ಮಹಾನಗರಿಯಲ್ಲಿ ತೆಂಕು – ಬಡಗು ಯಕ್ಷಗಾನ ವೈಭವ
Team Udayavani, Mar 21, 2018, 5:57 PM IST
ಉಡುಪಿ: ಮುಂಬಯಿಯ ನೇಶನಲ್ ಸೆಂಟರ್ ಫಾರ್ ದ ಪರ್‌ಫಾರ್ಮಿಂಗ್ ಆರ್ಟ್‌ಸ್ ಸಂಸ್ಥೆಯು ಆಯೋಜನೆಗೊಳಿಸಿದ ‘ದಿ ಸಾಂಗ್ ಆಫ್ ಯಕ್ಷಾಸ್ : ಯಕ್ಷಗಾನ ಆಫ್ ಕೋಸ್ಟಲ್ ಕರ್ನಾಟಕ’ ಕಲೋತ್ಸವದಲ್ಲಿ ಉಡುಪಿಯ ‘ಯಕ್ಷಗಾನ ಕೇಂದ್ರ’ ಮತ್ತು ‘ಥಿಯೇಟರ್ ಯಕ್ಷ’ದ ಕಲಾವಿದರು ಉಭಯತಿಟ್ಟುಗಳ ಎರಡು ಆಖ್ಯಾನಗಳನ್ನು 2018, ಮಾ. 17 ಮತ್ತು 18 ರಂದು ಪ್ರಸ್ತುತಪಡಿಸಿದರು.
ಮೊದಲ ದಿನ ‘ಥಿಯೇಟರ್ ಯಕ್ಷ’ದ ಕಲಾವಿದರು ತೆಂಕುತಿಟ್ಟಿನ ಪ್ರಯೋಗಾತ್ಮಕ ‘ಚಕ್ರವ್ಯೂಹ’ ಮತ್ತು ಎರಡನೆಯ ದಿನ ಯಕ್ಷಗಾನದ ಕೇಂದ್ರದ ಕಲಾವಿದರು ‘ಜಟಾಯು ಮೋಕ್ಷ’ ಪ್ರದರ್ಶನಗಳು ದೇಶ-ವಿದೇಶಗಳ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು. ಎರಡೂ ಪ್ರದರ್ಶನಗಳನ್ನು ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶಿಸಿದ್ದರು.
ನೇಶನಲ್ ಸೆಂಟರ್ ಫಾರ್ ದ ಪರ್‌ಫಾರ್ಮಿಂಗ್ ಆರ್ಟ್‌ಸ್‌ನ ಭಾರತೀಯ ಸಂಗೀತ ಕಾರ್ಯಕ್ರಮಗಳ ಸಂಯೋಜನಾ ಮುಖ್ಯಸ್ಥೆಯಾದ ಡಾ. ಸುವರ್ಣಲತಾ ರಾವ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ದೆಹಲಿಯ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನ ಪ್ರಾಚ್ಯವಸ್ತು ಸಂಗ್ರಹಾಲಯದ ಮುಖ್ಯಸ್ಥೆಯಾದ ಡಾ. ಶುಭಾ ಚೌಧುರಿಯವರು ಪ್ರದರ್ಶನದ ಕಥಾನಕಗಳ ವಿವರ ನೀಡಿದರು. ದೆಹಲಿಯ ಜೆಎನ್‌ಯುನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನದ ಇತಿಹಾಸ ಮತ್ತು ಸಮಕಾಲೀನ ಬೆಳವಣಿಗೆಗಳ ಬಗ್ಗೆ ಸಚಿತ್ರವಿವರಣೆಯನ್ನು ಮಂಡಿಸಿದರು. ಎರಡೂ ಪ್ರಸಂಗಗಳ ಮುಕ್ತಾಯದ ಬಳಿಕ ಪ್ರೇಕ್ಷಕರು ಕಲಾವಿದರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.