ಯಕ್ಷಗಾನ ಸಂಘಟಕ,ಕಲಾವಿದ ಕುಡ್ವರಿಗೆ ಸಮ್ಮಾನ
Team Udayavani, Jan 3, 2020, 1:15 AM IST
ಯಕ್ಷಗಾನ ವಿಮರ್ಶಕ , ಕಲಾವಿದ, ಸಂಘಟಕ ಎಂ.ಶಾಂತರಾಮ ಕುಡ್ವರು ಗೌಡ ಸಾರಸ್ವತ ಬ್ರಾಹ್ಮಣ ಮಹಿಳಾ ವೃಂದ ಮಂಗಳೂರು ಇದರ 2019ರ ಸಾಲಿನ ಕೊಂಕಣಿ ಸಾಹಿತ್ಯದ ಸಾಧಕರೆಂಬ ನೆಲೆಯಲ್ಲಿ ಸಮ್ಮಾನಕ್ಕೆ ಆಯ್ಕೆಯಾಗಿದ್ದಾರೆ . ಜ.5 ರಂದು ಮಂಗಳೂರಿನ ಶ್ರೀ ಗೋಕರ್ಣ ಮಠದಲ್ಲಿ ಈ ಸಮ್ಮಾನ ನಡೆಯಲಿದೆ .
ಬಾಲ್ಯದಿಂದಲೇ ಭಜನೆ , ಯಕ್ಷಗಾನ , ಪುರಾಣ ಸಾಹಿತ್ಯಗಳತ್ತ ಆಸಕ್ತಿ ಬೆಳಿಸಿಕೊಂಡು ಪ್ರತಿಭಾನ್ವಿತರಾಗಿದ್ದರು. 16ನೇ ವರ್ಷದಲ್ಲಿ ಮೂಡಬಿದಿರೆಗೆ ಬಂದು ಪದವಿ ಪೂರೈಸಿದ ಕುಡ್ವರಿಗೆ ಮೂಡಬಿದಿರೆಯ ಪರಿ ಸರ ಪ್ರತಿಭಾ ಪ್ರದರ್ಶನಕ್ಕೆ ಸಹಾಯಕವಾಯಿತು . ಪ್ರವೃತ್ತಿಯಲ್ಲಿ ಯಕ್ಷಗಾನ , ಸಾಹಿತ್ಯ , ನಾಟಕ , ಸಮಾಜ ಸೇವೆ ಮೊದಲಾದ ಕ್ಷೇತ್ರಗಳಲ್ಲಿ ಕೈಯಾಡಿಸಿದರು . ಯಕ್ಷಸಂಗಮ , ಯಕ್ಷೊàಪಾಸನಮ್ , ಯಕ್ಷ ಸಾರಸ್ವತ ಮುಂತಾದ ಯಕ್ಷಗಾನ ಸಂಘಗಳನ್ನು ಸ್ಥಾಪಿಸಿದ್ದಲ್ಲದೆ , ಅವು ಇಂದೂ ಅಸ್ತಿತ್ವದಲ್ಲಿದ್ದು ಚಟುವಟಿಕೆಯಲ್ಲಿವೆ . ಯಕ್ಷಸಂಗಮದ ಮೂಲಕ ಪ್ರತೀವರ್ಷ ರಾತ್ರಿ ಇಡೀ ತಾಳಮದ್ದಳೆ , ಕಲಾವಿದರಿಗೆ ಸಮ್ಮಾನ , ಯಕ್ಷೊ ಪಾಸನಮ್ ಸಂಘಟನೆಯ ಮೂಲಕ ಪ್ರತೀ ಮಂಗಳವಾರ ವಾರದ ತಾಳಮದ್ದಳೆ ಕೂಟ , ಯಕ್ಷ ಸಾರಸ್ವತದ ಮೂಲಕ ಕೊಂಕಣಿ ಯಕ್ಷಗಾನ , ನಾಟಕಗಳ ಪ್ರದರ್ಶನ ನಡೆಸಿಕೊಂಡು ಬರುತ್ತಿದ್ದಾರೆ .ಕನ್ನಡ,ತುಳು,ಕೊಂಕಣಿ ಭಾಷೆಗಳ ಯಕ್ಷಗಾನದಲ್ಲಿ ವೇಷಧಾರಿಯಾಗಿ, ತಾಳಮದ್ದಳೆ ಕೂಟದ ಅರ್ಥದಾರಿಯಾಗಿ ಸೈ ಎನಿಸಿಕೊಂಡ ಕಲಾವಿದ .
ಯಕ್ಷಗಾನದ ವಸ್ತುನಿಷ್ಟ ವಿಮರ್ಶೆ ಮಾಡುವುದರಲ್ಲಿ ಕುಡ್ವರು ನಿಷ್ಣಾತರಾಗಿದ್ದಾರೆ . ಯಕ್ಷಗಾನದ ಕುರಿತಾದ ಯಾವುದೇ ವಿಷಯಗಳಲ್ಲಿ ಅದು ಹೀಗೆಯೇ ಎಂದು ಹೇಳಬಲ್ಲ ಖಚಿತವಾದ ಜ್ಞಾನವನ್ನೂ ಹೊಂದಿದ್ದಾರೆ . ಹಲವಾರು ಕೊಂಕಣಿ ಯಕ್ಷಗಾನ , ನಾಟಕ ರಚಿಸಿ ತಾವೇ ನಿರ್ದೇಶಿಸಿ , ನಟಿಸಿದ್ದಾರೆ.
ಎಂ.ರಾಘವೇಂದ್ರ ಭಂಡಾರ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.