ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಯಕ್ಷ ವಿಕ್ರಮ

ವಿಜಯ ಮಕ್ಕಳ ಕೂಟದ ಪ್ರಸ್ತುತಿ

Team Udayavani, Apr 19, 2019, 6:00 AM IST

3

ಸೋದರಿಯ ಸೋಲಿಗೆ ಕುಪಿತನಾಗಿ ಕೃಷ್ಣನೊಡನೆ ಸಮರಕ್ಕೆ ಅಣಿಯಾಗುವ ಬಲರಾಮ, ಯಾಜ್ಞ ಸೇನೆಗೆ ಅಬ್ಬರಕ್ಕೆ ಬೆರಗಾಗುವ ಕೃಷ್ಣ ಹೀಗೆ ಪ್ರಸಂಗವನ್ನು ಸರಳೀಕೃತಗೊಳಿಸಿಕೊಂಡು ಅಣಿಗೊಳಿಸಿದ್ದು ಅರ್ಥಪೂರ್ಣ.

ಸ್ಪಷ್ಟವಾದ ಮಾತುಗಾರಿಕೆ, ಎಲ್ಲಿಯೂ ಎಡವದ ಸಂಭಾಷಣೆ, ಹೆಜ್ಜೆಗಾರಿಕೆಯಲ್ಲಿ ಲೋಪ ಕಂಡು ಹಿಡಿಯಲಾಗದಷ್ಟು ಸ್ಪಷ್ಟತೆ, ಒಂದೊಂದು ಸನ್ನಿವೇಶಕ್ಕೆ ಪಾತ್ರಧಾರಿ ಬದಲಾಗುತ್ತಿದ್ದರೂ ಕೂಡಾ ತಪ್ಪದ ಲಯ… ಒಟ್ಟಂದದಲ್ಲಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಯಕ್ಷ ಮಂಟಪ ಕಟ್ಟಿದ್ದು ಆತ್ರಾಡಿ ವಿಜಯ ಮಕ್ಕಳ ಕೂಟದ ಸಾಂಸ್ಕೃತಿಕ ವೇದಿಕೆಯಲ್ಲಿ. ಈ ಬಾರಿಯ ದ್ರೌಪದಿ ಪ್ರತಾಪ ಆಖ್ಯಾನ ಸಾವಿರಾರು ಜನ ಪ್ರೇಕ್ಷಕರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.

ವೀರ ರಸೋಚಿತ ಪ್ರಸಂಗವನ್ನು ಆಯ್ದುಕೊಂಡಿದ್ದು, ಪಾತ್ರ ನಿರ್ವಹಣೆ ಮಾಡಿದ ಪ್ರತಿಯೋರ್ವ ಬಾಲ ಕಲಾವಿದರೂ ಕೂಡಾ ಶಹಬ್ಟಾಸ್‌ ಎನ್ನುವಂತಹ ಅಭಿನಯ ನೀಡಿದ್ದಾರೆ. ಕುರುಕ್ಷೇತ್ರ ಸಂಗ್ರಾಮದ ಯಶೋಗಾಥೆಯ ವಿಚಾರದಲ್ಲಿ ನಡೆದ ಚರ್ಚೆ, ಭೀಮನ ಕುಪಿತಗೊಳಿಸಿದ ಪಾರ್ಥನ ನುಡಿ, ಭೀಮನ ಮಾತಿಗೆ ಅಷ್ಟೇ ಪರಿಪಕ್ವವಾದ ಸಮಾಜಾಯಿಸಿಯನ್ನು ನೀಡುವ ಅರ್ಜುನ ಮೊದಲಾರ್ಧದಲ್ಲಿ ಕರತಾಡನಕ್ಕೆ ಪಾತ್ರವಾದರೆ, ಭೀಮ ಕೈ ಸೋತಾಗ ಪಾರ್ಥ ಅರರೇ ಪ್ರಕೋಧರ ಗೆದ್ದ| ಕಟಕಿತನ, ಅರ್ಜುನ-ದ್ರೌಪದಿಯರ ನಡುವೆ ವಾಕ್‌ಚಕಮಕಿ, ನೀರ ನಿನಗೆ ನಮ ಸ್ಕಾರ| ಪದ್ಯಕ್ಕೆ ದ್ರೌಪದಿ ನೃತ್ಯ ಸ್ತಂಭಿಭೂತಗೊಳಿಸಿತು. ಸುಭದ್ರೆ ಮತ್ತು ದ್ರೌಪದಿಯರ ನಡುವಿನ ಸಂಭಾಷಣೆ, ಯಾರಿಗಾಗಿ ಯಾರು ಬರುವರೇ ಅಕ್ಕ ಪದ್ಯಕ್ಕೆ ಸುಭದ್ರೆ ಪಾತ್ರಧಾರಿ ಅರ್ಥಪೂರ್ಣ ಕುಣಿತ ಉತ್ತಮವಾಗಿತ್ತು. ಸೋದರಿಯ ಸೋಲಿಗೆ ಕುಪಿತನಾಗಿ ಕೃಷ್ಣನೊಡನೆ ಸಮರಕ್ಕೆ ಅಣಿಯಾಗುವ ಬಲರಾಮ, ಯಾಜ್ಞಸೇನೆಗೆ ಅಬ್ಬರಕ್ಕೆ ಬೆರಗಾಗುವ ಕೃಷ್ಣ ಹೀಗೆ ಪ್ರಸಂಗವನ್ನು ಸರಳೀಕೃತಗೊಳಿಸಿಕೊಂಡು ಅಣಿಗೊಳಿಸಿದ್ದು ಅರ್ಥಪೂರ್ಣ.

