ಯಕ್ಷಗಾನ ಪ್ರಸಾಧನ ತಜ್ಞ ಬಾಲಕೃಷ್ಣ ನಾಯಕ್
Team Udayavani, Jul 27, 2018, 6:00 AM IST
ಯಕ್ಷಗಾನ ಕ್ಷೇತ್ರದ ಚಿರಪರಿಚಿತ ಹೆಸರು ಬಾಲಣ್ಣ. ಇವರನ್ನು ಜು.29ರಂದು ಅಜಪುರ ಯಕ್ಷಗಾನ ಸಂಘ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಾವರದಲ್ಲಿ ಆಯೋಜಿಸುತ್ತಿರುವ ಹಂದಾಡಿ ಸುಬ್ಬಣ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಗುವುದು.
ಎಳೆಯ ವಯಸ್ಸಿನಲ್ಲಿ ಯಕ್ಷಗಾನದ ಹೆಜ್ಜೆಗಳನ್ನು ಹಂದಾಡಿಯ ಸುಬ್ಬಣ್ಣ ಭಟ್ ಅವರಲ್ಲಿ ಕಲಿತರು. ಪ್ರೌಢ ಶಾಲೆ ಮುಗಿಯುತ್ತಿದ್ದಂತೆ ಅಜಪುರ ಯಕ್ಷಗಾನ ಸಂಘ, ಬ್ರಹ್ಮಾವರ ಮತ್ತು ಅಜ್ಜ ಚಂದು ನಾಯಕರ ಪ್ರೋತ್ಸಾಹದಿಂದ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆದರು. ಆದರೆ ಇವರನ್ನು ಸೆಳೆದದ್ದು ಪ್ರಸಾಧನ ಕಲೆ. ಮುಂದೆ ವೇಷ ಕಟ್ಟುವ ಮತ್ತು ಬಣ್ಣಗಾರಿಕೆಯನ್ನು ಕಲಿತು ಅದರಲ್ಲಿ ತೊಡಗಿಸಿಕೊಂಡರು. ಮಾವ ಉಪೇಂದ್ರ ನಾಯಕರಲ್ಲಿ ವೇಷಭೂಷಣ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಂಡರು. ಹಿಂದಿನ ದಿನಗಳಲ್ಲಿ ಬಳಸುತ್ತಿದ್ದ ಅಟ್ಟೆ ಮುಂಡಾಸು ಮತ್ತು ಅಟ್ಟೆ ಕೇದಲೆ ಮುಂದಲೆಗಳನ್ನು ಕಟ್ಟಿ ಪಾತ್ರಗಳನ್ನು ಸಜ್ಜುಗೊಳಿಸುವಲ್ಲಿ ಇವರು ನಿಷ್ಣಾತರಾಗಿದ್ದರು. ಪ್ರಸಾಧನ ಕಲೆ ಕಲಿಯಲು ಬಯಸುವವರಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ಕಲಿಸುತ್ತಿರುವ ಬಾಲಣ್ಣ ಬಹಳಷ್ಟು ಮಂದಿಗೆ ದಾರಿದೀಪವಾಗಿದ್ದರೆ. ನಲುತ್ತೈದು ವರ್ಷಗಳಿಂದ ಪ್ರಸಾಧನ ಕಲೆಗೆ ತನ್ನನ್ನು ಅರ್ಪಿಸಿಕೊಂಡಿರುವ ಇವರು ದೇಶ-ವಿದೇಶಗಲ್ಲಿ ಅನೇಕ ಯಕ್ಷಗಾನ ಕಾರ್ಯಕ್ರಮಗಳಿಗೆ ವೇಷಭೂಷಣಗಳನ್ನು ಒದಗಿಸಿದ್ದಾರೆ.
ಕೆ. ದಿನಮಣಿ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.