ಯಕ್ಷಗಾನ ಕಲಾವಿದ ಬರೆಪ್ಪಾಡಿ ಅನಂತಕೃಷ್ಣ ಭಟ್‌


Team Udayavani, Sep 8, 2017, 1:39 PM IST

08-KALA-3.jpg

ಇತ್ತೀಚೆಗೆ ನಿಧನ ಹೊಂದಿದ ಅನಂತಕೃಷ್ಣ ಬರೆಪ್ಪಾಡಿ ಯಕ್ಷ ಕಲಾಮಾತೆಯ ಸೇವೆಯನ್ನು ಹಲವು ರೂಪಗಳಲ್ಲಿ ನಡೆಸಿದ ಮೌನ ಸಾಧಕ. ಕಪಟಗಳಿಲ್ಲದ ನಿಸ್ಪೃಹ ವ್ಯಕ್ತಿತ್ವ, ಪ್ರತಿಫ‌ಲಾಪೇಕ್ಷೆಯಿಲ್ಲದ ನಿಸ್ವಾರ್ಥ ಬದುಕು ಅವರದು.

ಕಾವೇರಿಯಮ್ಮ ಮತ್ತು ಸೀತಾರಾಮ ನಡ್ವಂತಿಲ್ಲಾಯರ ದ್ವಿತೀಯ ಪುತ್ರ ಅನಂತಕೃಷ್ಣ ಭಟ್ಟರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು, ಮಲತಾಯಿ ರುಕ್ಮಿಣಿ ಯವರ ಆರೈಕೆಯಲ್ಲಿ ಬೆಳೆದವರು. ವಿಟ್ಲ ಹೈಯರ್‌ ಎಲಿಮೆಂಟರಿ ಶಾಲೆ ಯಲ್ಲಿ ಏಳನೆಯ ತರಗತಿಯ ತನಕ ಓದಿದ ಬಳಿಕ ವಿದ್ಯಾಭ್ಯಾಸ ಅಲ್ಲಿಗೇ ಅನಿವಾರ್ಯವಾಗಿ ನಿಂತು ಹೋಯಿತು. ತಂದೆಯ ಅನಾರೋಗ್ಯ ನಿಮಿತ್ತ,  ಚಿಕ್ಕವಯಸ್ಸಿನಲ್ಲೇ ಜವಾಬ್ದಾರಿ ಇವರ ಹೆಗಲಿಗೇರಿತು.

