪ್ರಕಾಶ್ ಕಿರೀಟ ವೇಷದಲ್ಲಿ ಮನಸೆಳೆದರು. ಮಾಜಿ ಗವರ್ನರ್ ಜಿ. ಕೆ. ರಾವ್ ರಾಜ ವೇಷದಲ್ಲಿ ರಂಗಪ್ರವೇಶ ಮಾಡಿದರು. ಸಂಪುಟ ಕಾರ್ಯದರ್ಶಿ ಬಾಲಕೃಷ್ಣ ಹೆಗಡೆ ಭೀಮ ಮುಡಿಯ ಬಣ್ಣದ ವೇಷ, ಲಕುಮಿ ತಂಡದ ನಾಯಕ ಕಿಶೋರ್ ಡಿ. ಶೆಟ್ಟಿಯವರ ಮಹಿಷಾಸುರ ಹೆಜ್ಜೆ ಅವರ ದೀರ್ಘಕಾಲದ ಕಲಾ ಬದುಕಿಗೆ ಸಾಕ್ಷಿಯಾಗಿತ್ತು. ಮಾದವ ಶೆಟ್ಟಿ ಬಾಳ ಕೇಸರಿ ತಟ್ಟಿ ಬಣ್ಣದ ವೇಷದಲ್ಲಿ ಮಿಂಚಿದರೆ, ವಿಟ್ಲ ಮಂಗೇಶ್ ಭಟ್ ದೇವಧೂತ ಹಾಸ್ಯರಾಗಿ ಮನ ಸೆಳೆದರು. ವಸಂತ್ ಶೆಟ್ಟಿ ಪಗಡಿ ಗುಡ್ಡು ಕಿರೀಟ ವೇಷ ಧರಿಸಿದ್ದರೆ ಸಾರ್ವಜನಿಕ ಸಮಪರ್ಕ ಅಧಿಕಾರಿ ಚಂದ್ರಹಾಸ ಶೆಟ್ಟಿ ಚಂಡ ಮುಂಡ ವೇಷದಲ್ಲಿ ಗಮನ ಸೆಳೆದರು. ದ್ವಿತೀಯ ಗವರ್ನರ್ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಡಿ. ಎಂ. ಭಾರತಿ ಹಾಗೂ ಲಯನ್ಸ್ ಮಹಿಳೆಯರು ಶ್ರೀದೇವಿ, ರಾಣಿ ಮತ್ತು ಕಸೆ ವೇಷದಲ್ಲಿ ಮೆರೆದರು.
ಯಕ್ಷ ಸಂಗಮದ ಮುಖ್ಯ ಸಂಯೋಜಕ ಸಭಾಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಯಕ್ಷ ವೇಷ ನೃತ್ಯಾಭಿನಯದೊಂದಿಗೆ ಹೊಗಳಿಕೆ ಸೂತ್ರದಾರನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದರು. ವಿಜಯ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ ಸುಂದರ ಶೆಟ್ಟಿ ಕಿರೀಟ ವೇಷದಲ್ಲಿ ಧನ್ಯವಾದ ಗೈದರು. ಯಕ್ಷಗಾನ ಭಾಗವತಿಕೆಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದ ಯೋಗಿಶ್ ಕುಮಾರ್ ಜೆಪ್ಪು ಇವರ ಸುಂದರ ಮನಮೋಹಕ ಹಾಡುಗಳ ಮೂಲಕ ಸಭಿಕರ ಮನಗೆದ್ದರು.
ನಂತರ ರಾಕೇಶ್ ರೈ ಅಡ್ಕ ಸಂಯೋಜನೆಯಲ್ಲಿ ಅಬ್ಬರ ತಾಳ, ಯಕ್ಷ ಪೂರ್ವ ರಂಗ ಮತ್ತು ಪ್ರಸಿದ್ದ ಯಕ್ಷಗಾನ ಕಲಾವಿದರಿಂದ ತರುಣಿ ಸೇನಾ ಕಾಲಗ ಯಕ್ಷಗಾನ ಪ್ರದರ್ಶನ ಈ ಸಂದರ್ಭದಲ್ಲಿ ನಡೆಯಿತು.
ಮೂಲ್ಕಿ ಕರುಣಾಕರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.