ಯಕ್ಷ ಗಾಯನ -ಹಿಂದುಸ್ಥಾನಿ ಸಂಗೀತ ಜುಗಲ್‌ಬಂದಿ 


Team Udayavani, Nov 30, 2018, 6:00 AM IST

3.jpg

ಜೇಸಿ ಕುಂದಾಪುರ 2018 ಸಪ್ತಾಹದ ಅಂಗವಾಗಿ ಒಂದು ವಾರದವರೆಗೆ ಆಯೋಜಿಸಿದ ಸರಿಗಮಪದನಿ ಎಂಬ ವಿವಿಧ ಸಂಗೀತ ಪ್ರಕಾರಗಳನ್ನು ಪ್ರಸ್ತುತ ಪಡಿಸುವ ಕಾರ್ಯಕ್ರಮದಲ್ಲಿ ಒಂದು ಈ ಯಕ್ಷ-ಗಾನ ವೈಭವ. ಬಡಗುತಿಟ್ಟು ಯಕ್ಷ ಶೈಲಿಯ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರು 20 ವರ್ಷಗಳಿಂದ ವಿವಿಧ ಸಂಗೀತ ವಿದ್ವಾಂಸರ ಸಹಯೋಗದೊಂದಿಗೆ ನಡೆಸಿಕೊಂಡು ಬರುತ್ತಿರುವ ಈ ಯಕ್ಷ-ಗಾನ ವೈಭವದ ಬಗ್ಗೆ ತಿಳಿಸಿದರು.

ಈ ಬಾರಿ ಅವರಿಗೆ ಸಾಥ್‌ ನೀಡಿದವರು ಹಿಂದೂಸ್ಥಾನಿ ಸಂಗೀತ ವಿದ್ವಾನ್‌ ಗಜಾನನ ಹೆಬ್ಟಾರರು. ಭಾಗವತರ ಪ್ರಬುದ್ಧ ಮಾತುಗಳು, ಹೆಬ್ಟಾರರ ಅನುಭವದ ನುಡಿಗಳು ಕಾರ್ಯಕ್ರಮಕ್ಕೆ ಉತ್ತಮ ಆರಂಭ ನೀಡಿದವು. ಗಣಪತಿ ಸ್ತುತಿಯನ್ನು ಯಕ್ಷಗಾನದ ಪದ್ಯ ಶೈಲಿಯಲ್ಲಿ ಹಾಡಿದ ಭಾಗವತರಿಗೆ ಸರಸ್ವತಿ ರಾಗದ ದೇವಿಸ್ತುತಿಯ ಪ್ರಾರ್ಥನೆಯ ಸಾಥ್‌ ಹೆಬ್ಟಾರರಿಂದ ದೊರಕಿತು. ಏಕತಾಳದಲ್ಲಿ ಸುಂದರ ತಾನ್‌ಗಳೊಂದಿಗೆ ಪೋಣಿಸಿದ ಈ ರಾಗ ಸಭೆಗೆ ಬೇಕಾದ ಉಠಾವ್‌ ನೀಡಿತು.”ವನದೇವಿಯ ವನರಾಸಿಯ …’ ಭಾಗವತರ ಪದ್ಯದಲ್ಲಿ ರಾಗದ ಸ್ಪಷ್ಟತೆ ಇರದಿದ್ದರೂ ಅವರ ಕಂಠಸಿರಿಯಲ್ಲಿ ಉತ್ತಮವಾಗಿ ಮೂಡಿ ಬಂತು. ಅದೇ ಹಾಡನ್ನು ಮಾರುಬಿಹಾಗ್‌ ರಾಗದಲ್ಲಿ ಎತ್ತಿಕೊಂಡ ಹೆಬ್ಟಾರರು ಶಾಸ್ತ್ರೀಯತೆಯ ಸ್ಪರ್ಷ ನೀಡಿದರು.ರಾಗ ಪಟದೀಪ, ಹರಿಕಾಂಭೋಜಿ ಪದ್ಯಗಳು ಯಕ್ಷಗಾನದ ಶೈಲಿಯಲ್ಲಿ ಕೇಳುಗರಿಗೆ ಖುಷಿ ನೀಡುವ ಹಾಗೆ ಭಾಗವತರಿಂದ ಹಾಡಲ್ಪಟ್ಟವು. ಮಾಜ್‌ ಖಮಾಜ್‌ ರಾಗದ “ಜಮುನಾ ಕಿನಾರೆ …’ ಹೆಬ್ಟಾರರ ಲಘುಶಾಸ್ತ್ರೀಯ ಶೈಲಿ ಮುದ ನೀಡುವಂತಿತ್ತು. ಭೀಮ ಪಲಾಸಿನಿ, ಸಾರಂಗ ರಾಗದ ವಿಸ್ತಾರ ಚೆನ್ನಾಗಿ ಪ್ರಸ್ತುತ ಪಡಿಸಿದರು.”ಎಲ್ಲೆಲ್ಲೂ ಸೊಬಗಿದೆ ..’ ಗೀತೆಯ ಜುಗಲಬಂಧಿ ಕಾರ್ಯಕ್ರಮಕ್ಕೆ ಸೂಕ್ತ ಮುಕ್ತಾಯ ನೀಡಿತು. ಅದರಲ್ಲಿ ಬರುವ ಕೋಗಿಲೆಯ “ಕುಹೂ ಕುಹೂ …’ ಕೂಗಿಗೆ ಹೆಬ್ಟಾರರ ಕಂಠ ಪಂಚಮದ ಸುಖವನ್ನು ನೀಡಿತು.ಇಬ್ಬರು ಅತ್ಯುತ್ತಮ ಕಲಾವಿದರಿಂದ ನಡೆಸಲ್ಪಟ್ಟ ಈ ಜುಗಲಬಂಧಿ ಒಂದು ಒಳ್ಳೆಯ ಪ್ರಯೋಗ ಅನ್ನಿಸಿತು.ಮೃದಂಗದಲ್ಲಿ ಎನ್‌.ಜಿ. ಹೆಗಡೆ, ತಬಲಾದಲ್ಲಿ ಅಕ್ಷಯ ಭಟ್‌ ಹಂಸಳ್ಳಿಸಾಥ್‌ ನೀಡಿದರು. ಅವರಿಬ್ಬರ ತನಿ ಆವರ್ತನ ಚೇತೋಹಾರಿಯಾಗಿತ್ತು. ಧಾರೇಶ್ವರರು ಮೃದಂಗವನ್ನು, ತಬಲಾವನ್ನು ಕೂಡಾ ಮಾತನಾಡಿಸುತ್ತಿದ್ದ ಪರಿ (ಇದು ಶಾಸ್ತ್ರೀಯ ಸಂಗೀತದಲ್ಲಿ ಸಾಧ್ಯವಾಗುವುದಿಲ್ಲ) ವಿಶೇಷವಾಗಿತ್ತು.ಒಂದು ವಿಶಿಷ್ಟ ಪ್ರಯೋಗ ಗಾಯಕ ಮತ್ತು ವಾದಕರ ಪ್ರತಿಭೆಯಿಂದ ಅದ್ಭುತವಾಗಿ ಮೂಡಿ ಬಂತು.

 ಡಾ. ಎಚ್‌. ಆರ್‌. ಹೆಬ್ಟಾರ್‌ 

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.