ಭೀಮನಾಗಿ ಶರಣ್‌, ಅರ್ಜುನನಾಗಿ ಸುಮಂತ್‌ ರೋಷಾಕ್ರೋಶದೊಂದಿಗೆ ಉತ್ತಮ ನಾಂದಿ ಹಾಡಿದರೆ, ಸಾಂಪ್ರದಾಯಿಕ ಅರ್ಜುನ ರಂಗದಲ್ಲಿ ಕಾಣುವಂತಾಯಿತು. ಕುರುಕ್ಷೇತ್ರ ಸಮರದಲ್ಲಿ ತನ್ನ ಸಾಧನೆ ಅಧಿಕ ಎಂದು ನಿರೂಪಿಸುವ ಅರ್ಜುನನ ಗಾಂಭೀರ್ಯ ನುಡಿ ಮೆಚ್ಚುಗೆ ಪಡೆಯಿತು. ಭೀಮನೂ ಕೂಡಾ ಸಂಭಾಷಣೆಯಲ್ಲಿ ಹಿಂದುಳಿಯಲಿಲ್ಲ.

ಮೊಗೆಬೆಟ್ಟು ಅವರ ಎಂದಿನ ಶೈಲಿಯ ಪದ್ಯಗಳು ಹಿತವಾಗಿದ್ದವು. ಅಷ್ಟತಾಳ, ಬಿಲಹರಿ ರಾಗದಲ್ಲಿ ಮೂಡಿಬಂದ ಅರರೆಕ್ರೋಧರ ಗೆದ್ದ…, ದ್ರೌಪದಿ ಪಾರ್ಥಗೆದುರಾಗುವ ಸಂದರ್ಭ ಮೋಹನ ರಾಗದ ನೀರ ನಿನಗೆ ನಮ ಸ್ಕಾರ…, ಸುಭದ್ರೆ ದ್ರೌಪದಿಗೆ ಎದುರಾದ ವೇಳೆ ಭೀಮಪಲಾಸ್‌ ರಾಗದಲ್ಲಿ ಏಕಕೊರೆ ತಾಳದಲ್ಲಿ ಯಾರಿಗಾಗಿ ಯಾರು ಬರುವರು ಅಕ್ಕ…, ಯಮನ್‌ ಕಲ್ಯಾಣಿ ರಾಗದಲ್ಲಿ ಮೂಡಿಬಂದ ವರನಿಂದೆ ಇರುವ ನಾರಿ… ಕೃಷ್ಣ ಸೋದರಿಗೆ ಅರುಹುವ ಅಬೇರಿ ರಾಗ ಏಕಕೊರೆ ತಾಳದಲ್ಲಿ ಏನು ಭ್ರಮರಬಾಷೆ… ಪದ್ಯಗಳು ಚಿತ್ತಬಿತ್ತಿಯಲ್ಲಿ ಅಚ್ಚೊತ್ತುವಂತಿತ್ತು.