ಆ ಬಳಿಕ ಸ್ವಂತ ಊರಾದ ಬರೆಪ್ಪಾಡಿಯಲ್ಲೇ ಇದ್ದು, ವೈದಿಕ ಅಧ್ಯಯನಕ್ಕೆ ತೊಡಗಿದರು. ವಾರಕ್ಕೊಮ್ಮೆ ಇವರ ಊರಿಗೆ ಬರುತ್ತಿದ್ದ ಉಡುಪಿ ವ್ಯಾಸಾಚಾರ್ಯರ ಬಳಿ ಒಂದು ವರ್ಷ ಸಂಗೀತ ಸಂಗೀತ ಪಾಠವನ್ನು ಹೇಳಿಸಿಕೊಂಡಿದ್ದರು. ಆ ಕಾಲಕ್ಕೆ ಊರಿನ ಸಮೀಪದ ಮುಕ್ಕೂರಿನಲ್ಲಿ ಭಜನಾ ಸಂಘ, ಅದರ ಜತೆಗೇ ಯಕ್ಷಗಾನ ಸಂಘವು ಸ್ಥಾಪನೆಯಾಯಿತು. ಅನಂತಕೃಷ್ಣರು ಕೇವಲ 17 ವರ್ಷ ವಯಸ್ಸಿ ನಲ್ಲಿ ಅದರ ಕಾರ್ಯದರ್ಶಿಯಾದರು. ಅವರ ಮನೆ ಬರೆಪ್ಪಾಡಿಯಲ್ಲಿ ವರ್ಷಂಪ್ರತಿ ಅನಂತವ್ರತ, ಮರುದಿನ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರಾತ್ರಿಯಿಂದ ಬೆಳಗ್ಗಿನ ತನಕ ಯಕ್ಷಗಾನ ತಾಳಮದ್ದಳೆ ನಿರಂತರವಾಗಿ ನಡೆಯುತ್ತಿತ್ತು. ಈ ತಾಳಮದ್ದಳೆ ಕೂಟದಲ್ಲಿ ತಪ್ಪದೇ ವರ್ಷಂಪ್ರತಿ ಭಾಗವಹಿಸುವವರೆಂದರೆ, ಸಂಸ್ಕೃತ- ಸಾಹಿತ್ಯ ಘನವಿದ್ವಾಂಸರಾದ ತಾತಾಚಾರ್ಯನವರು ಮತ್ತು ದೇರಾಜೆ ಸೀತಾರಾಮಯ್ಯನವರು, ಯಕ್ಷಸಾಹಿತ್ಯದಲ್ಲಿ ಹಿರಿಮೆಯನ್ನು ಸಾಧಿಸಿದ ಹಿಂದಿ ಪಂಡಿತ ಗಣಪಯ್ಯನವರು. ಮತ್ತೂಬ್ಬರು ಮರದಾಳ ವಾಸುದೇವ ಬೈಪಡಿತ್ತಾಯರು.

ಮನೆಯಲ್ಲೇ ಆಗುತ್ತಿದ್ದ ಕಾರ್ಯಕ್ರಮಗಳಿಂದ ಅನಂತಕೃಷ್ಣ ಅವರಲ್ಲಿ ಯಕ್ಷಗಾನ ಆಸಕ್ತಿ ಬೆಳೆಯಿತು. ತಮ್ಮದೇ ಆದ ಒಂದು ಸಂಘವನ್ನು ಹುಟ್ಟುಹಾಕಲು ಇದು ಕಾರಣವೂ ಆಯಿತು. ಸಹೋದರ ಬರೆಪ್ಪಾಡಿ ನಾರಾಯಣ ಭಟ್ಟರ ಬೆಂಬಲವೂ ದೊರಕಿತು.

ಅನಂತಕೃಷ್ಣ ಅವರು ಬರೆಪ್ಪಾಡಿಯ ತಂಡದೊಂದಿಗೆ, ಮುಕ್ಕೂರಿನ ತಂಡದಲ್ಲಿಯೂ ತನ್ನ ಒಡನಾಟವನ್ನು ಉಳಿಸಿಕೊಂಡಿದ್ದರು. ಇದರ ಜತೆಗೆ ಪುತ್ತೂರಿನ ಬೊಳುವಾರಿನ ನಾರಾಯಣ ಭಟ್‌, ಮಹಾಲಿಂಗ ಮಣಿಯಾಣಿ, ರಾಮಯ್ಯ ಶೆಟ್ಟಿ, ಶೇಷಪ್ಪ ಟೈಲರ್‌, ಹೊನ್ನಪ್ಪ ಹೆಗ್ಡೆ 1968ರಲ್ಲಿ ಸ್ಥಾಪಿಸಿದ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಚಟುವಟಿಕೆಗಳಲ್ಲಿಯೂ ಅತಿಥಿ ಕಲಾವಿದರಾಗಿ ಭಾಗವಹಿಸಲು ಆರಂಭಿಸಿ ದರು. ಕ್ರಮೇಣ ಆಂಜನೇಯ ಸಂಘದ ಕೂಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕೇವಲ ಏಳನೆಯ ತರಗತಿಯವರೆಗೆ ವಿದ್ಯಾಭ್ಯಾಸ ಇದ್ದರೂ ಓದುವ ಹವ್ಯಾಸ ಇದ್ದುದ ರಿಂದ ಪುರಾಣ, ಪ್ರಸಂಗ ಜ್ಞಾನವನ್ನು ಹೆಚ್ಚಿಸುವಲ್ಲಿ ಇದು ಸಹಾಯವಾಯಿತು. ದೇರಾಜೆ ಸೀತಾರಾಮಯ್ಯನವರ ಪರಿಚಯ ಆಗಲೇ ಇದ್ದುದರಿಂದ ಅವರ ಬಳಿಗೆ ತೆರಳಿ, ತನ್ನನ್ನು ಶಿಷ್ಯನನ್ನಾಗಿಸಿಕೊಳ್ಳಬೇಕೆಂದು ಬೇಡಿಕೊಂಡರು. ದೇರಾಜೆಯವರು ಮನಸಾರೆ ಹರಸಿ, ಬೆನ್ನು ತಟ್ಟಿ ಶಿಷ್ಯನಾಗಿ ಸ್ವೀಕರಿಸಿದರು. ದೇರಾಜೆಯವರ ಅನುಗ್ರಹದಿಂದ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಅರ್ಥ ಹೇಳುವ ಅವಕಾಶವೂ ಅನಂತಕೃಷ್ಣ ಅವರಿಗೆ ಲಭಿಸಿತು. 

ಮುಂದೆ ಆಂಜನೇಯ ಯಕ್ಷಗಾನ ಕಲಾಸಂಘದ ಕಾರ್ಯದರ್ಶಿಯ ಜವಾಬ್ದಾರಿಯು 1975ರಲ್ಲಿ ಇವರ ಪಾಲಿಗೆ ಬಂತು. ಅವರು ಕಾರ್ಯದರ್ಶಿಯಾದ ಬಳಿಕ ಹಲವು ಉದಾರಿಗಳ ಸಹಾಯದಿಂದ, ಸಂಘಕ್ಕೆ ಬೇಕಾದ ಪರಿಕರಗಳನ್ನು ಜೋಡಿಸಿ ಕೊಂಡು, ಸಂಘದ ಅಭಿವೃದ್ಧಿಯ ಕಡೆಗೆ ಗಮನವಿತ್ತರು. ಗಮನಾರ್ಹ ಬದಲಾವಣೆ ಗಳನ್ನು ತಂದು, ತನ್ನ ಕಾಲ ಮೇಲೆಯೇ ನಿಲ್ಲುವ ಸ್ಥಿತಿಗೆ ತಂಡವನ್ನು ಕರೆದೊಯ್ದರು. 

ಯಕ್ಷಗಾನ ತಾಳಮದ್ದಳೆ ಮಾತ್ರವಲ್ಲದೆ ಅನಂತಕೃಷ್ಣ ಭಟ್ಟರು, ಯಕ್ಷಗಾನ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಕಲ್ಮಡ್ಕದಲ್ಲಿ ಗಣಪತಿ ಭಟ್ಟರ ಮುಂದಾಳತ್ವದಲ್ಲಿ ಪ್ರಾರಂಭಗೊಂಡ ಸಂಗಮ ಯಕ್ಷಗಾನ ನಾಟಕ ಸಭಾದ ಸದಸ್ಯರೂ ಆಗಿದ್ದರು. ಇವೆಲ್ಲ ಚಟುವಟಿಕೆಗಳ ಜತೆಗೆ ತಮ್ಮ ಊರಾದ ಕಾಣಿಯೂರಿನಲ್ಲಿ ತನ್ನ ಆಪ್ತರನ್ನು ಜತೆಗೂಡಿಸಿಕೊಂಡು ತನ್ನ ನಿರ್ದೇಶನದಲ್ಲಿ ಬರೆಪ್ಪಾಡಿ ಅನಂತಕೃಷ್ಣ ಭಟ್‌ ಬಳಗವೆನ್ನುವ ಹೆಸರಿನೊಂದಿಗೆ ಅಲ್ಲಲ್ಲಿ ಪ್ರದರ್ಶನವನ್ನೂ ನೀಡುತ್ತಿದರು.

ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರಿನಲ್ಲಿ ಅವರು ಕಾರ್ಯದರ್ಶಿ ಯಾದ ಬಳಿಕ ವಾರ್ಷಿಕೋತ್ಸವದಂದು ಒಬ್ಬರು ಕಲಾವಿದರನ್ನು ಗೌರವಿಸುವ ಪರಿಪಾಠವನ್ನಿರಿಸಿಕೊಂಡಿದ್ದರು. 1977ರಿಂದ ಪೊಳಲಿ ಶಂಕರನಾರಾಯಣ ಶಾಸ್ತ್ರೀ, ಕೊಳಂಬೆ ಪುಟ್ಟಣ್ಣ ಮಾಸ್ಟರ್‌, ಕೀರಿಕ್ಕಾಡು ವಿಷ್ಣು ಭಟ್‌, ದೇರಾಜೆ ಸೀತಾರಾಮಯ್ಯ, ಕುರಿಯ ವಿಠuಲ ಶಾಸ್ತ್ರೀ, ಅಳಿಕೆ ರಾಮಯ್ಯರೈ, ಶಂಕರನಾರಾಯಣ ಸಾಮಗ, ಎನ್‌.ವಿ. ಕೃಷ್ಣ ರಾವ್‌, ಕರಾಯ ಸಂಜೀವ ಶೆಟ್ಟಿ ಅಳಿಕೆ, ಕುಡಾಣ ಗೋಪಾಲಕೃಷ್ಣ ಭಟ್‌, ಕೆ.ನಾರಾಯಣ ಭಟ್ಟ ಮೊದಲಾದ ಮಹನೀಯರುಗಳನ್ನು ಗೌರವಿಸಿದ್ದರು.

1975ರಿಂದ 1998ರ ತನಕ ಆಂಜನೇಯ ಯಕ್ಷಗಾನ ಕಲಾಸಂಘದ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ ಅನಂತಕೃಷ್ಣರು, ಅನಂತರದ ಕಾರ್ಯದರ್ಶಿಗಳೊಂದಿಗೆ ಕೊನೆಯ ತನಕವೂ ಕೈಜೋಡಿಸುವ ಹುಮ್ಮನಸ್ಸನ್ನು ಉಳಿಸಿಕೊಂಡಿದ್ದರು. ಇದರೊಂದಿಗೆ ಅವರಿಗೆ ಮಹಿಳಾ ಯಕ್ಷಗಾನ ತಂಡವನ್ನು ಸ್ಥಾಪಿಸಬೇಕೆಂಬ ಉತ್ಕಟವಾದ ಬಯಕೆಯಿತ್ತು. ಛಲಬಿಡದೆ, ಬೊಳುವಾರಿನ ದಿ| ನಾರಾಯಣ ಭಟ್ಟರ ಪುತ್ರಿ ಪ್ರೇಮಲತಾ ರಾವ್‌ ಅವರನ್ನು ಮುಂಚೂಣಿಯಲ್ಲಿ ಇರಿಸಿಕೊಂಡು, ಪರಿಚಯಸ್ಥ ಹೆಮ್ಮಕ್ಕಳನ್ನು ಒಗ್ಗೂಡಿಸಿ, ಒಂದು ಪ್ರಸಂಗದ ಅಭ್ಯಾಸವನ್ನು ಪ್ರಾರಂಭಿಸಿಯೇ ಬಿಟ್ಟರು. 26-3-2005ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಇದರ ಉದ್ಘಾಟನೆ ನಡೆಯಿತು.