ದ್ರೌಪದಿಯಾಗಿ ಶ್ರೀಶ ಸ್ತ್ರೀಸಹಜತೆಯಿಂದ ಗಮನ ಸಳೆದರೆ ಕಸೆವೇಷದಲ್ಲಿ ಪ್ರತೀಕ್ಷಾ, ಅನನ್ಯಾ ಉತ್ತಮ ಪಾತ್ರ ನಿರ್ವಹಣೆ ಮಾಡಿದರು. ಪ್ರಾರಂಭದಲ್ಲಿ ಸುಭದ್ರೆಯಾಗಿ ವೈಭವಿಯದ್ದು ಮುದ್ದಾದ ಅಭಿನಯ, ವೀರಕಸೆ ತೊಟ್ಟ ಸುಭದ್ರೆಯಾಗಿ ಮನ್ವಿತಾ ರಂಗದಲ್ಲಿ ಮಿಂಚಿದರು. ಕೃಷ್ಣನಾಗಿ ರಂಗಪ್ರವೇಶ ಕಂಡುಕೊಂಡ ಟಿ.ಕೆ ನಂದನದ್ದು ಉತ್ತಮ ನೃತ್ಯ.ಅಷ್ಟೇ ಸ್ಪಷ್ಟ ಮಾತುಗಾರಿಕೆ. ಬಲರಾಮನಾಗಿ ರೋಹನ್‌ ಆಕ್ರೋಶ, ಸಿಡಿಮಿಡಿಯನ್ನು ಉತ್ತಮವಾಗಿ ಅಭಿವ್ಯಕ್ತಿಸಿದ್ದಾರೆ. ಕೃತವರ್ಮನಾಗಿ ಧ್ರುವ, ಮನ್ಮಥನಾಗಿ ಸಚಿನ್‌, ಈಶ್ವರನಾಗಿ ಅನುಶ್ರೀ, ವೀರಭದ್ರನಾಗಿ ನಿಹಾರ್‌, ಪಾರ್ವತಿಯಾಗಿ ಧನ್ವಿ, ಚಂಡಿಕೆಯಾಗಿ ವೈಭವಿ, ರುದ್ರಾಂಭಿಕೆಯಾಗಿ ಮನ್ವಿತಾ ಪಾತ್ರಗಳನ್ನು ಸಚೇತನಗೊಳಿಸಿದ್ದಾರೆ. ಬಾಲಗೋಪಾಲರಾಗಿ ಪ್ರಣವ್‌, ಆಶಿತ್‌, ರೋಹನ್‌, ಶಮಂತ್‌, ರಶುತ್‌, ಪ್ರಥ್ವಿ, ಅನನ್ಯಾ ಜಿ., ಮನೀಶ್‌, ಭವಿತ್‌, ಪೀಠಿಕಾ ಸ್ತ್ರೀವೇಶದಲ್ಲಿ ಅನ್ವೇಶ್‌, ವೈಭವ್‌, ಪ್ರಥ್ವಿನ್‌, ಸೃಜನ್‌, ಪ್ರಥಮ್‌ ಮಿಂಚಿದ್ದಾರೆ.

ಯಕ್ಷಗುರು ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ಅವರ ಸಮರ್ಥ ನಿರ್ದೇಶನ, ಸುಶ್ರಾವ್ಯ ಭಾಗವತಿಕೆ ಯಶಸ್ಸಿನ ಪ್ರಮುಖಾಂಶ.ಮದ್ದಳೆಯಲ್ಲಿ ರಾಘವೇಂದ್ರ ರಾವ್‌ ಸಕ್ಕಟ್ಟು, ಚಂಡೆಯಲ್ಲಿ ಭಾಸ್ಕರ ಆಚಾರ್ಯ ಕನ್ಯಾನ ಉತ್ತಮ ಸಾಥ್‌ ನೀಡಿದ್ದಾರೆ.

ನಾಗರಾಜ್‌ ಬಳಗೇರಿ

ಟಾಪ್ ನ್ಯೂಸ್

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.