ಅನಂತಕೃಷ್ಣ ಬರೆಪ್ಪಾಡಿಯವರ ಮಾರ್ಗದರ್ಶನದಲ್ಲಿ ನಡೆದ ಪಂಚವಟಿ-ಖರಾಸುರ ವಧೆ ಮೊದಲ ಪ್ರದರ್ಶನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕಿಲ್ಲೆ ಪ್ರತಿಷ್ಠಾನವು ಪುತ್ತೂರಿ ನಲ್ಲಿ ಏರ್ಪಡಿಸಿದ್ದ ಯಕ್ಷಗಾನ ಸ್ಪರ್ಧೆಯಲ್ಲಿ ಈ ತಂಡಕ್ಕೆ ಬಹುಮಾನ ಬಂದುದರಿಂದ, ಸಂಘದ ಮುನ್ನಡೆಗೆ ಅದುವೇ ನಾಂದಿಯಾಯಿತು. ಮುಂದೆ ಸಂಘದ ಜವಾಬ್ದಾರಿಯನ್ನು ಮುಂದಿನ ಪದಾಧಿಕಾರಿಗಳಿಗೆ ಬಿಟ್ಟುಕೊಟ್ಟರೂ ಚಟುವಟಿಕೆಗಳಿಂದ ವಿಮುಖರಾಗಲಿಲ್ಲ. 

ಇತ್ತೀಚೆಗಿನ ದಿನಗಳ ತನಕವೂ ಅವರು ಉತ್ಸಾಹದ ಚಿಲುಮೆಯಾಗಿದ್ದರು. ಪೇಜಾವರ ಶ್ರೀಗಳ ಪರ್ಯಾಯದ ಸಂದರ್ಭದಲ್ಲಿ ನಡೆದ ವಾಲಿವಧೆ ತಾಳಮದ್ದಳೆಯಲ್ಲಿ ವಾಲಿಯಾಗಿ ಕಾಣಿಸಿಕೊಂಡಿದ್ದರು. ಶ್ರೀಗಳ ಬಾಲ್ಯ ಸ್ನೇಹಿತ, ಪೂರ್ವಾಶ್ರಮದ ಬಂಧುವೂ ಆಗಿದ್ದುದರಿಂದ, ಶ್ರೀಗಳು ತಮ್ಮ ಬಿಡುವಿಲ್ಲದ ಕಾರ್ಯಕ್ರಮದ ಮಧ್ಯೆಯೂ ಆ ತಾಳಮದ್ದಳೆ ವೀಕ್ಷಿಸಲು ಬಂದಿದ್ದರು. ಇನ್ನೂ ಒಂದೆರಡು ತಾಳಮದ್ದಳೆಗಳನ್ನು ಆಯೋಜಿಸುವ ಸಿದ್ಧತೆಯಲ್ಲಿದ್ದರು. ಮರಣಿಸುವ ಒಂದೆರಡು ದಿನದ ಹಿಂದೆ ಕಡಬಕ್ಕೆ ಹೋಗಿ ತಮ್ಮ ಗುರುಸಮಾನರಾದ ಗಣಪಯ್ಯ ಮಾಸ್ತರರನ್ನು ಭೇಟಿಯಾಗಿ ಬಂದಿದ್ದರು.

ಅನಂತಕೃಷ್ಣ ಅವರ ಪತ್ನಿ ಸುಗುಣಾ ಭಟ್‌ ಅವರೆಲ್ಲ ಕೆಲಸಗಳಿಗೂ ಸ್ಫೂರ್ತಿಯಾಗಿ ದ್ದರು. ಇಂದು ಅವರು ತನ್ನೆಲ್ಲ ಕಾರ್ಯಗಳನ್ನು ಬದಿಗಿರಿಸಿ, ಎದ್ದು ಹೋದಂತೆ, ಎಲ್ಲವನ್ನೂ ಬಿಟ್ಟು ತೆರಳಿದ್ದಾರೆ.

ಪದ್ಮಾ ಕೆ. ಆರ್‌. ಆಚಾರ್ಯ

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.